ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ರಮಾದ; ಪ್ರಯಾಣಿಕರ ʼದಾರಿ ತಪ್ಪಿಸುವʼ ನಾಮಫಲಕ!

Date:

ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಅಳವ­ಡಿಸುವ ಗ್ರಾಮಗಳ ಮಾರ್ಗ ಸೂಚನಾ ಫಲಕಗಳು ಅಪರಿಚಿತ ಪ್ರಯಾಣಿಕರಿಗೆ ಮಾರ್ಗಸೂಚಿ­ಯಾಗಿರಬೇಕು. ಆದರೆ, ಬೀದರ್‌-ವನಮಾರಪಳ್ಳಿ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿಪಡಿಸಿರುವ ಭಾರತದ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಅಳವಡಿಸಿರುವ ಗ್ರಾಮಗಳ ಮಾರ್ಗಸೂಚಿ ಫಲಕಗಳು ತಪ್ಪು ತಪ್ಪಾಗಿ ಬರೆದು ಪ್ರಯಾಣಕರಿಗೆ ದಿಕ್ಕು ತಪ್ಪಿಸುವಂತಾಗಿದೆ.

- Advertisement -

ಬೀದರ್‌ದಿಂದ ಔರಾದ ತಾಲೂಕಿನ ಗಡಿ ಗ್ರಾಮ ವನಮಾರಪಳ್ಳಿವರೆಗೆ ಸುಮಾರು 45 ಕಿ.ಮೀ. ರಾಷ್ಟ್ರೀಯ ಹೆದ್ದಾರಿ-161A ಕಾಮಗಾರಿ ಬಹುತೇಕ ಮುಕ್ತಾಯ ಹಂತದಲ್ಲಿದೆ. ಹೆದ್ದಾರಿ­ಯುದ್ದಕ್ಕೂ ಗ್ರಾಮಗಳ ಮಾರ್ಗಸೂಚಿ ಫಲಕಗಳನ್ನು ಅಳವಡಿಸಲಾಗಿದೆ. ಆದರೆ, ಕನ್ನಡ, ಇಂಗ್ಲೀಷ್‌ ಹಾಗೂ ಹಿಂದಿ ಭಾಷೆಯಲ್ಲಿ ಬರೆಯಲಾದ ಕೆಲ ಗ್ರಾಮಗಳ ಹೆಸರುಗಳು ತಪ್ಪು ತಪ್ಪಾಗಿವೆ. ಈ ಮಾರ್ಗಸೂಚಿ ಫಲಕಗಳು ಸಂಚರಿಸುವ ವಾಹನಗಳಿಗೆ ನಾಮಫಲಕದಲ್ಲಿದ್ದ ಊರುಗಳ ಹೆಸರುಗಳನ್ನು ನೋಡಿ ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ತನಿಖಾ ವರದಿ | ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರ...

ಸರ್ಕಾರದ ಅಧಿಕೃತ ಆದೇಶದ ಪ್ರತಿ ಎಲ್ಲಿದೆ? ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಮನಕ್ಕೂ ಬಾರದ ನೇಮಕಾತಿ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಹೇಗೆ? ಕೊಡವ ಹಾಗೂ ಅರೆಭಾಷೆ ಅಕಾಡೆಮಿಗಳ ಮೇಲೆ ರಾಜಕೀಯ ಹಿಡಿತ ಸಾಧಿಸುವ...

ಉತ್ತರ ಪ್ರದೇಶ | ಜೈಲಿನಿಂದ ಹೊರಬಂದ ಆಜಂ ಖಾನ್:ಚುನಾವಣಾ...

ಹನ್ನೊಂದು ತಿಂಗಳ ಸುದೀರ್ಘ ಜೈಲುವಾಸದ ನಂತರ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿರುವ ಸಮಾಜವಾದಿ ಪಕ್ಷದ (SP) ಹಿರಿಯ ನಾಯಕ ಆಜಂ ಖಾನ್ ಅವರ ಆಕ್ರಮಣಕಾರಿ ಮಾತುಗಳು ಉತ್ತರ ಪ್ರದೇಶದ ಮುಂದಿನ ವಿಧಾನಸಭಾ ಚುನಾವಣೆಯ...

ಧರ್ಮಗಳ ಜನಸಂಖ್ಯೆಯ ಲೆಕ್ಕಾಚಾರಕ್ಕಿಂತ ಸಂಪನ್ಮೂಲಗಳ ನ್ಯಾಯಯುತ ಹಂಚಿಕೆಯ ಚರ್ಚೆ...

ಭಾರತದ ಆರ್ಥಿಕತೆ ಬೆಳೆಯುತ್ತಿದೆ ಎಂಬುದು ಒಂದು ವಾಸ್ತವ. ದೇಶದ ಒಟ್ಟು ಆಂತರಿಕ ಉತ್ಪನ್ನ ಹೆಚ್ಚಳ, ಕೈಗಾರಿಕಾ ಬೆಳವಣಿಗೆ, ತಂತ್ರಜ್ಞಾನ ಅಭಿವೃದ್ಧಿ, ಮೂಲಸೌಕರ್ಯ ವಿಸ್ತರಣೆ ಮತ್ತು ಸೇವಾ ವಲಯದ ಪ್ರಗತಿ ಆರ್ಥಿಕ ಬೆಳವಣಿಗೆಯ ಸೂಚಕಗಳಾಗಿವೆ....

ಮೂರು ಭಾಷೆಯ ನಾಮಫಲಕಗಳಲ್ಲಿ ಲೋಪದೋಷ:

ಬೀದರ್‌ ಗಡಿ ಜಿಲ್ಲೆ, ಅದರಲ್ಲೂ ಔರಾದ ತಾಲೂಕು ಮಹಾರಾಷ್ಟ್ರ ಹಾಗೂ ತೆಲಂಗಾಣ ರಾಜ್ಯದ ಗಡಿ ಹಂಚಿಕೊಂಡ ತಾಲೂಕು ಆಗಿರುವ ಕಾರಣಕ್ಕೆ ಕೆಲವು ಕಡೆ ಕನ್ನಡ, ಇಂಗ್ಲಿಷ್‌ ಜೊತೆಗೆ ಹಿಂದಿ ಭಾಷೆಯಲ್ಲಿ ಗ್ರಾಮಗಳ ಹೆಸರು ಬರೆಯಲಾಗಿದೆ. ಆದರೆ ಕನ್ನಡ ಸೇರಿದಂತೆ ಹಿಂದಿ ಹಾಗೂ ಇಂಗ್ಲೀಷ್‌ ಭಾಷೆಯ ಫಲಕಗಳಲ್ಲಿ ಲೋಪದೋಷಗಳಾಗಿದ್ದು ವಿಪರ್ಯಾಸವೇ ಸರಿ.

ಬೀದರ್ ತಾಲೂಕಿನ ಮರಖಲ ಗ್ರಾಮದ ಹೆಸರನ್ನು ʼಮಾರ್ಕಾಲ್‌ʼ ಮತ್ತು ʼಮರಕಲʼ ಎಂದು, ‘ಮುಸ್ತಾಪುರ’ ಗ್ರಾಮಕ್ಕೆ ʼಮಸ್ತಾಪುರʼ ಎಂದು, ʼಬೋರಾಳʼ ಗ್ರಾಮಕ್ಕೆ ‘ಬೋರಾಲ್’ ಎಂದು, ʼವನಮಾರಪಳ್ಳಿʼ ಗ್ರಾಮಕ್ಕೆ ‘ಕನಮಾರಪಳ್ಳಿʼ ಸೇರಿದಂತೆ ಹಲವು ಗ್ರಾಮಗಳ ಹೆಸರು ತಪ್ಪಾಗಿ ಬರೆಯಲಾಗಿದೆ. ಇನ್ನು ʼಹೊಸ ಸೋಲಾರ್‌ ಸಸ್ಯʼ, ʼನದಿಗʼ ಎಂದು ಮೇಲ್ನೋಟಕ್ಕೆ ಇಂಗ್ಲೀಷ್‌ ದಿಂದ ಕನ್ನಡಕ್ಕೆ ಭಾಷಾಂತರಿಸಿ ಬರೆದ ಫಲಕಗಳು ಅಲ್ಲಲ್ಲಿ ತಲೆಯೆತ್ತಿ ನಿಂತಿವೆ. ಕೆಲ ಕಡೆ ಗ್ರಾಮಗಳ ಮೂಲ ಹೆಸರೇ ನಾಪತ್ತೆಯಾದರೆ, ಇನ್ನು ಕೆಲವು ʼಅರ್ಥವಿಲ್ಲದʼ ನಾಮಪಲಕಗಳು ಪ್ರಯಾಣಕರನ್ನು ಗೊಂದಲ ಮೂಡಿಸಿವೆ.

ಬೋರ್ಡ್‌

“ಬೀದರ್‌-ವನಮಾರಪಳ್ಳಿ ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಅಳವಡಿಸಿದ ಗ್ರಾಮಗಳ ನಾಮಫಲಕಗಳಲ್ಲಿ ಹಲವು ಲೋಪದೋಷಗಳಿವೆ ಎಂಬುದು ಗೊತ್ತಾಗಿದೆ. ಅದರಲ್ಲೂ ಕನ್ನಡ ಹೆಸರೇ ತಪ್ಪು ತಪ್ಪಾಗಿ ಬರೆದಿರುವುದು ಪ್ರಮಾದವೇ ಸರಿ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕೂಡಲೇ ಸರಿಪಡಿಸುವಂತೆ ತಿಳಿಸುವೆ” ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ಈದಿನ.ಕಾಮ್‌ ಜೊತೆಗೆ ಮಾತನಾಡಿ ಹೇಳಿದರು.

