ಕಲಬುರಗಿ | ಮಂಡ್ಯ ಹಸಿರು ಶಾಲುಗಳ ನೆಲ, ಕೇಸರಿಗೆ ನೆಲೆಯಿಲ್ಲ: ಮಲ್ಲಿಕಾರ್ಜುನ ಕ್ರಾಂತಿ

Date:

Advertisements

ಮಂಡ್ಯ ಜಿಲ್ಲೆ ಹಸಿರು ಶಾಲುಗಳ ಸಿದ್ದಾಂತದ ನೆಲ. ಅಲ್ಲಿ ಕೇಸರಿ ಶಾಲುಗಳಿಗೆ ನೆಲೆಯಿಲ್ಲ. ಮಂಡ್ಯ ಜಿಲ್ಲೆ ಸಂಘಗಳ ಕೋಮುವಾದಕ್ಕೆ ಒಳಪಟ್ಟಿರುವುದಿಲ್ಲ. ಅಲ್ಲಿ ರೈತ ಸಮುದಾಯ ಇರುವುದರಿಂದ ಕೋಮುವೈಷಮ್ಯವಿರಲಿಲ್ಲ. ಹೀಗಾಗಿಯೇ ಕೇಸರಿ ಪಡೆ ಉರಿಗೌಡ ಮತ್ತು ನಂಜೇಗೌಡರನ್ನು ಹುಟ್ಟಿಸಿದರು. ಆದರೆ ಮಂಡ್ಯದ ಜನ ಇದನ್ನು ಒಪ್ಪಿಕೊಳ್ಳದೆ ತಿರಸ್ಕರಿಸಿದರು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಕ್ರಾಂತಿಕಾರಿ) ರಾಜ್ಯ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಹೇಳಿದರು.

ಯಾದಗಿರಿ ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಕ್ರಾಂತಿಕಾರಿ) ರಾಜ್ಯ ಸಮಿತಿಯಿಂದ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

“ಮಂಡ್ಯದಲ್ಲಿ ಹೇಗಾದರೂ ಮಾಡಿ ಕೋಮುವಾದಿ ಕಿಡಿ ಹೊತ್ತಿಸಲು ಜಿಲ್ಲೆ ಕೆರಗೋಡು ಗ್ರಾಮದಲ್ಲಿ ಗೌರಿಶಂಕರ ಟ್ರಸ್ಟ್ ವತಿಯಿಂದ 108 ಅಡಿ ಬೃಹತ್ ಧ್ವಜ ಸ್ತಂಭಕ್ಕೆ ಹನುಮಂತ ಮತ್ತು ಅರ್ಜುನ ಚಿತ್ರಯುಳ್ಳ ಬೃಹತ್ ಕೇಸರಿ ಧ್ವಜ‌ ಕಟ್ಟಿ ಹಾರಿಸಿದ್ದಾರೆ. ಅನುಮತಿ ಇಲ್ಲದೇ ಹನುಮಧ್ವಜ ಹಾರಿಸಿದಕ್ಕೆ ಜಿಲ್ಲಾಡಳಿತ ಹನುಮ ಧ್ವಜ ಇಳಿಸಿತು. ಹಾಗೆಯೇ ಧ್ವಜ ಸ್ತಂಬಕ್ಕೆ ರಾಷ್ಟ್ರೀಯ ಧ್ವಜ ಕಟ್ಟಿ ಹಾರಿಸಿದರು. ಈ ಘಟನೆಯ ಕುರಿತು ಸಿ ಟಿ ರವಿಯಂಥಹ ನಾಲಾಯಕ್ ಸ್ವಾತಂತ್ರ ಹೋರಾಟದ ಸೌಹಾರ್ದ ಮತ್ತು ಸಮಾನತೆಯ ಆಶಯವಾಗಿ ರೂಪುಗೊಂಡ ರಾಷ್ಟ್ರಧ್ವಜವನ್ನು ತಾಲಿಬಾನಿ ಧ್ವಜವೆಂದು ಅವಮಾನಿಸಿದ್ದಾನೆ. ಇದು ಇತನ ತಪ್ಪಲ್ಲ. ಈತನಿಗೆ ಸಂಸ್ಕಾರ ಕೊಟ್ಟ ಸಂಘದ ಮೂರ್ಖತನ. ತ್ರಿವರ್ಣ ಧ್ವಜ ನಮ್ಮದಲ್ಲ, ಅದು ನಕಲಿ ಸಂಕೇತ ಕೋಮುವಾದಿಯ ಸಂಘ ಅದನ್ನು ನಾವು ಒಪ್ಪುವುದಿಲ್ಲವೆಂದು ಎಂ ಎಸ್ ಗೋಳ್ವಾಲ್ಕರ್ ತಮ್ಮ ಬಂಚ್ ಆಫ್ ಥಾಟ್‌ ಕೃತಿಯಲ್ಲಿ ಬರೆದಿದ್ದಾರೆ” ಎಂದರು.

