ಕಲಬುರಗಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು, ಶಹಾಬಾದ್ ತಾಲೂಕಿನ ಮರತೂರ ಗ್ರಾಮ ಪಂಚಾಯತಿ ಕಾರ್ಯದರ್ಶಿ ಅಶೋಕ್ ಪಡಶೆಟ್ಟಿ ಎಂಬುವವರು ಲಂಚ ಪಡೆಯುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪರಶುರಾಮ ರಾಠೋಡ್ ಎಂಬುವರಿಂದ ಜಾಗದ ಮುಟೇಷನ್ ಮಾಡಿಕೊಡಲು 20 ಸಾವಿರ ರೂ. ಲಂಚಕ್ಕೆ ಬೇಡಿಕೆಯಿಟ್ಟು, ಅದನ್ನು ಕಲಬುರಗಿ ನಗರದ ಲಾಲ್ ಗೇರಿ ಕ್ರಾಸ್ ಬಳಿಯ ಹೊಟೇಲ್ನಲ್ಲಿ ಪಡೆಯುವಾಗ ಸಿಕ್ಕಿ ಬಿದ್ದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಪ್ರತಿವರ್ಷ ʼಬಸವ ಉತ್ಸವʼ ಆಚರಿಸಲು ಬಸವಪರ ಸಂಘಟನೆಗಳ ಆಗ್ರಹ
ಲೋಕಾಯುಕ್ತ ಡಿವೈಎಸ್ಪಿ ಗೀತಾ ಬೇನಾಳ ನೇತೃತ್ವದ ತಂಡ, ಅಶೋಕ ಪಡಶೆಟ್ಟಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.