ತುಮಕೂರು | ಮಹಿಳೆಯರು ಮತದಾರರಾಗಿ ಉಳಿಯದೆ, ನಿರ್ಧಾರ ಕೈಗೊಳ್ಳುವ ನಾಯಕಿಯರಾಗಿ ಬೆಳೆಯಬೇಕು : ಪ್ರೊ. ಕೆ.ಜಿ. ಪರಶುರಾಮ್

Date:

ಮಹಿಳೆಯರು ಕೇವಲ ಚುನಾವಣೆಯಲ್ಲಿ ಮತ ಚಲಾಯಿಸುವ ಮತದಾರರಾಗಿ ಉಳಿಯದೆ, ಸಮಾಜದ ಮತ್ತು ದೇಶದ ಭವಿಷ್ಯವನ್ನು ರೂಪಿಸುವ ನಿರ್ಧಾರಗಳನ್ನು ಕೈಗೊಳ್ಳುವ ನಾಯಕಿಯರಾಗಿ ಬೆಳೆಯಬೇಕು. ಮಹಿಳಾ ಮೀಸಲಾತಿ ಎನ್ನುವುದು ಮಹಿಳೆಯರಿಗೆ ಅಧಿಕಾರ, ಅವಕಾಶ, ಸಮಾನತೆ ಮತ್ತು ಸ್ವಾಭಿಮಾನದ ಹಕ್ಕನ್ನು ಕಲ್ಪಿಸುವ ಮಹತ್ವದ ಸಾಮಾಜಿಕ ಬದಲಾವಣೆಯಾಗಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತುಮಕೂರು ವಿಶ್ವವಿದ್ಯಾನಿಲಯದ ಕಲಾ ನಿಕಾಯದ ಡೀನ್ ಪ್ರೊ. ಕೆ.ಜಿ. ಪರಶುರಾಮ ಹೇಳಿದರು.

- Advertisement -

ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಸಹಯೋಗದಲ್ಲಿ ನ.18ರ ಬುಧವಾರ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ಮತ್ತು ಚರ್ಚಾ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸೋನಿಯಾ ಗಾಂಧಿಯವರ ಪುಸ್ತಕಕ್ಕೆ ನಿಷೇಧದ ಬೇಡಿಕೆ: ಇತಿಹಾಸವನ್ನು ಅಳಿಸಿಹಾಕಲು...

ಸಾವರ್ಕರ್ ಮತ್ತು ಆರ್‌ಎಸ್‌ಎಸ್ ಕುರಿತ ಐತಿಹಾಸಿಕ ಉಲ್ಲೇಖಗಳನ್ನು ವಿರೋಧಿಸಿ ಬಿಜೆಪಿ ಬೆಂಬಲಿತ ಏಕನಾಥ್ ಶಿಂದೆ ನೇತೃತ್ವದ ಶಿವಸೇನೆ ಬಣ ಸೋನಿಯಾ ಗಾಂಧಿಯವರ ಆತ್ಮಕಥನಕ್ಕೆ ನಿಷೇಧ ಹೇರಬೇಕೆಂದು ಒತ್ತಾಯಿಸುತ್ತಿದೆ. ಗಾಂಧೀಜಿಯವರ ಹಂತಕ ಗೋಡ್ಸೆಯನ್ನು ಸಮರ್ಥಿಸುವ...

ಇತಿಹಾಸದ ಕಮಾನು: ಸಮಾನತೆಯಿಂದ ಅಸಮಾನತೆಗೆ, ಮತ್ತೆ ಸಮಾನತೆಯತ್ತವೇ ಮನುಷ್ಯನ...

ಒಂದು ಕಾಲದಲ್ಲಿ ಮನುಷ್ಯನ ಕೈಕೆಲಸವನ್ನು ಯಂತ್ರಗಳು ಬದಲಾಯಿಸಿದವು. ಈಗ ಮನುಷ್ಯನ ಬುದ್ಧಿಶಕ್ತಿಯ ಕೆಲವು ಕೆಲಸಗಳನ್ನೂ ಯಂತ್ರಗಳು ಮಾಡತೊಡಗಿವೆ. ಭಾಷಾಂತರ, ಲೆಕ್ಕಾಚಾರ, ವಿನ್ಯಾಸ, ಮಾಹಿತಿ ವಿಶ್ಲೇಷಣೆ, ವೈದ್ಯಕೀಯ ಪರೀಕ್ಷೆಗಳಿಗೆ ನೆರವು, ಆಡಳಿತದ ನಿರ್ಧಾರಗಳಿಗೆ ಸಹಾಯ...

‘ಎಪ್ಸ್ಟೀನ್‌’ನದ್ದು ಆತ್ಮಹತ್ಯೆಯಲ್ಲ, ಕೊಲೆ! ತಜ್ಞರ ಹೊಸ ಅಧ್ಯಯನದಿಂದ ಸ್ಫೋಟ;...