Advertisements

“ನಾವು ಯಾವಾಗಲು ತ್ರಿವರ್ಣ ಧ್ವಜವನ್ನು ಗೌರವಿಸುವುದಿಲ್ಲ. ಮೂರು ಎನ್ನುವ ಸಂಖ್ಯೆಯೇ ಒಂದು ಅಪಶಕುನ ಹಾಗಾಗಿ ಮೂರು ವರ್ಣಗಳ ಧ್ವಜವು ದೇಶಕ್ಕೆ ಹಾನಿಯುಂಟು ಮಾಡುತ್ತದೆಂದು ಆರ್‌ಎಸ್ಎಸ್‌ನ ಮುಖವಾಣಿ ದಿ ಆರ್ಗನೈಸರ್‌ದಲ್ಲಿ ಬರೆಯುತ್ತಾರೆ. ಈ ಪ್ರವೃತಿ ಹೊಂದಿದವರು ಅದು ಹೇಗೆ ರಾಷ್ಟ್ರಧ್ವಜಕ್ಕೆ ಗೌರವಿಸುತ್ತಾರೆ. ನಮ್ಮ ಸಂವಿಧಾನಕ್ಕೆ ಮತ್ತು ರಾಷ್ಟ್ರಧ್ವಜಕ್ಕೆ ಆರ್‌ಎಸ್‌ಎಸ್‌ನವರು ಒಪ್ಪುವುದಿಲ್ಲ ಎನ್ನುವುದಕ್ಕೆ ಜ್ವಲಂತ ಉದಾರಣೆ. ಆರ್‌ಎಸ್‌ಎಸ್ ಭಗವಾಧ್ವಜ ಮನುವಿನ ವಿಜಯಪತಾಕೆ” ಎಂದು ಹೇಳಿದರು.

“ರಾಮಮಂದಿರ ಉದ್ಘಾಟನೆ ಮಾಡಿ ವಿಜಯೋತ್ಸವದ ಹಾದಿಯತ್ತ ಹೆಜ್ಜೆ ಹಾಕುತ್ತಿರುವ ವಿಷಮಯವಾದ ಕೇಸರಿಯನ್ನು ದೂರವಿಡಬೇಕೆಂಬ ದೃಢಸಂಕಲ್ಪ ಮಂಡ್ಯದ ಜನರದಾಗಿರುತ್ತದೆ” ಎಂದರು.

“ಪ್ರಧಾನಿ ಮೋದಿಗೆ ಪರ್ಯಾವೇ ಇಲ್ಲ ಎನ್ನುವಂತಹ ಅಭಿಪ್ರಾಯ ರೂಪಿಸಲಾಗಿದೆ. ಹಲವು ಮಾಧ್ಯಮಗಳು ಮೋದಿಯವರ ತುತ್ತೂರಿಯಾಗಿವೆ. ಬಿಜೆಪಿಯ ಹಣ ಬಲವನ್ನು ಮೀರಿಸುವುದು ವಿರೋಧ ಪಕ್ಷಗಳಿಗೆ ಸಾಧ್ಯವಿಲ್ಲ. ಬಿಜೆಪಿಗೆ ದೇಶ ವ್ಯಾಪಿ ಆರ್‌ಎಸ್‌ಎಸ್ ಸಂಘಟನೆಯ ಪ್ರತ್ಯೇಕ್ಷ ಬೆಂಬಲ. ಸುಳ್ಳು ರಾಷ್ಟ್ರಾಭಿಮಾನದ ಪ್ರಚೋದನಕಾರಿ ಸಿದ್ಧಾಂತ ವ್ಯವಸ್ಥಿತ ಚುನಾವಣೆ ತಂತ್ರವಾಗಿದೆ. ಧಾರ್ಮಿಕ ವಿಷಯಗಳು ರಾಜ್ಯಾಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು. ಆದರೆ ತನ್ನ ಸರ್ಕಾರವನ್ನು ಧರ್ಮದ ಆಧಾರದ ಮೇಲೆ ಉಳಿಸಿಕೊಳ್ಳಲು ಬಯಸುವವನು ಒಬ್ಬ ದುರ್ಬಲ ಆಡಳಿತಗಾರ. ಇದು ಮೋದಿಯವರಿಗೆ ಹೋಲುತ್ತದೆ” ಎಂದರು.

