ಕಲಬುರಗಿ | ಪ್ರವಾಹ ಪೀಡಿತ ಪ್ರದೇಶದ ಜನರಿಗೆ ಉಚಿತ ವೈದ್ಯಕೀಯ ತಪಾಸಣೆ

Date:

ಭೀಮಾ ನದಿಯ ಪ್ರವಾಹದಿಂದ ಚಿತ್ತಾಪುರ ತಾಲ್ಲೂಕಿನ ಕಡಬೂರು ಮತ್ತು ಕುಂದನೂರ ಗ್ರಾಮಗಳು ತೀವ್ರ ಹಾನಿಗೊಳಗಾದವು. ಮನೆಗಳು, ಕೃಷಿ ಜಮೀನುಗಳು ಮತ್ತು ಜೀವನೋಪಾಯ ನಷ್ಟಗೊಂಡು ಸಾವಿರಾರು ಜನರು ತಾತ್ಕಾಲಿಕ ಆಶ್ರಯಗಳಲ್ಲಿ ಬದುಕುತ್ತಿದ್ದಾರೆ. ಪ್ರವಾಹದ ನಂತರ ಉಂಟಾದ ಆರೋಗ್ಯ ತೊಂದರೆ, ಮಾಲಿನ್ಯ ಮತ್ತು ಸೋಂಕು ಹರಡುವ ಅಪಾಯವನ್ನು ಮನಗಂಡು ಮೆಡಿಕಲ್ ಸರ್ವಿಸ್ ಸೆಂಟರ್ (ಎಮ್‌ಎಸ್‌ಸಿ), ವೈಟ್ ಸ್ಪಾರ್ಕ್ಸ್, ಹಾಗೂ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಶನಿವಾರ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸಲಾಗಿತ್ತು.

- Advertisement -

ಶಿಬಿರವು ಎರಡು ಗ್ರಾಮಗಳಲ್ಲಿ ನಡೆದಿದ್ದು, ಸಾವಿರಕ್ಕೂ ಹೆಚ್ಚು ಸಂತ್ರಸ್ತರು ಮಲೇರಿಯಾ, ಟೈಫಾಯ್ಡ್, ಚರ್ಮರೋಗ, ಕಾಲರಾ ಮುಂತಾದ ರೋಗಗಳ ತಡೆಗೆ ಆರೋಗ್ಯ ಸೇವೆ ಪಡೆದರು. ಉಚಿತ ಔಷಧಿ, ಪರೀಕ್ಷೆಗಳು ಮತ್ತು ಆರೋಗ್ಯ ಸಲಹೆಗಳು ಪಡೆದುಕೊಂಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹಮ್ ಔರತೇನ್ ಆಜಾದ್ ಹೈ: ಸುರಕ್ಷತೆಯ ಹೆಸರಲ್ಲಿ ಕಡಿವಾಣ...

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರು ಮತ್ತು ಅಪ್ರಾಪ್ತೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಭದ್ರತೆಯ ವಾತಾವರಣವಿರುವಾಗ ಈ ಲೋಪಗಳನ್ನು ಸರಿಪಡಿಸದೆಯೇ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಸ್ರೀ ಸಮುದಾಯದ ಉಡುವ,...

ತಮ್ಮ ವಿರುದ್ಧ ತಾವೇ’ಆರೋಪಪಟ್ಟಿ’ ಸಿದ್ಧಪಡಿಸಿಕೊಂಡ ಗ್ಯಾನೇಶ್ ಕುಮಾರ್: ಪ್ರೆಸ್...

ಚುನಾವಣಾ ಆಯೋಗದ ಇತ್ತೀಚಿನ ನಡೆಗಳು ಮತ್ತು ಸಾಂವಿಧಾನಿಕ ವೈಫಲ್ಯದ ಅಸಲಿಯತ್ತನ್ನು ಸ್ವರಾಜ್ ಇಂಡಿಯಾ ಸದಸ್ಯ ಹಾಗೂ ‘ಭಾರತ್ ಜೋಡೊ ಅಭಿಯಾನ’ದ ರಾಷ್ಟ್ರೀಯ ಸಂಚಾಲಕ ಯೋಗೇಂದ್ರ ಯಾದವ್ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್' ಪತ್ರಿಕೆಯಲ್ಲಿ...

SIR | ‘ಫಾರ್ಮ್ 7’ ದುರ್ಬಳಕೆ – ಅಕ್ರಮ:...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕನಿಗೆ ಇರುವ ಅತ್ಯಂತ ಮೂಲಭೂತ ಮತ್ತು ಶಕ್ತಿಶಾಲಿ ಅಸ್ತ್ರ - ಮತದಾನದ ಹಕ್ಕು. ಆದರೆ, ಇತ್ತೀಚಿನ ದಿನಗಳಲ್ಲಿ ಚುನಾವಣಾ ಆಯೋಗದ ನಿರ್ಲಜ್ಜತನ ಮತ್ತು ನಿಯಮಗಳಲ್ಲಿನ ಲೋಪದೋಷಗಳನ್ನು ಬಳಸಿಕೊಂಡು, ಮತದಾರರ ಪಟ್ಟಿಯಿಂದ...
WhatsApp Image 2025 10 19 at 7.46.25 AM