“ಗ್ರಾಮಗಳ ನಾಮಫಲಕ ಸಿದ್ದಪಡಿಸುವಾಗ ಅಲ್ಲಿನ ಗ್ರಾಮಸ್ಥರಿಗೆ ಕೇಳಲಾಗಿದೆ. ಆದರೂ ಸರಿಯಾದ ತಿಳಿವಳಿಕೆ ಇಲ್ಲದ್ದ ಕಾರಣ ಈ ಪ್ರಮಾದ ಆಗಿರಬಹುದು. ತಪ್ಪುಗಳಾಗಿರುವ ಎಲ್ಲ ನಾಮಫಲಕಗಳು ಸರಿಪಡಿಸಿ ಸರಿಯಾದ ಹೆಸರಿನ ಮಾರ್ಗಸೂಚಿ ಫಲಕಗಳನ್ನು ಅಳವ­ಡಿಸಲಾಗುವುದು” ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯೊಬ್ಬರು ಈದಿನ.ಕಾಮ್‌ ಗೆ ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಯಾವುದೇ ಕಾರಣಕ್ಕೂ ಗ್ಯಾರಂಟಿಗಳು ಸ್ಥಗಿತವಾಗುವುದಿಲ್ಲ, ಅಪಪ್ರಚಾರ ನಂಬಬೇಡಿ: ಸಿಎಂ ಸಿದ್ದರಾಮಯ್ಯ

ಹಿರಿಯ ಕನ್ನಡ ಹೋರಾಟಗಾರ ಬಸವರಾಜ ಶೆಟಕಾರ್‌ ಈದಿನ.ಕಾಮ್‌ ಜೊತೆಗೆ ಮಾತನಾಡಿ, “ರಾಷ್ಟ್ರೀಯ ಹೆದ್ದಾರಿ-161A ಬದಿಯಲ್ಲಿ ಅಳವಡಿಸಲಾದ ಗ್ರಾಮಗಳ ನಾಮಫಲಕಗಳಲ್ಲಿ ಹಲವು ಲೋಪದೋಷಗಳಿವೆ. ಕೂಡಲೇ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತುಕೊಂಡು ತಪ್ಪಾಗಿ ಬರೆಯಲಾದ ನಾಮಫಲಕ ತೆರವುಗೊಳಿಸಿ ಸರಿಪಡಿಸಬೇಕು. ಇಲ್ಲದಿದ್ದರೆ ಲೋಪದೋಷವಿರುವ ನಾಮಫಲಕಗಳಿಗೆ ಮಸಿ ಬಳಿಯುವುದಾಗಿ ಎಚ್ಚರಿಸಿದರು.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಕ್ಕಳ ರಕ್ಷಣೆಗೆ ಎಲ್ಲಾ ಇಲಾಖೆಗಳ ಸಮನ್ವಯ ಅಗತ್ಯ: ಡಾ. ತಿಪ್ಪೇಸ್ವಾಮಿ ಕೆ.ಟಿ.

ಮಕ್ಕಳ ರಕ್ಷಣೆ ಕೇವಲ ಒಂದು ಇಲಾಖೆಗೆ ಸೀಮಿತವಾದ ವಿಚಾರವಲ್ಲ. ಮಕ್ಕಳ ಹಕ್ಕುಗಳ...

ಕಲಬುರಗಿ | ನ.21ರಂದು ಐದು ಜೆಸ್ಕಾಂ ಉಪವಿಭಾಗಗಳಲ್ಲಿ ವಿದ್ಯುತ್ ಸುರಕ್ಷತಾ ದಿನ, ಗ್ರಾಹಕರ ಕುಂದುಕೊರತೆ ಸಭೆ

ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯುತ್ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಕಲಬುರಗಿ ಜೆಸ್ಕಾಂ...

ದೀಪಾವಳಿ ಪ್ರಕರಣ: ವಿದ್ಯಾರ್ಥಿಗಳ ಆರೋಪಕ್ಕೆ ಉಡುಪಿ ಎಸ್ಪಿ ಹರಿರಾಂ ಶಂಕರ್ ಸ್ಪಷ್ಟನೆ

ಮಣಿಪಾಲದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ದೀಪಾವಳಿ ದಿನದ ಘಟನೆಗೆ ಸಂಬಂಧಿಸಿ ಪೊಲೀಸರ...