ತುಮಕೂರು | ಹೆತ್ತೇನಹಳ್ಳಿ ಮಾರಮ್ಮ ದೇವಾಲಯದ ಜೀರ್ಣೋದ್ಧಾರಕ್ಕೆ 31 ಲಕ್ಷ ನೀಡಿದ್ದೇನೆ : ಊರುಕೆರೆ ಜಗದೀಶ್

Date:

ಆದಿ ಶಕ್ತಿ ಹೆತ್ತೇನಹಳ್ಳಿ ಮಾರಮ್ಮ ನಮ್ಮ ಮನೆಯ ಮನೆದೇವರಾಗಿದ್ದು,ದೇವಾಲಯದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರ ಮತ್ತು ಸದಸ್ಯರುಗಳ ಸಲಹೆಯಂತೆ,ದೇವಾಲಯದ ಗರ್ಭಗುಡಿ ಹಾಗೂ ಅದರ ಗೋಪುರ ಕಟ್ಟಿಸಿಕೊಡುವ ಜವಾಬ್ದಾರಿ ನನ್ನದಾಗಿದ್ದು, ಇದುವರೆಗೂ ಸುಮಾರು 31 ಲಕ್ಷರೂಗಳನ್ನು ದೇವಾಲಯದ ಅಭಿವೃದ್ದಿಗೆ ನೀಡಿದ್ದೇನೆ ಎಂದು ಉದ್ಯಮಿ ಊರುಕೆರೆ ಜಗದೀಶ್ ತಿಳಿಸಿದರು

- Advertisement -

ತುಮಕೂರು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಹೊಸಮನೆಯ ಗೃಹ ಪ್ರವೇಶದ ಸಂದರ್ಭದಲ್ಲಿ ದೇವರನ್ನು ಕರೆಯಿಸಿದ್ದು,ಹರಕೆ ತೀರಿಸುವ ಸಂಬಂಧ ದೇವಾಲಯಕ್ಕೆ ಹೋದಾಗ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ದೇವಾಲಯದ ಗುರ್ಭಗುಡಿ ಮತ್ತು ಗೋಪುರ ಕಟ್ಟಿಸಿಕೊಡುವಂತೆ ಕೋರಿ ಕೊಂಡ ಹಿನ್ನೆಲೆಯಲ್ಲಿ ಒಪ್ಪಿಕೊಂಡು,ಕಾಮಗಾರಿ ಕೈಗೆತ್ತಿಕೊಂಡಿದ್ದೇನೆ.ಶೇ90ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ದೇವಾಲಯದ ಅಭಿವೃದ್ದಿ ಕಾಮಗಾರಿಗಳನ್ನು ಪರಿಶೀಲಿಸಲು ಹೋದ ಸಂದರ್ಭದಲ್ಲಿ ಕೆಲ ಹಿರಿಯ ಮಾತಿನಿಂದ ದೇವಾಲಯದ ಲೆಕ್ಕಪಕ್ಕದ ಬಳಿ ಅನುಮಾನ ಉಂಟಾದ ಹಿನ್ನೆಲೆಯಲ್ಲಿ ನನ್ನ ಹಿತೈಷಿಗಳಾದ ಮಾಜಿ ಶಾಸಕರಾದ ಡಿ.ಸಿ.ಗೌರಿಶಂಕರ್ ಅವರನ್ನು ಪ್ರಶ್ನಿಸಿದಲ್ಲದೆ,ಅಲ್ಲದೆ ಪತ್ರಿಕೆಗಳಲ್ಲಿ ಬಂದ ಮಾಹಿತಿಯನ್ನು ಆಧರಿಸಿ,ಹೆತ್ತೇನಹಳ್ಳಿ ಮಾರಮ್ಮನ ವರಿಗೆ 5.50 ಗ್ರಾಂ ನ ಹೊಸ ತಾಳಿ ಮಾಡಿಸಿ, ಗೌರಿಶಂಕರ್ ಅವರ ಮೂಲಕ ದೇವಿಯ ಆರ್ಚಕರಿಗೆ ನೀಡಿದ್ದೇ. ಈ ವೇಳೆ ನನ್ನ ಅಭಿವೃದ್ದಿ ಕಾರ್ಯಗಳನ್ನು ಮಾಜಿ ಶಾಸಕರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಪ್ರಶಂಶೆ ವ್ಯಕ್ತಪಡಿಸಿದ್ದರು. ಈ ಘಟನೆ ನಂತರ ನನ್ನನ್ನು ಕೆಲವರು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ಮಾಡುತ್ತಿದ್ದು, ತಾಳಿಯೇ ಕಳೆದು ಹೋಗಿಲ್ಲ, ಜಗದೀಶ್ ನೀಡಿರುವುದು ಕೇವಲ 7.35 ಲಕ್ಷ ಮಾತ್ರ ಎಂದು ಹೇಳುತಿದ್ದಾರೆ. ನಾನು 24 ಲಕ್ಷ ರೂಗಳನ್ನು ನಗದು ರೂಪದಲ್ಲಿ ನೀಡಿರುವುದಕ್ಕೆ ನನ್ನ ಬಳಿ ದಾಖಲೆ ಇದೆ. ಅಲ್ಲದೆ ತಹಶೀಲ್ದಾರರಿಗೆ 2 ಲಕ್ಷ ರೂ ನೀಡಿದ್ದೇನೆ. ಮೂರು ಲಕ್ಷ ರೂಗಳನ್ನು ಗೋಪುರದ ಕೆಲಸ ನಿರ್ವಹಿಸುತ್ತಿರುವ ಗುತ್ತಿಗೆದಾರರಿಗೆ ನೀಡಿದ್ದೇನೆ.ಇದುವರೆಗೂ ಒಟ್ಟು 31 ಲಕ್ಷ ರೂಗಳನ್ನು ನೀಡಿದ್ದೇನೆ ಎಂದು ದಾಖಲೆಗಳನ್ನು ಉದ್ಯಮಿ ಜಗದೀಶ್ ಪ್ರದರ್ಶಿಸಿದರು.

