ಬೀದರ್‌ | ಜಿಲ್ಲೆಯ ಇಬ್ಬರು ಸಾಧಕರಿಗೆ ಒಲಿದ ಕರ್ನಾಟಕ ರಾಜೋತ್ಸವ ಪ್ರಶಸ್ತಿ

Date:

ನ.1ರಂದು ನಡೆಯಲಿರುವ 69ನೇ ಕನ್ನಡ ರಾಜ್ಯೋತ್ಸವ ಆಚರಣೆಯ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 69 ಗಣ್ಯರಿಗೆ ಕರ್ನಾಟಕ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಬೀದರ್ ಜಿಲ್ಲೆಯ ಇಬ್ಬರು ಸಾಧಕರು ಪ್ರಸಕ್ತ ಸಾಲಿನ ಕರ್ನಾಟಕ ರಾಜೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

- Advertisement -

ಸಮಾಜ ಸೇವೆ ಕ್ಷೇತ್ರದಲ್ಲಿ ಹೀರಾಚಂದ್‌ ವಾಗ್ಮಾರೆ ಹಾಗೂ ಜಾನಪದ ಕ್ಷೇತ್ರದಲ್ಲಿ ಅಂಧ ಕಲಾವಿದ ನರಸಿಂಹಲು ಅವರು ಆಯ್ಕೆಯಾಗಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ

ಗಣೇಶೋತ್ಸವ ಕೋಮು ಸೌಹಾರ್ದದ ಸೇತುವಾಗಲಿ; ಮನುಜ ಸಂಬಂಧದ ತಂತು...

ಗಣೇಶೋತ್ಸವ ಸಂಭ್ರಮ, ಭಕ್ತಿಯಿಂದ ಜನರು ಒಂದೆಡೆ ಸೇರಿ ಆಚರಿಸುವ ಹಬ್ಬ. ಆದರೆ ಇದೇ ಹಬ್ಬದ ಸಂದರ್ಭದಲ್ಲಿ ಕೆಲವೆಡೆ ಕೋಮು ಸಂಘರ್ಷಗಳು ನಡೆಯುತ್ತಿರುವುದು ಮಾತ್ರ ವಿಷಾದನೀಯ. ಭಾರತದಂತಹ ವಿವಿಧ ಧರ್ಮ, ಭಾಷೆ, ಸಂಸ್ಕೃತಿಗಳನ್ನು ಹೊಂದಿರುವ...

ಬಿಆರ್ ಚೋಪ್ರಾ ʼಮಹಾಭಾರತʼಕ್ಕೆ ಜೀವ ನೀಡಿದ್ದ ಮುಸ್ಲಿಂ ಪಂಡಿತ:...

ಇಂದು ಡಾ. ರಾಹೀ ಮಾಸೂಮ್ ರೇಜಾ ಅವರ ನೂರನೇ ವರ್ಷದ ಸ್ಮರಣೆಯ ಸಂದರ್ಭದಲ್ಲಿ, ನಾವು ಕೇವಲ ಒಬ್ಬ ಮಹಾನ್ ಲೇಖಕರನ್ನು ನೆನಪಿಸಿಕೊಳ್ಳುತ್ತಿಲ್ಲ; ಬದಲಿಗೆ ಭಾರತೀಯ ಸಮಾಜಕ್ಕೆ ಅತ್ಯಗತ್ಯವಾಗಿರುವ ಸಹಬಾಳ್ವೆಯ ಮೌಲ್ಯಗಳನ್ನು ಪುನರುಚ್ಚರಿಸಿಕೊಳ್ಳುತ್ತಿದ್ದೇವೆ. ಮಹಾಭಾರತ...

ಬಾಡಿ ಶೇಮಿಂಗ್ ತಮಾಷೆಯಲ್ಲ; ಮಾನಸಿಕ ಆರೋಗ್ಯದ ಮೇಲಾಗುವ ಮಾಯದ...

