ಕಲಬುರಗಿ | ಈದ್ ಸೌಹಾರ್ದ ಕೂಟ, ಪುಸ್ತಕ ಬಿಡುಗಡೆ ಕಾರ್ಯಕ್ರಮ

Date:

ಈದ್ ಮಿಲನ್ (ಸೌಹಾರ್ದ ಕೂಟ) ಹಾಗೂ “ಅರಿವಿನ ಬೆಳಕು” ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಜಮಾತ್-ಎ-ಇಸ್ಲಾಮಿ ಹಿಂದ್, ಕಲಬುರಗಿ ವತಿಯಿಂದ ನಗರದ ಹಿದಾಯತ್ ಸೆಂಟರ್‌ನಲ್ಲಿ ಭಾನುವಾರ ಆಯೋಜಿಸಲಾಗಿದೆ.

- Advertisement -

ಸಮಾಜದಲ್ಲಿ ಸೌಹಾರ್ದತೆ, ಪರಸ್ಪರ ಸಹಾನುಭೂತಿ ಮತ್ತು ಧಾರ್ಮಿಕ ಮೌಲ್ಯಗಳ ಅರಿವು ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಅಬ್ದುಲ್ ಖಾದರ್ ಅವರ ಸಂಕಲನ ಮತ್ತು ಅನುವಾದದಲ್ಲಿ ಹೊರಬಂದ “ಅರಿವಿನ ಬೆಡಕು” ಕೃತಿಯನ್ನು ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಪುಸ್ತಕದ ಕುರಿತು ಅಬ್ದುಲ್ ಖಾದರ್ ಅವರು ಮಾತನಾಡಿ, “ಅರಿವಿನ ಬೆಳಕು” ಕೃತಿ ಐದು-ಆರು ವರ್ಷಗಳ ಅಧ್ಯಯನ ಮತ್ತು ಪರಿಶ್ರಮದ ಫಲವಾಗಿದ್ದು, ಸೃಷ್ಟಿಯ ಆರಂಭದಿಂದ ಮನುಷ್ಯನ ಬದುಕಿನ ಉದ್ದೇಶದವರೆಗೆ ಕುರಾನ್‌ನಲ್ಲಿ ನೀಡಿರುವ ತತ್ವಗಳನ್ನು ಸರಳವಾಗಿ ವಿವರಿಸುತ್ತದೆ ಎಂದು ತಿಳಿಸಿದರು. ಈ ಕೃತಿ ಓದುಗರಿಗೆ ಕುರಾನ್‌ನ ಮೂಲಭೂತ ಸಂದೇಶವನ್ನು ಸುಲಭವಾಗಿ ಗ್ರಹಿಸಲು ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

1592583

ಹದಿನೈದು ಅಧ್ಯಾಯಗಳನ್ನು ಒಳಗೊಂಡಿರುವ ಈ ಕೃತಿಯಲ್ಲಿ ಪ್ರಾರ್ಥನೆಯ ಮಹತ್ವ, ದಿವ್ಯಬೋಧನೆ, ಮನುಷ್ಯ ಮತ್ತು ಸೃಷ್ಟಿಯ ನಡುವಿನ ಸಂಬಂಧ, ಇಹಲೋಕ-ಪರಲೋಕ ತತ್ವಗಳು ಹಾಗೂ ಮನುಷ್ಯನ ಆಲೋಚನಾ ಶಕ್ತಿ ಮತ್ತು ಬದುಕಿನ ದಿಕ್ಕಿನ ಕುರಿತು ವಿವರಿಸಲಾಗಿದೆ. ಜೊತೆಗೆ ಕುಟುಂಬ ಮತ್ತು ಸಮಾಜ ನಿರ್ಮಾಣ, ಒಗ್ಗಟ್ಟು, ಸಾಮಾಜಿಕ ಜವಾಬ್ದಾರಿ ಮತ್ತು ನೈತಿಕ ಮೌಲ್ಯಗಳ ಅಗತ್ಯತೆಯನ್ನೂ ಈ ಕೃತಿ ಒತ್ತಿಹೇಳುತ್ತದೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶರಣಬಸವ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ. ನಿರಂಜನ್ ವಿ. ನಿಸ್ಟಿ ಭಾಗವಹಿಸಿದರು, ವಿಶೇಷ ಅತಿಥಿಗಳಾಗಿ ಜಮಾತ್-ಎ-ಇಸ್ಲಾಮಿ ಹಿಂದ್ ಮಂಗಳೂರು ಅಧ್ಯಕ್ಷರು ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಇಶಾಖ್ ಪುತ್ತೂರು ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ಹಿಂದೂ–ಮುಸ್ಲಿಂ ಸಮುದಾಯದ ಗಣ್ಯರು, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸೌಹಾರ್ದತೆಯ ಸಾಂದ್ರ ವಾತಾವರಣವನ್ನು ನಿರ್ಮಿಸಿದರು. ಪರಸ್ಪರ ಹಾರ್ದಿಕ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡು, ಸಹೋದರತ್ವ ಮತ್ತು ಏಕತೆಯ ಸಂದೇಶವನ್ನು ಬಲಪಡಿಸಿದರು.

