ಕೋಲಾರ | ಮಹಿಳೆಯರ ಸಬಲೀಕರಣಕ್ಕೆ ರೋಟರಿ ಸಂಸ್ಥೆ ಹೆಚ್ಚು ಆದ್ಯತೆ ನೀಡ್ತಿದೆ : ಶ್ರೀಧರ್

Date:

ರೋಟರಿ ಸಂಸ್ಥೆ ಸಾಮಾಜ ಮುಖಿ ಕಾರ್ಯಗಳ ಮೂಲಕ ಮಹಿಳೆಯರ ಸಬಲೀಕರಣಕ್ಕೆ ತನ್ನದೇ ಆದ ಪಾತ್ರವನ್ನು ಸಮಾಜದಲ್ಲಿ ನೀಡುತ್ತಿದೆ ಎಂದು ರೋಟರಿ 3191 ಜಿಲ್ಲಾ ಪಾಲಕ ರೋ.. ಬಿ. ಆರ್. ಶ್ರೀಧರ್ ಹೇಳಿದರು.

ತಾಲೂಕಿನ ಕಾಮಧೇನಹಳ್ಳಿ ಗ್ರಾಮದ ಸತ್ಯಮ್ಮ ದೇವಿ ದೇವಾಲಯದ ಆವರಣದಲ್ಲಿ ರೋಟರಿ ಸಂಸ್ಥೆ ಯಿಂದ ಹಸುಗಳನ್ನು ನೊಂದ ಮಹಿಳೆಯರಿಗೆ ವಿತರಿಸಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದಿರುವ ಮಹಿಳೆಯರಿಗೆ ಹಾಗೂ ವಿಧವೆಯರಿಗೆ ರೋಟರಿ ಸಂಸ್ಥೆಯಿಂದ ಹಸುಗಳನ್ನು ನೀಡುವ ಉದ್ದೇಶ ಆರ್ಥಿಕವಾಗಿ ಸಬಲರಾಗುವ ಮೂಲಕ ಸ್ವಾವಲಂಬಿ ಜೀವನವನ್ನು ರೂಪಿಸಿಕೊಳ್ಳಲಿ ಎಂಬ ಕಾರಣಕ್ಕಾಗಿ ನೀಡಲಾಗುತ್ತಿದೆ ಎಂದರು.

ಹೈನೋಧ್ಯಮ ಕ್ಷೇತ್ರ ಮಹಿಳೆಯರಿಗೆ ಲಾಭದಾಯಕ ವಾದ ಕ್ಷೇತ್ರವಾಗಿದ್ದು, ಈ ನಿಟ್ಟಿನಲ್ಲಿ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳುವ ಜತೆಯಲ್ಲೆ, ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಸಹಕಾರಿಯಾಗುತ್ತದೆ ಎಂದು ಹೇಳಿದರು.
ರೋಟರಿ ಸಂಸ್ಥೆಯಿಂದ ಮಹಿಳೆಯರಿಗೆ ವಿತರಿಸಿರುವ ಹಸುಗಳ ನಿರ್ವಹಣೆ ಮತ್ತು ವಿಮಾ ಯೋಜನೆಗಳ ಮಾಹಿತಿಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಇದನ್ನು ಓದಿದ್ದೀರಾ..? ಕೋಲಾರ | ₹ 10 ಕೋಟಿ ವೆಚ್ಚದಲ್ಲಿ ಎರಡು ಸೇತುವೆ ನಿರ್ಮಾಣ: ಕೊತ್ತೂರು ಮಂಜುನಾಥ್‌

ಕಾರ್ಯಕ್ರಮದಲ್ಲಿ 3191 ಜಿಲ್ಲಾ ಕಾರ್ಯದರ್ಶಿ ರವೀಂದ್ರನಾಥ್, ನಾರಾಯಣ, ಕೋಲಾರ ರೋಟರಿ ಸಂಸ್ಥೆಯ ಅಧ್ಯಕ್ಷ ಎಸ್. ಎಂ ಚಂದ್ರಶೇಖರ್, ಕಾರ್ಯದರ್ಶಿ ರೋ.ಎಂ. ಪ್ರಭಾಕರ್ ಸದಸ್ಯರಾದ ಶ್ರೀನಿವಾಸ ರೆಡ್ಡಿ, ಜಿ. ನಾರಾಯಣಸ್ವಾಮಿ, ನಾಗೇಶ್, ಹಾಗೂ ಅನೇಕ ಸದಸ್ಯರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿವಿಗೊಳಿಸಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ದ್ವೇಷ ಭಾಷಣ, ಕೋಮುವಾದಿ ಪ್ರಚೋದನೆ ತಡೆಗೆ ಸಮಗ್ರ ನೀತಿ ರೂಪಿಸಿ

ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕಿನ ಸಂರಕ್ಷಣಾ ಕಾಯ್ದೆ–2022 (ಮತಾಂತರ ನಿಷೇಧ ಕಾಯ್ದೆ)...

ಕಲಬುರಗಿ | ಕನ್ನಡ ರಾಜ್ಯೋತ್ಸವ ಅಂಗವಾಗಿ; ಸಸಿ ನೆಡುವ ಮೂಲಕ ಕನ್ನಡ ಜಾಗೃತಿ ಕಾರ್ಯಕ್ರಮ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ನಾಡು, ನುಡಿಯ ಅಭಿಮಾನದ ಜೊತೆಗೆ ಪರಿಸರ...

ಕ್ರೈಸ್ತ ಅಭಿವೃದ್ಧಿ ನಿಗಮದ ನಿಯೋಗದಿಂದ ಸಚಿವ ಯು.ಟಿ. ಖಾದರ್ ಭೇಟಿ: ಮತಾಂತರ ನಿಷೇಧ ಕಾಯ್ದೆಯ ಕುರಿತು ಚರ್ಚೆ

ಕರ್ನಾಟಕ ಕ್ರೈಸ್ತ ಸಮುದಾಯದ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ನಿರ್ದೇಶಕರನ್ನೊಳಗೊಂಡ ನಿಯೋಗವು...