ತುಮಕೂರು | ಎಸ್‌ಐಆರ್ ತಿರಸ್ಕರಿಸಲು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

Date:

 ನಾವು ವಿಶೇಷ ಮತ ತೀವ್ರ ಪರಿಷ್ಕರಣೆಯನ್ನು ವಿರೋಧಿಸುತ್ತೇವೆ. ಏಕೆಂದರೇ ಸಂವಿಧಾನ ವಿರೋಧಿಯಾಗಿರುವ ಈ ನಡೆ ಕೇಂದ್ರ ಸರ್ಕಾರ ಭಾರತದ ಚುನಾವಣಾ ಆಯೋಗದ ಮುಖಾಂತರ ಪೌರತ್ವ ಖಾತ್ರಿಯನ್ನು ದಾಖಲಾತಿಗಳ ಮೂಲಕ ಮಾಡಲು ಹೊರಟಿರುವುದು ದೇಶದ ಅನಕ್ಷರಸ್ಥರಿಗೆ, ಬಡವರಿಗೆ, ಮಹಿಳೆಯರಿಗೆ, ದಲಿತರು, ಮತ್ತು ಅಲ್ಪಸಂಖ್ಯಾತರು ಹಾಗೂ ಅಲೆಮಾರಿಗಳಿಗೆ ಮತದ ಹಕ್ಕನ್ನು ಕಸಿಯುವ ಹುನ್ನಾರವಾಗಿದೆ ಎಂದು  ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ಹೇಳಿದರು

- Advertisement -

ನಗರದ ಟೌನ್‌ಹಾಲ್‌ನ ಅಂಬೇಡ್ಕರ್ ರವರ ಪ್ರತಿಮೆ ಹತ್ತಿರ ವಿಶೇಷ ಮತ ತೀವ್ರ ಪರಿಷ್ಕಕರಣೆ (ಎಸ್‌ಐಆರ್) ವಿರೋಧಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಸಂಯುಕ್ತಾಶ್ರಯದಲ್ಲಿ  ನಡೆದ  ಪ್ರತಿಭಟನೆಯಲ್ಲಿ ಮಾತನಾಡಿದ ಅವರು,

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬಾಲಿವುಡ್‌ ಮೇಲೆ ಭೂಗತ ಲೋಕದ ಕರಿನೆರಳು: ದಾವೂದ್ ಇಬ್ರಾಹಿಂನಿಂದ...

ಒಂದು ಕಾಲದಲ್ಲಿ ಬಾಲಿವುಡ್ ಸಿನಿಮಾಗಳಿಗೆ ಹಣ ಹೂಡುತ್ತಿದ್ದ, ನಟ-ನಟಿಯರ ವೃತ್ತಿಜೀವನದ ಮೇಲೆ ಪ್ರಭಾವ ಬೀರುತ್ತಿದ್ದ ಭೂಗತ ಲೋಕ, ಈಗ ಗುಂಡಿನ ದಾಳಿ ಮತ್ತು ಜೀವಬೆದರಿಕೆಗಳ ಮೂಲಕ ಮತ್ತೊಮ್ಮೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ. ದಾವೂದ್...

ಲೋಕಸಭೆಯ ಬಲ 850ಕ್ಕೆ ಏರಿಕೆ: ಕಲಾಪದ ಸಮಯ ಹೆಚ್ಚಳವಿಲ್ಲದಿದ್ದರೆ...

ಲೋಕಸಭೆಯ ಸದಸ್ಯರ ಬಲವನ್ನು 550ರಿಂದ 850ಕ್ಕೆ ಹೆಚ್ಚಿಸುವ ‘ಕ್ಷೇತ್ರ ಪುನರ್‌ವಿಂಗಡಣೆ ಮಸೂದೆ–2026’ ಸಂಸದೀಯ ಪ್ರಜಾಪ್ರಭುತ್ವದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಜನಸಂಖ್ಯೆಗೆ ಅನುಗುಣವಾಗಿ ಸೀಟುಗಳ ಹೆಚ್ಚಳ ಅನಿವಾರ್ಯವಾದರೂ, ಸಂಸತ್ತಿನ ವಾರ್ಷಿಕ ಕಲಾಪದ ದಿನಗಳು ಮತ್ತು...

