ಗುಬ್ಬಿ | ನಾಟಕರತ್ನ ಗುಬ್ಬಿ ವೀರಣ್ಣ ಪ್ರತಿಮೆ, ಸಮಾಧಿಗೆ ಬೇಕಿದೆ ಕಾಯಕಲ್ಪ

Date:

 ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ನಾಟಕರತ್ನ ಡಾ. ಗುಬ್ಬಿ ವೀರಣ್ಣ ಅವರ ಹೆಸರು ವಿಶ್ವದಾದ್ಯಂತ ಚಿರಪರಿಚಿತ. ಆದರೆ ಅವರ ನೆನಪನ್ನು ಸಾರುವ ಗುಬ್ಬಿ ಸರ್ಕಲ್‌ನಲ್ಲಿರುವ ಪ್ರತಿಮೆ ಹಾಗೂ ವೀರಣ್ಣ ದಂಪತಿಗಳ ಸಮಾಧಿ ಮಾತ್ರ ನಿರ್ಲಕ್ಷ್ಯಕ್ಕೆ ಒಳಗಾಗಿ ದುಸ್ಥಿತಿಗೆ ತಲುಪಿರುವುದು ರಂಗಾಸಕ್ತರ ಬೇಸರಕ್ಕೆ ಕಾರಣವಾಗಿದೆ.

- Advertisement -

ನಟಸಾರ್ವಭೌಮ ಡಾ. ರಾಜ್‌ಕುಮಾರ್, ಹಾಸ್ಯ ಕಲಾವಿದರಾದ ಬಾಲಕೃಷ್ಣ, ನರಸಿಂಹರಾಜು ಸೇರಿದಂತೆ ನೂರಾರು ಕಲಾವಿದರನ್ನು ರಂಗಭೂಮಿಯಿಂದ ಚಲನಚಿತ್ರ ಕ್ಷೇತ್ರಕ್ಕೆ ಪರಿಚಯಿಸಿದ ಕೀರ್ತಿ ಗುಬ್ಬಿ ವೀರಣ್ಣ ಅವರ ನಾಟಕ ಕಂಪನಿಗೆ ಸಲ್ಲುತ್ತದೆ. ನೂರು ವರ್ಷಗಳ ಕಾಲ ತನ್ನದೇ ವಿಶಿಷ್ಟ ರಂಗ ಪ್ರಯೋಗಗಳ ಮೂಲಕ ಕಂಪನಿ ಕೀರ್ತಿ ಗಳಿಸಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | ಅಸುರಕ್ಷತೆಯ ತಾಣವಾದ ರೈಲ್ವೆ ನಿಲ್ದಾಣ: ಪ್ರಯಾಣಿಕರ...

ಕುಡಿಯುವ ನೀರಿಲ್ಲದಿರುವುದು, ಹಾಳಾದ ಶೌಚಾಲಯಗಳು, ರಾತ್ರಿ ವೇಳೆ ಬೀದಿದೀಪ ಹಾಗೂ ಕಾವಲುಗಾರರ ಕೊರತೆಯಿಂದಾಗಿ ಈ ನಿಲ್ದಾಣವು ನಿರ್ಜನ ಪ್ರದೇಶದಂತೆ ಭಾಸವಾಗುತ್ತಿದೆ. ಇದರೊಂದಿಗೆ ಕಳ್ಳತನ, ಅನೈತಿಕ ಚಟುವಟಿಕೆಗಳು ಹೆಚ್ಚಾಗಿರುವುದು ಜೊತೆಗೆ ಸಿಸಿಟಿವಿ ಕ್ಯಾಮೆರಾಗಳೂ ಇಲ್ಲದಿರುವುದು...

