ಯುಪಿಯಲ್ಲಿ ಕ್ರಾಂತಿಯಾಗಲಿದೆ, ಪ್ರವಾಹ ಉಕ್ಕಲಿದೆ: ಆಜಮ್ ಖಾನ್ ರಣ ಕಹಳೆ

Date:

ಉತ್ತರಪ್ರದೇಶ ಚುನಾವಣೆಯಲ್ಲಿ ಕ್ರಾಂತಿ ಘಟಿಸಲಿದೆ, ಪ್ರವಾಹವೇ ಉಕ್ಕಿ ಹರಿಯಲಿದೆ (ಚುನಾವ್ ನಹೀ ಹೋಗಾ, ಇನ್ಕಲಾಬ್ ಹೋಗಾ, ಚುನಾವ್ ನಹೀ ಹೋಗಾ, ಸೈಲಾಬ್ ಹೋಗಾ) ಎಂದು ರೂಪಕಗಳಲ್ಲಿ ಮಾತಾಡಿದ್ದಾರೆ ಜೈಲಿನಿಂದ ಬಿಡುಗಡೆಯಾಗಿರುವ ಸಮಾಜವಾದಿ ಪಕ್ಷದ ಹಿರಿಯ ನಾಯಕ ಆಜಂ ಖಾನ್.

- Advertisement -

“ಮತದಾರರು ಈ ಸಲ ಜಾತಿ ಅಥವಾ ಧರ್ಮಕ್ಕಾಗಿ ತಲೆ ಕೆಡಿಸಿಕೊಳ್ಳುವುದಿಲ್ಲ, ತಮ್ಮನ್ನು ಕಾಡುವ ವಿಷಯಗಳನ್ನು ಚುನಾವಣೆಯಲ್ಲಿ ಗಂಭೀರವಾಗಿ ಪರಿಗಣಿಸಲಿದ್ದಾರೆ. ನನ್ನಂತಹವರು ಸಂವಿಧಾನ ಮತ್ತು ವಿಧಾನಕ್ಕಾಗಿ ಸಾಯಲೂ ತಯಾರಿದ್ದೇವೆ. ಜಾರಿ ನಿರ್ದೇಶನಾಲಯ ಕುರಿ ಕೋಳಿ ಎಮ್ಮೆ ಕಳ್ಳರ ಹಿಂದೆ ಬಿದ್ದಿದೆ. ಇಂತಹ ದುಸ್ಥಿತಿಯಲ್ಲಿ ಗಲ್ಲಿ ಗಲ್ಲಿಯಲ್ಲೂ ಕೋಳಿ ಕಳ್ಳರು ಹುಟ್ಟಲಿ. ಹುಟ್ಟಿ ವಿಶ್ವವಿದ್ಯಾಲಯ ಸ್ಥಾಪಿಸಲಿ” ಎಂದು ಅವರು ನೋವಿನಿಂದ ನುಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ನ್ಯಾಯಕ್ಕಾಗಿ ಬಿಲ್ಕಿಸ್ ಬಾನೋ 22 ವರ್ಷಗಳ ಅಲೆದಾಟ: ಇಂದಿಗೂ...

2002ರ ಗುಜರಾತ್ ಗಲಭೆಯ ಕರಾಳ ನೆನಪುಗಳನ್ನು ಹೊತ್ತು, ತಮ್ಮವರನ್ನೆಲ್ಲಾ ಕಳೆದುಕೊಂಡು, ಅತ್ಯಾಚಾರದ ಘೋರ ಕ್ರೌರ್ಯಕ್ಕೆ ತುತ್ತಾದ ಬಿಲ್ಕಿಸ್ ಬಾನೋ ಬದುಕು ಇಂದಿಗೂ ನೆಮ್ಮದಿ ಕಂಡಿಲ್ಲ. ಇತ್ತೀಚೆಗೆ ಸುಪ್ರೀಂ ಕೋರ್ಟ್ ಇಬ್ಬರು ಅಪರಾಧಿಗಳ ಜೀವಾವಧಿ...

ಡಿಪಿಡಿಪಿ ಕಾಯ್ದೆ: ನಾಗರಿಕರ ಖಾಸಗಿತನದ ರಕ್ಷಣೆಯೋ, ಪತ್ರಿಕಾ ಸ್ವಾತಂತ್ರ್ಯದ...

ಡಿಪಿಡಿಪಿ ಕಾಯ್ದೆ ನಾಗರಿಕರ ಗೌಪ್ಯತೆಯನ್ನು ಕಾಪಾಡುವ ಭರವಸೆ ನೀಡುತ್ತಿದೆ. ಆದರೆ, ಇದೇ ಕಾಯ್ದೆಯು ಪತ್ರಕರ್ತರ ಮೂಲಭೂತ ಹಕ್ಕು ಮತ್ತು ತನಿಖಾ ಪತ್ರಿಕೋದ್ಯಮದ ಮೇಲೆ ಕರಿನೆರಳು ಬೀರಲಿದೆಯೇ? ಆರ್‌ಟಿಐ ದುರ್ಬಲಗೊಳ್ಳುತ್ತಿದೆಯೇ? ಒಂದೆಡೆ ವ್ಯಕ್ತಿಯ ಖಾಸಗಿತನದ...

ಉಳಿತಾಯದ ಪಾಠ ಹೇಳಿದ ಮೋದಿ: ಬೆಲೆ ಏರಿಕೆ, ನಿರುದ್ಯೋಗ;...

ಮಕ್ಕಳ ಶಿಕ್ಷಣ, ಮದುವೆ ಮತ್ತು ಮುಪ್ಪಿನ ಕಾಲಕ್ಕಾಗಿ ಹೊಟ್ಟೆಬಟ್ಟೆ ಕಟ್ಟಿ ಉಳಿತಾಯ ಮಾಡುವುದು ಭಾರತೀಯರ ಸಂಸ್ಕೃತಿಯಲ್ಲೇ ಬಂದಿದೆ. ಅವರಿಗೆ ಉಳಿತಾಯದ ಪಾಠ ಕಲಿಸುವ ಅಗತ್ಯವಿಲ್ಲ; ಬದಲಾಗಿ ಬಡತನದಿಂದ ಹೊರಬಂದ ಕುಟುಂಬಗಳು ಮತ್ತೆ ಸಂಕಷ್ಟಕ್ಕೆ...

ಜಾರಿ ನಿರ್ದೇಶನಾಲಯದ (ಇ.ಡಿ) ವಿರುದ್ಧ ಗಂಭೀರ ಆರೋಪ ಮಾಡಿದ ಅವರು, ತಮ್ಮೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳಲಾಯಿತು, ಪಶು-ಪ್ರಾಣಿಗಳೂ ತಿನ್ನದಂತಹ ಊಟವನ್ನು ಜೈಲಿನಲ್ಲಿ ನೀಡಲಾಯಿತು ಎಂದು ದೂರಿದರು. ‘ಇಂಡಿಯಾ’ ಮೈತ್ರಿಕೂಟದ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಜೈಲಿನಿಂದ ಬಿಡುಗಡೆಯಾದ ಬಳಿಕ ನವೆಂಬರ್‌ 19ರಂದು ಪತ್ರಕರ್ತರೊಂದಿಗೆ ಮಾತನಾಡಿದ ಆಜಂ ಖಾನ್‌, ಜೈಲಿನಲ್ಲಿ ತಾವು ಅನುಭವಿಸಿದ ದುಸ್ಥಿತಿಯನ್ನು ವಿವರಿಸಿದರು.

