ತುಮಕೂರು | ಬಲಿತವರು ಬಡ ದಲಿತರನ್ನು ಇನ್ನೂ ಕೈಯೊಡ್ಡುವ ಪರಿಸ್ಥಿತಿಯಲ್ಲಿಯೇ ಇಟ್ಟಿದ್ದಾರೆ : ಎಚ್. ಡಿ. ಕುಮಾರಸ್ವಾಮಿ

Date:

ಬಲಿತ ದಲಿತ ಎಂದು ನನ್ನ ವಿರುದ್ಧ ಪೋಸ್ಟರ್ಗಳನ್ನು ಅಂಟಿಸುತ್ತಿರುವ ಕಿಡಿಗೇಡಿಗಳು ಮೊದಲು ಚಿ.ನಾ.ರಾಮು ಅವರು ಬರೆದಿರುವ ‘ಬಲಿತ ದಲಿತ ತುಳಿತ; ನನ್ನ ಜನ ಅನಾಥ’ ಎನ್ನುವ ಪುಸ್ತಕವನ್ನು ಮೊದಲು ಓದಲಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.

- Advertisement -

ಗುಬ್ಬಿ ತಾಲೂಕಿನ ಸಿ.ಎಸ್. ಪುರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು; ಬಲಿತ ದಲಿತ ಎನ್ನುವ ಪದ ಪ್ರಯೋಗವನ್ನು ನಾನು ಮಾಡಿದ್ದಲ್ಲ. ಕಳೆದ 78 ವರ್ಗಗಳಿಂದ ಮೀಸಲಾತಿ ಸೌಲಭ್ಯದಿಂದ ವಂಚಿತರಾಗಿರುವ ಅತ್ಯಂತ ದುರ್ಬಲರ ಮತ್ತು ಶೋಷಿತರ ಬಗ್ಗೆ ಬಳಸಿರುವ ಪದವಿದು. ಈಗ ಬಲಿತ ದಲಿತ ಎಂದು ಬೇಜಾರು ಮಾಡಿಕೊಳ್ಳುತ್ತಿರುವವರಿಗೆ ದಲಿತ ಎನ್ನುವ ಪದ ಸೂಕ್ತ ಆಗುವುದಿಲ್ಲ ಎಂದರು. 

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಿತ್ತನೆ ಗುರಿ ಅರ್ಧದಷ್ಟೂ ಮುಟ್ಟದ ಕೃಷಿ ಚಟುವಟಿಕೆ; ಜೋಳದ...

ಮುಂಗಾರು ಮಳೆ ಕೈಕೊಟ್ಟು ಬೆಳೆ ನಷ್ಟದಿಂದ ಕಂಗೆಟ್ಟ ಅನ್ನದಾತರಿಗೆ ಹಿಂಗಾರು ಹಂಗಾಮಿನಲ್ಲಾದರೂ ಮಳೆ ಆಸರೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ರೈತರ ಆ ನಿರೀಕ್ಷೆಯೂ ಹುಸಿಯಾಗಿದೆ. ಮುಂಗಾರಿನ ಬೆನ್ನಲ್ಲೇ ಹಿಂಗಾರು ಹಂಗಾಮಿನಲ್ಲೂ ಮಳೆ ಕೈಕೊಟ್ಟಿರುವುದರಿಂದ...

ಧಾರವಾಡದ ‘ಲಲಿತಕಲಾ ಅಕಾಡೆಮಿ’ಗೆ ದುಸ್ಥಿತಿ: ಕಲಾವಿದರಿಂದಲೇ ದೂರವಾದ ಪ್ರಾದೇಶಿಕ...

ಕಲಾವಿದರ ಬಹುದಿನಗಳ ಬೇಡಿಕೆಯಂತೆ ಸ್ಥಾಪನೆಯಾದ ಕೇಂದ್ರಕ್ಕೆ ಮೂರೇ ವರ್ಷಗಳಲ್ಲಿ ದುಸ್ಥಿತಿ; ಸಂಚಾಲಕರ ಏಕಪಕ್ಷೀಯ ಧೋರಣೆ, ಕಲಾವಿದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಕಲಾ ಚಟುವಟಿಕೆಗಳ ಕೊರತೆಯ ವಿರುದ್ಧ ಹಿರಿಯ ಕಲಾವಿದರ ಆಕ್ರೋಶ. ಸಲಹಾ ಸಮಿತಿ...

ಗದಗ | ವರದಕ್ಷಿಣೆ ಮುಟ್ಟದ, ಒಗ್ಗಟ್ಟು ಬಿಡದ ತುಂಬು...

