FICCI ಸಮಾವೇಶದ ಕಿಚ್ಚು: ತೆರಿಗೆ ರಿಯಾಯಿತಿ, ಉದ್ಯೋಗ ಸೃಷ್ಟಿ ಕುರಿತು ಮೋದಿ–ರಾಹುಲ್ ವಾಕ್ಸಮರ!

Date:

ಕಾರ್ಪೊರೇಟ್ ತೆರಿಗೆ ಕಡಿತದ ಲಾಭವನ್ನು ಉದ್ಯೋಗಿಗಳಿಗೆ ವರ್ಗಾಯಿಸದ ಉದ್ಯಮಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ, ಪ್ರಧಾನಿ ಮತ್ತು ವಿರೋಧ ಪಕ್ಷದ ನಾಯಕರ ನಡುವೆ ವಾಕ್ಸಮರ ನಡೆದಿದೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿ ಹೇಳಿಕೆಯನ್ನು “ಸ್ವಂತ ತಪ್ಪೊಪ್ಪಿಗೆ” ಎಂದು ಬಣ್ಣಿಸಿದ್ದು, ಸರ್ಕಾರದ ಆರ್ಥಿಕ ನೀತಿಗಳನ್ನು ಟೀಕಿಸಿದ್ದಾರೆ.

- Advertisement -

ನವದೆಹಲಿಯಲ್ಲಿ ನಡೆದ ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (FICCI) ವಾರ್ಷಿಕ ಸರ್ವಸದಸ್ಯರ ಸಭೆ ಮತ್ತು ಶತಮಾನೋತ್ಸವ ಸಮಾವೇಶದಲ್ಲಿ ಗುರುವಾರ ಮಾತನಾಡಿದ ಪ್ರಧಾನಿ ಮೋದಿ, ವ್ಯಾಪಾರ ವಾತಾವರಣ ಸುಧಾರಿಸಲು ಸರ್ಕಾರ ಕೈಗೊಂಡ ತೆರಿಗೆ ರಿಯಾಯಿತಿಗಳು ಮತ್ತು ಇತರ ಕ್ರಮಗಳನ್ನು ಉಲ್ಲೇಖಿಸಿದರು.  2014ರ ನಂತರ ಕಾರ್ಪೊರೇಟ್ ತೆರಿಗೆ ದರವನ್ನು ಶೇ. 30ರಿಂದ ಶೇ. 22ಕ್ಕೆ ಇಳಿಸಲಾಗಿದೆ ಎಂದು ಉಲ್ಲೇಖಿಸಿದರು. ಈ ತೆರಿಗೆ ಕಡಿತದ ಲಾಭವನ್ನು ಉದ್ಯಮಗಳು ತಮ್ಮ ಉದ್ಯೋಗಿಗಳಿಗೆ ತಲುಪಿಸಿಲ್ಲ ಎಂದು ಪ್ರಧಾನಿ ಅಸಮಾಧಾನ ವ್ಯಕ್ತಪಡಿಸಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕಡಲಿಗೆ ಲಕ್ಷಾಂತರ ಬಂಡವಾಳ, ಗಡಿಯಲ್ಲಿ ದಂಡ: ಕೇಳುವವರಿಲ್ಲ ಕರಾವಳಿ...

ಸಮುದ್ರದ ಅಲೆಗಳ ನಡುವೆ ಜೀವದ ಹಂಗು ತೊರೆದು, ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ಮೀನುಗಾರಿಕೆಗೆ ತೆರಳುವ ಮೀನುಗಾರರ ಬದುಕು ಈಗ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಒಂದು ಕಡೆ ಸಮುದ್ರದ ಅಪಾಯ, ಮತ್ತೊಂದು ಕಡೆ...

ರಾಜಕೀಯದ ಅಂಧಾನುಸರಣೆ ಮತ್ತು ಮನೋವಿಜ್ಞಾನ — ಮೋದಿ ಆಡಳಿತ...