“ನಮಗೆ ಬಹಳ ಅನ್ಯಾಯವಾಗಿದೆ. ನಮ್ಮ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. 11 ಅಡಿ ಉದ್ದ, 7 ಅಡಿ ಅಗಲದ ಕೋಣೆಯಲ್ಲಿ ಇಬ್ಬರನ್ನು ದಿನದ 24 ಗಂಟೆಗಳಲ್ಲಿ 20 ಗಂಟೆ ಕಾಲ ಕೂಡಿ ಹಾಕಲು ಯಾವ ಕಾನೂನಿನಲ್ಲೂ ಅವಕಾಶ ಇಲ್ಲ. ಬೀದಿ ನಾಯಿಗಳೂ ಮೂಸದಂತಹ ಊಟವನ್ನು ಕೈದಿಗಳಿಗೆ ಕೊಡಲಾಗುತ್ತಿದೆ. ಸರ್ಕಾರ ಸಾಕಷ್ಟು ಹಣ ಕೊಡುತ್ತದೆ. ಆದರೆ ಈ ಜೈಲುಗಳ ಒಳಗೆ ನಿಜಕ್ಕೂ ಏನು ನಡೆಯುತ್ತಿದೆ? ನಮ್ಮ ಜೀವಿತಾವಧಿಯಲ್ಲಿ ಎಂದಾದರೂ ವ್ಯವಸ್ಥೆಯಲ್ಲಿ ಬದಲಾವಣೆ ಬಂದರೆ, ಜೈಲು ಆಡಳಿತವನ್ನು ಸಂಪೂರ್ಣವಾಗಿ ಬದಲಿಸಲು ಖಂಡಿತ ಪ್ರಯತ್ನಿಸುತ್ತೇವೆ” ಎಂದರು.

“ನಮ್ಮೊಂದಿಗೆ ಬಹಳ ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಸಾಕಷ್ಟು ದೌರ್ಜನ್ಯ ಎಸಗಿದ್ದಾರೆ. ನಾನು ಶರಣಾದಾಗ ನನ್ನ ತೂಕ 98 ಕಿಲೋ ಇತ್ತು. ಇಂದು 70 ಕಿಲೋ ಇದೆ. ನನ್ನ ಪ್ರಾಮಾಣಿಕತೆಗೆ ಸಿಕ್ಕ ಬಹುಮಾನ ಇದು. ನನ್ನ ಮೇಲೆ ಬೇರೆ ಯಾವ ಆರೋಪ ಬೇಕಾದರೂ ಇರಬಹುದು. ಆದರೆ ಕಳ್ಳತನ ಮಾಡಿದ್ದೇನೆ, ಅಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ ಅಥವಾ ಕಮಿಷನ್‌ ಪಡೆದಿದ್ದೇನೆ ಎಂಬ ಆರೋಪ ಈವರೆಗೂ ನನ್ನ ಮೇಲಿಲ್ಲ. ಇದು ಬಹುಶಃ ಎಲ್ಲರಿಗೂ ಗೊತ್ತು” ಎಂದು ಹೇಳಿದರು.

‘ಇ.ಡಿ ಮತ್ತು ಸಿಬಿಐ ವರ್ಚಸ್ಸಿಗೆ ಧಕ್ಕೆಯಾಗಿದೆ’
ಚುನಾವಣಾ ಆಯೋಗ, ಇ.ಡಿ. ಮತ್ತು ಸಿಬಿಐನ ವಿಶ್ವಾಸಾರ್ಹತೆಯನ್ನೂ ಆಜಂ ಖಾನ್‌ ಪ್ರಶ್ನಿಸಿದರು. ಸಾಂವಿಧಾನಿಕ ಸಂಸ್ಥೆಗಳು ತಮ್ಮ ಘನತೆಯನ್ನು ಕಾಪಾಡಿಕೊಳ್ಳಬೇಕು ಎಂದ ಅವರು, “ಇ.ಡಿ ಮತ್ತು ಸಿಬಿಐನ ವರ್ಚಸ್ಸಿಗೆ ಧಕ್ಕೆಯಾಗಿದೆ” ಎಂದು ಅಭಿಪ್ರಾಯಪಟ್ಟರು.