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು ಯುದ್ಧದ ಕಥೆಯಲ್ಲ; ಇದು ಮಧ್ಯಪ್ರಾಚ್ಯದ ರಾಜಕೀಯ ಇತಿಹಾಸವನ್ನೇ ಮರುಬರೆಯಬಹುದಾದ ಸಂಘರ್ಷವಾಗಿದೆ. ಅಲ್ಲಿಯವರೆಗೆ, ಯೆಮನ್ ಕೇವಲ ಅರಬ್ ಜಗತ್ತಿಗಷ್ಟೇ ಅಲ್ಲ, ಇಡೀ...

ಈಗಾಗಲೇ 10 ರಾಜ್ಯಗಳಲ್ಲಿ ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ಜಾರಿಗೊಳಿಸಿದ್ದು, ಇತ್ತೀಚೆಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನದ ಹಕ್ಕಿನ ಮೇಲೆ ದಾಳಿ ನಡೆಸಿದ್ದು ಪ್ರಜಾಪ್ರಭುತ್ವದ ಬುನಾಧಿಯನ್ನೇ ಅಲುಗಾಡಿಸಿದೆ ಮೊದಲ ಹಂತದಲ್ಲಿ ಬಿಹಾರದಲ್ಲಿ ನಡೆದ ಎಸ್‌ಐಆರ್ ಪ್ರಕ್ರಿಯೆಯಿಂದ 65 ಲಕ್ಷ ಮತದಾರರನ್ನು ತೆಗೆದು ಹಾಕಲಾಗಿದ್ದು, 2ನೇ ಹಂತದಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ 6.5 ಕೋಟಿಗೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ತೆಗದು ಹಾಕಲಾಗಿದೆ ಎಂದರು

ಬೂತ್  ಮಟ್ಟದ ಅಧಿಕಾರಿಗಳಲ್ಲೂ ಸಹಾ ಸಾಕಷ್ಟು ಆತಂಕಗಳನ್ನು ಈ ಎಸ್‌ಐಆರ್ ಮೂಡಿಸಿದೆ. ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳು ಮಾರ್ಚ್ 26 2026ರ ವೇಳೆಗೆ ಕರ್ನಾಟಕದಲ್ಲಿ 80.19 ರಷ್ಟು ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದೆ 52.7 ಕೋಟಿ ಮತದಾರರಲ್ಲಿ 4.46 ಕೋಟಿ ಮ್ಯಾಪಿಂಗ್ ಆಗಿದ್ದು ಉಳಿದ 19.13 ಲಕ್ಷ ಮತದಾರರು ಮ್ಯಾಪಿಂಗ್ ಆಗಿರುವುದಿಲ್ಲವೆಂದು ಸ್ಪಷ್ಟತೆ ನೀಡಿದ್ದಾರೆ. ಈ ಎಲ್ಲಾ ಅಂಕಿ ಅಂಶಗಳು ಸ್ಪಷ್ಟವಾಗಿ ವಂಚಿತ ಸಮುದಾಯಗಳನ್ನು ಮತದ ಹಕ್ಕಿನಿಂದ ಹೊರಗಿಡುವ ಬಿಜೆಪಿಯ ಹುನ್ನಾರವಾಗಿದ್ದು ಇದಕ್ಕೆ ಕರ್ನಾಟಕದ ಸಿದ್ದರಾಮಯ್ಯನನವರ ಸರ್ಕಾರ ವಿಶೇಷ ಗಮನ ನೀಡಿ ಯಾವುದೇ ಜನಸಮಾನ್ಯರು ಮತದಾನದ ಹಕ್ಕಿನಿಂದ ಕೈವಬಿಡದಂತೆ ಕ್ರಮ ಕೈಗೊಳ್ಳಬೇಕು ಎಂದರು.