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ಜೀವಂತ ಪ್ರಾಣಿಗಳ ಪ್ರದರ್ಶನ ಸೇರಿದಂತೆ ಹಲವು ಹೊಸ ಪ್ರಯೋಗಗಳ ಮೂಲಕ ರಂಗಭೂಮಿಗೆ ಹೊಸ ಆಯಾಮ ನೀಡಿದ್ದ ವೀರಣ್ಣ, ಕನ್ನಡ ಚಲನಚಿತ್ರ ನಿರ್ಮಾಣ ಕ್ಷೇತ್ರಕ್ಕೂ ಆರಂಭಿಕ ಕೊಡುಗೆ ನೀಡಿದ್ದರು. ಇಂತಹ ನಾಡಿನ ಹೆಮ್ಮೆಯ ಕಲಾವಿದನ ಪ್ರತಿಮೆ ಗುಬ್ಬಿ ಸರ್ಕಲ್‌ನಲ್ಲಿ ಅನಾಥ ಸ್ಥಿತಿಯಲ್ಲಿ ನಿಂತಿರುವುದು ವಿಪರ್ಯಾಸ ಎಂದು ರಂಗಾಸಕ್ತರು ಹೇಳಿದ್ದಾರೆ.

ಹಿರಿಯ ಸಾಹಿತಿ, ಪದ್ಮಶ್ರೀ ಡಾ. ದೊಡ್ಡರಂಗೇಗೌಡ ಅವರ ಅಮೃತ ಹಸ್ತದಿಂದ ಅನಾವರಣಗೊಂಡಿರುವ ಪ್ರತಿಮೆಯ ಪೀಠ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಪ್ರತಿಮೆಯ ಮೇಲೆ ಧೂಳು ಹಾಗೂ ಜೇಡರ ಬಲೆಗಳು ಕಾಣುತ್ತಿದ್ದು, ಬಿಸಿಲು–ಮಳೆಯಿಂದ ಬಣ್ಣ ಮಾಸಿದೆ. ಸೂರು ಅಥವಾ ಸೂಕ್ತ ರಕ್ಷಣಾ ವ್ಯವಸ್ಥೆಯಿಲ್ಲದೆ ಪ್ರತಿಮೆ ಹಾಳಾಗುತ್ತಿದೆ. ಪಕ್ಕದಲ್ಲೇ ಚರಂಡಿ ಇರುವುದರಿಂದ ಸ್ವಚ್ಛತೆಯ ಕೊರತೆಯೂ ಎದ್ದು ಕಾಣುತ್ತಿದೆ.

ಗುಬ್ಬಿ ಸರ್ಕಲ್‌ಗೆ ನಾಟಕರತ್ನ ಗುಬ್ಬಿ ವೀರಣ್ಣ ಅವರ ಹೆಸರನ್ನೇ ನಾಮಕರಣ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಮೆಯನ್ನು ಸ್ಥಳಾಂತರಿಸುವ ಬದಲು ಅದೇ ಸ್ಥಳದಲ್ಲಿ ಸ್ವಚ್ಛ ಹಾಗೂ ಸುಂದರ ವಾತಾವರಣ ನಿರ್ಮಿಸಿ ಸಂರಕ್ಷಿಸಬೇಕು ಎಂದು ರಂಗಾಸಕ್ತರು ಸ್ಥಳೀಯ ಆಡಳಿತವನ್ನು ಒತ್ತಾಯಿಸಿದ್ದಾರೆ.

ಗುಬ್ಬಿ ವೀರಣ್ಣ ಅವರ ಪತ್ನಿಯರಾದ ಭದ್ರಮ್ಮ ಹಾಗೂ ಜಯಮ್ಮ ಅವರ ಸಮಾಧಿಗಳು ವೀರಣ್ಣ ಅವರ ತೋಟದಲ್ಲೇ ಇದ್ದರೂ ಸೂಕ್ತ ನಿರ್ವಹಣೆಯಿಲ್ಲದೆ ದುಸ್ಥಿತಿಗೆ ತಲುಪಿವೆ. ಪಟ್ಟಣದ ಬಸ್ ನಿಲ್ದಾಣದ ಸಮೀಪ, ಹೆದ್ದಾರಿಗೆ ಹೊಂದಿಕೊಂಡಿರುವ ಈ ಜಾಗವನ್ನು ಸ್ಮಾರಕ ಉದ್ಯಾನವನವನ್ನಾಗಿ ಅಭಿವೃದ್ಧಿಪಡಿಸುವ ಕುರಿತು ಈ ಹಿಂದೆ ಜಿಲ್ಲಾಡಳಿತದಿಂದ ಪ್ರಯತ್ನ ನಡೆದಿತ್ತು. ಆದರೆ ಅದು ಕಾರ್ಯರೂಪಕ್ಕೆ ಬರದೆ ಸ್ಥಗಿತಗೊಂಡಿದೆ.