“ಕೇಸರಿ ಧ್ವಜ ಮುಂದಿಟ್ಟುಕೊಂಡು ರಾಮ ಮಂದಿರ ಉದ್ಘಾಟನೆ, ವಾರಣಸಿಯ ಜ್ಞಾನ ವ್ಯಾಪಿ ಮಸೀದಿ, ಮಣಿಪೂರದಲ್ಲಿ ಯೋದನ ಪತ್ನಿಯ ಬೆತ್ತಲೆ ಮೇರವಣಿಗೆ, ಮಂಡ್ಯದ ಕೆರಗೋಡಿಲ್ಲಿ ಹನುಮ ಧ್ವಜ ಇವುಗಳನ್ನು ಮುಂದೆ ಮಾಡಿ ದೇಶದಲ್ಲಿ ಕೋಮುದ್ವೇಷ ಉಂಟು ಮಾಡುತ್ತಿದ್ದಾರೆ” ಎಂದರು.

“ದೇಶದಲ್ಲಿ ಜ್ವಲಂತ ಸಮಸ್ಯೆಗಳ ಬಗ್ಗೆ ಒಂದು ದಿವಸ ಯೋಚಿಸಲಿಲ್ಲ. ದೇಶದಲ್ಲಿ 08 ಲಕ್ಷ ಮಕ್ಕಳು ಒಂದು ವರ್ಷದ ಹುಟ್ಟು ಹಬ್ಬದ ಮೊದಲೇ ಸಾಯುತ್ತಿವೆ. 1,42,000 ಸ್ತ್ರೀಯರು ತಕ್ಕ ಚಿಕಿತ್ಸೆ ಇಲ್ಲದೆ ಹೆರಿಗೆಯ ಸಂದರ್ಭ ಮೃತಪಡುತ್ತಾರೆ. ಜಗತ್ತಿನಲ್ಲಿ ಅತ್ಯಂತ ಅಪೌಷ್ಠಿಕತೆ ನಮ್ಮ ದೇಶದಲ್ಲಿರುತ್ತದೆ. 5,00,000 ಸರ್ದಾಜಿಗಳು ಯುರೋಪಿನಲ್ಲಿ ಗುಲಾಮರಾಗಿ ದುಡಿಯುತ್ತಿದ್ದಾರೆ” ಎಂದರು.

“ನ್ಯಾಷನಲ್ ಸಾಂಪಲ್ ಸರ್ವೆ ಪ್ರಕಾರ 4 ಕೋಟಿ ಭಾರತಿಯರು ಬಡತನದ ರೇಖೆಗಿಂತ ಕೆಳಗೆ ಇದ್ದಾರೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ ಕಳೆದ 15 ವರ್ಷಗಳನ್ನು 1,75,000 ಸರ್ಕಾರಿ ಶಾಲೆಗಳು ಮುಚ್ಚಿವೆ. ಕಳೆದ 5 ವರ್ಷಗಳಲ್ಲಿ ದೇಶದ ಶೇ.50ರಷ್ಟು ಉದ್ದಿಮೆಗಳು ಮುಚ್ಚಿವೆ. ಲಕ್ಷಾಂತರ ಯುವಕರು ಉದ್ಯೋಗವಿಲ್ಲದೇ ನಿರುದ್ಯೋಗಿಗಳಾಗಿ ಬದುಕುತ್ತಿದ್ದಾರೆ. ಭಗವ ಕೇಸರಿ ಧ್ವಜ ಕೈಯಲ್ಲಿ ಹಿಡಿದು ದೇಶದಲ್ಲಿ ಕೋಮುವಾದ ಹರಡಿಸುವವರು ಸಮಸ್ಯೆಗಳು ಸಮಸ್ಯೆಗಳೇ ಅಲ್ಲ ಎನ್ನುವಂತೆ  ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ” ಎಂದರು.