ಇದನ್ನು ಓದಿದ್ದೀರಾ? ಕಲಬುರಗಿ | ಮಹಿಳಾ ದಿನಾಚರಣೆ ಅಂಗವಾಗಿ ಪ್ರಶಸ್ತಿ ಪ್ರದಾನ, ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ

ಈದ್ ಮಿಲನ್ ಕಾರ್ಯಕ್ರಮವು ಕೇವಲ ಧಾರ್ಮಿಕ ಆಚರಣೆಯಲ್ಲದೇ, ವಿಭಿನ್ನ ಸಮುದಾಯಗಳ ನಡುವೆ ಪರಸ್ಪರ ನಂಬಿಕೆ, ಗೌರವ ಮತ್ತು ಸ್ನೇಹವನ್ನು ವೃದ್ಧಿಸುವ ವೇದಿಕೆಯಾಗಿಯೂ ಪರಿಣಮಿಸಿತು. ಭಾಗವಹಿಸಿದವರು ಪರಸ್ಪರ ಸಂವಾದ ನಡೆಸಿ, ಸಾಮಾಜಿಕ ಒಗ್ಗಟ್ಟಿನ ಅಗತ್ಯತೆಯನ್ನು ಒತ್ತಿಹೇಳಿದರು.

ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾದ ಸೌಹಾರ್ದ ಕೂಟದಲ್ಲಿ ಎಲ್ಲರೂ ಸೇರಿ ಈದ್ ವಿಶೇಷ ಊಟವನ್ನು ಸವಿದು, ಹಬ್ಬದ ಸಂಭ್ರಮವನ್ನು ಹಂಚಿಕೊಂಡರು. ಈ ಮೂಲಕ ‘ಏಕತೆಯಲ್ಲಿ ಶಕ್ತಿ’ ಎಂಬ ಸಂದೇಶವು ಇನ್ನಷ್ಟು ಗಾಢವಾಗಿ ಮೂಡಿಬಂದಿತು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲಬುರಗಿ | ಬಸ್, ಬೈಕ್ ಡಿಕ್ಕಿ: ಬೈಕ್ ಹಿಂಬದಿ ಸವಾರ ಸಾವು

ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ...

ಕಲಬುರಗಿ | ಗಾಂಜಾ ಮಾರಾಟ; ಮೂವರು ಬಂಧನ, ₹7,500 ಮೌಲ್ಯದ ವಸ್ತು ವಶ

ಕಲಬುರಗಿ ನಗರದ ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ...

ಕಲಬುರಗಿ | ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶವ ಪತ್ತೆ; ಕೊಲೆ ಶಂಕೆ

ಕಮಲಾಪುರ ತಾಲ್ಲೂಕಿನ ಡೊಂಗರಗಾಂವ ಗ್ರಾಮದಲ್ಲಿ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಯೊಬ್ಬರ ಮೃತದೇಹ...