ತುಮಕೂರು | ಗ್ರಾ. ಪಂಚಾಯಿತಿ ಅಭಿವೃದ್ಧಿಗೆ ಒಗ್ಗೂಡಿ ತಂಡವಾಗಿ ಕೆಲಸ ಮಾಡಬೇಕಿದೆ : ಜಿಪಂ ಸಿಇಓ ಜಿ.ಪ್ರಭು

Date:

ಮಾದರಿ ಗ್ರಾಮ ಪಂಚಾಯಿತಿ ನಿರ್ಮಾಣಕ್ಕೆ ಎಲ್ಲಾ ಚುನಾಯಿತ ಪ್ರತಿನಿಧಿಗಳು ಹಾಗೂ ಪಿಡಿಓಯಿಂದ ನೀರು ಗಂಟಿ ಸಿಬ್ಬಂದಿಯವರೆಗೆ ಒಗ್ಗೂಡಿ ತಂಡವಾಗಿ ಕೆಲಸ ಮಾಡಿದರೆ ಮಾತ್ರ ಗ್ರಾಮ ಪಂಚಾಯಿತಿಗಳು ಮಾದರಿ ಎನಿಸಿಕೊಳ್ಳುತ್ತದೆ ಎಂದು ತುಮಕೂರು ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು ಅವರು ಸಲಹೆ ನೀಡಿದರು.

ಗುಬ್ಬಿ ಪಟ್ಟಣದ ಎಸ್ ಸಿ ಎಸ್ ಕಲ್ಯಾಣ ಮಂಟಪದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಿಡಿಒಗಳು, ಕಾರ್ಯದರ್ಶಿಗಳ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಚುನಾಯಿತ ಪ್ರತಿನಿಧಿಗಳಿಂದ ನಿತ್ಯ ದೂರುಗಳು ಬರುತ್ತಿರುವ ಹಿನ್ನಲೆ ಕಾರ್ಯಗಾರ ಆಯೋಜನೆ ಮಾಡಬೇಕಾಗಿತ್ತು. ಈ ವೇದಿಕೆಯಲ್ಲಿ ಯಾವ ಭಾಷಣಕ್ಕೆ ಅವಕಾಶ ನೀಡದೆ ಸಮಸ್ಯೆಗಳು, ಪ್ರಶ್ನೆಗಳಿಗೆ ನೇರ ಉತ್ತರ ನೀಡುವ ಪ್ರಯತ್ನ ಹಾಗೂ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನಕ್ಕೆ ಅವಶ್ಯ ಮಾಹಿತಿ ಒದಗಿಸುವ ಕೆಲಸ ಮಾಡಲಾಗಿದೆ ಎಂದರು.

ಜಿಲ್ಲೆಯ 330 ಗ್ರಾಮ ಪಂಚಾಯಿತಿಯ ಸುಮಾರು ಮೂರು ಸಾವಿರ ಪ್ರತಿನಿಧಿಗಳು ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಸರ್ಕಾರದ ಯಾವುದೇ ಕಾರ್ಯಕ್ರಮ ಅನುಷ್ಠಾನಕ್ಕೆ ಸಹಕಾರ ನೀಡಬೇಕಿದೆ. ನರೇಗಾ ಯೋಜನೆ ಅನುಷ್ಠಾನದಲ್ಲಿ ಗುಬ್ಬಿ ತುಮಕೂರು ತಾಲ್ಲೂಕು ಹಿಂದೆ ಬಿದ್ದಿದೆ. 55 ಕೋಟಿ ಕೆಲಸಕ್ಕೆ ನಾನು ಅನುಮೋದನೆ ಕೊಟ್ಟರೆ ಕೆಲಸ ಮಾತ್ರ ಕೇವಲ 18 ಕೋಟಿ ನಡೆದಿದೆ. ಅಧ್ಯಕ್ಷರಾದಿ ಅಧಿಕಾರಿಗಳು, ನೀರುಗಂಟಿ ಸಿಬ್ಬಂದಿಗಳು ಮಾಡುತ್ತಿರುವುದು ಜವಾಬ್ದಾರಿ ಕೆಲಸ ಅರಿತು ನಡೆದುಕೊಳ್ಳಬೇಕು. ಇಲ್ಲಿ ನನ್ನ ವೈಯಕ್ತಿಕ ಇಲ್ಲ. ಅಭಿವೃದ್ದಿ ಕೆಲಸಕ್ಕೆ ಒತ್ತು ನೀಡಿದ್ದೇನೆ. ನರೇಗಾ ಯೋಜನೆ ಅನುಷ್ಠಾನಕ್ಕೆ 800 ಕೋಟಿ ಅನುಮೋದನೆ ನೀಡಿದರೆ ಕೆಲಸ ಸಾಗಿಲ್ಲ. 5 ಕೋಟಿ ಕೆಲಸ ಮಾಡಿದ್ದು ಎರಡು ಪಂಚಾಯಿತಿ ಮಾತ್ರ. 2 ಕೋಟಿ ಮುಟ್ಟಿದ್ದು ನೂರು ಪಂಚಾಯಿತಿ ಇನ್ನೂ ಕೆಲಸ ಮಾಡಬೇಕಿದೆ ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಳೆದ ವರ್ಷಕ್ಕಿಂತ ನರೇಗಾ ಯೋಜನೆ ಕೆಲಸ ಮಾಡಿದೆ. 639 ಕೋಟಿ ರೂಗಳ ಸಾಧನೆ ತೋರಿದ ಜಿಲ್ಲೆಯಲ್ಲಿ ಹಿಂದುಳಿದ ತಾಲ್ಲೂಕುಗಳಲ್ಲಿ ಕಾರ್ಯಾಗಾರ ನಡೆಸಬೇಕಿದೆ. 214 ಕೋಟಿ ರೂಗಳ ಕೆಲಸ ಪ್ರಗತಿಯಲ್ಲಿರುವ ಜಿಲ್ಲೆಗೆ ಮತ್ತಷ್ಟು ಕೆಲಸ ತರುವ ಉದ್ದೇಶದಿಂದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಗ್ಗೂಡಿ ಕೆಲಸ ಮಾಡಬೇಕು ಎಂದ ಅವರು ಶಿಕ್ಷಣಕ್ಕೆ ಒತ್ತು ನೀಡಿ ಪಂಚಾಯಿತಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು. ನರೇಗಾ ಯೋಜನೆ ಬಳಸಿ ಕೆಲಸ ಮಾಡುವಾಗ್ಗೆ ಯಾವ ಕೆಲಸವನ್ನೂ ಬೇಡ ಎನ್ನದೆ ಕಾಮಗಾರಿಗೆ ಅನುಮೋದನೆ ನೀಡಿದ್ದೇನೆ. ಪ್ರಜ್ಞಾವಂತ ನಾಗರೀಕರು ಇರುವ ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆ ಕಳಂಕರಹಿತವಾಗಿ ಅನುಷ್ಠಾನ ಮಾಡಬೇಕು. ಇಲ್ಲವಾದಲ್ಲಿ ಲೋಕಾಯುಕ್ತ ಇಲಾಖೆಯತ್ತ ದೂರುಗಳು ಹೋಗುತ್ತವೆ ಎಂಬ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಪ್ರಶ್ನಾವಳಿ ನಡೆಯಿತು. ಸದಸ್ಯರ ನೇರ ಪ್ರಶ್ನೆಗೆ ಉತ್ತರ ನೀಡಿದರು. ಕೆಲವು ಸಮಸ್ಯೆಗೆ ಪಿಡಿಓಗಳನ್ನೇ ಮುಖಾಮುಖಿ ಚರ್ಚಿಸಲು ಅವಕಾಶ ನೀಡಿದರು.

ತಾಪಂ ಇಓ ಶಿವಪ್ರಕಾಶ್, ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಇಂದ್ರೇಶ್ ಸೇರಿದಂತೆ ತಾಲ್ಲೂಕಿನ 34 ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಿಡಿಒಗಳು ಉಪಸ್ಥಿತರಿದ್ದರು.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾವಗಡ ಸೋಲಾರ್ ಪಾರ್ಕ್ ಗೆ ವಿಧಾನ ಮಂಡಲದ ಸಾರ್ವಜನಿಕ ಉದ್ದಿಮೆಗಳ ಸಮಿತಿ ಭೇಟಿ

ವಿಧಾನಮಂಡಲದ ಸಾರ್ವಜನಿಕ ಉದ್ದಿಮೆಗಳ ಸಮಿತಿ ಅಧ್ಯಕ್ಷ ತನ್ವೀರ್ ಸೇಠ್ ಅವರ...

ತುಮಕೂರು| ಸಾರ್ವಜನಿಕರಿಗೆ ಸಮರ್ಪಕ ಸೇವೆ ಒದಗಿಸದ ಅಧಿಕಾರಿ, ಸಿಬ್ಬಂದಿಗಳಿಗೆ ಲೋಕಾಯುಕ್ತದಿಂದ ಕಾನೂನು ಕ್ರಮ

ಸಮಾಜದಲ್ಲಿ ಸಾರ್ವಜನಿಕರಿಗೆ ಸಂವಿಧಾನಾತ್ಮಕವಾಗಿ ಬದುಕಲು ಅವಕಾಶ ಕಲ್ಪಿಸುವ ಹಾಗೂ ಸಾರ್ವಜನಿಕ ಸೇವೆಗಳನ್ನು...

ಪ್ರೋತ್ಸಾಹ ಧನ ಪಡೆಯಲು ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ : ಸಮಾಜ ಕಲ್ಯಾಣ ಇಲಾಖೆಯ ಪ್ರಕಟಣೆ

2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ...