ಡಿಲಿಮಿಟೇಶನ್‌ಗೆ DMK ಬೆಂಬಲ: ಸ್ಟಾಲಿನ್ ಅವರನ್ನು ‘ಸಾವರ್ಕರ್ 2.0’ ಎಂದ ಟಿವಿಕೆ

Date:

ಕೇಂದ್ರ ಸರ್ಕಾರದ ಕ್ಷೇತ್ರ ಪುನರ್‌ವಿಂಗಡಣೆ (Delimitation) ಮಸೂದೆಗೆ ಆಡಳಿತಾರೂಢ ಡಿಎಂಕೆ ಅಧಿಕೃತ ಬೆಂಬಲವನ್ನು ಘೋಷಿಸಿದೆ. ಈ ಬೆನ್ನಲ್ಲೇ, ತಮಿಳುನಾಡು ರಾಜಕಾರಣದಲ್ಲಿ ತೀವ್ರ ವಾಕ್ಸಮರ ಆರಂಭವಾಗಿದ್ದು, ಡಿಎಂಕೆ ನಾಯಕ ಎಂ.ಕೆ ಸ್ಟಾಲಿನ್ ಅವರನ್ನು ‘ಸಾವರ್ಕರ್ 2.0’ ಎಂದು ಮುಖ್ಯಮಂತ್ರಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ) ಕಡೆದಿದೆ. ಡಿಎಂಕೆ ವಿರುದ್ಧ ವಾಗ್ಧಾಳಿ ನಡೆಸಿದೆ.

- Advertisement -

ಡಿಎಂಕೆ ಮತ್ತು ಸ್ಟಾಲಿನ್ ವಿರುದ್ಧ ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಟಿವಿಕೆ ಸರಣಿ ಟ್ವೀಟ್ ಮಾಡಿದೆ. ಸೈದ್ಧಾಂತಿಕ ನಿಲುವುಗಳಲ್ಲಿನ ಬದಲಾವಣೆ, ಒಕ್ಕೂಟ ವ್ಯವಸ್ಥೆಯ ಹಿತಾಸಕ್ತಿ ಹಾಗೂ ಡಿಎಂಕೆಯ ಹಿಂದಿನ ರಾಜಕೀಯ ನಿರ್ಧಾರಗಳನ್ನು ಟೀಕಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸುಪ್ತ ಆಯಾಸದ ಹಿಂದೆ ಅಡಗಿರುವ ರಕ್ತಹೀನತೆ: ಕರ್ನಾಟಕದ ಅರ್ಧದಷ್ಟು...

ದೈನಂದಿನ ಒತ್ತಡ, ನಿದ್ರೆಯ ಕೊರತೆ ಅಥವಾ ಬಿಡುವಿಲ್ಲದ ಜೀವನಶೈಲಿಯೆಂದು ನಿರ್ಲಕ್ಷಿಸುವ ಆಯಾಸದ ಹಿಂದೆ ರಕ್ತಹೀನತೆ ಅಡಗಿರಬಹುದು. ಕರ್ನಾಟಕದಲ್ಲಿ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಶೇ. 50ಕ್ಕಿಂತ ಹೆಚ್ಚು ಮಂದಿ ರಕ್ತಹೀನತೆಯಿಂದ ಬಳಲುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ದೈನಂದಿನ...

20 ಬಂಡುಕೋರ ಟಿಎಂಸಿ ಸಂಸದರು ಮತ ಚಲಾಯಿಸಬಹುದೇ; ಮುಂದೆ...

ಡಿಲಿಮಿಟೇಷನ್ ಹಾಗೂ ಮಹಿಳಾ ಮೀಸಲಾತಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಜ್ಜಾಗಿರುವ ಹೊತ್ತಿನಲ್ಲಿ, ಲೋಕಸಭಾ ಸ್ಪೀಕರ್ ಮುಂದೆ ಅನರ್ಹತೆ ವಿಚಾರಣೆ ಎದುರಿಸುತ್ತಿರುವ 20 ಬಂಡುಕೋರ ಟಿಎಂಸಿ...

ಸಿನಿಮಾ ಪ್ರಶಸ್ತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯ ಏಳು ಸುತ್ತಿನ...

