ಸಂರಕ್ಷಣಾಧಿಕಾರಿ ಪರೀಕ್ಷೆ; ವರ್ಷಗಳೇ ಕಳೆದರೂ ಪ್ರಕಟವಾಗದ ಫಲಿತಾಂಶ

Date:

  • ಬೇರೆ ಪರೀಕ್ಷೆಗಳತ್ತ ಗಮನಹರಿಸಲಾಗದೆ ಅಭ್ಯರ್ಥಿಗಳಿಗೆ ಒದ್ದಾಡುವ ಪರಿಸ್ಥಿತಿ
  • ದೈಹಿಕ ಪರೀಕ್ಷೆ, ಸಂದರ್ಶನ ಪ್ರಕ್ರಿಯೆಗೆ ಇನ್ನೆಷ್ಟು ವರ್ಷ ಕಾಯಬೇಕು; ಆಕ್ರೋಶ

ಸಂರಕ್ಷಣಾಧಿಕಾರಿ (ಎಸಿಎಫ್) ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ ಮುಖ್ಯ ಪರೀಕ್ಷೆ ನಡೆಸಿತ್ತು. ಪರೀಕ್ಷೆ ಪೂರ್ಣಗೊಂಡು ವರ್ಷಗಳೇ ಕಳೆಯುತ್ತಿವೆ. ಆದರೆ, ಕನಿಷ್ಠ 160 ಅಭ್ಯರ್ಥಿಗಳನ್ನೊಳಗೊಂಡ ಫಲಿತಾಂಶ ಪ್ರಕಟವಾಗುತ್ತಿಲ್ಲ ಎಂದು ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

2022ರ ಮೇ 5 ಮತ್ತು 6ರಂದು ತಲಾ 100 ಅಂಕಗಳ ಎರಡು ಪತ್ರಿಕೆಗಳ ಪರೀಕ್ಷೆ ನಡೆಸಲಾಗಿತ್ತು. 1:10 ಅಂದರೆ ಕೇವಲ 160 ಅಭ್ಯರ್ಥಿಗಳಿಗೆ ಮಾತ್ರ ಮುಖ್ಯ ಪ್ರಶ್ನೆ ಪರೀಕ್ಷೆಯನ್ನು ನಡೆಸಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಕೋಲಾರ ಕಾಂಗ್ರೆಸ್‌ಗೆ ಹೊಸ ಸಾರಥಿ: ಬಣ ರಾಜಕೀಯಕ್ಕೆ ಬೀಳುವುದೇ ತೆರೆ?

ಕೋಲಾರದ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಮೈಕೆಲ್ ನಾರಾಯಣಸ್ವಾಮಿ ಆಯ್ಕೆಯಾಗಿರುವುದು ಕಾಂಗ್ರೆಸ್ ಪಕ್ಷಕ್ಕೆ ಒಂದು ಪ್ರಮುಖ ಘಟ್ಟವಾಗಿದೆ. ಸಾರ್ವಜನಿಕ ವಲಯದಲ್ಲಿ 'ರಮೇಶ್ ಕುಮಾರ್ ಬಣ'ದ ಬೆಂಬಲದೊಂದಿಗೆ ಬಂದಿದ್ದಾರೆಂಬ ಚರ್ಚೆಗಳಿದ್ದರೂ, ಎಲ್ಲರನ್ನೂ ಒಗ್ಗೂಡಿಸಿ ಬೂತ್ ಮಟ್ಟದಿಂದ...

ವ್ಯವಸ್ಥೆ V/S ವಿದ್ಯಾರ್ಥಿ: ಇಂದೋರ್‌ನಲ್ಲಿ ರಾಹುಲ್ ಕಟ್ಟಿದ ಹೊಸ...

“ಅಂಧಭಕ್ತ ಯಾರು? ಅಂಧಭಕ್ತ- ವಿದ್ಯಾರ್ಥಿ ವಿರೋಧಿ. ವಿದ್ಯಾರ್ಥಿ ಎಲ್ಲಿ ಪ್ರಶ್ನೆ ಕೇಳುತ್ತಾನೋ, ವಿದ್ಯಾರ್ಥಿ ಎಲ್ಲಿ ಕುತೂಹಲದಿಂದ ಇರುತ್ತಾನೋ, ಅಲ್ಲಿ ಅಂಧಭಕ್ತ ಭ್ರಮೆಯಲ್ಲಿ, ತನ್ನದೇ ಲೋಕದಲ್ಲಿ ವಾಸಿಸುತ್ತಾನೆ. ವಿದ್ಯಾರ್ಥಿ ಎಲ್ಲಿ ಪ್ರೀತಿಯಿಂದ ಮಾತನಾಡುತ್ತಾನೋ, ಗೌರವದಿಂದ...

ಕರಾವಳಿ ಕಾಂಗ್ರೆಸ್‌ಗೆ ಬೂಸ್ಟ್ ನೀಡಿದ ಸಚಿವ ಸಂಪುಟ ಸಭೆ:...

ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ,...