ಹೆತ್ತೇನಹಳ್ಳಿ ಮಾರಮ್ಮ ದೇವಿಯ ದೇವಾಲಯದಲ್ಲಿ ಕಳ್ಳತನ ನಡೆದ ಮಾಹಿತಿ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು, ಒಟ್ಟಾರೆ 46 ಗ್ರಾಂ ಚಿನ್ನದ ವಡವೆ ಕಳ್ಳತನವಾಗಿದೆ. ತದ ನಂತರ 14 ಗ್ರಾಂ ಸಿಕ್ಕಿದೆ ಎಂದು ಹೇಳಿದ್ದಾರೆ. ಅದು ಎಲ್ಲಿತ್ತು,ಹೇಗೆ ಅಲ್ಲಿಗೆ ಬಂತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ.ದೇವಾಲಯದ ಜೀರ್ಣೋದ್ಧಾರಕ್ಕೆ ಭಕ್ತಾಧಿಗಳಿಂದ ಲಕ್ಷಾಂತರ ರೂ ಧೇಣಿಗೆ ಹರಿದು ಬರುತ್ತಿದೆ.ಅದಕ್ಕೆ ಲೆಕ್ಕಪತ್ರ ಒಂದು ಸಹ ಇಲ್ಲ. ಕೆಲವರು ಸಮಿತಿ ಮಾಡಿಕೊಂಡಿದ್ದೇವೆ ಎನ್ನುತಿದ್ದಾರೆ. ಮುಜರಾಯಿ ಇಲಾಖೆಯ ದೇವಾಲಯಕ್ಕೆ ಸಮಿತಿ ಮಾಡಿಕೊಳ್ಳಲು ಇವರಿಗೆ ಅಧಿಕಾರ ಕೊಟ್ಟವರು ಯಾರು?,ಭಕ್ತರು ಕೊಟ್ಟ ಧೇಣಿಗೆಗೆ ಲೆಕ್ಕಪತ್ರ ಇದೆಯೇ ? ಇವುಗಳನ್ನು ಭಕ್ತರ ಮುಂದೆ ಇಡಬೇಕು.ನಾನು ಈ ವಿಚಾರದಲ್ಲಿ ಯಾರನ್ನು ದೂರುವುದಿಲ್ಲ.ಮಾರಮ್ಮ ದೇವಿಗೆ ಎಲ್ಲವನ್ನು ನೋಡಿಕೊಳ್ಳುವ ಶಕ್ತಿ ಇದೆ. ಆಕೆಯೇ ನೋಡಿಕೊಳ್ಳುತ್ತಾಳೆ ಎಂದು ಜಗದೀಶ್ ಮಾಮೀಕವಾಗಿ ನುಡಿದರು.

