ಮೋದಿ ಮೌನ ಬುದ್ಧಿವಂತರ ಲಕ್ಷಣವಲ್ಲ, ಅದು ಅಜ್ಞಾನದ ಸಂಕೇತ: ಸಚಿವ ದಿನೇಶ್‌ ಗುಂಡೂರಾವ್‌

Date:

  • ‘ವಿಚಾರಗಳ ಸಮರ್ಥನೆಗೆ ಪದಗಳು ಸಿಗದೆ ಮೋದಿ ಮೌನವಹಿಸುತ್ತಾರೆ’
  • ಮೋದಿ ಮಾತನಾಡುವ, ಮೌನವಾಗುವ ಲಿಸ್ಟ್‌ ಮಾಡಿದ ಗುಂಡೂರಾವ್

ಮೋದಿಯವರು ಮೌನವಾಗಿರುವುದು ಬುದ್ಧಿವಂತರ ಲಕ್ಷಣ ಎಂಬುದನ್ನು ಬಲವಾಗಿ ನಂಬಿದ್ದಾರೆ. ಆದರೆ ಕೆಲವೊಮ್ಮೆ ಕೆಲವು ವಿಚಾರಗಳ ಸಮರ್ಥನೆಗೆ ಪದಗಳು ಸಿಗದಿರುವ ಅಜ್ಞಾನವೂ ಮೌನಕ್ಕೆ ಕಾರಣವಾಗುತ್ತದೆ‌ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಪ್ರಧಾನಿಯನ್ನು ಲೇವಡಿ ಮಾಡಿದ್ದಾರೆ.

- Advertisement -

ಈ ಕುರಿತು ಟ್ವೀಟ್‌ ಮಾಡಿರುವ ಅವರು, “ಮಣಿಪುರ ಗಲಭೆಗೆ ಸಂಬಂಧಪಟ್ಟಂತೆ ಮೋದಿಯವರ ಮೌನವನ್ನು ಬುದ್ಧಿವಂತರ ಲಕ್ಷಣವೆನ್ನಬೇಕೋ ಅಥವಾ ಸಮರ್ಥಿಸಿಕೊಳ್ಳಲು ಆಗದ ಅಜ್ಞಾನವೆನ್ನಬೇಕೋ?” ಎಂದು ವ್ಯಂಗ್ಯವಾಡಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿಕ್ಷಣ ಮಾರಾಟ ಮಾಡಿದ ಶಾಲೆಗಳೇ ಈಗ ಮಾರಾಟಕ್ಕೆ!

ಕರ್ನಾಟಕದಲ್ಲಿ ಖಾಸಗಿ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಮಾರಾಟಕ್ಕೆ ಸಜ್ಜಾಗಿವೆ. ಕೋವಿಡ್-19 ಆಕ್ರಮಣದ ನಂತರದಲ್ಲಿ ಖಾಸಗಿ ಶಾಲೆಗಳಲ್ಲಿ ದಾಖಲಾತಿಯಲ್ಲಿ ಭಾರೀ ಕುಸಿತ, ಪ್ರತಿಷ್ಠಿತ ಶಾಲೆಗಳ ಜೊತೆಗೆ ಪೈಪೋಟಿ, ಮೂಲಭೂತ ಸೌಕರ್ಯಕ್ಕೆ ತಕ್ಕಂತೆ ಲಾಭದ...

ಬಿಗಿದ ತುಟಿಯ ದೃಶ್ಯಭಾಷೆ: ನಿರ್ಬಂಧಗಳ ನೆರಳಲ್ಲಿ ರೂಪಕಗಳ ಪ್ರತಿರೋಧ

ಸಿನೆಮಾವನ್ನು ನಿಯಂತ್ರಿಸಲು ಅಧಿಕಾರಶಾಹಿ ಸದಾ ಹೊಸ ಕಟ್ಟುಪಾಡುಗಳನ್ನು ಸೃಷ್ಟಿಸುತ್ತಲೇ ಇರುತ್ತದೆ; ಆದರೆ ಕಲೆಗೆ ಇರುವ ಶಕ್ತಿಯೆಂದರೆ, ಅದು ನಿರ್ಬಂಧಗಳ ಗೋಡೆಗಳನ್ನೇ ಹೊಸ ನೋಟದ ಕಿಟಕಿಗಳನ್ನಾಗಿಸಿಕೊಳ್ಳುತ್ತದೆ. ನೇರ ಮಾತನ್ನು ಕಸಿದುಕೊಂಡಷ್ಟೂ ರೂಪಕಗಳ ನಡಿಗೆ ಬಿಗಿಯಾಗುತ್ತದೆ,...

