ತುಮಕೂರು | ಮಾಧ್ಯಮ ಶಿಕ್ಷಣಕ್ಕೆ ಪ್ರಾಯೋಗಿಕ ಸ್ಪರ್ಶ; ವಿದ್ಯಾರ್ಥಿಗಳ ಕೈಯಲ್ಲಿ ಅರಳಿದ ‘ಸಿದ್ಧಾರ್ಥ ಸಂಪದ’

Date:

ಪತ್ರಿಕೋದ್ಯಮ ಮತ್ತು ಮಾಧ್ಯಮ ಕ್ಷೇತ್ರದ ಕೌಶಲ್ಯಗಳನ್ನು ತರಗತಿಯ ಪಾಠಕ್ಕೆ ಸೀಮಿತಗೊಳಿಸದೆ, ವಿದ್ಯಾರ್ಥಿಗಳಿಂದಲೇ ಪ್ರಾಯೋಗಿಕವಾಗಿ ಮಾಡಿಸಿ ಕಲಿಸುವ ಉದ್ದೇಶದಿಂದ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಹಾಗೂ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿ.ಜಿ.ಎಸ್. ಪ್ರಥಮ ದರ್ಜೆ ಕಾಲೇಜು ಮತ್ತು ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಒಂದು ದಿನದ ಮಾಧ್ಯಮ ಕಾರ್ಯಾಗಾರ ಆಯೋಜಿಸಲಾಗಿತ್ತು.

- Advertisement -

ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿ.ಜಿ.ಎಸ್. ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಪತ್ರಿಕಾ ಪುಟ ವಿನ್ಯಾಸ, ರೇಡಿಯೋ ನುಡಿಚಿತ್ರ, ಟಿವಿ ಸಂದರ್ಶನ ಹಾಗೂ ಫೋಟೋಗ್ರಫಿ ಕುರಿತು ತಜ್ಞರು ಪ್ರಾತ್ಯಕ್ಷಿಕೆಗಳ ಮೂಲಕ ತರಬೇತಿ ನೀಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮಹಿಳೆ ಮಾಡುತ್ತಿರುವ ಬಿಟ್ಟಿ ಚಾಕರಿಗಳೇನೇನು? ಇದನ್ನೇಕೆ ಅರಿಯಲು ಮುಂದಾಗಿದೆ...

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಸರ್ಕಾರದ ಗುರಿಗೆ ಒಂದು ದೊಡ್ಡ ಅಡ್ಡಿ ಎದುರಾಗಿದೆ. ಅದೇನೆಂದರೆ; ಸಾಕಷ್ಟು ಸಂಖ್ಯೆಯ ಮಹಿಳೆಯರನ್ನು ಉದ್ಯೋಗ ಕ್ಷೇತ್ರಕ್ಕೆ ತರುವುದು. ವಿಶ್ವಬ್ಯಾಂಕ್ ಪ್ರಕಾರ, 2047ರ ವೇಳೆಗೆ...

ಭದ್ರತೆಯ ಹೆಸರಿನಲ್ಲಿ ಮಾಂಸದಂಗಡಿಗಳಿಗೆ ಬೀಗ: ಸರ್ಕಾರದ ಈ ನಿರ್ಧಾರದ...

ಈ ಬೆಳವಣಿಗೆ ಕಾಂಗ್ರೆಸ್ ಸರ್ಕಾರದ ಆಡಳಿತಾತ್ಮಕ ಹೊಣೆಗಾರಿಕೆಯನ್ನೂ ಮುನ್ನೆಲೆಗೆ ತಂದಿದೆ. ಪ್ರಧಾನಿಯ ಭೇಟಿಯ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ಗಳ ಆಗಮನ ಮತ್ತು ನಿರ್ಗಮನದ ಭದ್ರತೆಯನ್ನು ನಿರ್ಬಂಧಕ್ಕೆ ಕಾರಣವೆಂದು ಸಮರ್ಥಿಸಲಾಗುತ್ತಿದ್ದರೆ, ಅದಕ್ಕೂ ಸಮಗ್ರ ವಿವರಣೆ ಬೇಕಾಗುತ್ತದೆ. ಪ್ರಧಾನಿ...

ನಿಜಕ್ಕೂ ಭಾರತದ ಬಡತನ 16%ಗೆ ಇಳಿದಿದೆಯೇ? ವಾಸ್ತವ ಹೇಳುವುದೇನು?

ವಿಶ್ವಬ್ಯಾಂಕ್ ವರದಿ ಪ್ರಕಾರ, ಭಾರತದಲ್ಲಿ ಬಡತನ 16.1%ಗೆ ಮತ್ತು ತೀವ್ರ ಬಡತನ 2.6%ಗೆ ಇಳಿದಿದೆ. ಇದೇ ಅಂಕಿಅಂಶವನ್ನು ಬಳಸಿಕೊಂಡು ತಮ್ಮ ಸಾಧನೆ ಎಂಬಂತೆ ಕೇಂದ್ರ ಸರ್ಕಾರ ಸಂಭ್ರಮಿಸುತ್ತಿದೆ. ಆದರೆ, ದೇಶದ ಸುಮಾರು 80...

ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳನ್ನು ವಿವಿಧ ತಂಡಗಳಾಗಿ ವಿಂಗಡಿಸಿ, ಪ್ರತಿಯೊಂದು ವಿಭಾಗದಲ್ಲಿಯೂ ಸ್ವತಃ ಕಾರ್ಯನಿರ್ವಹಿಸುವ ಅವಕಾಶ ಕಲ್ಪಿಸಲಾಯಿತು. ಕೇವಲ ಸೈದ್ಧಾಂತಿಕ ಮಾಹಿತಿ ನೀಡದೆ, ವಿದ್ಯಾರ್ಥಿಗಳಿಂದಲೇ ಪತ್ರಿಕೆಯ ಪುಟಗಳನ್ನು ವಿನ್ಯಾಸಗೊಳಿಸುವುದು, ರೇಡಿಯೋ ಕಾರ್ಯಕ್ರಮ ರೂಪಿಸುವುದು, ಟಿವಿ ಸಂದರ್ಶನ ನಡೆಸುವುದು ಹಾಗೂ ಛಾಯಾಚಿತ್ರ ಸೆರೆಹಿಡಿಯುವ ಚಟುವಟಿಕೆಗಳನ್ನು ಮಾಡಿಸಲಾಯಿತು.

1004412143

ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ಡಾ. ಜ್ಯೋತಿ ಸಿ. ಹಾಗೂ ಪುಟ ವಿನ್ಯಾಸಗಾರ ಸತೀಶ್ ಟಿ. ಅವರು ಪುಟ ವಿನ್ಯಾಸದ ತರಬೇತಿ ನೀಡಿದರು. ಪತ್ರಿಕೆ ವಿನ್ಯಾಸಕ್ಕೆ ಬಳಸುವ ತಂತ್ರಾಂಶ, ಪರಿಕರಗಳು ಹಾಗೂ ವಿನ್ಯಾಸದ ತಂತ್ರಗಳನ್ನು ಪರಿಚಯಿಸಿ, ವಿದ್ಯಾರ್ಥಿಗಳಿಂದಲೇ ಎ3 ಅಳತೆಯ ನಾಲ್ಕು ಪುಟಗಳನ್ನು ಸಿದ್ಧಪಡಿಸಿದರು.

