ರಫೇಲ್ ಸಂಖ್ಯೆ 32ಕ್ಕೆ ಇಳಿಕೆ: ಫ್ಲೈಟ್‌ಗ್ಲೋಬಲ್ ವರದಿಯನ್ನು ತಳ್ಳಿಹಾಕಿದ ರಕ್ಷಣಾ ಸಚಿವಾಲಯ!

Date:

ಭಾರತೀಯ ವಾಯುಪಡೆಯ (IAF) ಬತ್ತಳಿಕೆಯಲ್ಲಿರುವ ಸಕ್ರಿಯ ರಫೇಲ್ ಯುದ್ಧವಿಮಾನಗಳ ಸಂಖ್ಯೆಯನ್ನು 32ಕ್ಕೆ ಇಳಿದಿದೆ ಎಂದು ಬ್ರಿಟಿಷ್ ವಾಯುಯಾನ ನಿಯತಕಾಲಿಕೆ ‘ಫ್ಲೈಟ್‌ಗ್ಲೋಬಲ್’ ತನ್ನ ಇತ್ತೀಚಿನ ‘ವರ್ಲ್ಡ್ ಏರ್ ಫೋರ್ಸಸ್’ ವರದಿಯಲ್ಲಿ ಉಲ್ಲೇಖಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಆದರೆ, ಈ ವರದಿಯ ಅಧಿಕೃತತೆಯನ್ನು ರಕ್ಷಣಾ ಸಚಿವಾಲಯದ ಉನ್ನತ ಮೂಲಗಳು ಸ್ಪಷ್ಟವಾಗಿ ತಳ್ಳಿಹಾಕಿದ್ದು, ಈ ಅಂಕಿಅಂಶಗಳನ್ನು ಸಚಿವಾಲಯವಾಗಲಿ ಅಥವಾ ವಾಯುಪಡೆಯಾಗಲಿ ನೀಡಿಲ್ಲ ಎಂದು ಸ್ಪಷ್ಟಪಡಿಸಿವೆ.

- Advertisement -

ವರದಿಯಲ್ಲೇನಿದೆ? ಸಚಿವಾಲಯದ ವಾದವೇನು? 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನ್ಯಾಯಕ್ಕಾಗಿ ಬಿಲ್ಕಿಸ್ ಬಾನೋ 22 ವರ್ಷಗಳ ಅಲೆದಾಟ: ಇಂದಿಗೂ...

2002ರ ಗುಜರಾತ್ ಗಲಭೆಯ ಕರಾಳ ನೆನಪುಗಳನ್ನು ಹೊತ್ತು, ತಮ್ಮವರನ್ನೆಲ್ಲಾ ಕಳೆದುಕೊಂಡು, ಅತ್ಯಾಚಾರದ ಘೋರ ಕ್ರೌರ್ಯಕ್ಕೆ ತುತ್ತಾದ ಬಿಲ್ಕಿಸ್ ಬಾನೋ ಬದುಕು ಇಂದಿಗೂ ನೆಮ್ಮದಿ ಕಂಡಿಲ್ಲ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಇಬ್ಬರು ಅಪರಾಧಿಗಳ ಜೀವಾವಧಿ...

ಡಿಪಿಡಿಪಿ ಕಾಯ್ದೆ: ನಾಗರಿಕರ ಖಾಸಗಿತನದ ರಕ್ಷಣೆಯೋ, ಪತ್ರಿಕಾ ಸ್ವಾತಂತ್ರ್ಯದ...

ಡಿಪಿಡಿಪಿ ಕಾಯ್ದೆ ನಾಗರಿಕರ ಗೌಪ್ಯತೆಯನ್ನು ಕಾಪಾಡುವ ಭರವಸೆ ನೀಡುತ್ತಿದೆ. ಆದರೆ, ಇದೇ ಕಾಯ್ದೆಯು ಪತ್ರಕರ್ತರ ಮೂಲಭೂತ ಹಕ್ಕು ಮತ್ತು ತನಿಖಾ ಪತ್ರಿಕೋದ್ಯಮದ ಮೇಲೆ ಕರಿನೆರಳು ಬೀರಲಿದೆಯೇ? ಆರ್‌ಟಿಐ ದುರ್ಬಲಗೊಳ್ಳುತ್ತಿದೆಯೇ? ಒಂದೆಡೆ ವ್ಯಕ್ತಿಯ ಖಾಸಗಿತನದ...

ಉಳಿತಾಯದ ಪಾಠ ಹೇಳಿದ ಮೋದಿ: ಬೆಲೆ ಏರಿಕೆ, ನಿರುದ್ಯೋಗ;...

ಮಕ್ಕಳ ಶಿಕ್ಷಣ, ಮದುವೆ ಮತ್ತು ಮುಪ್ಪಿನ ಕಾಲಕ್ಕಾಗಿ ಹೊಟ್ಟೆಬಟ್ಟೆ ಕಟ್ಟಿ ಉಳಿತಾಯ ಮಾಡುವುದು ಭಾರತೀಯರ ಸಂಸ್ಕೃತಿಯಲ್ಲೇ ಬಂದಿದೆ. ಅವರಿಗೆ ಉಳಿತಾಯದ ಪಾಠ ಕಲಿಸುವ ಅಗತ್ಯವಿಲ್ಲ; ಬದಲಾಗಿ ಬಡತನದಿಂದ ಹೊರಬಂದ ಕುಟುಂಬಗಳು ಮತ್ತೆ ಸಂಕಷ್ಟಕ್ಕೆ...

ಜಾಗತಿಕ ವಾಯುಯಾನ ದತ್ತಾಂಶ ಸಂಸ್ಥೆ ‘ಸಿರಿಯಮ್’ ಕಲೆಹಾಕಿದ ಮಿಲಿಟರಿ ಫ್ಲೀಟ್ ಡೇಟಾಬೇಸ್ ಆಧರಿಸಿ ಫ್ಲೈಟ್‌ಗ್ಲೋಬಲ್ ಈ ವರದಿಯನ್ನು ಸಿದ್ಧಪಡಿಸಿದೆ. ಭಾರತವು ಫ್ರಾನ್ಸ್‌ನಿಂದ ಒಟ್ಟು 36 ರಫೇಲ್ ಯುದ್ಧವಿಮಾನಗಳನ್ನು ಖರೀದಿಸಿತ್ತು. 2025ರ ಕೊನೆಯಲ್ಲಿ ಪ್ರಕಟವಾಗಿದ್ದ 2026ರ ಆವೃತ್ತಿಯಲ್ಲಿ 35 ವಿಮಾನಗಳು ಸಕ್ರಿಯವಾಗಿವೆ ಎಂದು ತೋರಿಸಲಾಗಿತ್ತು. ಈಗಿನ ಹೊಸ ಆವೃತ್ತಿಯಲ್ಲಿ ಆ ಸಂಖ್ಯೆಯನ್ನು 32ಕ್ಕೆ ಇಳಿಸಲಾಗಿದೆ. ಆದರೆ, ಯಾವ ವಿಮಾನಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಮತ್ತು ಇದಕ್ಕೆ ನಿಖರ ಕಾರಣವೇನು ಎಂಬುದನ್ನು ವರದಿ ಎಲ್ಲಿಯೂ ಸ್ಪಷ್ಟಪಡಿಸಿಲ್ಲ.

ಈ ಕುರಿತು ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು, “ವರದಿಯಲ್ಲಿ ಪ್ರಕಟವಾಗಿರುವ ಅಂಕಿಅಂಶಗಳು ಭಾರತೀಯ ವಾಯುಪಡೆಯಿಂದ ಪಡೆದ ಅಧಿಕೃತ ಮಾಹಿತಿಯಲ್ಲ. ಇದೇ ವರ್ಷದ ಜೂನ್ ತಿಂಗಳಲ್ಲಿ ವಾಯುಪಡೆಯು ಎಲ್ಲಾ 36 ರಫೇಲ್ ವಿಮಾನಗಳ ನಿರ್ವಹಣೆಗಾಗಿ ‘ಬ್ರಿಡ್ಜ್ ಸಪೋರ್ಟ್’ ಟೆಂಡರ್ ಕರೆದಿದೆ. ನಮ್ಮ ಎಲ್ಲಾ 36 ಯುದ್ಧವಿಮಾನಗಳು ಸಕ್ರಿಯ ನಿರ್ವಹಣೆ ಮತ್ತು ಕಾರ್ಯಾಚರಣೆಯ ವ್ಯಾಪ್ತಿಯಲ್ಲಿವೆ ಎಂಬುದಕ್ಕೆ ಇದೇ ಸಾಕ್ಷಿ” ಎಂದು ತಿರುಗೇಟು ನೀಡಿದ್ದಾರೆ.

