ಕೋಲಾರ | ಬೇಡಿಕೆ ಈಡೇರಿಸುವವರೆಗೆ ಕಂಪನಿಗಳಿಗೆ ಕೋಳಿ ಪೂರೈಕೆ ಸ್ಥಗಿತ: ಸಾಕಾಣಿಕೆದಾರರ ನಿರ್ಧಾರ

Date:

ಕೋಳಿ ಸಾಕಾಣಿಕೆ ವೆಚ್ಚಕ್ಕೆ ಸರ್ಕಾರ ಪರಿಷ್ಕರಿಸಿರುವ ದರವನ್ನು ಖಾಸಗಿ ಕಂಪನಿಗಳು ಜಾರಿಗೊಳಿಸುವವರೆಗೆ ಮರಿಗಳನ್ನು ಪಡೆಯುವುದಿಲ್ಲ, ಕೋಳಿಗಳನ್ನು ಪೂರೈಸುವುದಿಲ್ಲ ಎಂದು ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘ ನಿರ್ಧರಿಸಿದ್ದಾರೆ. ನಗರದಲ್ಲಿ ನಡೆದ ಜಿಲ್ಲಾ ಮಟ್ಟದ ಸಭೆಯಲ್ಲಿ ಬೆಂಗಳೂರಿನಲ್ಲಿ ನ.25 ರ ಸಂಜೆಯಿಂದ ನಡೆಯುತ್ತಿರುವ ರಾಜ್ಯ ಮಟ್ಟದ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಭಾಗವಹಿಸಲು ತೀರ್ಮಾನಿಸಿದ್ದು ವ್ಯಾಪಾರಸ್ಥರು ಹಾಗೂ ಟ್ರೇಡರ್ಸ್‌ಗಳ ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.

- Advertisement -

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಗಟೂರು ಶ್ರೀಧರ್ ಮಾತನಾಡಿ, ಸರ್ಕಾರ ಪ್ರತಿ ಕೆ.ಜಿ. ಕೋಳಿ ಸಾಕಾಣಿಕೆಗೆ ₹10.46 ವೆಚ್ಚ ನಿಗದಿಪಡಿಸಿದ್ದರೂ ಕಂಪನಿಗಳು ಹಳೆಯ ದರವಾದ ₹6.20 ಮಾತ್ರ ನೀಡುತ್ತಿವೆ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಹೋರಾಟ ನಡೆಸಿದರು ಬೇಡಿಕೆ ಈಡೇರಿಸಿಲ್ಲ ಇದರಿಂದಾಗಿ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದಾರೆ. ಸರ್ಕಾರದ ಆದೇಶ ಜಾರಿಯಾಗುವವರೆಗೆ ಕೋಳಿ ಪೂರೈಕೆ ಸ್ಥಗಿತಗೊಳಿಸಿ ಒಗ್ಗಟ್ಟಿನಿಂದ ಈ ಮುಷ್ಕರ ನಡೆಸಲಾಗುವುದು ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

‘ಬಿಸ್ಲೆರಿ’ ವಿರುದ್ಧದ ಕ್ರಮಕ್ಕೂ ನೀರು ಮಾರುಕಟ್ಟಗೆ ‘ಅಂಬಾನಿ’ ಪ್ರವೇಶಕ್ಕೂ...

ಭಾರತದ ಪ್ಯಾಕೇಜ್ಡ್ ಕುಡಿಯುವ ನೀರಿನ ಮಾರುಕಟ್ಟೆಯಲ್ಲಿ ಸುಮಾರು 35ರಿಂದ 36%ರಷ್ಟು ಮಾರುಕಟ್ಟೆ ಪಾಲನ್ನು ಬಿಸ್ಲೆರಿ ಹೊಂದಿದೆ. ಬಿಸ್ಲೆರಿ ನೀರಿನ ಸಂಸ್ಥೆ ‘ಬಿಸ್ಲೆರಿ ಇಂಟರ್‌ನ್ಯಾಷನಲ್ ಪ್ರೈವೇಟ್ ಲಿಮಿಟೆಡ್’ ವಿರುದ್ಧ ಭಾರತೀಯ ಆಹಾರ ಸುರಕ್ಷತೆ ಮತ್ತು...