ಸಹಾಯಕ ಪ್ರಾಧ್ಯಾಪಕಿ ಕೋಕಿಲ ಎಂ.ಎಸ್. ಅವರ ಮಾರ್ಗದರ್ಶನದಲ್ಲಿ ಟಿವಿ ಸಂದರ್ಶನದ ಪ್ರಾತ್ಯಕ್ಷಿಕೆ ನಡೆಯಿತು. ಆದಿಚುಂಚನಗಿರಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಸ್.ಎನ್. ಶ್ರೀಧರ್ ಹಾಗೂ ಬಿ.ಜಿ.ಎಸ್. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರೋಹಿತ್ ಎನ್.ಆರ್. ಅವರನ್ನು ವಿದ್ಯಾರ್ಥಿಗಳು ಸಂದರ್ಶಿಸಿದರು. ಬಳಿಕ ವಿವಿಧ ತಂಡಗಳ ವಿದ್ಯಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ವಿಷಯಗಳ ಕುರಿತು ಸಂದರ್ಶನ ನಡೆಸಿ, ಧ್ವನಿ ಮತ್ತು ದೃಶ್ಯ ಮಾಧ್ಯಮದ ಮೂಲಕ ಸಂದರ್ಶನ ಕೌಶಲ್ಯವನ್ನು ಅಭ್ಯಾಸ ಮಾಡಿದರು.

ಇನ್ನೊಂದು ತಂಡವು ರೇಡಿಯೋ ನುಡಿಚಿತ್ರದ ಪರಿಕಲ್ಪನೆ ರೂಪಿಸಿ, ಅದಕ್ಕೆ ಅಗತ್ಯವಾದ ಹಸ್ತಪ್ರತಿ ಸಿದ್ಧಪಡಿಸಿ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿತು. ಈ ಮೂಲಕ ರೇಡಿಯೋ ಕಾರ್ಯಕ್ರಮದ ಪರಿಕಲ್ಪನೆ, ಬರವಣಿಗೆ ಮತ್ತು ಪ್ರಸ್ತುತಿಯ ಹಂತಗಳನ್ನು ವಿದ್ಯಾರ್ಥಿಗಳು ಅನುಭವದ ಮೂಲಕ ಕಲಿತರು.

1004412145

ಮಾಧ್ಯಮ ಕೇಂದ್ರದ ಉಪನ್ಯಾಸಕ ನವೀನ್ ಎನ್.ಜಿ. ಅವರು ಫೋಟೋಗ್ರಫಿ ಕುರಿತು ತರಬೇತಿ ನೀಡಿದರು. ಛಾಯಾಗ್ರಹಣಕ್ಕೆ ಅಗತ್ಯವಾದ ನಿರ್ಮಾಣ ಪೂರ್ವ ಸಿದ್ಧತೆ, ಚಿತ್ರ ಸೆರೆಹಿಡಿಯುವ ವಿಧಾನ ಹಾಗೂ ನಿರ್ಮಾಣೋತ್ತರ ಪ್ರಕ್ರಿಯೆಗಳನ್ನು ವಿವರಿಸಿದರು. ವಿದ್ಯಾರ್ಥಿಗಳಿಗೆ ಕ್ಯಾಮೆರಾ ನೀಡಿ ಪ್ರಾಯೋಗಿಕವಾಗಿ ಛಾಯಾಚಿತ್ರಗಳನ್ನು ಸೆರೆಹಿಡಿಯುವಂತೆ ಮಾಡಲಾಯಿತು. ವಿದ್ಯಾರ್ಥಿಗಳು ತೆಗೆದ ಚಿತ್ರಗಳನ್ನೇ ಪತ್ರಿಕೆಯ ಪುಟ ವಿನ್ಯಾಸದಲ್ಲಿ ಬಳಸಿಕೊಳ್ಳುವ ಮೂಲಕ ಕಲಿಕೆಯೊಂದಿಗೆ ಸೃಜನಶೀಲತೆಯನ್ನೂ ಬೆಸೆಯಲಾಯಿತು.

