ವಿಜಯಪುರ | ಅಂತರಶಾಲಾ ಕ್ರೀಡಾಕೂಟ ಸಮಾರೋಪ: ವಿಜೇತ ತಂಡಗಳ ಪಟ್ಟಿ ಪ್ರಕಟ

Date:

ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ.ಎಂ ಪಾಟೀಲ ಪಬ್ಲಿಕ್(ಸಿ.ಬಿ.ಎಸ್.ಇ) ಶಾಲೆಯಲ್ಲಿ ನಡೆದ ಮೂರು ದಿನಗಳ ಅಂತರಶಾಲಾ ಕ್ರೀಡಾಕೂಟ ಶುಕ್ರವಾರ ಮುಕ್ತಾಯವಾಯಿತು. ವಿಜಯಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ನಾನಾ ಶಿಕ್ಷಣ ಸಂಸ್ಥೆಗಳ ಸಿ.ಬಿ.ಎಸ್.ಇ ಮತ್ತು ಐ.ಸಿ.ಎಸ್.ಇ ಶಾಲಾ ತಂಡಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು. ಬಾಸ್ಕೆಟ್‌ಬಾಲ್, ಥ್ರೋಬಾಲ್, ಫುಟ್‌ಬಾಲ್ ಹಾಗೂ ಕ್ರಿಕೆಟ್ ಪಂದ್ಯಗಳು ಈ ಕ್ರೀಡಾಕೂಟದಲ್ಲಿ ನಡೆದವು.

- Advertisement -

ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಅಂತಾರಾಷ್ಟ್ರೀಯ ಯೋಗ ತರಬೇತುದಾರ ಮಡಿವಾಳಪ್ಪ ದೊಡಮನಿ, ಬಿ.ಎಲ್.ಡಿ.ಇ. ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಎಸ್.ಎಸ್ ಕೋರಿ, ಶಾಲೆಯ ಪ್ರಭಾರಿ ಪ್ರಾಚಾರ್ಯೆ ವಸುಧಾ ನಾರ್ವೇಕರ ಹಾಗೂ ಹಿರಿಯ ಸಂಯೋಜಕಿ ದೀಪಾ ಜಂಬೂರೆ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬರಗಾಲ | ಮಳೆಯ ಕೊರತೆಗೆ ಬತ್ತಿದ ಕಾಡಿನ ಕೆರೆಗಳು:...

ಮಳೆ ನಿಂತರೆ ಕೆರೆಗಳು ಬತ್ತುತ್ತವೆ, ಕೆರೆಗಳು ಬತ್ತಿದರೆ ಅಂತರ್ಜಲ ಕುಸಿಯುತ್ತದೆ, ಅಂತರ್ಜಲ ಕುಸಿದರೆ ಅರಣ್ಯದ ಜೀವನಾಡಿಗಳೇ ದುರ್ಬಲವಾಗುತ್ತವೆ. ಇದರ ಪರಿಣಾಮ ಮನುಷ್ಯರಿಗಷ್ಟೇ ಸೀಮಿತವಾಗುವುದಿಲ್ಲ. ಕಾಡಿನಲ್ಲಿರುವ ಆನೆ, ಹುಲಿ, ಚಿರತೆ, ಕಾಡೆಮ್ಮೆ, ಜಿಂಕೆ ಸೇರಿದಂತೆ...

ಕಡಲಿಗೆ ಲಕ್ಷಾಂತರ ಬಂಡವಾಳ, ಗಡಿಯಲ್ಲಿ ದಂಡ: ಕೇಳುವವರಿಲ್ಲ ಕರಾವಳಿ...

ಸಮುದ್ರದ ಅಲೆಗಳ ನಡುವೆ ಜೀವದ ಹಂಗು ತೊರೆದು, ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಮೀನುಗಾರಿಕೆಗೆ ತೆರಳುವ ಮೀನುಗಾರರ ಬದುಕು ಈಗ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಒಂದು ಕಡೆ ಸಮುದ್ರದ ಅಪಾಯ, ಮತ್ತೊಂದು ಕಡೆ...

ರಾಜಕೀಯದ ಅಂಧಾನುಸರಣೆ ಮತ್ತು ಮನೋವಿಜ್ಞಾನ — ಮೋದಿ ಆಡಳಿತ...

ರಾಜಕೀಯ ನಾಯಕನ ನಿರ್ಧಾರವನ್ನು ಪ್ರಶ್ನಿಸಿದರೆ ತನ್ನದೇ ಗುಂಪಿನವರು ವಿರೋಧಿಸಬಹುದು, ಅಪಹಾಸ್ಯ ಮಾಡಬಹುದು ಅಥವಾ ತನ್ನ ರಾಜಕೀಯ ನಿಷ್ಠೆ, ದೇಶಪ್ರೇಮ ಹಾಗೂ ಧರ್ಮನಿಷ್ಠೆಯ ಬಗ್ಗೆ ಅನುಮಾನ ವ್ಯಕ್ತಪಡಿಸಬಹುದು ಎಂಬ ಭಯದಿಂದ ಕೆಲವರು ಮೌನವಾಗಿರಬಹುದು. ಇನ್ನೂ...