ಪ್ರಶಸ್ತಿಗೆ ಮತ್ತು ಸಬ್ಸಿಡಿಗೆ ಅರ್ಜಿ ಸಲ್ಲಿಸಲು ನಿರ್ಮಾಪಕರು, ನಿರ್ದೇಶಕರು ಅನೇಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಮುಖ್ಯ ಕಾರಣ, ನಮ್ಮ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಿರ್ಮಾಣ ಸಂಸ್ಥೆಗಳಿರುವುದು ಕೇವಲ ಬೆರಳೆಣಿಕೆಯಷ್ಟು, ಉಳಿದಂತೆ ಬಹುತೇಕ ನಿರ್ಮಾಣ...

ಎಂ.ಕೆ ಸ್ಟಾಲಿನ್ ಅವರು ಆರ್‌ಎಸ್‌ಎಸ್ ಸಮವಸ್ತ್ರ ಧರಿಸಿ ಕುರ್ಚಿಯಲ್ಲಿ ಕುಳಿತಿರುವಂತೆ ಬಿಂಬಿಸುವ ಎಐ ಸೃಷ್ಟಿತ ಚಿತ್ರವನ್ನು ಹಂಚಿಕೆಕೊಂಡಿರುವ ಟಿವಿಕೆ, ಇವರು ‘ಸ್ಟಾಲಿನ್ ಅಲ್ಲ, ಸಾವರ್ಕರ್ 2.0’ ಎಂಬ ಶೀರ್ಷಿಕೆ ಹಾಕಿದೆ. ಜೊತೆಗೆ, ‘ಸನಾತನಂ ಅಲ್ಲ… ‘ಸನ್-ದಾನಂ’ (Son-Dhanam)’ ಎಂದೂ ಬರೆದಿದ್ದು, “ಡಿಎಂಕೆ ನಾಯಕರು ಸೈದ್ಧಾಂತಿಕ ಹೋರಾಟದ ಮುಖವಾಡ ಧರಿಸಿ, ವಾಸ್ತವದಲ್ಲಿ ಕುಟುಂಬ ರಾಜಕಾರಣ ಮತ್ತು ತಮ್ಮ ಸ್ವಾರ್ಥ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವಲ್ಲಿ ನಿರತರಾಗಿದ್ದಾರೆ” ಎಂದು ಗಂಭೀರ ಆರೋಪ ಮಾಡಿದೆ.

ಕ್ಷೇತ್ರ ಪುನರ್‌ವಿಂಗಡಣೆ ವಿಷಯದಲ್ಲಿ ಡಿಎಂಕೆ ಹೊಂದಿದ್ದ ಹಿಂದಿನ ನಿಲುವನ್ನು ನೆನಪಿಸಿರುವ ಟಿವಿಕೆ, “2025ರ ಮಾರ್ಚ್ 22ರಂದು ಚೆನ್ನೈನಲ್ಲಿ ವಿವಿಧ ರಾಜ್ಯಗಳ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಜಂಟಿ ಕ್ರಿಯಾ ಸಮಿತಿ ಸಭೆಯಲ್ಲಿ ಸ್ವತಃ ಡಿಎಂಕೆ ನಾಯಕರೇ, ‘ಜನಸಂಖ್ಯೆ ಆಧಾರಿತ ಮರುವಿಂಗಡಣೆಯಿಂದ ದಕ್ಷಿಣ ಭಾರತದ ರಾಜಕೀಯ ಪ್ರಾತಿನಿಧ್ಯವು 30%ರಿಂದ 24%ಗೆ ಕುಸಿಯಲಿದೆ’ ಎಂದು ಎಚ್ಚರಿಸಿದ್ದರು. ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಮಧ್ಯಪ್ರದೇಶ ರಾಜ್ಯಗಳಿಗೆ 150 ಹೆಚ್ಚುವರಿ ಸ್ಥಾನಗಳು ದೊರೆತರೆ, ದಕ್ಷಿಣದ ಏಳು ರಾಜ್ಯಗಳಿಗೆ ಕೇವಲ 65 ಸ್ಥಾನಗಳು ಮಾತ್ರ ಸಿಗಲಿವೆ; ಇದರಿಂದ ಕೃಷಿ, ಕೈಗಾರಿಕೆ, ಉದ್ಯೋಗ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಸಂಬಂಧಿಸಿದ ರಾಷ್ಟ್ರೀಯ ನೀತಿಗಳನ್ನು ಕೆಲವೇ ರಾಜ್ಯಗಳು ನಿರ್ಧರಿಸುವ ಅಪಾಯವಿದ್ದು, ಇದು ಒಕ್ಕೂಟ ವ್ಯವಸ್ಥೆಗೆ ನೇರ ಬೆದರಿಕೆಯಾಗಲಿದೆ’ ಎಂದು ಡಿಎಂಕೆ ವಾದಿಸಿತ್ತು. ಆದರೆ, ಈಗ ಅದೇ ಮಸೂದೆಯನ್ನು ಬೆಂಬಲಿಸುವ ಮುನ್ನ, ಅಂದು ಎತ್ತಿದ್ದ ಆತಂಕಗಳಿಗೆ ಸಮರ್ಪಕ ಉತ್ತರ ಸಿಕ್ಕಿದೆಯೇ ಮತ್ತು ತಮಿಳುನಾಡು ಹಾಗೂ ನೆರೆಯ ದಕ್ಷಿಣದ ರಾಜ್ಯಗಳಿಗೆ ಆಗುತ್ತಿದ್ದ ಅನ್ಯಾಯ ಸಂಪೂರ್ಣವಾಗಿ ನಿವಾರಣೆಯಾಗಿದೆಯೇ” ಎಂದು ಪ್ರಶ್ನಿಸಿದೆ.