“ಭಾರತದಲ್ಲಿ ಚುನಾವಣೆಗಳು ನಿಷ್ಪಕ್ಷಪಾತವಾಗಿ ನಡೆದಿಲ್ಲ ಎಂಬ ಸಂದೇಶ ಇಡೀ ಜಗತ್ತಿಗೆ ಹೋಗುತ್ತಿದೆ” ಎಂದು ಚುನಾವಣಾ ಆಯೋಗದ ಕುರಿತು ಹೇಳಿದರು. ‘ರಾಮಪುರದಲ್ಲಿ ಮತ ಕಳವು ನಡೆದಾಗಲೇ ಇಂಡಿಯಾ ಮೈತ್ರಿಕೂಟ ಗಂಭೀರವಾಗಿ ಪರಿಗಣಿಸಬೇಕಿತ್ತು’ ಎಂದರು.

“ರಾಮಪುರದಲ್ಲಿ ಮೊದಲ ಬಾರಿಗೆ ಮತ ಕಳವು ನಡೆದಾಗ ಪೊಲೀಸ್‌ ಅಧಿಕಾರಿಗಳು ಕೈಯಲ್ಲಿ ಪಿಸ್ತೂಲು ಹಿಡಿದು ಜನರನ್ನು ಅಟ್ಟಿಸಿಕೊಂಡು ಹೋದರು. ಮನೆಗಳ ಮುಂದೆ ಗೂಂಡಾಗಳನ್ನು ನಿಲ್ಲಿಸಲಾಗಿತ್ತು. ಬೀದಿಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಜನರಿಗೆ ಮತ ಹಾಕಲು ಬಿಡಲಿಲ್ಲ. ಇಂಡಿಯಾ ಮೈತ್ರಿಕೂಟ ಆಗಲೇ ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದರೆ ಸಂಭಲ್‌, ಹರಿಯಾಣ ಅಥವಾ ಬಂಗಾಳದಲ್ಲಿ ಇಂಥ ಫಲಿತಾಂಶ ಬರುತ್ತಿರಲಿಲ್ಲ” ಎಂದರು.

ಮದನ ಮೋಹನ ಮಾಳವೀಯ ಮತ್ತು ಸರ್‌ ಸಯ್ಯದ್‌ ಅಹಮದ್‌ ಖಾನ್‌ ಅವರನ್ನೂ ಆಜಂ ಖಾನ್‌ ಉಲ್ಲೇಖಿಸಿದರು. ಅವರ ಕಾಲದಲ್ಲೂ ಇ.ಡಿ., ಸಿಬಿಐ, ಆದಾಯ ತೆರಿಗೆ ಇಲಾಖೆ ಮತ್ತು ಅಭಿವೃದ್ಧಿ ಪ್ರಾಧಿಕಾರದಂಥ ಸಂಸ್ಥೆಗಳಿದ್ದಿದ್ದರೆ, ಬಹುಶಃ ಅವರೂ ಜೈಲು ಸೇರುತ್ತಿದ್ದರು. ಅವರಿಗೆ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.

ಸುಪ್ರೀಂ ಕೋರ್ಟ್‌ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಅವರು, “ನ್ಯಾಯದ ದೇಗುಲಗಳಿಗೆ ನಾನು ಕೃತಜ್ಞನಾಗಿದ್ದೇನೆ. ಅವು ನನ್ನ ನಂಬಿಕೆಯನ್ನು ಉಳಿಸಿವೆ” ಎಂದರು.