ರಾಜಕೀಯ ನಾಯಕನ ನಿರ್ಧಾರವನ್ನು ಪ್ರಶ್ನಿಸಿದರೆ ತನ್ನದೇ ಗುಂಪಿನವರು ವಿರೋಧಿಸಬಹುದು, ಅಪಹಾಸ್ಯ ಮಾಡಬಹುದು ಅಥವಾ ತನ್ನ ರಾಜಕೀಯ ನಿಷ್ಠೆ, ದೇಶಪ್ರೇಮ ಹಾಗೂ ಧರ್ಮನಿಷ್ಠೆಯ ಬಗ್ಗೆ ಅನುಮಾನ ವ್ಯಕ್ತಪಡಿಸಬಹುದು ಎಂಬ ಭಯದಿಂದ ಕೆಲವರು ಮೌನವಾಗಿರಬಹುದು. ಇನ್ನೂ...

ವೀರಪ್ಪ ಮೊಯ್ಲಿ ಹೇಳಿಕೆ- ಕಾಂಗ್ರೆಸ್‌ನ ರಾಜಕೀಯ ನಿರ್ಧಾರಗಳ ನೆರಳಲ್ಲಿ...

ಮೊಯ್ಲಿ ಅವರ ಹೇಳಿಕೆಯ ಮತ್ತೊಂದು ಪ್ರಮುಖ ಭಾಗ ಪಕ್ಷದ ಆಂತರಿಕ ಸುಧಾರಣೆಗೆ ಸಂಬಂಧಿಸಿದೆ. ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಪಕ್ಷವನ್ನು ಭವಿಷ್ಯದ ರಾಜಕೀಯ ಸವಾಲುಗಳಿಗೆ ಸಿದ್ಧಗೊಳಿಸಲು ಮಹತ್ವದ ಬದಲಾವಣೆಗಳನ್ನು ತರಲು ಬಯಸಿದ್ದರು;...

“ನೀವು ನಿಮ್ಮ ಉದ್ಯೋಗಿಗಳ ವೇತನವನ್ನು ಹೆಚ್ಚಿಸಿದ್ದೀರಾ? ನಿಮ್ಮ ಸಂಸ್ಥೆಗಳಲ್ಲಿ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಿದ್ದೀರಾ? ಇಲ್ಲ,” ಎಂದು ಮೋದಿ ಪ್ರಶ್ನಿಸಿದರು. ಉದ್ಯಮ ನಾಯಕರ ಹಸಿವು ಎಷ್ಟು ತಣಿಯಲಾರದ್ದಾಗಿದೆ ಎಂದರೆ, ಎಷ್ಟೇ ನೀಡಿದರೂ ಅವರಿಗೆ ಸಾಲುವುದಿಲ್ಲ ಎಂದು ಪ್ರಧಾನಿ ಹೇಳಿದ್ದರು. 2019ರಲ್ಲಿ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಖಾಸಗಿ ಹೂಡಿಕೆಯನ್ನು ಆಕರ್ಷಿಸಲು ಕೇಂದ್ರ ಸರ್ಕಾರ ಕಾರ್ಪೊರೇಟ್ ತೆರಿಗೆಯಲ್ಲಿ ಈ ಭಾರಿ ಕಡಿತವನ್ನು ಜಾರಿಗೆ ತಂದಿತ್ತು. ಆದರೆ, ಕಂಪನಿಗಳು ಈ ಉಳಿತಾಯವನ್ನು ಲಾಭಾಂಶ ಹೆಚ್ಚಿಸಿಕೊಳ್ಳಲು ಮತ್ತು ಸಾಲ ತೀರಿಸಲು ಬಳಸಿಕೊಂಡಿವೆಯೇ ಹೊರತು, ಹೊಸ ಉದ್ಯೋಗ ಸೃಷ್ಟಿ ಅಥವಾ ವೇತನ ಹೆಚ್ಚಳಕ್ಕೆ ಬಳಸಿಲ್ಲ ಎಂಬ ಚರ್ಚೆ ಆರ್ಥಿಕ ವಲಯದಲ್ಲಿ ಮೊದಲಿನಿಂದಲೂ ಇದೆ.

ಶುಕ್ರವಾರ ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, ಮೋದಿ ಮಾತುಗಳು ಕಾರ್ಪೊರೇಟ್ ನಾಯಕರ ವಿರುದ್ಧದ ಆರೋಪಗಳಲ್ಲ, ಬದಲಾಗಿ “ಅವು ನಿಮ್ಮದೇ ತಪ್ಪೊಪ್ಪಿಗೆ” ಎಂದು ಟೀಕಿಸಿದರು. ಉದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು, “ಯಾರಿಗೆ ಹಸಿವಿದೆ ಎಂಬುದು ಇಡೀ ದೇಶಕ್ಕೆ ತಿಳಿದಿದೆ” ಎಂದರು.

“ವಿಮಾನ ನಿಲ್ದಾಣಗಳು, ಬಂದರುಗಳು, ಗಣಿಗಳು, ಅರಣ್ಯಗಳು, ವಿದ್ಯುತ್, ಕಲ್ಲಿದ್ದಲು, ರಸ್ತೆಗಳು – ಎಲ್ಲವನ್ನೂ ಅವರಿಗೆ ಹಸ್ತಾಂತರಿಸಲಾಗಿದೆ. ಅವುಗಳಿಂದ ಎಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ?” ಎಂದು ಗಾಂಧಿ ಪ್ರಶ್ನಿಸಿದರು. ನೋಟು ಅಮಾನ್ಯೀಕರಣ ಮತ್ತು “ದೋಷಪೂರಿತ” ಸರಕು ಮತ್ತು ಸೇವಾ ತೆರಿಗೆ (GST) ಜಾರಿಯ ಮೂಲಕ ಮೋದಿ ಸರ್ಕಾರವು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ನಾಶಪಡಿಸಿದೆ ಎಂದು ರಾಹುಲ್ ಆರೋಪಿಸಿದರು.

ದೊಡ್ಡ ಕಂಪನಿಗಳಿಗೆ ಇದ್ದ ಸಮಾನ ಸ್ಪರ್ಧಾತ್ಮಕ ವಾತಾವರಣವನ್ನು ಬಿಜೆಪಿ ಸರ್ಕಾರ ಅಳಿಸಿಹಾಕಿದೆ ಎಂದು ದೂರಿದ ರಾಹುಲ್ ಗಾಂಧಿ, “ಏಕಸ್ವಾಮ್ಯವು ಉದ್ಯೋಗಗಳನ್ನು ಸೃಷ್ಟಿಸುವುದಿಲ್ಲ. ಅದು ಬೆಲೆಗಳನ್ನು ಹೆಚ್ಚಿಸುತ್ತದೆ ಮತ್ತು ಸ್ಪರ್ಧೆಯನ್ನು ಕೊನೆಗೊಳಿಸುತ್ತದೆ. ಮೋದಿ ಜೀ, ನೀವೂ ಮತ್ತು ನಿಮ್ಮ ಸ್ನೇಹಿತರು ಲೂಟಿ ಮಾಡಿದ್ದೀರಿ‌, ದೇಶವು ಅದನ್ನು ನೋಡಿದೆ ಮತ್ತು ಈಗಲೂ ನೋಡುತ್ತಿದೆ,” ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿಯವರು “ತಮ್ಮ ಸ್ವಂತ ವೈಫಲ್ಯಗಳಿಗೆ ಉದ್ಯಮ ಸಮುದಾಯವನ್ನು ದೂಷಿಸುತ್ತಿದ್ದಾರೆ” ಎಂದು ಹೇಳಿದರು. ಮೋದಿ ಸರ್ಕಾರವು ದೇಶದ ಎಲ್ಲಾ ಸಂಪನ್ಮೂಲಗಳನ್ನು ಒಂದೆರಡು ಆಪ್ತ ಬಂಡವಾಳಶಾಹಿಗಳಿಗೆ ಹಸ್ತಾಂತರಿಸಿ, ಸಣ್ಣ ವ್ಯಾಪಾರಿಗಳು ಮತ್ತು ಎಂಎಸ್‌ಎಂಇಗಳ ಬೆನ್ನೆಲುಬನ್ನು ಮುರಿದಿದೆ ಎಂದು ಖರ್ಗೆ ಆರೋಪಿಸಿದರು. “ಆರೋಗ್ಯಕರ ಸ್ಪರ್ಧೆಯ ಕೊರತೆಯು ನಾವೀನ್ಯತೆಯನ್ನು ಹತ್ತಿಕ್ಕಿದೆ, ಉತ್ಪಾದನಾ ಗುಣಮಟ್ಟವನ್ನು ರಾಜಿ ಮಾಡಿಕೊಂಡಿದೆ ಮತ್ತು ಭಾರತೀಯ ಉತ್ಪನ್ನಗಳ ವಿಶ್ವಾಸಾರ್ಹತೆ ಹಾಗೂ ಜಾಗತಿಕ ಬ್ರಾಂಡ್ ಮೌಲ್ಯವನ್ನು ದುರ್ಬಲಗೊಳಿಸಿದೆ,” ಎಂದು ಅವರು ಅಭಿಪ್ರಾಯಪಟ್ಟರು.