ಕಾರ್ಯಾಗಾರದ ವಿಶೇಷ ಆಕರ್ಷಣೆಯಾಗಿ ವಿದ್ಯಾರ್ಥಿಗಳೇ ಸಿದ್ಧಪಡಿಸಿದ ಎ3 ಅಳತೆಯ ನಾಲ್ಕು ಪುಟಗಳ ‘ಸಿದ್ಧಾರ್ಥ ಸಂಪದ’ವನ್ನು ಬಿಡುಗಡೆಗೊಳಿಸಲಾಯಿತು. ಪತ್ರಿಕಾ ವಿನ್ಯಾಸ, ವರದಿಗಾರಿಕೆ, ಛಾಯಾಗ್ರಹಣ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಕಲಿತ ಕೌಶಲ್ಯಗಳನ್ನು ಒಂದೇ ಪ್ರಕಟಣೆಯಲ್ಲಿ ಅನಾವರಣಗೊಳಿಸಿದ್ದು ಕಾರ್ಯಾಗಾರದ ಪ್ರಾಯೋಗಿಕ ಕಲಿಕೆಗೆ ಸಾಕ್ಷಿಯಾಯಿತು.

ಕಾರ್ಯಕ್ರಮದಲ್ಲಿ ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ.ಟಿ. ಮುದ್ದೇಶ್, ಆದಿಚುಂಚನಗಿರಿ ವಿಶ್ವವಿದ್ಯಾಲಯದ ಬಿ.ಜಿ.ಎಸ್. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರೋಹಿತ್ ಎನ್.ಆರ್., ಸಹ ಪ್ರಾಧ್ಯಾಪಕಿ ಡಾ. ಶ್ವೇತಾರಾಣಿ ಎಚ್., ಸಹಾಯಕ ಪ್ರಾಧ್ಯಾಪಕರಾದ ಡಾ. ಜ್ಯೋತಿ, ಕೋಕಿಲ ಎಂ.ಎಸ್., ನವೀನ್ ಎನ್.ಜಿ., ಸಿದ್ಧಾರ್ಥ ರೇಡಿಯೋ ಸಿಬ್ಬಂದಿ ಹರೀಶ್ ಕುಮಾರ್, ಸಾಹೇ ವಿಶ್ವವಿದ್ಯಾಲಯದ ವಿಡಿಯೋ ಎಡಿಟರ್ ರಾಘವ, ಎಸ್‌ಎಸ್‌ಸಿಎಂಎಸ್ ವಿದ್ಯಾರ್ಥಿಗಳು ಹಾಗೂ ಬಿ.ಜಿ.ಎಸ್. ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಭದ್ರಾ ಮೇಲ್ದಂಡೆ ಯೋಜನೆ: ಬಾಕಿ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಟಿ.ಬಿ. ಜಯಚಂದ್ರ ಸೂಚನೆ

ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ನಾಲೆಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಭೂಸ್ವಾಧೀನ...

ತುಮಕೂರು | ಕೈಗಾರಿಕಾ ಬೆಳವಣಿಗೆಗೆ ಕೇಂದ್ರದ ₹11,500 ಕೋಟಿ ಪಿಎಲ್‌ಐ ನೆರವು : ಎಚ್.ಡಿ. ಕುಮಾರಸ್ವಾಮಿ

 ದೇಶದಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಹಾಗೂ ಉತ್ಪಾದನಾ ವಲಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ...

ಗುಬ್ಬಿ | ರಸ್ತೆ ವಿವಾದಕ್ಕೆ ವಿದ್ಯಾರ್ಥಿನಿಯ ಶಿಕ್ಷಣ ಬಲಿ?

ತೋಟದ ಸಾಲಿನಲ್ಲಿನ ರಸ್ತೆಗೆ ಓಡಾಡದಂತೆ ನಿರ್ಬಂಧ ಹೇರಿ ಒಂದು ಕುಟುಂಬಕ್ಕೆ ದಿಗ್ಬಂಧನ...

ಗುಬ್ಬಿ | ಒನಕೆ ಓಬವ್ವ ಹೆಸರಿನಲ್ಲಿ ನಿಗಮ ಸ್ಥಾಪಿಸಿ : ಛಲವಾದಿ ಮಹಾಸಭಾ ಅಧ್ಯಕ್ಷ ಈರಣ್ಣ ಒತ್ತಾಯ

ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯ ಛಲವಾದಿ ಸಮುದಾಯದ ಸಾಮಾಜಿಕ ಅಭಿವೃದ್ದಿಗೆ ಒನಕೆ...