ಅದಾನಿ ಗ್ರೂಪ್‌ನ ಹಗರಣಗಳಲ್ಲಿ ಸೆಬಿ ಮುಖ್ಯಸ್ಥೆ ಮಾಧವಿ ಬುಚ್ ಮತ್ತು ಪತಿ ಧವಲ್ ಬುಚ್ ಭಾಗಿಯಾಗಿರುವ ಹಿಂಡನ್‌ಬರ್ಗ್ ವರದಿಯ ಬಗ್ಗೆ ಅದಾನಿ ಗ್ರೂಪ್ ಹೇಳಿಕೆ ಬಿಡುಗಡೆ ಮಾಡಿದೆ. “ಹಿಂಡನ್‌ಬರ್ಗ್‌ನ ಇತ್ತೀಚಿನ ಆರೋಪಗಳು ದುರುದ್ದೇಶಪೂರಿತ, ಕಿಡಿಗೇಡಿತನದ್ದು ಮತ್ತು ತಿರುಚಿರುವುದು, ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ” ಎಂದು ಅದಾನಿ ಗ್ರೂಪ್ ಹೇಳಿದೆ.
“ಈ ವರದಿಯು ಸತ್ಯ ಮತ್ತು ಕಾನೂನನ್ನು ನಿರ್ಲಕ್ಷಿಸುವುದರೊಂದಿಗೆ ವೈಯಕ್ತಿಕ ಲಾಭಕ್ಕಾಗಿ ಪೂರ್ವನಿರ್ಧರಿತ ತೀರ್ಮಾನಳನ್ನು ಕೈಗೊಂಡಿದೆ” ಎಂದೂ ಅದಾನಿ ಗ್ರೂಪ್ ಹೇಳಿಕೆಯಲ್ಲಿ ಉಲ್ಲೇಖಿಸಿದೆ.
“ಅದಾನಿ ಗ್ರೂಪ್ ವಿರುದ್ಧದ ಈ ಆರೋಪಗಳನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಈ ಆರೋಪವನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗಿದ್ದು ಆಧಾರರಹಿತವೆಂದು ಸಾಬೀತುಪಡಿಸಲಾಗಿದೆ. ಈ ಪ್ರಕರಣವನ್ನು 2024ರ ಜನವರಿಯಲ್ಲಿ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ” ಎಂದು ಹೇಳಿದೆ.
ಇದನ್ನು ಓದಿದ್ದೀರಾ? ಅದಾನಿ ಗ್ರೂಪ್ ಹಗರಣದಲ್ಲಿ ಸೆಬಿ ಮುಖ್ಯಸ್ಥೆ ಮತ್ತು ಪತಿ ಭಾಗಿ: ಹಿಂಡನ್‌ಬರ್ಗ್ ಸ್ಪೋಟಕ ವರದಿ
“ನಮ್ಮ ಸಾಗರೋತ್ತರ ವ್ಯವಹಾರಗಳುಸಂಪೂರ್ಣ ಪಾರದರ್ಶಕವಾಗಿದೆ ಎಂದು ಪುನರುಚ್ಚರಿಸುತ್ತೇವೆ. ಎಲ್ಲಾ ಸಂಬಂಧಿತ ವಿವರಗಳನ್ನು ಹಲವಾರು ಸಾರ್ವಜನಿಕ ದಾಖಲೆಗಳಲ್ಲಿ ನಿಯಮಿತವಾಗಿ ಬಹಿರಂಗಪಡಿಸಲಾಗುತ್ತದೆ” ಎಂದು ತಿಳಿಸಿದೆ.
“ಉಲ್ಲೇಖಿಸಲಾದ ವ್ಯಕ್ತಿಗಳು (ಸೆಬಿಯ ಅಧ್ಯಕ್ಷೆ, ಪತಿ) ಅಥವಾ ವಿಷಯಗಳೊಂದಿಗೆ ಅದಾನಿ ಗ್ರೂಪ್ ಯಾವುದೇ ವಾಣಿಜ್ಯ ಸಂಬಂಧವನ್ನು ಹೊಂದಿಲ್ಲ. ಎಲ್ಲಾ ಕಾನೂನು ಮತ್ತು ನಿಯಂತ್ರಕ ಅಗತ್ಯತೆಗಳ ಪಾರದರ್ಶಕತೆ ಮತ್ತು ಅನುಸರಣೆಗೆ ನಾವು ದೃಢವಾಗಿ ಬದ್ಧರಾಗಿದ್ದೇವೆ” ಎಂದು ಹೇಳಿದೆ.
ಭಾರತೀಯ ಭದ್ರತಾ ಕಾನೂನುಗಳನ್ನು ಉಲ್ಲಂಘಿಸಿರುವ ಅಪಖ್ಯಾತಿ ಪಡೆದ ಶಾರ್ಟ್-ಸೆಲ್ಲರ್ ಹಿಂಡನ್‌ಬರ್ಗ್ ಆರೋಪಗಳು ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಅಥವಾ ಅಪ್ರಸ್ತುತ, ಅಸಂಬದ್ಧ ವಿಚಾರ ಎಂದಿದೆ.
Adani Group issues a statement on the latest report from Hindenberg Research.
— ANI (@ANI) August 11, 2024
The latest allegations by Hindenburg are malicious, mischievous and manipulative selections of publicly available information to arrive at pre-determined conclusions for personal profiteering with… pic.twitter.com/WwKbPLTkrv