ಇನ್ನು FICCI ಕಾರ್ಯಕ್ರಮದಲ್ಲಿ ಪ್ರೇಕ್ಷಕರಿಂದ ಚಪ್ಪಾಳೆ ಸಿಗದ ಕುರಿತು ಮೋದಿ ನೀಡಿದ ಹೇಳಿಕೆಗೂ ಕಾಂಗ್ರೆಸ್ ನಾಯಕ ಕುಟುಕಿದರು. ಸರ್ಕಾರದ ನೀತಿಗಳಿಂದಾಗಿ ಉದ್ಯಮಪತಿಗಳು, ಸಣ್ಣ ವ್ಯಾಪಾರಿಗಳು, ಬಡವರು, ಮಧ್ಯಮ ವರ್ಗ ಮತ್ತು ನಿರುದ್ಯೋಗಿ ಯುವಜನರಿಗೆ ಚಪ್ಪಾಳೆ ತಟ್ಟಲು ಯಾವುದೇ ಕಾರಣ ಉಳಿದಿಲ್ಲ ಎಂದು ಅವರು ಹೇಳಿದರು.

“ನಿಮ್ಮ ನೀತಿಗಳು ಚಪ್ಪಾಳೆ ತಟ್ಟುವಂಥ ಯಾರನ್ನೂ ಉಳಿಸಿಲ್ಲ — ಉದ್ಯಮಪತಿಗಳೂ ಇಲ್ಲ, ಸಣ್ಣ ವ್ಯಾಪಾರಿಗಳೂ ಇಲ್ಲ, ಹಣದುಬ್ಬರದಿಂದ ಬಳಲುತ್ತಿರುವ ಬಡವರು ಮತ್ತು ಮಧ್ಯಮ ವರ್ಗವೂ ಇಲ್ಲ, ನಿರುದ್ಯೋಗಿ ಯುವಜನರೂ ಇಲ್ಲ. ನಿಮ್ಮ ಚಪ್ಪಾಳೆ ಮತ್ತು ತಟ್ಟೆ ಬಡಿಯುವುದನ್ನು ನಿಮ್ಮಲ್ಲಿ ಉಳಿದಿರುವ ಅನುಯಾಯಿಗಳಿಂದಲೇ ಪಡೆದುಕೊಳ್ಳಿ,” ಎಂದು ಗಾಂಧಿ ಹೇಳಿದರು.

ಸರ್ಕಾರದ ಆರ್ಥಿಕ ಸಾಧನೆ, ಉದ್ಯೋಗಗಳ ಗುಣಮಟ್ಟ ಹಾಗೂ ತೆರಿಗೆ ರಿಯಾಯಿತಿಗಳು ಮತ್ತು ಇತರ ಪ್ರೋತ್ಸಾಹಕಗಳು ಹೂಡಿಕೆ ಮತ್ತು ವೇತನ ಬೆಳವಣಿಗೆಯಾಗಿ ಯಾವ ಮಟ್ಟಿಗೆ ಬದಲಾಗಿವೆ ಎಂಬ ಕುರಿತ ವಿಶಾಲ ರಾಜಕೀಯ ಚರ್ಚೆಯ ನಡುವೆ ಈ ವಾಗ್ವಾದ ನಡೆದಿದೆ.

