ವಾರ್ಡ್ ಅಭಿವೃದ್ಧಿ, ಪಕ್ಷ ಸಂಘಟನೆಗೆ ಒತ್ತು: ಶಿವಮೊಗ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

Date:

ಯುವಕರ ಸಂಘಟನೆಗಾಗಿ ಭಾರತ್ ಜೋಡೋ ಯೋಜನೆ ಜಾರಿಗೊಳಿಸಲಾಗಿದೆ. ಯುವಕರಿಗೆ ಹುದ್ದೆಗಳನ್ನು ನೀಡುವ ಮೂಲಕ ಪಕ್ಷಕ್ಕೆ ಹೊಸ ಚೈತನ್ಯ ನೀಡುತ್ತಿದೆ. ಎಲ್ಲರೂ ಒಟ್ಟಾಗಿ ಪಕ್ಷ ಗಟ್ಟಿಗೊಳಿಸೋಣ, ಬಡವರ ಸೇವೆ ಮಾಡೋಣ, ಅಭಿವೃದ್ಧಿಗೆ ಸಹಕರಿಸೋಣ, ಜನರ ಪ್ರೀತಿ ಗಳಿಸೋಣ, ಸಿಕ್ಕಿರುವ ಅವಕಾಶಗಳನ್ನು ಬಳಸಿಕೊಂಡು ಸೇವೆ ಮಾಡಿ ಎಂದು ಹೇಳಿದರು.

- Advertisement -

ಶಿವಮೊಗ್ಗದ 17ನೇ ವಾರ್ಡ್ ಕಾಂಗ್ರೆಸ್ ವತಿಯಿಂದ ಇಂದು ಸೂಡಾ ಅಧ್ಯಕ್ಷ ಮಧುಸೂಧನ್ ಮತ್ತಿತರರಿಗೆ ಸನ್ಮಾನ ಹಾಗೂ ಕಾರ್ಯಕರ್ತರ ಸಭೆಯು ಬಾಲಾಜಿ ಕನ್ವೆನ್ಷನ್ ಹಾಲ್‌ನಲ್ಲಿ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ್, ಪಕ್ಷ ಯುವಕರಿಗೆ ಆದ್ಯತೆ ಕೊಡುತ್ತಿದೆ, ಹುದ್ದೆಗಳನ್ನು ನೀಡುತ್ತಿದೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಹಾಗೂ ಹಿಂದುಳಿದ ವರ್ಗಗಳ ರಾಜ್ಯ ಸಂಯೋಜಕ ಜಿ.ಡಿ. ಮಂಜುನಾಥ್, “ಪಕ್ಷ ಎಲ್ಲರನ್ನೂ ಗುರುತಿಸುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ. ಪಕ್ಷದ ಸಂಘಟನೆ ಮತ್ತಷ್ಟು ಗಟ್ಟಿಗೊಳ್ಳಬೇಕು. ಸೂಡಾದಿಂದ ಮತ್ತಷ್ಟು ಅಭಿವೃದ್ಧಿ ನಿರೀಕ್ಷೆ ಇದೆ. ಒಟ್ಟಾಗಿ 17ನೇ ವಾರ್ಡ್ನ ಅಭಿವೃದ್ಧಿಗೆ ಶ್ರಮಿಸೋಣ. ಅನುದಾನಗಳನ್ನು ಪಡೆಯೋಣ” ಎಂದರು.

“40 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ ನಿರ್ಮಾಣದ ವಿಚಾರದಲ್ಲಿ ವಿರೋಧ ಸರಿಯಲ್ಲ. ಸಾರ್ವಜನಿಕ ಬಳಕೆಗೆ ಆಗಬೇಕಾದ ಕಾಮಗಾರಿಯಲ್ಲಿ ಪಕ್ಷ ರಾಜಕಾರಣ ಮಾಡುತ್ತಿರುವುದು ಸರಿಯಲ್ಲ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳೋಣ. ಒಟ್ಟಾರೆ 17ನೇ ವಾರ್ಡ್ ಅಭಿವೃದ್ಧಿಗೆ ಶ್ರಮಿಸೋಣ” ಎಂದು ಕರೆ ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸೂಡಾ ಅಧ್ಯಕ್ಷ ಸಿ.ಜೆ ಮಧುಸೂಧನ್, “ಹೋರಾಟಗಳಿಂದ ಬೆಳೆದು ಬಂದವನು ನಾನು. ಹುದ್ದೆಗಳಿಗೆ ಆಸೆ ಪಟ್ಟವನಲ್ಲ. ಆದರೆ ಕಾಂಗ್ರೆಸ್ ನಾಯಕರು ನನಗೆ ಹುದ್ದೆ ನೀಡಿದ್ದಾರೆ. ಸೇವೆ ಮಾಡುತ್ತೇನೆ. ಹುದ್ದೆಯನ್ನು ಸೇವೆಗಾಗಿ ಬಳಸಿಕೊಳ್ಳುತ್ತೇನೆ. ಪ್ರೀತಿ ವಿಶ್ವಾಸಗಳೇ ಮುಖ್ಯ” ಎಂದರು.