ಅಮೆರಿಕದ ಜಾರ್ಜ್ ಫ್ಲಾಯ್ಡ್ ಸಾವಿನ ಪ್ರಕರಣ ಸೇರಿದಂತೆ ವಿಧಿವಿಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿರುವ ಪ್ರೊ. ಮೈಕೆಲ್ ಫ್ರೀಮನ್ ಅವರು ಎಪ್ಸ್ಟೀನ್ ಸಾವಿಗೆ ಸಂಬಂಧಿಸಿದ ಶವಪರೀಕ್ಷೆಯ ದಾಖಲೆಗಳು ಮತ್ತು ಛಾಯಾಚಿತ್ರಗಳನ್ನು ಸುಮಾರು ಒಂದು ವರ್ಷ...

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ಎಚ್.ಎಸ್. ಮೋಹನ್ ಮಾತನಾಡಿ, ತಂತ್ರಜ್ಞಾನ ಬೆಳೆದಂತೆ ಸಮಾಜದಲ್ಲಿನ ಅಸಮಾನತೆಗಳು ತೊಲಗುವ ಬದಲು ಕೆಲವು ಸಂದರ್ಭಗಳಲ್ಲಿ ಹೆಚ್ಚಾಗುತ್ತಿವೆ. ಇಂತಹ ಸಂದರ್ಭದಲ್ಲಿ ಸಾಮಾಜಿಕ ಸಮಾನತೆ ಮತ್ತು ವೈಚಾರಿಕ ಜಾಗೃತಿ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ತಮ್ಮ ವಿವೇಕ ಮತ್ತು ವಿಚಾರಶಕ್ತಿಯ ಮೂಲಕ ಸಮಾಜದ ಅಜ್ಞಾನವೆಂಬ ಕತ್ತಲನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ನೀಡಿದವರು ಡಾ. ಬಿ.ಆರ್. ಅಂಬೇಡ್ಕರ್. ವಿದ್ಯಾರ್ಥಿಗಳಲ್ಲಿ ಬರವಣಿಗೆ, ಚಿಂತನೆ ಹಾಗೂ ವೈಚಾರಿಕತೆಯನ್ನು ಬೆಳೆಸಲು ಇಂತಹ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಗಳು ಸಹಕಾರಿಯಾಗುತ್ತವೆ. ಮಕ್ಕಳನ್ನು ಕೇವಲ ವಿದ್ಯಾವಂತರನ್ನಾಗಿ ಮಾಡುವುದಷ್ಟೇ ಅಲ್ಲದೆ, ವಿವೇಕವಂತರನ್ನಾಗಿ ರೂಪಿಸುವ ಜವಾಬ್ದಾರಿ ಪೋಷಕರು ಮತ್ತು ಸಮಾಜದ ಮೇಲಿದೆ ಎಂದು ಹೇಳಿದರು.

ತುಮಕೂರು ವಿಶ್ವವಿದ್ಯಾನಿಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಕೇಶವ ಸ್ವಾಗತಿಸಿದರು. ಪ್ರಾಧ್ಯಾಪಕ ಡಾ. ಮುನಿರಾಜು ವಂದಿಸಿದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಜಾತಿ ಮೀರಿ ಮಾನವೀಯತೆ ಸಾರುವ ತತ್ವಪದಗಳು : ಎಚ್.ಎಸ್. ಶಿವಪ್ರಕಾಶ್

 ನಶ್ವರವಾದ ಈ ಜಗತ್ತಿನಲ್ಲಿ ಎಲ್ಲವೂ ಬದಲಾಗುತ್ತಲೇ ಇರುತ್ತವೆ. ಆದರೆ, ಈ ಬದಲಾವಣೆಗಳ...

ತುಮಕೂರು | ಬಲಿತವರು ಬಡ ದಲಿತರನ್ನು ಇನ್ನೂ ಕೈಯೊಡ್ಡುವ ಪರಿಸ್ಥಿತಿಯಲ್ಲಿಯೇ ಇಟ್ಟಿದ್ದಾರೆ : ಎಚ್. ಡಿ. ಕುಮಾರಸ್ವಾಮಿ

ಬಲಿತ ದಲಿತ ಎಂದು ನನ್ನ ವಿರುದ್ಧ ಪೋಸ್ಟರ್ಗಳನ್ನು ಅಂಟಿಸುತ್ತಿರುವ ಕಿಡಿಗೇಡಿಗಳು ಮೊದಲು...

ತುಮಕೂರು | ಸಾಮಾಜಿಕ ನ್ಯಾಯವೇ ಸಮಗ್ರ ಅಭಿವೃದ್ಧಿಯ ಅಡಿಪಾಯ: ಜಿಲ್ಲಾಧಿಕಾರಿ ಶುಭ ಕಲ್ಯಾಣ್

 ಸಮಾಜದ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ದೊರೆತಾಗ ಮಾತ್ರ ದೇಶದ ಸಮಗ್ರ ಅಭಿವೃದ್ಧಿ...

ತುಮಕೂರು | ಭದ್ರಾ ಮೇಲ್ದಂಡೆ ಯೋಜನೆ: ಬಾಕಿ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಟಿ.ಬಿ. ಜಯಚಂದ್ರ ಸೂಚನೆ

ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ನಾಲೆಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಭೂಸ್ವಾಧೀನ...