ಕುಟುಂಬಸ್ಥರೂ ಈ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ತೋರದಿರುವುದು ಬೇಸರದ ಸಂಗತಿ ಎಂದು ಸ್ಥಳೀಯ ಕಲಾವಿದರು ಅಭಿಪ್ರಾಯಪಟ್ಟಿದ್ದಾರೆ.

ವಿಶ್ವಕ್ಕೆ ರಂಗಭೂಮಿಯ ಹಲವು ಹೊಸ ಪ್ರಯೋಗಗಳನ್ನು ಪರಿಚಯಿಸಿದ ನಾಟಕರತ್ನ ಗುಬ್ಬಿ ವೀರಣ್ಣ ಅವರ ಪ್ರತಿಮೆ ಹಾಗೂ ಸಮಾಧಿ ಸ್ಥಳಕ್ಕೆ ಸೂಕ್ತ ಕಾಯಕಲ್ಪ ನೀಡುವುದು ಸರ್ಕಾರ, ಸ್ಥಳೀಯ ಆಡಳಿತ ಹಾಗೂ ಕುಟುಂಬಸ್ಥರ ಜವಾಬ್ದಾರಿಯಾಗಿದೆ. ಕೂಡಲೇ ಕ್ರಮ ಕೈಗೊಂಡು ಎರಡೂ ಸ್ಥಳಗಳನ್ನು ಸ್ಮರಣೀಯ ತಾಣಗಳಾಗಿ ಅಭಿವೃದ್ಧಿಪಡಿಸಬೇಕು ಎಂದು ರಂಗಾಸಕ್ತರು ಆಗ್ರಹಿಸಿದ್ದಾರೆ.

ಗುಬ್ಬಿ ವೀರಣ್ಣ ಅವರ ಪ್ರತಿಮೆ ಹಾಗೂ ಸಮಾಧಿಗೆ ಕಾಯಕಲ್ಪ ನೀಡುವಲ್ಲಿ ಕುಟುಂಬದ ಸದಸ್ಯರು ಒಗ್ಗೂಡಿ ಅಗತ್ಯ ಕ್ರಮ ಕೈಗೊಳ್ಳಬೇಕು. ಸಮಾಧಿ ಸ್ಥಳವನ್ನು ಸ್ಮಾರಕವನ್ನಾಗಿ ಮಾಡುವ ಪ್ರಯತ್ನ ಈ ಹಿಂದೆ ನಡೆದಿತ್ತು. ಈಗಲಾದರೂ ಕುಟುಂಬಸ್ಥರು ಸ್ಮಾರಕ ಉದ್ಯಾನವನ ನಿರ್ಮಿಸಲಿ. ಇಲ್ಲವಾದರೆ ಸಮಾಧಿ ಸ್ಥಳವನ್ನು ಸ್ಥಳೀಯ ಆಡಳಿತಕ್ಕೆ ಬರೆದುಕೊಟ್ಟರೆ ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಿ ಸ್ಮಾರಕ ನಿರ್ಮಿಸಬಹುದು ಎಂದು ಮಾಜಿ ಪಪಂ ಸದಸ್ಯ  ಜಿ.ಆರ್. ಶಿವಕುಮಾರ್ ತಿಳಿಸಿದರು