16 ಎಸಿಎಫ್ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿ ಎರಡೂವರೆ ವರ್ಷಗಳು ಕಳೆದಿವೆ. ಅಧಿಸೂಚನೆ ಹೊರಬಿದ್ದ ಒಂದು ವರ್ಷದ ಬಳಿಕ 2021ರಲ್ಲಿ ಪ್ರಿಲಿಮಿನರಿ ಪರೀಕ್ಷೆ ನಡೆಸಲಾಯಿತು. ಒಂದು ವರ್ಷದ ನಂತರ 2022ರಲ್ಲಿ ಮುಖ್ಯ ಪರೀಕ್ಷೆ ನಡೆಸಲಾಗಿದೆ. ಈಗಾಗಲೇ ಎರಡೂವರೆ ವರ್ಷ ಕಳೆದಿದೆ. ಇನ್ನೂ ಪರೀಕ್ಷೆ ಫಲಿತಾಂಶ ಪ್ರಕಟವಾಗಿಲ್ಲ. ಯಾವಾಗ ಫಲಿತಾಂಶ ಪ್ರಕಟವಾಗುತ್ತದೋ? ನಂತರ ದೈಹಿಕ ಪರೀಕ್ಷೆ, ಸಂದರ್ಶನ ಪ್ರಕ್ರಿಯೆ ಮುಗಿಯಲೂ ಇನ್ನೆಷ್ಟು ವರ್ಷ ಕಳೆಯುತ್ತವೋ? ಎಂದು ಅಭ್ಯರ್ಥಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಮೇ 13ರವರೆಗೂ ‘ಸಿಇಟಿ’ಗೆ ಅರ್ಜಿ ಸಲ್ಲಿಸಬಹುದು

ಸದ್ಯ ಎಸಿಎಫ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗದ ಕಾರಣ, ಅಭ್ಯರ್ಥಿಗಳು ಇತರ ಪರೀಕ್ಷೆಗಳತ್ತ ಗಮನಹರಿಸಲು ಸಾಧ್ಯವಾಗದೇ ಒದ್ದಾಡುವ ಪರಿಸ್ಥಿತಿ ಬಂದೊದಗಿದೆ.

160 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದ ಪರೀಕ್ಷಾ ಫಲಿತಾಂಶ ಪ್ರಕಟಿಸಲು ಇಷ್ಟು ವಿಳಂಬ ಮಾಡಿದರೆ, ಸಾವಿರಾರು ಅಭ್ಯರ್ಥಿಗಳು ಹಾಜರಾಗುವ ಪರೀಕ್ಷೆಗಳ ಫಲಿತಾಂಶಕ್ಕೆ ಇನ್ನೆಷ್ಟು ವರ್ಷ ಕಾಯಬೇಕು ಎಂದು ಅಭ್ಯರ್ಥಿಗಳು ಪ್ರಶ್ನಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿ. ಪಾರ್ವತಮ್ಮ: ಸಾಮಾಜಿಕ ಮಾನವಶಾಸ್ತ್ರಜ್ಞೆಯ ಪ್ರಶ್ನೆಗಳು

ಪಾರ್ವತಮ್ಮನವರು ತಮ್ಮ ಅಧ್ಯಯನದ ಮೂಲಕ ಬ್ರಾಹ್ಮಣವಾದಿ ಸಮಾಜಶಾಸ್ತ್ರ ಚಿಂತನೆಗಳ ಎಲ್ಲಾ ಪದರುಗಳನ್ನು...

ವಿದ್ಯಾರ್ಥಿ ಸಂಘಕ್ಕೆ ಚುನಾವಣೆ: ‘ರಾಜಕೀಯ’ ನಿಷೇಧ ಅಗತ್ಯವೇ?

ಸರ್ಕಾರದ ಉದ್ದೇಶ ‘ರಾಜಕೀಯವನ್ನು ಸಂಪೂರ್ಣ ನಿಷೇಧಿಸುವುದು’ ಆಗದೆ, ‘ಪಕ್ಷೀಯ ಹಸ್ತಕ್ಷೇಪ ಮತ್ತು...

ಋಷಿಕೇಶ್ ಆತ್ಮಹತ್ಯೆ ಪ್ರಕರಣ: ಐಐಟಿ ದೆಹಲಿಯಲ್ಲಿ ತೀವ್ರ ಪ್ರತಿಭಟನೆ; ವಿದ್ಯಾರ್ಥಿಗಳಿಗೆ ಶಿಸ್ತು ಕ್ರಮದ ಬೆದರಿಕೆ

ಐಐಟಿ ದೆಹಲಿಯ ಎಂಎಸ್‌ಸಿ ವಿದ್ಯಾರ್ಥಿ ಋಷಿಕೇಶ್ ಕುಮಾರ್ ಅವರ ಆತ್ಮಹತ್ಯೆ ಪ್ರಕರಣಕ್ಕೆ...

ಸ್ನಾತಕೋತ್ತರ ಇತಿಹಾಸ ಪಠ್ಯದಿಂದ ‘ದೆಹಲಿ ಸುಲ್ತಾನ’ರ ಪಠ್ಯ ಕೈಬಿಟ್ಟ ದೆಹಲಿ ವಿವಿ; ಬೋಧಕರ ಕಳವಳ

ದೆಹಲಿ ವಿಶ್ವವಿದ್ಯಾಲಯವು (DU) ತನ್ನ ಸ್ನಾತಕೋತ್ತರ (MA) ಇತಿಹಾಸ ವಿಭಾಗದ ಮೂರನೇ...