ಕಿತ್ತುಕೊಂಡು ಹೋದ ತುಂಗಭದ್ರಾ ಜಲಾಶಯದ ಗೇಟ್‌; 60 ಟಿಎಂಸಿ ನೀರು ಖಾಲಿ ಮಾಡಬೇಕಾದ ಅನಿವಾರ್ಯತೆ

Date:

Advertisements

ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ ಬಳಿ ಇರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ ಗೇಟ್‌ನ ಚೈನ್ ತುಂಡಾಗಿದೆ. ಪರಿಣಾಮ, ಗೇಟ್ ಕಿತ್ತುಕೊಂಡು ಹೋಗಿದ್ದು, ಭಾರೀ ಪ್ರಮಾಣದ ನೀರು ಹರಿದು ಹೋಗುತ್ತಿದೆ. ಒಟ್ಟು 105 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿರುವ ಅಣೆಕಟ್ಟೆಯಿಂದ ಈಗ 60 ಟಿಎಂಸಿ ನೀರನ್ನು ನದಿಗೆ ಹರಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ವರದಿಯಾಗಿದೆ.

1953ರಲ್ಲಿ ನಿರ್ಮಾಣವಾಗಿದ್ದ ತುಂಗಭದ್ರಾ ಜಲಾಶಯದಲ್ಲಿ ಇದೇ ಮೊದಲ ಬಾರಿಗೆ ಚೈನ್​ ಕಟ್ಟಾಗಿದ್ದು, ಗೇಟ್‌ ಕಿತ್ತುಕೊಂಡು ಹೋಗಿದೆ. ತುಂಗಭದ್ರಾ ಜಲಾಶಯವು ದೇಶದ ಅತಿದೊಡ್ಡ ಕಲ್ಲಿನ ಅಣೆಕಟ್ಟು ಎಂಬ ಖ್ಯಾತಿಯನ್ನು ಪಡೆದಿದೆ. ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆಗಳು ಹಾಗೂ ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ನೀರೊದಗಿರುವ ನೀರಿನ ಮೂಲವಾಗಿದೆ.

ತುಂಡಾಗಿರುವ ಚೈನ್​ ರಿಪೇರಿ ಮಾಡಲು, ಗೇಟ್‌ನ ತಳಮಟ್ಟದವರೆಗೆ ಇರುವ ನೀರು ಖಾಲಿಯಾಗಬೇಕಿದೆ. ಆ ವೇಳೆಗೆ ಕನಿಷ್ಠ 60 ಟಿಎಂಸಿ ನೀರು ಖಾಲಿಯಾಗಲಿದೆ. ಪ್ರತಿದಿನ 2 ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.

Advertisements

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊಪ್ಪಳ | ತಳಕಲ್‌ನಲ್ಲಿ 20 ಮಂದಿ ಮೇಲೆ ಬೀದಿ ನಾಯಿಗಳ ದಾಳಿ: ಇಬ್ಬರು ಬಾಲಕರು ಜಿಲ್ಲಾಸ್ಪತ್ರೆಗೆ ದಾಖಲು

ಕೊಪ್ಪಳ ತಾಲೂಕಿನ ತಳಕಲ್‌ನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇಂದು ಗ್ರಾಮದಲ್ಲಿ...

ಕೊಪ್ಪಳ | ಕರ್ತವ್ಯ ಲೋಪ ಆರೋಪ : ಕರಡೋಣ ಪಿಡಿಒ ಅಮಾನತು

ಕನಕಗಿರಿ ತಾಲೂಕಿನ ಕರಡೋಣ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗಲಿಂಗಪ್ಪ ಅವರನ್ನು...

ತುಂಗಭದ್ರಾ ಜಲಾಶಯದ 7 ಗೇಟ್​ಗಳು ಬೆಂಡ್​: ಸಚಿವ ಶಿವರಾಜ್​ ತಂಗಡಗಿ

ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ ಏಳು ಗೇಟ್​ಗಳು...

ಪ್ರೀತಿ ವಿಚಾರಕ್ಕೆ ಗವಿಸಿದ್ದಪ್ಪ ಹತ್ಯೆ ಪ್ರಕರಣ; ವಿಷದ ಬಾಟಲಿ ಮುಂದಿಟ್ಟುಕೊಂಡು ಬಾಲಕಿ ತಾಯಿ ಪ್ರತಿಭಟನೆ

ಕೊಪ್ಪಳದಲ್ಲಿ ಪ್ರೀತಿ ವಿಚಾರಕ್ಕೆ ನಡೆದ ಗವಿಸಿದ್ದಪ್ಪನ ಭೀಕರ ಹತ್ಯೆ ಪ್ರಕರಣವು ಇದೀಗ...

Download Eedina App Android / iOS

X