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಮುಂದುವರಿದು, ಮೋದಿಯವರು ಮಾತನಾಡುವ ಸಂದರ್ಭಗಳು ಮತ್ತು ಮೌನವಾಗುವ ಸಂದರ್ಭಗಳು ಎಂದು ಗುಂಡೂರಾವ್‌ ಲಿಸ್ಟ್‌ ಮಾಡಿದ್ದಾರೆ.

ಮೋದಿ ಮಾತನಾಡುವ ಸಂದರ್ಭಗಳು

ಚುನಾವಣೆ ಬಂದಾಗ

ಪ್ರಚಾರಕ್ಕೆ ಕರೆದಾಗ

ಮನ್ ಕಿ ಬಾತ್ ಕಾರ್ಯಕ್ರಮವಿದ್ದಾಗ

ಎದುರಿಗೆ ಪ್ರಶ್ನೆ ಮಾಡದ ಪತ್ರಕರ್ತರಿಲ್ಲದಿದ್ದಾಗ

ಜೀ ಹುಜೂರ್ ಎಂದು ಅಡ್ಡಡ್ಡ ಬೀಳುವ ತಮ್ಮ‌ ಪಕ್ಷದ ನಾಯಕರು ಎದುರಿರುವಾಗ ಈ ಸಂದರ್ಭಗಳಲ್ಲಿ ‌ಮೋದಿಯವರು ನಿರಂತರವಾಗಿ, ನಿರರ್ಗಳವಾಗಿ, ಮಾತಾಡುತ್ತಲೇ ಇರುತ್ತಾರೆ ಎಂದು ಟೀಕಿಸಿದ್ದಾರೆ.

ಮೋದಿಯವರು ಮೌನವಾಗುವ ಸಂದರ್ಭಗಳು

ಗಲಭೆಗಳಾದಾಗ

ಸಾಮೂಹಿಕ ನರಮೇಧಗಳಾಗುವಾಗ

ಮಹಿಳೆಯರ ನಗ್ನ ಮೆರವಣಿಗೆಯಾಗುವಾಗ

ಬೆಲೆಯೇರಿಕೆಯಾದಾಗ

PMCares ಫಂಡ್ ಬಗ್ಗೆ ಕೇಳಿದಾಗ

2 ಕೋಟಿ ಉದ್ಯೋಗದ ಬಗ್ಗೆ ಕೇಳಿದಾಗ

ಕಪ್ಪುಹಣದ ಬಗ್ಗೆ ಕೇಳಿದಾಗ

ಟೆಲಿಪ್ರಾಂಪ್ಟರ್ ಕೈ ಕೊಟ್ಟಾಗ.. ಇಂತಹ ಸಂದರ್ಭಗಳಲ್ಲಿ ಮೋದಿ ಕಠೋರ ಮೌನ ತಪಸ್ವಿಗಳಾಗುತ್ತಾರೆ” ಎಂದು ಕುಟುಕಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ ಜಿಲ್ಲೆಯ ಪಂಚಾಯತ್ ಮೀಸಲಾತಿ ಪಟ್ಟಿಯಲ್ಲಿ ಎಸ್‌ಸಿ, ಎಸ್‌ಟಿ ಪುರುಷರಿಗೆ ಅವಕಾಶವಿಲ್ಲವೇ? ಮರುಪರಿಶೀಲನೆಗೆ ಆಗ್ರಹ

ರಾಜ್ಯದಲ್ಲಿ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಹಾಗೂ ಗ್ರಾಮ ಪಂಚಾಯತ್‌ ಚುನಾವಣೆಗಳು...

ಉಡುಪಿ | ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಸಾಲಿಡಾರಿಟಿ ಯೂತ್ ಮೂವ್‌ಮೆಂಟ್ ಪ್ರತಿಭಟನೆ

ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಕೂಡಲೇ ರಾಜೀನಾಮೆ ನೀಡುವಂತೆ...

ಅಘೋಷಿತ ತುರ್ತು ಪರಿಸ್ಥಿತಿ ವಿರುದ್ಧ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಹೊಸದಿಲ್ಲಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಾಗಿದೆ ಎಂದು ಆರೋಪಿಸಿ, ಹೋರಾಟಗಾರರ ಬಂಧನ...

ಮುಂಡಗೋಡ | ಬಾಚಣಕಿ ಡ್ಯಾಂ ಹಿನ್ನೀರಿನಲ್ಲಿ ಮುಳುಗಿ ಉತ್ತರಾಖಂಡ ಮೂಲದ ಯುವಕ ಸಾವು

ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾಮದ ಡ್ಯಾಂ ಹಿನ್ನೀರಿನಲ್ಲಿ ಈಜಾಡಲು ತೆರಳಿದ್ದ ಹೋಟೆಲ್‌...