ಗುಬ್ಬಿ ಸರ್ಕಲ್‌ಗೆ ನಾಟಕರತ್ನ ಗುಬ್ಬಿ ವೀರಣ್ಣ ಅವರ ಹೆಸರು ನಾಮಕರಣ ಮಾಡಿರುವ ಹಿನ್ನೆಲೆಯಲ್ಲಿ ಅವರ ಪ್ರತಿಮೆ ಸರ್ಕಲ್ ಬಳಿಯೇ ಇರುವುದು ಸೂಕ್ತ. ಪ್ರತಿಮೆಯ ಅನಾವರಣಕ್ಕೆ ಅನುವು ಮಾಡಿಕೊಟ್ಟಿರುವ ಸ್ಥಳೀಯ ಆಡಳಿತವೇ ಅದರ ನಿರ್ವಹಣೆಯ ಜವಾಬ್ದಾರಿ ವಹಿಸಬೇಕು. ಪ್ರತಿಮೆಯನ್ನು ಸ್ಥಳಾಂತರಿಸುವ ಅಗತ್ಯವಿಲ್ಲ. ಅದೇ ಸ್ಥಳದಲ್ಲಿ ಉತ್ತಮ ವಾತಾವರಣ ನಿರ್ಮಿಸಿ ಪ್ರತಿಮೆಯನ್ನು ಸುಂದರಗೊಳಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು  ಗುಬ್ಬಿ ಹಿತ ರಕ್ಷಣಾ ಸಮಿತಿ ಅಧ್ಯಕ್ಷ  ಎಚ್.ಡಿ. ಯಲ್ಲಪ್ಪ ತಿಳಿಸಿದ್ದಾರೆ 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ದೇಶದ ವಿವಿಧೆಡೆ ಪೊಲೀಸ್ ದಬ್ಬಾಳಿಕೆ, ನಾಯಕರ ಬಂಧನ ಖಂಡಿಸಿ ಎಐಡಿಎಸ್ಒ ಪ್ರತಿಭಟನೆ

 ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿಭಟನಾಕಾರರ ವಿರುದ್ಧ ನಡೆಯುತ್ತಿದೆ ಎನ್ನಲಾದ ಪೊಲೀಸ್ ದಬ್ಬಾಳಿಕೆ...

ಮೈಸೂರು ದಸರಾ ವೈಭವಕ್ಕೆ ತುಮಕೂರಿನ ಸಾಂಸ್ಕೃತಿಕ ಸ್ಪರ್ಶ

ನಾಡಿನ ಸುಭಿಕ್ಷ, ಜನರ ಶಾಂತಿ, ನೆಮ್ಮದಿ ಹಾಗೂ ಮಳೆ-ಬೆಳೆ ಸಮೃದ್ಧಿಗಾಗಿ ತಾಯಿ...

ಗುಬ್ಬಿ | ಕೆರೆಗೆ ಬಿದ್ದು 14 ವರ್ಷದ ಬಾಲಕ ಸಾವು: ದನಗಳಿಗೆ ನೀರು ಕುಡಿಸಲು ಹೋದಾಗ ದುರ್ಘಟನೆ

ದನಗಳಿಗೆ ನೀರು ಕುಡಿಸಲು ಕೆರೆಗೆ ತೆರಳಿದ್ದ 14 ವರ್ಷದ ಬಾಲಕನೊಬ್ಬ ಕಾಲು...

ತುಮಕೂರು ದಸರಾ: ಹತ್ತು ದಿನಗಳ ಸಾಂಸ್ಕೃತಿಕ ಸಂಭ್ರಮ ನಾಳೆಯಿಂದ : ಡಾ. ಜಿ. ಪರಮೇಶ್ವರ್

ಮೈಸೂರಿಗೆ ಹೋಗುವ ಬದಲು ತುಮಕೂರಿನಲ್ಲೇ ದಸರಾ ನೋಡೋಣ ಎಂಬ ಮಾತು ಜನರ...