ಪ್ರತಿಭಟನೆ ಬೆಂಬಲಿಸಿ ಮಾತಾನಡಿದ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಎಸ್‌ಐಆರ್ ಎಂಬುದು ಕೇವಲ ಅಲ್ಪಸಂಖ್ಯಾತರಿಗೆ ಸಮಸ್ಯೆಯಲ್ಲ ಇಡೀ ದೇಶದ ಎಲ್ಲಾ ಸಮುದಾಯದ ಜನರಿಗೂ ಸಮಸ್ಯೆಯೆ. ಕೇಂದ್ರದ ಬಿಜೆಪಿಯ ಪಕ್ಷದ ಗಾಳವಾಗಿ ಚುನಾವಣಾ ಆಯೋಗ ಎಸ್‌ಐಆರ್ ವಿಶೇಷ ಮತಪರಿಷ್ಕರಣೆ ವಿಷಯದಲ್ಲಿ ಕಾರ್ಯನಿರ್ವಹಿಸಲು ಮುಂದಾಗಿದೆ, ಆಯೋಗದ ಜವಾಬ್ದಾರಿಗಳನ್ನು ಗಾಳಿಗೆ ತೂರಿ ಮತದಾರರ ಹಕ್ಕು ಕಸಿಯಲು ಮುಂದಾಗಿದೆ, ಎಸ್‌ಐಆರ್ ಬಿಜೆಪಿ ಘೋಷಿತ ಸಿಎಎ-ಎನ್‌ಆರ್‌ಸಿ ಮುಖವಾಡವೇ ದೇಶದ ನಾಗರೀಕರ ಪೌರತ್ವವನ್ನು ಕಸಿಯುವ ಹುನ್ನಾರವೇ ಆಗಿದೆ. ಈಗಾಗಲೇ ವಿವಿಧ ರಾಜ್ಯಗಳಲ್ಲಿ ಎಸ್‌ಐಆರ್‌ನಿಂದ ಹೊರಗುಳಿದ ಮತದಾರರನ್ನು ಎರಡನೇ ದರ್ಜೆಯ ನಾಗರೀಕರನ್ನಾಗಿ ಮಾಡಿ ಜನರ ಮೇಲೆ ಎಸ್‌ಐಆರ್ ಪರಿಣಾಮ ಬೀರುತ್ತಿದೆ, ಕೇರಳ ಮಾಧರಿಯಲ್ಲಿ ರಾಜ್ಯ ಸರ್ಕಾರ ಜನರಿಗೆ ದಾಖಲಾತಿಗಳನ್ನು ಒದಗಿಸಿ ಮತದ ಹಕ್ಕನ್ನು ಖಾತ್ರಿಗೊಳಿಸಬೇಕು ಹಾಗಾಗಿ ಎಸ್‌ಐಆರ್ ವಿರುದ್ದ ಜನಚಳುವಳಿ ಅಗತ್ಯವಿದೆ ಎಂದರು. 

ಸಹಾಬಾಳ್ವೆ ಸಂಘದ ಅಧ್ಯಕ್ಷೆ ದೀಪಿಕಾ ಮಾತನಾಡಿ ಟ್ರಾನ್ಸ್ ಜೆಂಡರ್ ಸಮುದಾಯಕ್ಕೆ ಎಸ್‌ಐಆರ್ ಕಂಠಕವಿದೆ ಸರ್ಕಾರ ನೀಡಿರುವ ಆಧಾರ್, ಮಾತದಾರರ ಚೀಟಿ, ರೇಶನ್ ಕಾರ್ಡ್ ಬಿಟ್ಟರೇ ಬೇರೆ ಯಾವ ದಾಖಲೆಗಳನ್ನು ಸೃಷ್ಠಿ ಮಾಡಲು ಸಾಧ್ಯ, ರಾಜ್ಯದಲ್ಲಿ 30 ಸಾವಿರಕ್ಕೂ ಅಧಿಕ ಟ್ರಾನ್ಸ್ ಜೆಂಡರ್ ಸಮುದಾಯದವರಿದ್ದೇವೆ, ಸ್ವಾತಂತ್ರ ಬಂದಾಗಿನಿಂದ ಇರದ ಎಸ್‌ಐಆರ್ ಈಗ್ಯಾಕೆ ಕೇಂದ್ರದ ಬಿಜೆಪಿ ಸರ್ಕಾರ ಚುನಾವಣಾ ಆಯೋಗವನ್ನು ಬಳಸಿಕೊಂಡು ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲೆ ದಾಳಿ ನಡೆಸಲು ಮುಧಾಗಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ ಎಸ್‌ಐಆರ್ ಕೂಡಲೇ ವಾಪಾಸ್ಸಾಗಲಿ ಎಂದರು. 

