ಕೋಲಾರ |ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರೋದು ಗೊತ್ತು, ನಮ್ಮನ್ನು ದೂರ ಮಾಡಿದ್ರೆ ಅಧಿಕಾರದಿಂದ ಇಳಿಸೋದು ಗೊತ್ತು

Date:

ಕಾಂಗ್ರೆಸ್ ಪಕ್ಷ ಸ್ಥಾಪನೆಯಾದಾಗಿನಿಂದ ಮುಸಲ್ಮಾನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿಕೊಂಡು ಬಂದಿದ್ದೇವೆ, ಕಾಂಗ್ರೆಸ್ ಪಕ್ಷ ಈಗ ನಮ್ಮನ್ನು ನಿರ್ಲಕ್ಷ್ಯ ಮಾಡಿದರೆ ನಾವು ಸಹ ನಿಮ್ಮ ಜೊತೆ ಇರಲು ಇಷ್ಟ ಪಡುವುದಿಲ್ಲ ಎಂದು ಉಲಮಾ ಮೌಲಾನಾ ಅತೀಕ್ ಉರ್ ರೆಹಮಾನ್ ಎಚ್ಚರಿಕೆ ನೀಡಿದರು.

- Advertisement -

ನಗರದ ಶಾಹಿ ಈದ್ಗಾ ಮೈದಾನದಲ್ಲಿ ಕೋಲಾರ ಜಿಲ್ಲೆಯ ಉಲಮಾಗಳ ನೇತೃತ್ವದಲ್ಲಿ ನಸೀರ್ ಅಹ್ಮದ್ ಹಾಗೂ ಅಬ್ದುಲ್ ಜಬ್ಬಾರ್ ರವರನ್ನು ವಜಾ ಮಾಡಿರುವ ಕುರಿತು ರಾಜಕೀಯದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ನಾವು ಮುಸಲ್ಮಾನರು ಕಾಂಗ್ರೆಸ್ ಪಕ್ಷದ ಜೊತೆ ಸೇರಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದೇವೆ. ಕಾಂಗ್ರೆಸ್ ಪಕ್ಷ ಎಲ್ಲಾ ಧರ್ಮಗಳ ಜನರನ್ನು ಸಮಾನವಾಗಿ ಕಾಣುವ ಉದ್ದೇಶದಿಂದ ನಾವು ಬೆಂಬಲಿಸಿಕೊಂಡು ಬಂದ್ದಿದ್ದೇವೆ. ಕಾಂಗ್ರೆಸ್ ಪಕ್ಷವನ್ನು ಬೇರೆ ಸಮುದಾಯದ ಜನರು ಕೈಬಿಟ್ಟ ಸಂದರ್ಭದಲ್ಲೂ ಮುಸ್ಲಿಂ ಸಮುದಾಯದ ಜನರು ಕಾಂಗ್ರೆಸ್ ಪಕ್ಷದ ಜೊತೆ ಗಟ್ಟಿಯಾಗಿ ನಿಂತು ಬೆಂಬಲ ನೀಡಿದ್ದೇವೆ, ಕಾಂಗ್ರೆಸ್ ಪಕ್ಷದ ಕಷ್ಟದಲ್ಲಿ ಇರಲಿ, ಸುಖದಲ್ಲಿ ಇರಲಿ, ನಾವು ಸದಾ ಕಾಂಗ್ರೆಸ್ ಪಕ್ಷವನ್ನು ಗಟ್ಟಿಯಾಗಿ ಬೆಂಬಲಿಸಿದ್ದೇವೆ ಎಂದು ಹೇಳಿದರು.

ದಾವಣಗೆರೆಯಲ್ಲಿ ಮುಸ್ಲಿಂ ಸಮುದಾಯ ಮತದಾರರು ಹೆಚ್ಚಾಗಿದ್ದು, ಸಚಿವ ಜಮೀರ್ ಅಹಮದ್,ನಸೀರ್ ಅಹ್ಮದ್ ಹಾಗೂ ಇತರೆ ಮುಖಂಡರು ಮುಸ್ಲಿಂಮರಿಗೆ ಟಿಕೆಟ್ ಕೊಡಿ ಎಂದು ಕೇಳಿದ್ದು ತಪ್ಪಿಲ್ಲಾ, ನಾವು ಅನ್ಯಾಯ ಮಾಡುವ ಪಕ್ಷದಲ್ಲಿ ಮೊದಲಿನಿಂದಲೂ ಹೋಗಲ್ಲಾ ಹಾಗೂ ಮುಂದಿನ ದಿನಗಳಲ್ಲಿಯೂ ಸಹ ಹೋಗುವುದಿಲ್ಲಾ, ಆದರೆ ಕಾಂಗ್ರೆಸ್ ಪಕ್ಷ ಈಗ ನಮ್ಮನ್ನು ನಿರ್ಲಕ್ಷ್ಯ ಮಾಡಿದರೆ ನಾವು ಸಹ ನಿಮ್ಮ ಜೊತೆ ಇರಲು ಇಷ್ಟ ಪಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ನಮ್ಮ ಧರ್ಮಗುರುಗಳು ಹಾಗೂ ಮುಖಂಡರು ಮನೆ ಮನೆಗೆ ಹೋಗಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು‌ ಹೇಳಿ 92% ಮತ ಹಾಕಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ್ದಿದ್ದೇವೆ. ನಮಗೆ ನೀವು ನೀಡಿದ ಭರವಸೆ ಈಡೇರಿಸಲಿಲ್ಲಾ ಹಾಗೂ ಈಗ ನೋಡಿದ್ರೆ ನಮ್ಮ ನಾಯಕರಾದ ನಸೀರ್ ಅಹ್ಮದ್ ಹಾಗೂ ಜಬ್ಬಾರ್ ರವರನ್ನು ವಜಾ ಮಾಡಿದ್ದು ಸರಿಯಲ್ಲಾ ಕೂಡಲೇ ಇದರ ಬಗ್ಗೆ ಗಮನವಹಿಸಿ ಬೇಗ ಗೊಂದಲ ಸರಿಪಡಿಸಬೇಕು ಎಂದರು. ಇನ್ನು ನಿಮ್ಮ ಬಳಿ ಸಮಯವಿದೆ ಕೂಡಲೇ ಎಚ್ಚೆತ್ತುಕೊಳ್ಳಿ ಎಂದು ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡಿದರು.

WhatsApp Image 2026 04 24 at 19.31.08

ಬಾಗಲಕೋಟೆ ಉಪಚುನಾವಣೆಯಲ್ಲಿ ನಸೀರ್ ಅಹ್ಮದ್ ರವರು ಕಾಂಗ್ರೆಸ್ ಪಕ್ಷದ ಪರವಾಗಿ ಹೆಚ್ಚು ಪ್ರಚಾರ ಮಾಡಿದ್ದಾರೆ, ಅವರು ದಾವಣಗೆರೆಗೆ ಹೋಗಲಿಲ್ಲ ಅನ್ನುವ ಕಾರಣಕ್ಕೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಿದ್ದು ಸರಿಯಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಇದೇ ಕೊನೆ ಚುನಾವಣೆಯಲ್ಲಾ ಮುಂದೆಯೂ ಚುನಾವಣೆಗಳು ಬರುತ್ತೆ ಆಗ ನಿಮಗೆ ಪಾಠ ಕಲಿಸುವ ಕೆಲಸ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಮುಳಬಾಗಿಲಿನ ಮೌಲಾನಾ ಇಮ್ರಾನ್ ರವರು ಮಾತನಾಡಿ ನಾವು ಕಾಂಗ್ರೆಸ್ ಪಕ್ಷದ ಗ್ಯಾರಂಟಿಯನ್ನು ನೋಡಿ ನಾವು ಬೆಂಬಲ ನೀಡಿಲ್ಲಾ ನಮಗೆ ನೀಡಿದ ಭರವಸೆಗಳನ್ನು ಈಡೇರಿಸಬೇಕು ಎಂದು ಬೆಂಬಲಿಸಿದ್ದು ನಿಮ್ಮ ಗ್ಯಾರಂಟಿ ಯಿಂದೆಲ್ಲಾ ಕೆಲವರು ಹೇಳ್ತಾರೆ ಮೊದಲು ಪಕ್ಷ ನಂತರ ವ್ಯಕ್ತಿ ಅಂತ ಇದು ತಪ್ಪು ಯಾಕಂದ್ರೆ ವ್ಯಕ್ತಿ ಇದ್ರೆ ತಾನೇ ಪಕ್ಷ ಕಟ್ಟಕ್ಕೆ ಆಗೋದು ಎಂಬುದನ್ನು ತಿಳಿಯಬೇಕು.