“ಅಧಿಕಾರದಲ್ಲಿದ್ದಾಗ ಒಂದು ನಿಲುವು ಮತ್ತು ಅಧಿಕಾರ ಕಳೆದುಕೊಂಡಾಗ ಮತ್ತೊಂದು ನಿಲುವು ತಳೆಯುವುದು ಡಿಎಂಕೆಯ ಜಾಯಮಾನ. ಈ ಹಿಂದೆ, ಕಪ್ಪು ಬಾವುಟ ಹಾರಿಸಿ, ಮಸೂದೆಯ ಪ್ರತಿಗಳನ್ನು ಸುಟ್ಟು ಪ್ರತಿಭಟಿಸಿದ್ದವರೇ ಈಗ ಅದೇ ಯೋಜನೆಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ, 1969ರ ಅಣೆಕಟ್ಟು ನಿರ್ಮಾಣ ವಿವಾದ, 1974ರ ಕಚ್ಚತೀವು ದ್ವೀಪ ಹಸ್ತಾಂತರ ಹಾಗೂ ಕಾವೇರಿ ನದಿ ನೀರಿನ ವಿಚಾರದಲ್ಲಿ ಡಿಎಂಕೆ ನಡೆದುಕೊಂಡ ರೀತಿಯು ತಮಿಳುನಾಡಿನ ಜನತೆ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ವಂಚನೆಯ ಧೋರಣೆಯಿಂದಲೇ ಕೂಡಿತ್ತು” ಎಂದು ದೂರಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗಲಕೋಟೆ | ಆನ್‌ಲೈನ್ ಗೇಮಿಂಗ್ ಆಮಿಷದ ವಂಚನೆಗೆ ಬ್ರೇಕ್: 495 ಲಿಂಕ್ ಪತ್ತೆ, ಬ್ಲಾಕ್‌ಗೆ ಪೊಲೀಸ್ ಕ್ರಮ

ಆನ್‌ಲೈನ್ ಗೇಮಿಂಗ್, ಬೆಟ್ಟಿಂಗ್ ಹಾಗೂ ಕ್ಯಾಸಿನೋ ಆಟಗಳ ಆಮಿಷವೊಡ್ಡಿ ಸಾರ್ವಜನಿಕರನ್ನು ವಂಚಿಸುತ್ತಿರುವ...

ಬಾಗಲಕೋಟೆ | ಗ್ರಾಮೀಣ ಅಭಿವೃದ್ಧಿಗೆ ಮನೆ ಮನೆಗೆ ಜಾಗೃತಿ : ಯೋಜನೆಗಳ ಕಾಮಗಾರಿ ಪರಿಶೀಲಿಸಿದ ಜಿ.ಪಂ ಸಿಇಒ

ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಜಾನನ ಬಾಲೆ ಅವರು ಮುರನಾಳ...

ಮಂಗಳೂರು | ಕ್ಯಾನ್ಸರ್ ಅಪಾಯದ ಮುನ್ಸೂಚನೆಗೆ ಎಂ.ಐ.ಒ.ನಿಂದ ಡಿಜಿಟಲ್ ಆ್ಯಪ್ ಬಿಡುಗಡೆ

ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವುದು ಹಾಗೂ ಆರಂಭಿಕ ಹಂತದಲ್ಲೇ ಅಪಾಯದ ಅಂಶಗಳನ್ನು...