ಕಾರ್ಪೊರೇಟ್ ತೆರಿಗೆ ಕಡಿತದ ನಂತರ ಖಾಸಗಿ ವಲಯದ ಹೂಡಿಕೆ ಮತ್ತು ವೇತನ ಬೆಳವಣಿಗೆಯ ಕುರಿತು ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವೆ ವಿಭಿನ್ನ ದೃಷ್ಟಿಕೋನಗಳಿವೆ. ತೆರಿಗೆ ಕಡಿತ ನೀತಿಯ ಲಾಭವು ಕೇವಲ ಕೆಲವೇ ದೊಡ್ಡ ಉದ್ಯಮ ಸಮೂಹಗಳಿಗೆ ಸೀಮಿತವಾಗಿದೆ ಮತ್ತು ಸಣ್ಣ ಉದ್ಯಮಗಳು ಸಂಕಷ್ಟಕ್ಕೆ ಸಿಲುಕಿವೆ ಎಂಬುದು ವಿರೋಧ ಪಕ್ಷಗಳ ಪ್ರಮುಖ ವಾದವಾಗಿದೆ. ಈ ಬೆಳವಣಿಗೆಯು ಮುಂಬರುವ ದಿನಗಳಲ್ಲಿ ದೇಶದ ಆರ್ಥಿಕ ನೀತಿ ಮತ್ತು ಉದ್ಯೋಗ ಸೃಷ್ಟಿಯ ಕುರಿತಾದ ರಾಜಕೀಯ ಚರ್ಚೆಗಳನ್ನು ಮತ್ತಷ್ಟು ತೀವ್ರಗೊಳಿಸುವ ಸಾಧ್ಯತೆಯಿದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ಸೇವೆಗೆ ಮನ್ನಣೆ: ಯೆನೆಪೋಯ ಪದವಿ ಕಾಲೇಜಿನ ಮೂವರಿಗೆ ರಾಜ್ಯ ಪ್ರಶಸ್ತಿ

ಯೆನೆಪೋಯ (ಪರಿಗಣಿತ) ವಿಶ್ವವಿದ್ಯಾಲಯದ ಘಟಕ ಸಂಸ್ಥೆಯಾದ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್,...

ಸ್ಟಾಲಿನ್ ಮಣಿಸಿದ್ದ ಶಾಸಕ ನಿಧನ: ಉಪಚುನಾವಣೆಯಲ್ಲಿ ಮತ್ತೆ ಅದೃಷ್ಟ ಪರೀಕ್ಷೆಗಿಳಿಯುವರೇ ಡಿಎಂಕೆ ಅಧ್ಯಕ್ಷ?

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಮುಖ್ಯಸ್ಥ ಹಾಗೂ ಅಂದಿನ ಮುಖ್ಯಮಂತ್ರಿ ಎಂ.ಕೆ....

15,000 ಸರ್ಕಾರಿ ಶಾಲಾ ಶಿಕ್ಷಕರ ನೇಮಕಾತಿ: ಸ್ಪರ್ಧಾತ್ಮಕ ಪರೀಕ್ಷೆಯ ದಿನಾಂಕ ಪ್ರಕಟ

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 15,000 ಪದವೀಧರ ಪ್ರಾಥಮಿಕ ಶಾಲಾ...

ನಾಗಾವಿ ಪಿ.ಎಮ್.ಶ್ರೀ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಅರಿವು ಕಾಯಕ್ರಮ

ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಅರಿವು ಕಾಯಕ್ರಮವನ್ನು ಜಿಲ್ಲಾ ಪಂಚಾಯತ್, ಮಕ್ಕಳ...