“ಭಾರತ್ ಜೋಡೋ ಯುವ ಸಂಘಟನೆಯ ಸಮನ್ವಯ ಅಧಿಕಾರಿ ಗೀತೇಂದ್ರ ಗೌಡ ಹಾಗೂ ಹಿಂದುಳಿದ ವರ್ಗಗಳ ಮಹಿಳಾ ಸಂಘಟನೆಯ ಸಂಚಾಲಕಿ ಕವಿತಾ ರಾಥೋಡ್ ಮಾತನಾಡಿ, ಪಕ್ಷ ಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತೇನೆ. ಯುವಕರಿಗೆ ಜವಾಬ್ದಾರಿ ಕೊಡುತ್ತಿರುವು ಸ್ವಾಗತದ ವಿಷಯ” ಎಂದರು.

17ನೇ ವಾರ್ಡ್ ಅಧ್ಯಕ್ಷ ಹಾಗೂ ಕಾರ್ಯಕ್ರಮ ಸಂಯೋಜಕ ಆರ್. ರಾಜಶೇಖರ್ ಮಾತನಾಡಿ, “ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈಗಿನಿಂದಲೇ ತಯಾರು ಮಾಡಿಕೊಳ್ಳೋಣ, ಸಂಘಟನೆ ಗಟ್ಟಿಗೊಳಿಸೋಣ” ಎಂದರು.
ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್.ಟಿ.ಚಂದ್ರಶೇಖರ್, ಪ್ರಮುಖರಾದ ಮಾರ್ಟಿನ್, ಹಾಲಪ್ಪ, ವಿಜಯಕುಮಾರ್, ನಾಜೀಮಾ, ಮಂಜುನಾಥ್ ಬಾಬು, ರೈಲ್ವೆ ಪ್ರಸಾದ್, ರವಿಮಮ ಬೋರೆಗೌಡ, ಜಬಿಉಲ್ಲಾ ಹಮಿದ್ ಸೇರಿದಂತೆ ಹಲವರಿದ್ದರು.

ವಿಜಯ್‌ಕುಮಾರ್ ಪ್ರಾರ್ಥಿಸಿದರು. ಶಿವಕುಮಾರ್ ಸ್ವಾಗತಿಸಿ, ನಿರೂಪಿಸಿದರು. ಇದೇ ಸಂದರ್ಭದಲ್ಲಿ ಮಧುಸೂದನ್, ಗೀತೇಂದ್ರ ಗೌಡ ಹಾಗೂ ಕವಿತಾ ರಾಥೋಡ್ ಅವರನ್ನು ಸನ್ಮಾನಿಸಲಾಯಿತು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

RSS ಸಂಸ್ಥೆಗಳು ಆಯೋಜಿಸಿದ್ದ ಪರೀಕ್ಷೆಗೆ ಕೇರಳ ಹೈಕೋರ್ಟ್ ಸಮ್ಮತಿ; ಆದರೆ, ಫಲಿತಾಂಶ ಪ್ರಕಟಣೆಗೆ ತಡೆ

ಆರ್‌ಎಸ್‌ಎಸ್‌ ಸಂಯೋಜಿತ ಸಂಸ್ಥೆಗಳು ಆಯೋಜಿಸಿರುವ ಶಾಲಾ ಮಟ್ಟದ ವಿದ್ಯಾರ್ಥಿವೇತನ ಮಾದರಿಯ ಪರೀಕ್ಷೆಯು...

FICCI ಸಮಾವೇಶದ ಕಿಚ್ಚು: ತೆರಿಗೆ ರಿಯಾಯಿತಿ, ಉದ್ಯೋಗ ಸೃಷ್ಟಿ ಕುರಿತು ಮೋದಿ–ರಾಹುಲ್ ವಾಕ್ಸಮರ!

ಕಾರ್ಪೊರೇಟ್ ತೆರಿಗೆ ಕಡಿತದ ಲಾಭವನ್ನು ಉದ್ಯೋಗಿಗಳಿಗೆ ವರ್ಗಾಯಿಸದ ಉದ್ಯಮಗಳ ವಿರುದ್ಧ ಪ್ರಧಾನಿ...

ಬಸವಣ್ಣ ಅವಹೇಳನ: ಪರಾರಿಯಾಗಲು ಯತ್ನ; ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ಬಂಧನ

12ನೇ ಶತಮಾನದ ಮಹಾನ್ ಸಮಾಜ ಸುಧಾರಕ ವಿಶ್ವಗುರು ಬಸವಣ್ಣನವರ ಕುರಿತು ತಮ್ಮ...