ದೇಹದ ಬಣ್ಣ, ರೂಪ, ತೂಕ-ಎತ್ತರ, ಮುಖ, ಕೂದಲು ಅಥವಾ ದೈಹಿಕ ವೈಶಿಷ್ಟ್ಯಗಳ ಆಧಾರದ ಮೇಲೆ ಒಬ್ಬ ವ್ಯಕ್ತಿಯನ್ನು ಹಾಸ್ಯ ಮಾಡುವುದು, ಅವಮಾನಿಸುವುದೇ ಬಾಡಿ ಶೇಮಿಂಗ್. ಇದು ಕೇವಲ ಆ ಕ್ಷಣದ ತಮಾಷೆಯ, ಹಾಸ್ಯ...

ಹೀರಾಚಂದ್‌ ವಾಗ್ಮಾರೆ ಅವರು ಮೂಲತಃ ಬೀದರ್‌ ಜಿಲ್ಲೆಯ ಭಾಲ್ಕಿ ಪಟ್ಟಣದವರು. ವಿದ್ಯಾರ್ಥಿ ಜೀವನದಿಂದಲೇ ಚಳವಳಿಯಲ್ಲಿ ಆಸಕ್ತಿ ಬೆಳೆಸಿಕೊಂಡು ವಿನೋಬಾ ಭಾವೆ ಅವರೊಂದಿಗೆ ಭೂದಾನ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಎಂ.ಎ (ಅರ್ಥಶಾಸ್ತ್ರ) ದಲ್ಲಿ ಪದವಿಧರರಾದ ಹೀರಾಚಂದ್‌ ಅವರಿಗೆ ಇದೀಗ 95 ವರ್ಷ ವಯಸ್ಸು.

ಗಾಂಧೀಜಿ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಮದುವೆ ಆಗದೇ ಒಂಟಿಯಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಜೀವನ ಕಳೆಯುತ್ತಿದ್ದಾರೆ. ಈ ಹಿಂದೆ ಭಾಲ್ಕಿಯಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ಸ್ಥಾಪಿಸಿ ಕೆಲ ಕಾಲ ಉಪನ್ಯಾಸಕರಾಗಿ ದುಡಿದಿದ್ದಾರೆ. ಅಲ್ಲದೇ ಖಾದಿ ಗ್ರಾಮೋದ್ಯೋಗದಲ್ಲಿ ತೊಡಗಿಸಿಕೊಂಡು ಗಾಂಧೀಜಿ ಆದರ್ಶಗಳನ್ನು ಮುನ್ನಡೆಸಿದರು.

ʼನಾನು ಸನ್ಯಾಸಿ ಜೀವನ ನಡೆಸುತ್ತಿದ್ದೇನೆ. ಇಡೀ ಬದುಕು ಸಮಾಜ ಸೇವೆಗಾಗಿ ಮೀಸಲಿಟ್ಟಿದ್ದೇನೆ, ಎಲ್ಲ ಕ್ಷೇತ್ರದಲ್ಲಿ ದೇಶ ಪ್ರಗತಿ ಸಾಧಿಸಬೇಕು. ರಾಜೋತ್ಸವ ಪ್ರಶಸ್ತಿಗೆ ನಾನು ಅರ್ಜಿ ಹಾಕಲಿಲ್ಲ. ಇಳಿ ವಯಸ್ಸಿನಲ್ಲಿ ನನ್ನನ್ನು ಸರ್ಕಾರ ಗುರುತಿಸಿದೆ. ಆದರೆ, ಮಾನವ ಜನಾಂಗ ನೆಮ್ಮದಿಯಿಂದ ಜೀವನ ನಡೆಸಿದರೆ ಮಾತ್ರ ನನಗೆ ಸಂತಸ ಸಿಗುತ್ತದೆʼ ಎಂದು ಹೀರಾಚಂದ್‌ ವಾಗ್ಮಾರೆ ಅವರು ಈದಿನ.ಕಾಮ್‌ ಜೊತೆಗೆ ಮಾತನಾಡಿ ಅಭಿಪ್ರಾಯ ಹಂಚಿಕೊಂಡರು.

