ತುಮಕೂರು | ಗ್ರಾ. ಪಂಚಾಯಿತಿ ಅಭಿವೃದ್ಧಿಗೆ ಒಗ್ಗೂಡಿ ತಂಡವಾಗಿ ಕೆಲಸ ಮಾಡಬೇಕಿದೆ : ಜಿಪಂ ಸಿಇಓ ಜಿ.ಪ್ರಭು

Date:

Advertisements

ಮಾದರಿ ಗ್ರಾಮ ಪಂಚಾಯಿತಿ ನಿರ್ಮಾಣಕ್ಕೆ ಎಲ್ಲಾ ಚುನಾಯಿತ ಪ್ರತಿನಿಧಿಗಳು ಹಾಗೂ ಪಿಡಿಓಯಿಂದ ನೀರು ಗಂಟಿ ಸಿಬ್ಬಂದಿಯವರೆಗೆ ಒಗ್ಗೂಡಿ ತಂಡವಾಗಿ ಕೆಲಸ ಮಾಡಿದರೆ ಮಾತ್ರ ಗ್ರಾಮ ಪಂಚಾಯಿತಿಗಳು ಮಾದರಿ ಎನಿಸಿಕೊಳ್ಳುತ್ತದೆ ಎಂದು ತುಮಕೂರು ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು ಅವರು ಸಲಹೆ ನೀಡಿದರು.

ಗುಬ್ಬಿ ಪಟ್ಟಣದ ಎಸ್ ಸಿ ಎಸ್ ಕಲ್ಯಾಣ ಮಂಟಪದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಿಡಿಒಗಳು, ಕಾರ್ಯದರ್ಶಿಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಚುನಾಯಿತ ಪ್ರತಿನಿಧಿಗಳಿಂದ ನಿತ್ಯ ದೂರುಗಳು ಬರುತ್ತಿರುವ ಹಿನ್ನಲೆ ಕಾರ್ಯಗಾರ ಆಯೋಜನೆ ಮಾಡಬೇಕಾಗಿತ್ತು. ಈ ವೇದಿಕೆಯಲ್ಲಿ ಯಾವ ಭಾಷಣಕ್ಕೆ ಅವಕಾಶ ನೀಡದೆ ಸಮಸ್ಯೆಗಳು, ಪ್ರಶ್ನೆಗಳಿಗೆ ನೇರ ಉತ್ತರ ನೀಡುವ ಪ್ರಯತ್ನ ಹಾಗೂ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಕ್ಕೆ ಅವಶ್ಯ ಮಾಹಿತಿ ಒದಗಿಸುವ ಕೆಲಸ ಮಾಡಲಾಗಿದೆ ಎಂದರು.

ಜಿಲ್ಲೆಯ 330 ಗ್ರಾಮ ಪಂಚಾಯಿತಿಯ ಸುಮಾರು ಮೂರು ಸಾವಿರ ಪ್ರತಿನಿಧಿಗಳು ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಸರ್ಕಾರದ ಯಾವುದೇ ಕಾರ್ಯಕ್ರಮ ಅನುಷ್ಠಾನಕ್ಕೆ ಸಹಕಾರ ನೀಡಬೇಕಿದೆ. ನರೇಗಾ ಯೋಜನೆ ಅನುಷ್ಠಾನದಲ್ಲಿ ಗುಬ್ಬಿ ತುಮಕೂರು ತಾಲ್ಲೂಕು ಹಿಂದೆ ಬಿದ್ದಿದೆ. 55 ಕೋಟಿ ಕೆಲಸಕ್ಕೆ ನಾನು ಅನುಮೋದನೆ ಕೊಟ್ಟರೆ ಕೆಲಸ ಮಾತ್ರ ಕೇವಲ 18 ಕೋಟಿ ನಡೆದಿದೆ. ಅಧ್ಯಕ್ಷರಾದಿ ಅಧಿಕಾರಿಗಳು, ನೀರುಗಂಟಿ ಸಿಬ್ಬಂದಿಗಳು ಮಾಡುತ್ತಿರುವುದು ಜವಾಬ್ದಾರಿ ಕೆಲಸ ಅರಿತು ನಡೆದುಕೊಳ್ಳಬೇಕು. ಇಲ್ಲಿ ನನ್ನ ವೈಯಕ್ತಿಕ ಇಲ್ಲ. ಅಭಿವೃದ್ದಿ ಕೆಲಸಕ್ಕೆ ಒತ್ತು ನೀಡಿದ್ದೇನೆ. ನರೇಗಾ ಯೋಜನೆ ಅನುಷ್ಠಾನಕ್ಕೆ 800 ಕೋಟಿ ಅನುಮೋದನೆ ನೀಡಿದರೆ ಕೆಲಸ ಸಾಗಿಲ್ಲ. 5 ಕೋಟಿ ಕೆಲಸ ಮಾಡಿದ್ದು ಎರಡು ಪಂಚಾಯಿತಿ ಮಾತ್ರ. 2 ಕೋಟಿ ಮುಟ್ಟಿದ್ದು ನೂರು ಪಂಚಾಯಿತಿ ಇನ್ನೂ ಕೆಲಸ ಮಾಡಬೇಕಿದೆ ಎಂದರು.

Advertisements

ಕಳೆದ ವರ್ಷಕ್ಕಿಂತ ನರೇಗಾ ಯೋಜನೆ ಕೆಲಸ ಮಾಡಿದೆ. 639 ಕೋಟಿ ರೂಗಳ ಸಾಧನೆ ತೋರಿದ ಜಿಲ್ಲೆಯಲ್ಲಿ ಹಿಂದುಳಿದ ತಾಲ್ಲೂಕುಗಳಲ್ಲಿ ಕಾರ್ಯಾಗಾರ ನಡೆಸಬೇಕಿದೆ. 214 ಕೋಟಿ ರೂಗಳ ಕೆಲಸ ಪ್ರಗತಿಯಲ್ಲಿರುವ ಜಿಲ್ಲೆಗೆ ಮತ್ತಷ್ಟು ಕೆಲಸ ತರುವ ಉದ್ದೇಶದಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಗ್ಗೂಡಿ ಕೆಲಸ ಮಾಡಬೇಕು ಎಂದ ಅವರು ಶಿಕ್ಷಣಕ್ಕೆ ಒತ್ತು ನೀಡಿ ಪಂಚಾಯಿತಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು. ನರೇಗಾ ಯೋಜನೆ ಬಳಸಿ ಕೆಲಸ ಮಾಡುವಾಗ್ಗೆ ಯಾವ ಕೆಲಸವನ್ನೂ ಬೇಡ ಎನ್ನದೆ ಕಾಮಗಾರಿಗೆ ಅನುಮೋದನೆ ನೀಡಿದ್ದೇನೆ. ಪ್ರಜ್ಞಾವಂತ ನಾಗರೀಕರು ಇರುವ ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆ ಕಳಂಕರಹಿತವಾಗಿ ಅನುಷ್ಠಾನ ಮಾಡಬೇಕು. ಇಲ್ಲವಾದಲ್ಲಿ ಲೋಕಾಯುಕ್ತ ಇಲಾಖೆಯತ್ತ ದೂರುಗಳು ಹೋಗುತ್ತವೆ ಎಂಬ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಪ್ರಶ್ನಾವಳಿ ನಡೆಯಿತು. ಸದಸ್ಯರ ನೇರ ಪ್ರಶ್ನೆಗೆ ಉತ್ತರ ನೀಡಿದರು. ಕೆಲವು ಸಮಸ್ಯೆಗೆ ಪಿಡಿಓಗಳನ್ನೇ ಮುಖಾಮುಖಿ ಚರ್ಚಿಸಲು ಅವಕಾಶ ನೀಡಿದರು.

ತಾಪಂ ಇಓ ಶಿವಪ್ರಕಾಶ್, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಇಂದ್ರೇಶ್ ಸೇರಿದಂತೆ ತಾಲ್ಲೂಕಿನ 34 ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಿಡಿಒಗಳು ಉಪಸ್ಥಿತರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ರೈತನ ಕೃಷಿ ಚಟುವಟಿಕೆಗೆ ಜೇನು ಸಾಕಾಣಿಕೆ ವರದಾನ : ಪುಷ್ಪಲತಾ

ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ಪ್ರಮುಖ ಘಟವಾದ ಪರಾಗಸ್ಪರ್ಶ ಕ್ರಿಯೆಗೆ...

ಗುಬ್ಬಿ | ಎಂ.ಎನ್.ಕೋಟೆ ಗ್ರಾಪಂ ಉಪಾಧ್ಯಕ್ಷರಾಗಿ ಸಿದ್ದಗಂಗಮ್ಮ ಅವಿರೋಧ ಆಯ್ಕೆ

ಗುಬ್ಬಿ ತಾಲ್ಲೂಕಿನ ನಿಟ್ಟೂರು ಹೋಬಳಿ ಎಂ.ಎನ್.ಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಗುಬ್ಬಿ | ಹಿಂದುಳಿದ ಸಮುದಾಯಕ್ಕೆ ಹೊಸ ದಿಕ್ಕು ತೋರಿದ ‘ಅರಸು‘ : ತಹಶೀಲ್ದಾರ್ ಆರತಿ.ಬಿ

ಶೋಷಣೆ ಮುಕ್ತ ಹಾಗೂ ಸಮಾನತೆಯ ಸಮಾಜ ನಿರ್ಮಾಣ ಮಾಡಿದ ಡಿ.ದೇವರಾಜ...

Download Eedina App Android / iOS

X