ಸರಕಾರಿ ಶಾಲೆಗಳಲ್ಲಿ ಸರಕಾರಿ ಸಂಬಂಧಿತ ಕಾರ್ಯಕ್ರಮಗಳನ್ನು ಮಾತ್ರ ನಡೆಸಬೇಕು. ಸಾರ್ವಜನಿಕ ಕಾರ್ಯಕ್ರಮಗಳಿಗೆ ಶಾಲೆಯ ಆವರಣವನ್ನು ಬಳಕೆ ಮಾಡುವಂತಿಲ್ಲ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ನಡುವೆಯೇ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ ಶಾಲೆಯ ಆವರಣದಲ್ಲಿ ಆರ್‌ಎಸ್‌ಎಸ್ ಶಾಖೆ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ.
ಮಂಗಳೂರು ತಾಲೂಕಿನ ಸುರತ್ಕಲ್ ಸಮೀಪದಲ್ಲಿರುವ ಮಂಗಳಪೇಟೆಯಲ್ಲಿರುವ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಆರ್‌ಎಸ್‌ಎಸ್ ಶಾಖೆ ನಡೆಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸರಕಾರದ ಆದೇಶ ಮೀರಿ ಶಾಲಾ ಆವರಣದಲ್ಲಿ ಸಂಘದ ಚಟುವಟಿಕೆ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಶಾಲೆಯಿಂದ ಗ್ರಾಮ ಪಂಚಾಯತ್ ಹಾಗೂ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಫಲಶೃತಿ | ಬೆಳಗಾವಿ: ಶಾಲಾ ಶೌಚಾಲಯ ಸಮಸ್ಯೆ; ತಾತ್ಕಾಲಿಕ ಪರಿಹಾರ ಕಲ್ಪಿಸಿದ ಅಧಿಕಾರಿಗಳು
ಅಂದ ಹಾಗೆ, ಈ ಶಾಲೆಯಲ್ಲಿ ಪ್ರತಿ ರವಿವಾರ ಸಂಘಪರಿವಾರದ ಕಾರ್ಯ ಚಟುವಟಿಕೆ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಆರ್ ಎಸ್ ಎಸ್ ಶಾಖೆ ನಡೆಸಲು ಅವಕಾಶ ಕೊಟ್ಟಿರುವುದು ಯಾರು ಎಂಬ ಪ್ರಶ್ನೆ ಕೂಡ ಎದ್ದಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಏನು ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ತಪ್ಪೇನಿಲ್ಲ, ರಾಷ್ಟ್ರಭಕ್ತಿಯ ಹುಟ್ಟಿಸುವ ಬೆಳೆಸುವ RSS ಚೆನ್ನಾಗಿ ನಡೆಯುತ್ತಿದೆ, ಈ ದಿನದ ಗುಲಾಮ ಅಥವಾ ತುರುಕನಿಗೆ ಅದು ಬೇಡವಾಗಿದೆ, ಬಾಂಬು ಇಡುವವರಿಗೆ ಅವನ ಬೆಂಬಲ, ಇಂತಹ ವಾರ್ತಾಭಾರತಿ, ಪ್ರಸ್ತುತ, ಈದಿನ ಗಳನ್ನು ಕೂಡಲೆ ಬ್ಯಾನ್ ಮಾಡಬೇಕು
ರಾಷ್ಟ್ರೀಯ ವಿಚಾರ ವಿನಿಮಯ ನಡೆಯುವ ಶಾಖೆ ಆದರೆ ಅದು ಶಾಲೆ ಮತ್ತು ದೇಶಕ್ಕೆ ಒಳಿತು…
ರಾಷ್ಟ್ರೀಯ ವಿಚಾರ ವಿನಿಮಯ ನಡೆಯುವ ಶಾಖೆ ಆದರೆ ಅದು ಶಾಲೆ ಮತ್ತು ದೇಶಕ್ಕೆ ಒಳಿತು…
ವಂದೇ ಮಾತರಂ