ಆಧುನಿಕತೆ ಬೆಳೆದಂತೆಲ್ಲ ಸಮಾಜದಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ವಿಭಕ್ತ ಕುಟುಂಬಗಳ ಸಂಖ್ಯೆಗಳು ಹೆಚ್ಚಾಗುತ್ತಿವೆ. ನಾವು ನಮ್ಮವರು ಎನ್ನುವ ಭಾವನೆಗಳು ಮರೆಯಾಗುತ್ತಿರುವ ಹೊತ್ತಿನಲ್ಲಿ ನಂಬಿಕೆ, ವಿಶ್ವಾಸ, ಪ್ರೀತಿಯ ತಳಗಹದಿಯ ಮೇಲೆ ಇಂದಿಗೂ ಜಾಲವಾಡಗಿ ಅವಿಭಕ್ತ...

‘ಬಲಿತ ದಲಿತ’ ಎಂಬ ಪೋಸ್ಟರ್ ಬಗ್ಗೆ  ಪ್ರತಿಕ್ರಿಯಿಸಿದ ಅವರು; ಇದರಲ್ಲಿ ಯಾವುದೇ ತಪ್ಪಿಲ್ಲ ಎಂದರು. ‘ಬಲಿತ, ದಲಿತ, ತುಳಿತ’ ಎಂಬ ಪುಸ್ತಕದಲ್ಲಿ ಎಲ್ಲವನ್ನೂ ಕಣ್ಣಿಗೆ ಕಟ್ಟಿದಂತೆ ಬರೆದಿದ್ದಾರೆ. ಅದನ್ನು ಓದಿದರೆ ಸತ್ಯ ಏನು ಎಂಬುದು ಅರ್ಥವಾಗುತ್ತದೆ. ಕಳೆದ 78 ವರ್ಷಗಳಲ್ಲಿ ದಲಿತರನ್ನು ಯಾರು ತುಳಿದಿದ್ದಾರೆ ಎಂಬುದರ ಸಂಪೂರ್ಣ ವಿವರ ಆ ಪುಸ್ತಕದಲ್ಲಿದೆ ಎಂದು ಸಚಿವರು ಹೇಳಿದರು.

ನಾನು ದಲಿತರಿಗೆ ಯಾವುದೇ ಅವಮಾನ ಮಾಡಿಲ್ಲ; ಬದಲಾಗಿ ಅತ್ಯಂತ ತಳಮಟ್ಟದಲ್ಲಿರುವ ದಲಿತರನ್ನು ಮೇಲೆತ್ತಬೇಕು ಎಂದು ಹೇಳಿದ್ದೇನೆ. ಆದರೆ ದಲಿತರ ಹೆಸರಿನಲ್ಲಿ ಬಲಿತವರು ಬಡ ದಲಿತರನ್ನು ಇನ್ನೂ ಕೈಯೊಡ್ಡುವ ಪರಿಸ್ಥಿತಿಯಲ್ಲಿಯೇ ಇಟ್ಟಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ತಮ್ಮ ಮೇಲೆ ರಿಯಲ್ ಎಸ್ಟೇಟ್ ವ್ಯವಹಾರದ ಆರೋಪ ಮಾಡಿರುವ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ ಕುಮಾರಸ್ವಾಮಿ ಅವರು; ನಾನು ಎಲ್ಲಾದರೂ ರಿಯಲ್ ಎಸ್ಟೇಟ್ ಮಾಡಿದ್ದೀನಾ ಎಂದು ಪ್ರಶ್ನಿಸಿದರು.

ಮುಂಬೈ ಅಥವಾ ಹೈದರಾಬಾದ್‌ನಲ್ಲಿ ನನ್ನ ಆಸ್ತಿ ಎಲ್ಲಿದೆ ಎಂಬುದನ್ನು ಬೇಕಾದರೆ ಬಿಚ್ಚಿಡಲಿ ಎಂದು ಸವಾಲೆಸೆದ ಅವರು; 1983ರಲ್ಲಿ ನಾನು ಸಿನಿಮಾ ರಂಗದಲ್ಲಿದ್ದಾಗ ಖರೀದಿಸಿದ ಜಮೀನು ಬಿಟ್ಟರೆ, ಬೇರೆ ಯಾವುದೇ ರೈತರ ಭೂಮಿಗೆ ಧೋಕಾ ಮಾಡಿ ಕಸಿದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು. ನನ್ನ ಬಗ್ಗೆ ಚರ್ಚೆ ಮಾಡುವ ಯಾವುದೇ ನೈತಿಕತೆ ಕಾಂಗ್ರೆಸ್ ನಾಯಕರಿಗಿಲ್ಲ ಎಂದು ಗುಡುಗಿದರು.