ಅಂಧ ಕಲಾವಿದನಿಗೆ ಒಲಿದ ರಾಜೋತ್ಸವ ಗರಿ :

ಅಂಧ ಜಾನಪದ ಕಲಾವಿದ ನರಸಿಂಹಲು ಅವರು 1963ರಲ್ಲಿ ಜನಿಸಿದ್ದಾರೆ. ಸದ್ಯ ಬೀದರ್‌ ನಗರದ ಗುಂಪಾದಲ್ಲಿ ನೆಲೆಸಿರುವ ನರಸಿಂಹಲು ಬಿ.ಎ ಪದವಿಧರರು. ಕಲಾವಿದ ನರಸಿಂಹಲು ಡಪ್ಪೂರ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಗೂ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ವಿದ್ವತ್‌ ಪಡೆದಿದ್ದಾರೆ. ಸುಮಾರು‌ 30 ವರ್ಷಗಳಿಂದ ಜಾನಪದ ಗಾಯನ, ಮೊಹರಂ ಪದ, ಹಂತಿ ಪದ, ತತ್ವಪದ ಹಾಗೂ ಸುಗಮ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? 69 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ʼನನಗೆ 5 ವರ್ಷ ಇದ್ದಾಗಲೇ ಎರಡು ಕಣ್ಣು ಕಳೆದುಕೊಂಡೆ, ಮುಂದೆ ಕಲಬುರಗಿಯಲ್ಲಿ ಶಿಕ್ಷಣ ಪಡೆದು, ನಂತರ ಜಾನಪದ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡು ಅಭ್ಯಾಸ ನಡೆಸಿ ಅದನ್ನೇ ಪ್ರವೃತ್ತಿಯನ್ನಾಗಿಸಿಕೊಂಡೆ, ಜಾನಪದ ಕಲಾ ಸೇವೆಯೊಂದಿಗೆ ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆ, ಬಾಲ ಭವನ ಸೇರಿದಂತೆ ಇನ್ನಿತರ ಕಡೆ ಸಂಗೀತ ಶಿಕ್ಷಕನಾಗಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ಇದೀಗ ನನ್ನ ಸೇವೆ ಗುರುತಿಸಿ ಸರ್ಕಾರ ನನ್ನನ್ನು ರಾಜೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆʼ ಎಂದು ಈದಿನ.ಕಾಮ್‌ ಜೊತೆಗೆ ಮಾತನಾಡಿ ಖುಷಿ ಹಂಚಿಕೊಂಡರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಕುರಿ ಸಂಗೋಪನೆ ಸಂಘಗಳಿಗೂ ಶೂನ್ಯ ಬಡ್ಡಿದರ ಸಾಲಕ್ಕೆ ಆಗ್ರಹ

ಕುರಿ ಸಂಗೋಪನೆ ಹಾಗೂ ಉಣ್ಣೆ ಉತ್ಪಾದಕ ಸಹಕಾರ ಸಂಘಗಳಿಗೆ ಸಾಲ ಸೇರಿದಂತೆ...

ರಾಯಚೂರು | ಅವ್ಯವಹಾರ ದೂರು ನೀಡಿದ್ದಕ್ಕೆ ಡಿಡಿಪಿಐ ಬೆದರಿಕೆ: ಚನ್ನಬಸವ ಅರೋಲಿ ಆರೋಪ

ಮಾನ್ವಿ ತಾಲೂಕಿನ ಅರೋಲಿ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ...

ಧಾರವಾಡ | ಪ್ರತಿಯೊಬ್ಬರು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರಿಯಬೇಕು: ಎಫ್.ಹೆಚ್.ಜಕ್ಕಪ್ಪನವರ

"ಪ್ರತಿಯೊಬ್ಬರು ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಅದರ ಬೇರುಗಳನ್ನು ಅರ್ಥೈಸಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ...

ವಿಚ್ಛೇದನ ಪಡೆದರೂ ಮಕ್ಕಳಿಗೆ ಉತ್ತಮ ತಂದೆ-ತಾಯಿಯಾಗಿರಿ: ಹೈಕೋರ್ಟ್ ಸಲಹೆ

"ವಿಚ್ಛೇದನದ ನಂತರವೂ ಮಕ್ಕಳ ಮುಂದೆ ಪರಸ್ಪರ ನಿಂದಿಸದೆ, ಅವರಿಗೆ ಉತ್ತಮ ತಂದೆ-ತಾಯಿಯಾಗಿ...