ಈ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳ ಮಾಹಿತಿ ಇಲ್ಲಿದೆ .

  • ಬಾಸ್ಕೆಟ್‌ಬಾಲ್ ಬಾಲಕಿಯರ ವಿಭಾಗ : ಶ್ರೀ ಬಿ. ಎಂ. ಪಾಟೀಲ್ ಪಬ್ಲಿಕ್ ಸ್ಕೂಲ್(ಸಿ.ಬಿ.ಎಸ್.ಸಿ) ವಿಜಯಪುರ ಪ್ರಥಮ ಸ್ಥಾನ, ಲೊಯೋಲ ಪಬ್ಲಿಕ್ ಸ್ಕೂಲ್(ಸಿ.ಬಿ.ಎಸ್.ಸಿ) ಸಿಂದಗಿ ದ್ವಿತೀಯ ಸ್ಥಾನ.
  • ಬಾಸ್ಕೆಟ್‌ಬಾಲ್ ಬಾಲಕರ ವಿಭಾಗ : ಲೊಯೋಲ ಪಬ್ಲಿಕ್ ಸ್ಕೂಲ್(ಸಿ.ಬಿ.ಎಸ್.ಸಿ) ಸಿಂದಗಿ ಪ್ರಥಮ ಸ್ಥಾನ, ಶ್ರೀ ಬಿ.ಎಂ. ಪಾಟೀಲ್ ಪಬ್ಲಿಕ್ ಸ್ಕೂಲ್ (ಸಿ.ಬಿ.ಎಸ್.ಸಿ) ವಿಜಯಪುರ ದ್ವಿತೀಯ ಸ್ಥಾನ.
  • ಥ್ರೋಬಾಲ್ : ಶಾರದಾ ಪಬ್ಲಿಕ್ ಸ್ಕೂಲ್ (ಸಿ.ಬಿ.ಎಸ್.ಸಿ) ವಿಜಯಪುರ ಪ್ರಥಮ ಸ್ಥಾನ, ಶ್ರೀ ಬಿ. ಎಂ. ಪಾಟೀಲ್ ಪಬ್ಲಿಕ್ ಸ್ಕೂಲ್ (ಸಿ.ಬಿ.ಎಸ್.ಸಿ) ವಿಜಯಪುರ ದ್ವಿತೀಯ ಸ್ಥಾನ.
  • ಫುಟ್‌ಬಾಲ್ : ತುಂಗಳ ಪಬ್ಲಿಕ್ ಸ್ಕೂಲ್ (ಸಿ.ಬಿ.ಎಸ್.ಸಿ) ವಿಜಯಪುರ ಪ್ರಥಮ ಸ್ಥಾನ, ಸಂಗನಬಸವ ಅಂತಾರಾಷ್ಟ್ರೀಯ ವಸತಿ ಶಾಲೆ (ಸಿ.ಬಿ.ಎಸ್.ಸಿ) ಕವಲಗಿ ದ್ವಿತೀಯ ಸ್ಥಾನ.
  • ಕ್ರಿಕೆಟ್ : ಶಾರದಾ ಪಬ್ಲಿಕ್ ಸ್ಕೂಲ್ (ಸಿ.ಬಿ.ಎಸ್.ಸಿ) ವಿಜಯಪುರ ಪ್ರಥಮ ಸ್ಥಾನ, ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಸ್ಕೂಲ್(ಸಿ.ಬಿ.ಎಸ್.ಇ) ದ್ವಿತೀಯ ಸ್ಥಾನ.

ಮಡಿವಾಳಪ್ಪ ದೊಡಮನಿ ಮಾತನಾಡಿ, ಕ್ರೀಡಾಪಟುಗಳ ಸಾಧನೆಯಲ್ಲಿ ತರಬೇತುದಾರರ ಪಾತ್ರ ಮಹತ್ವದ್ದಾಗಿದೆ. ತರಬೇತುದಾರರ ಸೂಕ್ತ ಮಾರ್ಗದರ್ಶನ, ತಂತ್ರಗಾರಿಕೆ ಹಾಗೂ ತರಬೇತಿಯು ಸ್ಪರ್ಧಾಳುಗಳನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಶಾಲೆಯ ಪ್ರಭಾರ ಪ್ರಾಚಾರ್ಯೆ ವಸುಧಾ ನಾರ್ವೇಕರ ಮಾತನಾಡಿ, ಕ್ರೀಡೆಯಲ್ಲಿ ಗೆಲುವು ಸಾಧನೆಯ ಸಂಕೇತವಾದರೆ, ಸೋಲು ಮುಂದಿನ ಯಶಸ್ಸಿಗೆ ದಾರಿದೀಪವಾಗಿದೆ. ಕ್ರೀಡೆಗಳು ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ನಾಯಕತ್ವ, ಶಿಸ್ತು, ಸಹನೆ, ಪರಸ್ಪರ ಗೌರವ ಹಾಗೂ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸುತ್ತವೆ. ಗೆದ್ದಾಗ ಅತಿಯಾಗಿ ಸಂಭ್ರಮಿಸದೆ, ಸೋತಾಗ ಎದೆಗುಂದದೆ ಮುಂದಿನ ಸಾಧನೆಯತ್ತ ಸಾಗಬೇಕು ಎಂದು ಹೇಳಿದರು.