“ಕಲ್ಯಾಣ ಕರ್ನಾಟಕದಲ್ಲಿ ಬರಗಾಲದಿಂದ ಜನ ತೊಂದರೆಗೆ ಸಿಲುಕಿದ್ದಾರೆ. ಬದುಕಲು ನೆರೆ ಮಹಾರಾಷ್ಟ್ರ ರಾಜ್ಯಕ್ಕೆ ಗುಳೆ ಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನರಿಗೆ ದನಕರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಆರ್ ಅಶೋಕ್ ಅವರು ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕರಾಗಿ ಕಲ್ಯಾಣ ಕರ್ನಾಟಕಕ್ಕೆ ತಮ್ಮ ಪಕ್ಷದ ಪ್ರಚಾರಕ್ಕೆ ಬಂದು ಸನ್ಮಾನಿಸಿಕೊಂಡು ತಮ್ಮ ಟಿಎ, ಡಿಎ ಮಾಡಿಕೊಂಡು ಹೋದರೇ ಹೊರತಾಗಿ ಈ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಲಿಲ್ಲ”‌ ಎಂದರು.

ಈ ಸುದ್ದಿ ಓದಿದ್ದೀರಾ? ಬೆಂ. ಗ್ರಾಮಾಂತರ | ಗ್ಯಾರಂಟಿ ಯೋಜನೆಗಳಿಂದ ಸರ್ವತೋಮುಖ ಅಭಿವೃದ್ಧಿ: ಸಚಿವ ಕೆ‌.ಎಚ್ ಮುನಿಯಪ್ಪ

“ಹತ್ತು-ಹಲವಾರು ಸಮಸ್ಯೆಗಳನ್ನು ಬದಿಗೊತ್ತಿ ಕೋಮುವಾದ ಒಂದೇ ತಮ್ಮ ಕಾಯಕವೆಂದು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ನಿಮ್ಮ ಡೊಂಬರ ಆಟ ನಿಲ್ಲಿಸಿ, ನೀವು ಮೋಸಗಾರರೆಂದು ಜನರಿಗೆ ತಿಳಿದುಬಂದಿದೆ” ಎಂದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡ ಮಾನು ಗುರಿಕಾರ, ಕಲಬುರಗಿ ಜಿಲ್ಲಾ ಸಂಚಾಲಕ ಮಹಾಂತೇಶ ಬಡದಾಳ, ರಾಜ್ಯ ಸಂಚಾಲಕ ಅರ್ಜುನ ಭದ್ರೆ ಬೆಂಗಳೂರು, ಜಿಲ್ಲಾ ಖಜಾಂಚಿ ಸೂರ್ಯಕಾಂತ ಅಜಾದಪೂರ, ನಗರ ಸಂಚಾಲಕ ಶಿವಕುಮಾರ ಕೊರಳ್ಳಿ, ತಾಲೂಕಾ ಸಂಚಾಲಕ ಕಪಿಲ ಸಿಂಗೆ ಸೇರಿದಂತೆ ಇತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ನಗರದ ವಿವಿಧ ಬಡಾವಣೆಗಳಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಅಡಿಗಲ್ಲು

ರಾಯಚೂರು ನಗರದ ವಾರ್ಡ್ ನಂ.34ರ ಬಂದೇನವಾಜ ಕಾಲೋನಿ, ದೇವರಾಜ ಅರಸ್ ಕಾಲೋನಿ,...

ಬಳ್ಳಾರಿ | ನಶಿಸಿ ಹೋಗುತ್ತಿರುವ ತೊಗಲುಗೊಂಬೆ ಪ್ರದರ್ಶನ ಉಳಿಸಿ ಬೆಳೆಸಬೇಕು: ಜೋಳದರಾಶಿ ತಿಮ್ಮಪ್ಪ

ನಶಿಸಿ ಹೋಗುತ್ತಿರುವ ತೊಗಲು ಗೊಂಬೆ ಪ್ರದರ್ಶನ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ...

ಭಟ್ಕಳ | ಮಗಳ ಅಶ್ಲೀಲ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ: ಮೂವರ ಬಂಧನ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದ ಕಿದ್ವಾಯಿ ರಸ್ತೆಯೊಂದರ ತರಕಾರಿ ವ್ಯಾಪಾರಿಯನ್ನು...

ಮಂಗಳೂರು | ಸ್ನಾತಕೋತ್ತರದತ್ತ ಮುಖಮಾಡದ ಪದವೀಧರರು: ಪ್ರವೇಶಾತಿ ಗಡುವು ವಿಸ್ತರಣೆ

ನಾಲ್ಕು ದಶಕಗಳಷ್ಟು ಹಳೆಯದಾದ ಮಂಗಳೂರು ವಿಶ್ವವಿದ್ಯಾಲಯ(MU), ನಿರೀಕ್ಷಿತ ಸಂಖ್ಯೆಯ ಪ್ರವೇಶಗಳನ್ನು ಪಡೆಯಲು...

Download Eedina App Android / iOS

X