ಗುರುಗಳು ಹೇಳಿದ್ರೆ ಟಿಕೆಟ್ ಕೊಡಲ್ಲ ಅಂತ ಹೇಳಿದ ಕಾಂಗ್ರೆಸ್ ನಾಯಕರೇ 2023ರಲ್ಲಿ ಗುರುಗಳು ಹೇಳಿದ್ದಕ್ಕೆ ಜನರು ಕಾಂಗ್ರೆಸ್ ಗೆ ವೋಟ್ ಹಾಕಿದ್ದು ಎಂಬುದನ್ನು ಕಾಂಗ್ರೆಸ್ ನಾಯಕರು ತಿಳಿಯಲಿ ಹಾಗೂ ನಸೀರ್ ಅಹ್ಮದ್ ರವರನ್ನು ಇನ್ನು ಉನ್ನತ ಮಟ್ಟದ ಸ್ಥಾನ ನೀಡಬೇಕು ಎಂದರು.

ಮೌಲಾನಾ ಇಸ್ರಾಯಿಲ್ ಹಜರತ್ ರವರು ಮಾತನಾಡಿ ರಾಹುಲ್ ಗಾಂಧಿ ಯಾವಾಗಲೂ ಒಳ್ಳೆಯ ಮಾತು ಆಡುತ್ತಾರೆ ಆದ್ರೆ ನಸೀರ್ ಅಹ್ಮದ್ ರವರಿಗೆ ಮತ್ತೆ ಹುದ್ದೆ ನೀಡಿ ಮುಂದೆ ನಾವು ಪ್ರತಿಭಟನೆ ಮಾಡುವ ಸ್ಥಿತಿಗೆ ಬರಲು ಕಾಂಗ್ರೆಸ್ ಹೈಕಮಾಂಡ್ ಅವಕಾಶ ಕೊಡಬಾರದು ಎಂದರು.

ಮೌಲಾನಾ ವಜೀರ್ ರವರು ಮಾತನಾಡಿ ನಾವು ಸಣ್ಣ ತಪ್ಪು ಮಾಡಿದರೂ ನಮ್ಮ ಮೇಲೆ ಕ್ರಮ ಕೈಗೊಳ್ಳುತ್ತಾರೆ ಆದ್ರೆ ಬೇರೆಯವರು ದೊಡ್ಡ ತಪ್ಪು ಮಾಡಿದರು ಅವರ ವಿರುದ್ಧ ಕ್ರಮ ಕೈಗೊಳ್ಳಲ್ಲಾ ಈ ದ್ವಂದ್ವ ರೀತಿ ಕಾಂಗ್ರೆಸ್ ಮಾಡ್ತಿರೋದು ಸರಿಯಲ್ಲಾ.

ದಾವಣಗೆರೆ ಚುನಾವಣೆಯಲ್ಲಿ ಕಾಂಗ್ರೆಸ್ ಮುಖವಾಡ ಬಯಲಾಗಿದೆ, ಮುಸ್ಲಿಂ ಸಮುದಾಯದ ಹಿರಿಯ ನಾಯಕರನ್ನು ವಜಾ ಮಾಡಿ ಮುಸ್ಲಿಂ ಸಮುದಾಯದ ನಾಯಕರನ್ನು ಪೆಟ್ಟು ನೀಡುತ್ತಿರುವುದು ಸರಿಯಲ್ಲಾ ಆದರು ಸಹ ನಿಮ್ಮ ಮೇಲೆ ಭರವಸೆ ಈಗಲೂ ಇಟ್ಟಿದ್ದೇವೆ ಕೂಡಲೇ ನೀವು ಮುಸ್ಲಿಂ ಸಮುದಾಯಕ್ಕೆ ಕ್ಷಮೆ ಕೇಳಬೇಕು ಹಾಗೂ ನಸೀರ್ ಅಹ್ಮದ್, ಅಬ್ದುಲ್ ಜಬ್ಬಾರ್ ರವರಿಗೆ ಪುನಃ ಹುದ್ದೆ ನೀಡಬೇಕು ಇಲ್ಲದಿದ್ದರೆ ಮುಂದಿನ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಬಹಳಷ್ಟು ಪ್ರಮಾಣ ಬೀಳುತ್ತೆ, ಮುಸ್ಲಿಂ ಸಮುದಾಯದ ಜನರು ಪಕ್ಷಗಳನ್ನು ಅಧಿಕಾರಕ್ಕೆ ತರುವುದು ಗೋತ್ತು ಹಾಗೂ ಅಧಿಕಾರದಿಂದ ದೂರ ಇಡುವುದು ಗೊತ್ತು ಎಂದು ಎಚ್ಚರಿಕೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೌಲಾನ ಕಲೀಮುಲ್ಲಾ ಮಾತನಾಡಿ ಕಾಂಗ್ರೆಸ್ ಪಕ್ಷ ಮುಸ್ಲಿಂ ಸಮುದಾಯದ ನಾಯಕರ ಮೇಲೆ ತರಾತುರಿಯಲ್ಲಿ ಕ್ರಮ ಕೈಗೊಂಡು ನಸೀರ್ ಅಹ್ಮದ್ ಹಾಗೂ ಜಬ್ಬಾರ್ ರನ್ನು ವಜಾ ಮಾಡಿದ್ದು ಸರಿಯಲ್ಲಾ ಕೂಡಲೇ ಇದನ್ನು ಬಗೆಹರಿಸಿ ಪುನಃ ಹುದ್ದೆ ನೀಡಿ ಇಲ್ಲದಿದ್ದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದರು.

ಮುಸ್ಲಿಂ ಸಮುದಾಯದ ನಾಯಕರು ಹಾಗೂ ಉಲಮಾಗಳು ದಾವಣಗೆರೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಮುಸ್ಲಿಂ ಸಮುದಾಯಕ್ಕೆ ನೀಡಿ ಎಂದರು ನೀಡಲಿಲ್ಲಾ ಕೇವಲ ಒಂದೇ ಕುಟುಂಬಕ್ಕೆ ಟಿಕೆಟ್ ನೀಡಿ ಒಂದು ಕೋಟಿ ಮುಸ್ಲಿಮರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ‌ ನಫ್ರತ್ ಕಿ ಬಜಾರ್ ಮೇ ಮೊಹಬ್ಬತ್ ಕಿ ದುಖಾನ್ ಅಂತಾರೆ ಆದ್ರೆ ಕರ್ನಾಟಕದ ಒಂದು ಕೋಟಿ ಮುಸ್ಲಿಮರಿಗೆ ಅನ್ಯಾಯಯಾಗಿದೆ ಅಲ್ಲ ಇದನ್ನು ಬಗೆಹರಿಸಿ ಎಂದು ಆಗ್ರಹಿಸಿದರು.

ನಸೀರ್ ಅಹ್ಮದ್ ರವರು ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಪರ ಹೆಚ್ಚು ಕೆಲಸ ಮಾಡಿದ್ದಾರೆ, ಸಚಿವ ಜಮೀರ್ ಅಹಮದ್ ಖಾನ್ ರವರು ಕೇರಳದಲ್ಲಿ ಹೆಚ್ಚು ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಾರೆ ಆದರು ನಸೀರ್ ಅಹ್ಮದ್ ಮೇಲೆ ಕ್ರಮ ಕೈಗೊಂಡಿರುವುದು ಯಾವ ನ್ಯಾಯ..? ರಾಹುಲ್ ಗಾಂಧಿ‌ ಯಾವಾಗಲೂ ಸಮಾನತೆ ಬಗ್ಗೆ ಹೇಳ್ತಾರೆ ಆದ್ರೆ ಕರ್ನಾಟಕ ಕಾಂಗ್ರೆಸ್ ನಲ್ಲಿ ಎಲ್ಲಿ ಸಮಾನತೆ ಇದೆ ಎಂದು ಪ್ರಶ್ನಿಸಿದರು.

WhatsApp Image 2026 04 24 at 19.39.45

ಶಾಮನೂರು ಶಿವಶಂಕರಪ್ಪ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿ ಎಂದಾಗ ಕಾಂಗ್ರೆಸ್ ಯಾಕೆ ಕ್ರಮ ಕೈಗೊಂಡಿಲ್ಲಾ, ಆದ್ರೆ ತಪ್ಪು ಇಲ್ಲದಿದ್ರು ಮುಸ್ಲಿಂ ಸಮುದಾಯದ ನಾಯಕರನ್ನು ವಜಾ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ.

ಇದನ್ನು ಓದಿದ್ದೀರಾ..? ಬಾಗೇಪಲ್ಲಿ | ಎಸ್. ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ ಪ್ರಕಟ ರಾಜ್ಯಕ್ಕೆ 4ನೇ ಟಾಪರ್ ಆದ ಬಾಗೇಪಲ್ಲಿ ಯಶಸ್ವಿನಿ

ಈ ಸಂದರ್ಭದಲ್ಲಿ ಮುಫ್ತಿ ಮುಜೀರ್, ಅಪ್ಸರ್ ಅಲಿ, ಮೌಲಾನಾ ಇಸ್ರಾಯಿಲ್, ಮೆಹಬೂಬ್ ಆಲಂ, ಮೌಲಾನಾ ಖಲೀಲ್ ರಶಾದಿ, ಮೌಲಾನಾ ಮುಫ್ತಿ ಹಸ್ಮತ್ ಅಲಿ ಹಾಗೂ ಸಾವಿರಾರು ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ರೈತರ ಸಮಸ್ಯೆಗಳಿಗೆ ಸ್ಪಂದಿಸಿ, ಕೂಡಲೇ ಸಾಲಮನ್ನಾ ಮಾಡಿ: ನರಸಿಂಗ್‌ರಾವ್‌ ಸರರ್ಕಿಲ್‌ ಆಗ್ರಹ

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಡ ಜನರಿಗೆ ಸುಳ್ಳು ಭರವಸೆಗಳನ್ನು ನೀಡುತ್ತಾ...

ಕೋಲಾರ | ಜಾನಪದ ಗಾಯಕ ಗೋ.ನಾ. ಸ್ವಾಮಿಗೆ ಕಲಾದರ್ಪಣ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ

ಜಿಲ್ಲೆಯ ಸುಗಟೂರು ಗ್ರಾಮದ ಅಂತರರಾಷ್ಟ್ರೀಯ ಜಾನಪದ ಗಾಯಕ ಹಾಗೂ ಜಾನಪದ ಸಂರಕ್ಷಣಾ...