ನಾನು ಮತ್ತು ಭಕ್ತರು ಸೇರಿ ದೇವಾಲಯದ ರಾಜಗೋಪರ ನಿರ್ಮಾಣ ಮಾಡಬೇಕು ಎಂಬ ಆಸೆಯಿದೆ.ಆದರೆ ಶಾಸಕರು ಸರಕಾರದ ಅನುದಾನದಲ್ಲಿ ನಿರ್ಮಿಸುವುದಾಗಿ ತಿಳಿಸಿದ್ದಾರೆ.ಒಂದು ವೇಳೆ ಅವರು ನಿರ್ಮಾಣ ಮಾಡಿದರೆ ಸಂತೋಷ, ಅಗತ್ಯವೆನಿಸಿದರೆ ನಾವು ಕೈಜೋಡಿಸಲು ಸಿದ್ದ. ಒಟ್ಟಾರೆ ತಾಯಿಯ ಸೇವೆಗೆ ನಾನು ಮತ್ತು ನನ್ನ ಕುಟುಂಬ ಸದಾ ಸಿದ್ದವಿದ್ದೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಹೆತ್ತೇನಹಳ್ಳಿ ಮಂಜುನಾಥ್, ವಕೀಲರಾದ ಸ್ವಾಮಿಗೌಡ, ಮಂಜುನಾಥ್,ಗ್ರಾ.ಪಂ ಸದಸ್ಯ ರಮೇಶ್, ಹರೀಶ್, ನರಸಿಂಹಮೂತಿ”ð ಚಂದ್ರು, ಅಕ್ಷಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ರೇಡಿಯೋದಿಂದ ಕ್ಯಾಮೆರಾವರೆಗೆ : ವಿದ್ಯಾರ್ಥಿಗಳ ಕೈಗೆ ಬಂದ ಮಾಧ್ಯಮದ ನೈಜ ಅನುಭವ

ಮೂರು ದಿನಗಳ ಮಾಧ್ಯಮ ಕಾರ್ಯಾಗಾರದಲ್ಲಿ ಸಂದರ್ಶನ, ರೇಡಿಯೋ ಕಾರ್ಯಕ್ರಮ ನಿರ್ಮಾಣ ಹಾಗೂ...

ತುಮಕೂರು | ಜಿಪಂ – ತಾಪಂ ಮೀಸಲು ಅಂತಿಮ: ಮಹಿಳೆಯರಿಗೆ ಸಿಂಹಪಾಲು

ತುಮಕೂರು ಜಿಲ್ಲೆಯ ಗ್ರಾಮೀಣ ರಾಜಕೀಯದ ಮುಂದಿನ ಚಿತ್ರಣಕ್ಕೆ ಮುನ್ನುಡಿ ಬರೆಯುವಂತೆ ಜಿಲ್ಲಾ...

ತುಮಕೂರು | ಬೆಳೆ ಕಟಾವು ಪ್ರಯೋಗ ಶೇ.100ರಷ್ಟು ಪೂರ್ಣಗೊಳಿಸಿ: ಜಿಲ್ಲಾಧಿಕಾರಿ ಶುಭ ಕಲ್ಯಾಣ್

ತುಮಕೂರು ಜಿಲ್ಲೆಯಲ್ಲಿ 2026-27ನೇ ಸಾಲಿನ ಮುಂಗಾರು ಹಂಗಾಮಿನಡಿ ಹಂಚಿಕೆಯಾಗಿರುವ ಎಲ್ಲಾ 5,120...

ತುಮಕೂರು | ಎಸ್‌ಐಆರ್ ವಿರುದ್ಧ ಅ. 8ರಂದು ಇಂಡಿಯಾ ಮೈತ್ರಿಕೂಟದ ಪ್ರತಿಭಟನೆ

 ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ರದ್ದುಗೊಳಿಸಬೇಕು ಹಾಗೂ...