ರಾಮಪುರದ ಮೊಹಮ್ಮದ್‌ ಅಲಿ ಜೌಹರ್‌ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ. ಅಧಿಕಾರಿಗಳು ಅಕ್ಟೋಬರ್‌ 31ರಂದು ಆಜಂ ಖಾನ್‌ ಅವರನ್ನು ಬಂಧಿಸಿದ್ದರು. ಬಳಿಕ ಅವರನ್ನು ಗಾಜಿಯಾಬಾದ್‌ನ ಡಾಸ್ನಾ ಜೈಲಿಗೆ ಕಳುಹಿಸಲಾಗಿತ್ತು.‌ ನವೆಂಬರ್‌ 17ರಂದು ಅಲಹಾಬಾದ್‌ ಹೈಕೋರ್ಟ್‌ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತು. ಬಳಿಕ ತಲಾ 50,000 ರೂ. ಮೊತ್ತದ ಎರಡು ಜಾಮೀನು ಬಾಂಡ್‌ಗಳನ್ನು ಸಲ್ಲಿಸುವ ಷರತ್ತಿನ ಮೇಲೆ ಅವರನ್ನು ಬಿಡುಗಡೆ ಮಾಡುವಂತೆ ಗಾಜಿಯಾಬಾದ್‌ನ ವಿಶೇಷ ಪಿಎಂಎಲ್‌ಎ ನ್ಯಾಯಾಲಯ ಆದೇಶಿಸಿತು. ಪ್ರಕರಣದ ವಿಚಾರಣೆ ಡಿಸೆಂಬರ್‌ 10ರಂದು ಅಲಹಾಬಾದ್‌ ಹೈಕೋರ್ಟ್‌ನಲ್ಲಿ ಮುಂದುವರೆಯಲಿದೆ.

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಲೇಖಕ ರವಿ ಹಂಜ್‌ ಭಾವಚಿತ್ರಕ್ಕೆ ಬೂಟಿನೇಟು, ʼಬಸವ ಮಂಟಪʼ ಕೃತಿ ನಿಷೇಧಕ್ಕೆ ಆಗ್ರಹ

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ...

ನ್ಯಾಯಕ್ಕಾಗಿ ಬಿಲ್ಕಿಸ್ ಬಾನೋ 22 ವರ್ಷಗಳ ಅಲೆದಾಟ: ಇಂದಿಗೂ ಮುಗಿಯದ ಮಾನಸಿಕ ಯಾತನೆ, ಭೀತಿ, ಪಲಾಯನದ ಬದುಕು

2002ರ ಗುಜರಾತ್ ಗಲಭೆಯ ಕರಾಳ ನೆನಪುಗಳನ್ನು ಹೊತ್ತು, ತಮ್ಮವರನ್ನೆಲ್ಲಾ ಕಳೆದುಕೊಂಡು, ಅತ್ಯಾಚಾರದ...

ರೋಹಿಂಗ್ಯಾ ನರಮೇಧಕ್ಕೆ ಮ್ಯಾನ್ಮಾರ್ ಹೊಣೆ ಎಂದ ಐಸಿಜೆ ತೀರ್ಪಿನ ಅರ್ಥವೇನು?

ರೋಹಿಂಗ್ಯಾ ಅಲ್ಪಸಂಖ್ಯಾತ ಸಮುದಾಯದ ನರಮೇಧಕ್ಕೆ ಮ್ಯಾನ್ಮಾರ್ ಹೊಣೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ...

ವಿಜಯಪುರ |ಜನರ ಕೆಲಸಕ್ಕೆ ಅಲೆದಾಡಿಸುವ ಅಧಿಕಾರಿಗಳ ನಿರ್ಲಕ್ಷ್ಯ ಸಹಿಸಲ್ಲ: ಉಪಲೋಕಾಯುಕ್ತ ಫಣೀಂದ್ರ ಎಚ್ಚರಿಕೆ

ಸಾರ್ವಜನಿಕರ ಅಗತ್ಯ ಸೇವೆಗಳನ್ನು ಸಕಾಲದಲ್ಲಿ ಒದಗಿಸದೇ, ಕರ್ತವ್ಯ ನಿರ್ವಹಣೆಯಲ್ಲಿ ವಿಳಂಬ ಮಾಡಿದರೆ...