ಸಂವಿಧಾನ ದಿನ | ಸಂವಿಧಾನಕ್ಕೆ ಮೋದಿ ಸರ್ಕಾರ ಮತ್ತು...

ಭಾರತವು ಸಂವಿಧಾನ ದಿನವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆ ಮತ್ತು ಸಂವಿಧಾನದ ಮೂಲ ಆಶಯಗಳು ಅಭೂತಪೂರ್ವ ಬಿಕ್ಕಟ್ಟಿಗೆ ಸಿಲುಕಿವೆ. 2014ರಲ್ಲಿ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ...

ಯುಪಿ ಚುನಾವಣೆ: ಆಡಳಿತ ಯಂತ್ರ, ಜಾತಿ ಸಮೀಕರಣ ಮತ್ತು...

2027ರ ಉತ್ತರ ಪ್ರದೇಶ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯಲ್ಲಿನ ಲಿಂಗ ಅಂತರ, ಜಾತಿ ಸಮೀಕರಣ ಹಾಗೂ ಮೈತ್ರಿ ಪಕ್ಷಗಳ ಸೀಟು ಹಂಚಿಕೆಯ ಚೌಕಾಸಿ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ನಡೆಯುತ್ತಿರುವ...

ಜಿಲ್ಲಾ ಉಪಾಧ್ಯಕ್ಷ ಅಬ್ಬಣಿ ಶಿವಪ್ಪ ಮಾತನಾಡಿ, ಸರ್ಕಾರದ ಗಮನಕ್ಕೆ ಸಮಸ್ಯೆ ತಂದಿದ್ದರೂ ಕಂಪನಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ರಾಜ್ಯಮಟ್ಟದಲ್ಲಿ ಮುಷ್ಕರಕ್ಕೆ ನಿರ್ಧರಿಸಲಾಗಿದ್ದು, ಮರಿಗಳನ್ನು ಶೆಡ್‌ಗಳಿಗೆ ಹಾಕಿಸಿಕೊಳ್ಳುವುದಿಲ್ಲ, ಕೋಳಿಗಳನ್ನು ಲಿಫ್ಟ್ ಮಾಡಲು ಅವಕಾಶ ನೀಡುವುದಿಲ್ಲ. ಜಿಲ್ಲೆಯ ಎಲ್ಲ ಸಾಕಾಣಿಕೆದಾರರು ಈ ನಿರ್ಧಾರಕ್ಕೆ ಬದ್ಧರಾಗಿರಬೇಕು. ರೈತರ ಹೋರಾಟದಿಂದ ವ್ಯಾಪಾರಸ್ಥರಿಗೆ ನಷ್ಟವಾಗಬಾರದು. ಕಂಪನಿಗಳ ಹಿತಕ್ಕಾಗಿ ರೈತರ ಫಾರಂಗಳಿಗೆ ವಾಹನ ಕಳುಹಿಸಿ ಕೋಳಿ ಲಿಫ್ಟ್ ಮಾಡಿದರೆ ಕಂಪನಿಗಳಿಗೆ ಲಾಭವಾಗುತ್ತದೆ ಹೊರತು ವ್ಯಾಪಾರಸ್ಥರಿಗೆ ಪ್ರಯೋಜನವಿಲ್ಲ. ಆದ್ದರಿಂದ ಯಾವುದೇ ಕಾರಣಕ್ಕೂ ಲಾರಿಗಳನ್ನು ಫಾರಂಗಳ ಬಳಿ ಕಳುಹಿಸದೆ ರೈತರ ಹೋರಾಟಕ್ಕೆ ಸಹಕಾರ ನೀಡಬೇಕು. ನಮ್ಮ ಹೋರಾಟ ಕಂಪನಿಗಳ ವಿರುದ್ಧವೇ ಹೊರತು ವ್ಯಾಪಾರಸ್ಥರ ವಿರುದ್ಧವಲ್ಲ. ಎಲ್ಲರೂ ಅಣ್ಣ-ತಮ್ಮಂದಿರಂತೆ ಇದ್ದು, ರೈತರ ಹಿತ ಕಾಪಾಡಲು ಒಗ್ಗಟ್ಟಾಗಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧ್ಯಕ್ಷ ದಿಂಬ ನಾಗರಾಜಗೌಡ ಮಾತನಾಡಿ ಕೋಳಿ ಸಾಕಾಣಿಕೆ ರೈತರ ಬೇಡಿಕೆ ಈಡೇರುವವರೆಗೆ ಮರಿಗಳನ್ನೂ ಪಡೆಯುವುದಿಲ್ಲ, ಕೋಳಿಗಳನ್ನೂ ನೀಡುವುದಿಲ್ಲ. ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಕಂಪನಿಗಳಿಂದ ದಬ್ಬಾಳಿಕೆ ನಡೆದರೆ ಕೂಡಲೇ ರಕ್ಷಣೆ ನೀಡುವಂತೆ ಮನವಿ ಮಾಡಿದರು.