ಶಾಲೆಯ ಹಿರಿಯ ಸಂಯೋಜಕಿ ದೀಪಾ ಜಂಬೂರೆ ಮಾತನಾಡಿ, ಕ್ರೀಡೆಗಳು ವಿದ್ಯಾರ್ಥಿಗಳು ದೈಹಿಕ ಮತ್ತು ಮಾನಸಿಕವಾಗಿ ಉತ್ತಮ ಆರೋಗ್ಯವನ್ನು ಹೊಂದಲು ಪ್ರೋತ್ಸಾಹ ನೀಡುತ್ತವೆ ಎಂದು ಹೇಳಿದರು.

ಶೋಭಾ ಬಗಲಿ ಮತ್ತು ಅರುಣಾ ಹೊನವಾಡ ನಿರೂಪಿಸಿದರು. ಮೀರ್ ದಾದಾ ನೂರೆನ್ ಸ್ವಾಗತಿಸಿದರು. ಪ್ರೀತಿ ಪವಾರ ವಂದಿಸಿದರು. ಶಾಲೆಯ ಮುಖ್ಯ ದೈಹಿಕ ಶಿಕ್ಷಕ ಸ್ಯಾಮಸನ್ ಸೌಜಾ, ದೈಹಿಕ ಶಿಕ್ಷಕರಾದ ಸುನೀತಾ ಪತ್ತಾರ ಮತ್ತು ಸಂಗಪ್ಪ ಅಲಮೇಲ, ಶಾಲೆ ಬೋಧಕ ಹಾಗೂ ಬೋಧಕರ ಹೊರತಾದ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರದ್ದಾದ ವಿಮಾನಗಳಿಗೂ ಟಿಕೆಟ್ ಮಾರಾಟ, ರೀಫಂಡ್‌ಗಾಗಿ ಪರದಾಟ: ಸಂಕಷ್ಟದಲ್ಲಿ ಸ್ಪೈಸ್‌ಜೆಟ್

ತೀವ್ರ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಅಗ್ಗದ ದರದ ವಿಮಾನಯಾನ ಸಂಸ್ಥೆ...

ಎಸ್‌ಐಆರ್ ನಡುವೆ ದೆಹಲಿ ಮುಖ್ಯ ಚುನಾವಣಾ ಅಧಿಕಾರಿ ಜಮ್ಮು ಕಾಶ್ಮೀರಕ್ಕೆ ವರ್ಗಾವಣೆಗೊಂಡಿದ್ದೇಕೆ?

ದೆಹಲಿ ಸಿಇಒ ಕಚೇರಿಯು ಈ ವರ್ಗಾವಣೆಯನ್ನು ಕೇವಲ 'ಸಾಮಾನ್ಯ ಆಡಳಿತಾತ್ಮಕ ಪ್ರಕ್ರಿಯೆ'...

ಹಕ್ಕಿ ಜ್ವರಕ್ಕೆ ಭಾರತದ ಮೊದಲ ಲಸಿಕೆ ಬಿಡುಗಡೆ; 1 ರೂ. ಅಥವಾ 2 ರೂ.ಗೆ ಲಭ್ಯ!

ಕೋಳಿಗಳಿಗೆ ಮಾರಕವಾಗಿರುವ ಹಕ್ಕಿ ಜ್ವರವನ್ನು ತಡೆಗಟ್ಟುವ ದೇಶದ ಮೊಟ್ಟಮೊದಲ ಸ್ವದೇಶಿ ‘H5N1’...

ಸಾಮೂಹಿಕ ರಾಜೀನಾಮೆ ಸುದ್ದಿ ಸುಳ್ಳು: ಗೈಡೆನ್ಸ್ ತಮಿಳುನಾಡು ಸ್ಪಷ್ಟನೆ!

ತಮಿಳುನಾಡು ಸರ್ಕಾರದ ಪ್ರಮುಖ ಹೂಡಿಕೆ ಪ್ರಚಾರ ಸಂಸ್ಥೆಯಾದ 'ಗೈಡೆನ್ಸ್ ತಮಿಳುನಾಡು' ಸಂಸ್ಥೆಯಲ್ಲಿ...