ಶಿಬಿರದಲ್ಲಿ ಡಾ.ವಸುದೇಂದ್ರ ಎನ್. (ನೇತ್ರ ತಜ್ಞ, ದಾವಣಗೆರೆ), ಡಾ. ದಿವ್ಯಾ ಪಿ.(ಬಳ್ಳಾರಿ), ಡಾ. ವರ್ಷಾ ಆರ್ ಬಿ (ದಾವಣಗೆರೆ), ಡಾ. ಸೀಮಾ ದೇಶಪಾಂಡೆ (ಕಲಬುರಗಿ), ಡಾ. ಕರುಣಾ ಕಾಂಬಳೆ (ಆಯುಷ್ ವೈದ್ಯಾಧಿಕಾರಿ, ವಾಡಿ) ಮತ್ತು ಡಾ. ಮಂಜುಳಾ ಎಸ್. ಬೂಳ ಇದ್ದರು. ಆರೋಗ್ಯ ನಿರೀಕ್ಷಕ ದೇವೇಂದ್ರಪ್ಪ, ಫಾರ್ಮಸಿಸ್ಟ್ ಉಪೇಂದ್ರ ಎನ್ ಡಿ ಮತ್ತು ಸಹಾಯಕ ಸಿಬ್ಬಂದಿಯವರು ಶಿಬಿರದ ಕಾರ್ಯಾಚರಣೆಗೆ ನೆರವೇರಿಸಿದರು

ಎಐಕೆಕೆಎಮ್‌ಎಸ್ ರಾಜ್ಯ ಅಧ್ಯಕ್ಷ ಎಂ. ಶಶಿಧರ್ ಮಾತನಾಡಿ, ‘ಪ್ರವಾಹದಿಂದ ಹಾನಿಗೊಳಗಾದ ಗ್ರಾಮಸ್ಥರ ಆರೋಗ್ಯವನ್ನು ರಕ್ಷಿಸುವುದು ನಮ್ಮ ಮುಖ್ಯ ಗುರಿ. ಈ ಶಿಬಿರವು ತುರ್ತು ಸೇವೆಗಳನ್ನು ಒದಗಿಸುವ ಮೂಲಕ ಜನರ ಬದುಕು ಉಳಿಸಲು ಸಹಾಯವಾಗಿದೆ. ಸರ್ಕಾರ ಮತ್ತು ಸ್ಥಳೀಯ ಆಡಳಿತ ಸಹಕಾರ ವಹಿಸಬೇಕಾಗಿದೆ’ ಎಂದರು.

ಇದನ್ನು ಓದಿದ್ದೀರಾ? ಕಲಬುರಗಿ | ಆರ್‌ಎಸ್‌ಎಸ್ ಭಗವಾಧ್ವಜ, ಬ್ಯಾನರ್‌ ಹಾಗೂ ಕಟೌಟ್‌ ತೆರವು ; ನಗರದಲ್ಲಿ ಸಂಚಲನ

ಶಿಬಿರದಲ್ಲಿ ಕಡಬೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಸುಮಿಯಾ ಹಾಗೂ ಸಂಘಟಕರು ವೀರಭದ್ರಪ್ಪ ಆರ್.ಕೆ., ಶರಣು ಹೇರೂರ, ಗೌತಮ್ ಪರ್ತೂರ್‌ಕರ್, ವೆಂಕಟೇಶ ದೇವದುರ್ಗ, ವಿಠ್ಠಲ್ ರಾಠೋಡ್, ರಾಜು ವಡೆಯರ್, ಗೋದಾವರಿ ಕಾಂಬಳೆ, ಗೋವಿಂದ ಯಳವಾರ, ಶ್ರೀಶೈಲ್ ಕಡಬೂರ, ಸಿದ್ದಾರ್ಥ ತಿಪ್ಪನೂರ, ಸಂಪತ್, ಗೋವಿಂದ ಮತ್ತಿತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕರಾವಳಿಯಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ: ಪರಿಶೀಲನೆಗೆ ಸಮಿತಿ ರಚನೆ

ಕರಾವಳಿಯಲ್ಲಿ ಹೈಕೋರ್ಟ್ ಸಂಚಾರಿ ಅಥವಾ ಶಾಶ್ವತ ಪೀಠ ಸ್ಥಾಪಿಸುವ ನಿಟ್ಟಿನಲ್ಲಿ ಪರಿಶೀಲನೆ...

ಕಲಬುರಗಿ | ಕನ್ನಡ ಅಧ್ಯಾಪಕರು ಸಂಘಟಿತರಾಗಿ ಭಾಷೆಯ ಉಳಿವಿಗೆ ಶ್ರಮಿಸಬೇಕು: ಪ್ರೊ. ಶಶಿಕಾಂತ ಉಡಿಕೇರಿ

ಕನ್ನಡ ಭಾಷೆಯ ಪೋಷಣೆ, ಉಳಿವು ಹಾಗೂ ಬೆಳವಣಿಗೆಗೆ ಕನ್ನಡ ಅಧ್ಯಾಪಕರು ಸಂಘಟಿತರಾಗಿ...

ಸಾಮಾಜಿಕ ಕಾರ್ಯಕರ್ತ ನದೀಮ್ ಖಾನ್ ಗೃಹಬಂಧನ: ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಕರ್ನಾಟಕ ಖಂಡನೆ

ಮಸೀದಿಗಳು ಮತ್ತು ಇತರ ಧಾರ್ಮಿಕ ಸ್ಥಳಗಳ ಮೇಲಿನ ದಾಳಿಗಳು, ಮತದಾರರ ಪಟ್ಟಿಯಲ್ಲಿನ...

ರಾಯಚೂರು | ಕಾಲೇಜಿನಲ್ಲಿ ಶೌಚಾಲಯವಿದೆ, ನೀರಿಲ್ಲ: 400 ಮಂದಿ ವಿದ್ಯಾರ್ಥಿನಿಯರ ಪರದಾಟ

ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುವುದಷ್ಟೇ ಸಾಲದು; ಅವರು ಸುರಕ್ಷಿತ, ಗೌರವಯುತ ಹಾಗೂ ಸ್ವಚ್ಛ...