ಇನ್ನು ರಕ್ಷಣಾ ವಿಶ್ಲೇಷಕರ ಪ್ರಕಾರ, ಸಿರಿಯಮ್ ಸಂಸ್ಥೆಯು ಸಾರ್ವಜನಿಕವಾಗಿ ಲಭ್ಯವಿರುವ ಮಾಹಿತಿ, ವಿಮಾನಗಳ ಹಾರಾಟದ ಟ್ರ್ಯಾಕಿಂಗ್ ಡೇಟಾ ಮತ್ತು ರಕ್ಷಣಾ ವರದಿಗಳನ್ನು ಆಧರಿಸಿ ಪ್ರತ್ಯೇಕ ಏರ್‌ಫ್ರೇಮ್ ಮಟ್ಟದಲ್ಲಿ ನಿಗಾ ಇಡುತ್ತದೆ. ಯಾವುದೇ ಒಂದು ಯುದ್ಧವಿಮಾನವು ದೀರ್ಘಕಾಲದ ತಾಂತ್ರಿಕ ನಿರ್ವಹಣೆ, ನವೀಕರಣ ಅಥವಾ ರಚನಾತ್ಮಕ ದುರಸ್ತಿಗೆ ಒಳಗಾದಾಗ, ಅದು ಸಾರ್ವಜನಿಕ ಹಾರಾಟದ ಟ್ರ್ಯಾಕಿಂಗ್‌ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಇದನ್ನೇ ಆಧಾರವಾಗಿಟ್ಟುಕೊಂಡು ಅಂತಾರಾಷ್ಟ್ರೀಯ ಸಂಸ್ಥೆಗಳು ಸಕ್ರಿಯ ವಿಮಾನಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಅಂದಾಜಿಸುವ ಸಾಧ್ಯತೆ ಇರುತ್ತದೆ. ಅಲ್ಲದೆ, ‘ಆಪರೇಷನ್ ಸಿಂಧೂರ್’  ಬಳಿಕ ವಾಯುಪಡೆಯು “ಯುದ್ಧ ಕಾರ್ಯಾಚರಣೆಯಲ್ಲಿ ನಷ್ಟಗಳು ಸಹಜ” ಎಂದು ಹೇಳಿತ್ತಾದರೂ, ಯಾವುದೇ ವಿಮಾನದ ನಷ್ಟದ ಬಗ್ಗೆ ಅಧಿಕೃತ ಸಂಖ್ಯೆ ಅಥವಾ ಮಾದರಿಯನ್ನು ಬಹಿರಂಗಪಡಿಸಿರಲಿಲ್ಲ.

ಇದೇ ವರದಿಯಲ್ಲಿ ನೆರೆಯ ಪಾಕಿಸ್ತಾನ ವಾಯುಪಡೆಯಲ್ಲಿದ್ದ ‘ಸಾಬ್ 2000 ಎರಿಯೆ’ ವಾಯುಗಾಮಿ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ವಿಮಾನಗಳ ಸಂಖ್ಯೆಯನ್ನೂ ಸಹ ಒಂಬತ್ತರಿಂದ ಏಳಕ್ಕೆ ಇಳಿಸಲಾಗಿದೆ.  ಒಟ್ಟಾರೆಯಾಗಿ, ಫ್ಲೈಟ್‌ಗ್ಲೋಬಲ್ ವರದಿಯು ಜಾಗತಿಕ ಮಿಲಿಟರಿ ವಿಮಾನಗಳ ಕುರಿತಾದ ಒಂದು ಸ್ವತಂತ್ರ ಅಂದಾಜು ಮಾತ್ರವಾಗಿದ್ದು, ಅದು ಭಾರತ ಸರ್ಕಾರದ ಅಧಿಕೃತ ಘೋಷಣೆಯಲ್ಲ ಎಂಬುದು ರಕ್ಷಣಾ ವಲಯದ ಸ್ಪಷ್ಟ ಅಭಿಪ್ರಾಯವಾಗಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

10 ವರ್ಷಗಳಲ್ಲಿ ‘ಗ್ರೀನ್ ಇಂಡಿಯಾ ಮಿಷನ್’ ಸಂಪೂರ್ಣ ವಿಫಲ: ಕೆ ಸಿ ವೇಣುಗೋಪಾಲ್ ತೀವ್ರ ಅಸಮಾಧಾನ

ದೇಶದ ಜೈವಿಕ ಸಂಪನ್ಮೂಲಗಳು ಮತ್ತು ಅರಣ್ಯ ಪ್ರದೇಶವನ್ನು ಸಂರಕ್ಷಿಸುವ ಉದ್ದೇಶದಿಂದ ಜಾರಿಗೆ...

ವಿಶ್ವದ ‘ದಿ ಮುಸ್ಲಿಮ್-500’ ಪಟ್ಟಿಯಲ್ಲಿ ಮೊದಲಿಗರು ಯಾರು? ಭಾರತೀಯರು ಇದ್ದಾರಾ?

ವಿಶ್ವದ 500 ಅತ್ಯಂತ ಪ್ರಭಾವಿ ಮುಸ್ಲಿಮರ ಈ ಪಟ್ಟಿಯನ್ನು ‘ದಿ ಮುಸ್ಲಿಮ್...

ಚುನಾವಣೆ ಬಹಿಷ್ಕರಿಸುವುದಿಲ್ಲ, ವ್ಯವಸ್ಥೆಯಲ್ಲಿನ ಲೋಪಗಳನ್ನು ಜನರ ಮುಂದೆ ಬಯಲಿಗೆಳೆಯುತ್ತೇವೆ: ರಾಹುಲ್ ಗಾಂಧಿ

ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಗಂಭೀರ ಲೋಪದೋಷಗಳು ಮತ್ತು ಅಕ್ರಮಗಳು ನಡೆಯುತ್ತಿವೆ ಎಂಬ...

ಬೀದರ್‌ | ಲೇಖಕ ರವಿ ಹಂಜ್‌ ಭಾವಚಿತ್ರಕ್ಕೆ ಬೂಟಿನೇಟು, ʼಬಸವ ಮಂಟಪʼ ಕೃತಿ ನಿಷೇಧಕ್ಕೆ ಆಗ್ರಹ

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ...