ತುಮಕೂರು | ಉಂಡೆ ಕೊಬ್ಬರಿಗೆ ದಾಖಲೆಯ ಬೆಲೆ: ಇಳುವರಿ ಕುಸಿತ

Date:

ಕಲ್ಪತರು ನಾಡು ತುಮಕೂರಿನ ರೈತರ ಆದಾಯದ ಮೂಲ ಉಂಡೆ ಕೊಬ್ಬರಿ ದಾಖಲೆ ಬೆಲೆ ನಿರ್ಮಿಸಿದೆ. ಆದರೆ ಇಳುವರಿ ಕಡಿಮೆ ಕ್ಷೀಣವಾದರಿಂದ ರೈತರಿಗೆ ನಿರೀಕ್ಷಿತ ಲಾಭ ದೊರೆಯುತ್ತಿಲ್ಲ. ಬೆಲೆ ಕುಸಿತದಿಂದ ಹಲವು ವರ್ಷಗಳಿಂದ ಸೊರಗಿದ್ದ ತೆಂಗು ಬೆಳೆಗಾರರಿಗೆ ಉಂಡೆ ಕೊಬ್ಬರಿ ಬೆಲೆ ಏರಿಕೆ ರೈತರ ಸಂತಸಕ್ಕೆ ಕಾರಣವಾದರೂ, ಅಟ್ಟದಲ್ಲಿ ಕೊಬ್ಬರಿ ಇಲ್ಲದೆ ಇಷ್ಟು ವರ್ಷದ ನಷ್ಟ ತುಂಬಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

- Advertisement -

ರೋಗ ಭಾದೆ, ಮಳೆ ಕೊರತೆಯಿಂದ ತೆಂಗು ಇಳುವರಿ ನಿರಂತರವಾಗಿ ಕುಸಿಯುತ್ತಲೇ ಸಾಗುತ್ತಿದೆ. ಉತ್ತಮ ಬೆಲೆ ಬಂದರು, ಇರುವ ಕೊಬ್ಬರಿ ಮಾರಿ ತೋಟ ನಿರ್ವಹಣೆ ಮಾಡಲು ರೈತರು ಹೆಣಗಾಡುತ್ತಿದ್ದಾರೆ. ತೆಂಗಿನ ಮರಗಳ ರಕ್ಷಣೆಗೆ ಪಣತೊಟ್ಟಿದ್ದಾರೆ. ಮಕ್ಕಳಂತೆ ಸಾಕಿ ಸಲುಹಿದ ಮರಗಳು ಕಣ್ಣ ಮುಂದೆ ರೋಗ ಬಾದೆಯಿಂದ ನೆಲಕ್ಕುರುಳುತ್ತಿವೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ರೈತರು ಎಳನೀರು ಮಾರಾಟಕ್ಕೆ ಒತ್ತು ಕೊಡುತ್ತಿರುವುದು ಕೊಬ್ಬರಿ ಆವಕ ಕಡಿಮೆಯಾಗಲು ಕಾರಣ. “ಕಾಯಿಯನ್ನು ಅಟ್ಟಕ್ಕೆ ಹಾಕಿ ವರ್ಷಗಟ್ಟಲೆ ಕಾದು ಕೊಬ್ಬರಿ ಮಾರುವಾಗಲೂ ನಿರೀಕ್ಷಿತ ಬೆಲೆ ಸಿಗುವ ಗ್ಯಾರಂಟಿಯಿಲ್ಲ” ಎನ್ನುತ್ತಾರೆ ರೈತರು.

“ಮಾರುಕಟ್ಟೆಯಲ್ಲಿ ಆವಕ ಸಾಕಷ್ಟು ಪ್ರಮಾಣದಲ್ಲಿ ಕುಸಿತ ಕಂಡಿದೆ. ಕೊಬ್ಬರಿ ಮಂಡಿಗಳಿಗೆ ನಿರೀಕ್ಷಿಸಿದಷ್ಟು ಮಾಲು ಬರುತ್ತಿಲ್ಲ. ಹಾಗಾಗಿ ಈ ಮಟ್ಟಕ್ಕೆ ಬೆಲೆ ಏರಿಕೆಯಾಗಿದೆ” ಎಂದು ವರ್ತಕರು ಹೇಳುತ್ತಿದ್ದಾರೆ.

ಇದನ್ನೂ ಓದಿ>ತುಮಕೂರು | ಎಸ್‌ಐಆರ್ ತಿರಸ್ಕರಿಸಲು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

“ಉಂಡೆ ಕೊಬ್ಬರಿ ಧಾರಣೆ ದಿನದಿಂದ ದಿನಕ್ಕೆ ಜಿಗಿತ ಕಂಡಿದ್ದು, ಸೋಮವಾರ ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಲ್ ₹38 ಸಾವಿರಕ್ಕೆ ಮಾರಾಟವಾಗುವ ಮೂಲಕ ಮತ್ತೊಂದು ದಾಖಲೆ ನಿರ್ಮಿಸಿದೆ. ಏ.9ರಂದು ನಡೆದ ಹರಾಜಿನಲ್ಲಿ ಕ್ವಿಂಟಲ್ ₹36,006ಕ್ಕೆ ಮಾರಾಟವಾಗಿತ್ತು. ಸೋಮವಾರ ಗರಿಷ್ಠ ₹38 ಸಾವಿರ, ಮಾದರಿ ₹36,711, ಕನಿಷ್ಠ ₹32,500ಕ್ಕೆ ಮಾರಾಟವಾಗಿದೆ. ತಿಪಟೂರು ಮಾರುಕಟ್ಟೆಗೆ ಕೇವಲ 1,705 ಕ್ವಿಂಟಲ್ (ಚೀಲ 3,989) ಕೊಬ್ಬರಿ ಆವಕವಾಗಿದೆ” ಎಂದು ರೈತ ಸಿ ಕೆ ಪ್ರಕಾಶ್ ಮಾಹಿತಿ ನೀಡಿದರು.

97bdb875 cdab 46f0 bf18 e456f71c4848

ಒಟ್ಟಾರೆ ತೆಂಗು ಬೆಳೆ ಉಳಿವಿಗೆ ಸರ್ಕಾರ ಹೆಚ್ಚಿನ ಉತ್ತೇಜನ ನೀಡಬೇಕು. ರೈತರು ಮಕ್ಕಳಂತೆ ಸಾಕಿರುವ ಮರಗಳನ್ನು ಉಳಿಸಲು ಸರ್ಕಾರ ನೆರವಾಗಬೇಕು. ಉಂಡೆ ಕೊಬ್ಬರಿಗೆ ಬೆಲೆ ಹೆಚ್ಚಾದರೆ ಸಾಲದು, ಇಳುವರಿಯೂ ಹೆಚ್ಚಾಗಲು ಕ್ರಮಕೈಗೊಳ್ಳುವ ಅನಿವಾರ್ಯವಿದೆ.

WhatsApp Image 2024 08 09 at 10.52.48 1578a566
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR | ರಾಜ್ಯದಲ್ಲಿ 43.82 ಲಕ್ಷ ನೋಟಿಸ್ ವಿಚಾರಣೆ ಪೂರ್ಣ; ಅಕ್ಟೋಬರ್ 27ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ: ಸಿಇಒ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯು ಅಂತಿಮ...

ಬೆಂಗಳೂರು | SIR ವಿರುದ್ಧ ಮೊಳಗಿದ ಘೋಷ; ಪ್ರಜಾತಂತ್ರದ ಉಳಿವಿಗಾಗಿ ‘ಜನತಾ ಮೆರವಣಿಗೆ’

ದೇಶದ ಮತದಾರರ ಮೇಲೆ ಗ್ಯಾನೇಶ್ ಕುಮಾರ್ (ಚುನಾವಣಾ ಆಯೋಗ) ಹೇರಿರುವ ಎಸ್‌ಐಆರ್...

ಚಿಕ್ಕಮಗಳೂರು | ವಯಕ್ತಿಕ ದ್ವೇಷಕ್ಕೆ 150 ಅಡಿಕೆ ಗಿಡ ಕತ್ತರಿಸಿದ ಕಿಡಿಗೇಡಿಗಳು 

ಜಿಲ್ಲೆಯ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ಅ.21ರ ಬುಧವಾರದಂದು ವೈಯಕ್ತಿಕ ದ್ವೇಷದ...

ಗಾಯದ ಗುರುತುಗಳಿಲ್ಲವೆಂದು ಪೋಕ್ಸೋ ಸಂತ್ರಸ್ತೆಗೆ ಪರಿಹಾರ ನಿರಾಕರಿಸುವಂತಿಲ್ಲ: ಅಲಹಾಬಾದ್‌ ಹೈಕೋರ್ಟ್

ಲೈಂಗಿಕ ದೌರ್ಜನ್ಯ ಪ್ರಕರಣದ ವೈದ್ಯಕೀಯ ವರದಿಯಲ್ಲಿ ದೈಹಿಕ ಗಾಯಗಳ ಗುರುತುಗಳು ದಾಖಲಾಗಿಲ್ಲ...