ಇದನ್ನು ಓದಿದ್ದೀರಾ..?ಕೋಲಾರ | ಅಂಬೇಡ್ಕರ್ ಪುತ್ಥಳಿ ನಿರ್ಮಾಣದಲ್ಲಿ ಪ್ರತಿಷ್ಠೆಗಿಂತ ಗೌರವ, ರಕ್ಷಣೆಗೆ ಆದ್ಯತೆ: ಕೊತ್ತೂರು ಮಂಜುನಾಥ್

ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ನಟರಾಜ್, ರಾಜಣ್ಣ, ವೆಂಕಟೇಶಪ್ಪ, ಲೋಕೇಶ್, ಅಂಜನೇಯರೆಡ್ಡಿ, ಬಾಬು, ಕಿರಣ್, ಗಿರೀಶ್ ಗೌಡ ಸೇರಿದಂತೆ ಮುಂತಾದವರು ಇದ್ದರು

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ನಾಲೆಗಳಿಗೆ ನೀರು ಹರಿಸುವಂತೆ ಆಗ್ರಹ : ರೈತರಿಂದ ಸಚಿವರ ಕಚೇರಿಗೆ ಮುತ್ತಿಗೆ

ಶಿವಮೊಗ್ಗ, ಭದ್ರಾ ಎಡ ಮತ್ತು ಬಲದಂಡೆ ನಾಲೆಗಳಿಗೆ ತಕ್ಷಣವೇ ನೀರು ಹರಿಸುವಂತೆ...

ಮಂಡ್ಯ | ಸಂವಿಧಾನವು ಪ್ರತಿಯೊಬ್ಬರ ಸಾಮಾಜಿಕ ಸಮಾನತೆಯ ದಾರಿದೀಪ : ಜಿಲ್ಲಾಧಿಕಾರಿ

ಸಮಾನತೆ, ಸಾಮಾಜಿಕ ನ್ಯಾಯ, ಸ್ವಾತಂತ್ರ್ಯ ಹಾಗೂ ಸಹೋದರತ್ವದ ಮೌಲ್ಯಗಳನ್ನು ಪ್ರತಿಪಾದಿಸುವ...

ವಿಜಯಪುರ |ಸಂವಿಧಾನ ಎಲ್ಲ ಭಾರತೀಯರ ಆಸ್ತಿ ;ಪ್ರೊ ಬಿ ಎಲ್ ಲಕ್ಕಣ್ಣನವರ

ಸಂವಿಧಾನ ಯಾವುದೇ ಧರ್ಮ ಅಥವಾ ಜನಾಂಗಕ್ಕೆ ಸೀಮಿತವಾದುದಲ್ಲ. ಅದು ಇಡೀ ಭಾರತೀಯರ...