ನನ್ನ ಬಗ್ಗೆ ಇಂತಹ ಸುಳ್ಳು ಆರೋಪಗಳನ್ನು ಮಾಡುವ ವ್ಯಕ್ತಿ ಕೆಪಿಎಸ್ಸಿ ನೇಮಕಾತಿಯಲ್ಲಿ ಏನೆಲ್ಲ ಅಕ್ರಮಗಳನ್ನು ಎಸಗಿದ್ದಾರೆ ಎಂದು ದಾಖಲೆಗಳ ಸಮೇತ ಜನರ ಮುಂದೆ ಇಟ್ಟಿದ್ದೇನೆ. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಇಂಜಿನಿಯರ್ ಗಳ ನೇಮಕದಲ್ಲಿ ಆಗಿರುವ ಅಕ್ರಮದ ಬಗ್ಗೆ ಬೇಕಾದಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿದ್ದೇನೆ. ಅದರ ಬಗ್ಗೆ ಆ ವ್ಯಕ್ತಿ ತುಟಿ ಬಿಚ್ಚುತ್ತಿಲ್ಲ ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಸಿನಿಮಾ ಬಿಡುಗಡೆಯ ಮಾದರಿಯಲ್ಲಿ ಐದಾರು ರೀತಿಯ ಪೋಸ್ಟರ್‌ಗಳನ್ನು ವಿನ್ಯಾಸಗೊಳಿಸಿ ನಮ್ಮನೆಯ ಮುಂದೆ ಅಂಟಿಸಿದ್ದಾರೆ. ಈ ಪೋಸ್ಟರ್‌ಗಳನ್ನು ನನ್ನ ಮನೆಯ ಮುಂದೆ ಅಂಟಿಸುವ ಬದಲು ಕಾಂಗ್ರೆಸ್ ಕಚೇರಿ ಅಥವಾ ಕಾಂಗ್ರೆಸ್ ಮುಖಂಡರ ಮನೆಗಳ ಮುಂದೆ ಅಂಟಿಸಿಕೊಂಡರೆ ಅವರ ಬೆಂಬಲಿಗರಿಗೆ ಅರ್ಥವಾಗುತ್ತದೆ ಎಂದು ಲೇವಡಿ ಮಾಡಿದರು ಸಚಿವರು.

ನಮ್ಮ ಮನೆಯ ಮುಂದೆ ಪೋಸ್ಟರ್ ಹಾಕಿದರೆ ಜನರಿಗೆ ಇನ್ನಷ್ಟು ಆಕ್ರೋಶ ಬರುತ್ತದೆ ಹಾಗೂ ಕಾಂಗ್ರೆಸ್ ಪಕ್ಷವು ಪಾತಾಳಕ್ಕೆ ಹೋಗುವ ಕಾಲ ಹತ್ತಿರಕ್ಕೆ ಬರುತ್ತದೆ ಎಂದು ಅವರು ಎಚ್ಚರಿಸಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ದಾಖಲೆ ರಹಿತ ಸ್ಲಂ ಕುಟುಂಬಗಳಿಗೆ ಹಕ್ಕುಪತ್ರ: ದಾಖಲಾತಿ ಸಂಗ್ರಹಣೆಗೆ ಜಿಲ್ಲಾಧಿಕಾರಿ ಸೂಚನೆ

ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಜಮೀನುಗಳಲ್ಲಿ ವಾಸಿಸುತ್ತಿರುವ...

ಮಧುಗಿರಿ | ಸಂವಿಧಾನ ದೇಶದ ಚರಿತ್ರೆ, ವರ್ತಮಾನ ಮತ್ತು ಭವಿಷ್ಯವನ್ನು ಪ್ರತಿನಿಧಿಸುತ್ತದೆ: ಎ. ನಾರಾಯಣ

 ಪ್ರಪಂಚದಲ್ಲೇ ಬೃಹತ್ ಲಿಖಿತ ಸಂವಿಧಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದ ಸಂವಿಧಾನವು ಏಕಕಾಲಕ್ಕೆ...

ಗುಬ್ಬಿ | ಸಿ.ಎಸ್.ಪುರದಲ್ಲಿ ನ.13 ರಂದು ದೇವೇಗೌಡರ ಪುತ್ಥಳಿ ಅನಾವರಣ : ಶಾಸಕ ಎಂ.ಟಿ.ಕೃಷ್ಣಪ್ಪ

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ರಾಜಕೀಯ ಹಾದಿ ಹಾಗೂ ಸಮಾಜದ ಅಭಿವೃದ್ದಿ...

ಶಿರಾ | ಆತ್ಮವಿಶ್ವಾಸ, ಪರಿಶ್ರಮವೇ ಸಾಧನೆಯ ಯಶಸ್ಸಿನ ಸೂತ್ರ: ದೀಪಿಕಾ ಟಿಸಿ

ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮ ಅತ್ಯಂತ...