ಎಪಿಸಿಆರ್‌ನ ಜಿಲ್ಲಾಧ್ಯಕ್ಷರಾದ ತಾಜುದ್ದಿನ್ ಮಾತನಾಡಿ ನಮ್ಮ ದೇಶದಲ್ಲಿ ಶೇ.10 ರಷ್ಟು ಕೋಟ್ಯಾಧಿಪತಿಗಳಿದ್ದಾರೊ ಇಂತಹ ಸಂದಿಗ್ದ ಪರಿಸ್ತಿತಿಯಲ್ಲಿ ಒಂದು ಒತ್ತು ಆಹಾರವಿಲ್ಲದ ಮನೆಯಿಲ್ಲದ, ಜನರು ಬದುಕುತ್ತಿದ್ದಾರೆ, ಹಸಿವಿನಲ್ಲಿರುವ ಜನರನ್ನು ದಾಖಲೆಯಿದ್ಯ ಎಂಬ ಪ್ರಶ್ನೆಗಳು ಮೂಲಭೂತ ಹಕ್ಕನ್ನು ಕಸಿಯುವಂತಹ ಹುನ್ನಾರ ಬಿಜೆಪಿ ಸರ್ಕಾರ ನಡೆಸುತ್ತಿದೆ. ಎಲೆಕ್ಷನ್ ಕಮಿಷನ್ ಬಳಸಿಕೊಂಡು ಎಸ್‌ಐಆರ್ ಎಂಬ ನೀತಿಗಳನ್ನು ಜಾರಿಗೆ ತಂದು ದೇಶದ ಜನರ ಹಕ್ಕು ಕಸಿಯುವ ಕ್ರಮ ಸರಿಯದ್ದುದಲ್ಲ ಈ ಸಂವಿಧಾನ ವಿರೋಧಿ ಎಸ್‌ಐಆರ್ ಬೇಡ, ಅಹಿಂದ ನಾಯಕರು, ಬಡವರ ಬಗ್ಗೆ ಕಾಳಜಿ ಉಳ್ಳವರು, ರಾಜ್ಯದ ಜನರ ಹಿತವನ್ನು ಬಯಸಬೇಕಾಗಿರುವ ಕರ್ನಾಟಕ ಸರ್ಕಾರದ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ನವರು ಎಸ್‌ಐಆರ್ ಸಮೀಕ್ಷೆ ತಿರಸ್ಕರಿಸಬೇಕು, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರ ತೆಗೆದುಕೊಂಡ ದಿಟ್ಟ ನಿರ್ಧಾರದಂತೆ ಕರ್ನಾಟಕ ಸರ್ಕಾರ ಇಚ್ಚಾಶಕ್ತಿ ಪ್ರದರ್ಶಿಸಬೇಕು ಇಲ್ಲವಾದಲ್ಲಿ ರಾಜ್ಯದಲ್ಲಿ ಪ್ರತಿರೋಧದ ಕೂಗು ಹೆಚ್ಚಾಗಲಿದೆ ಎಂದರು. 

ಔಷಧಿ ವ್ಯಾಪಾರಿಗಳ ಸಂಘದ ಮುಖಂಡರಾದ ಜವಾಹರ್ ರವರು ಮಾತನಾಡಿ ಎಸ್‌ಐಆರ್ ವಿಶೇಷ ಮತಪರಿಷ್ಕರಣೆ ಜನಸಾಮಾನ್ಯರ ಬದುಕಿನ ಮೇಲೆ ಪರಿಣಾಮ ಬೀರಲಿದೆ ಅವರ ಸಾಂವಿಧಾನಿಕ ಹಕ್ಕು ಕಿತ್ತುಕೊಳ್ಳುತ್ತದೆ. ಜನಾಭಿಪ್ರಾಯಕ್ಕೆ ಮನ್ನಣೆ ನೀಡದೆ ರಾತ್ರೋ ರಾತ್ರಿ ನೀತಿಗಳನ್ನು ಜಾರಿ ಮಾಡುವುದು ಪ್ರಜಾಪ್ರಭುತ್ವಕ್ಕೆ ವಿರೋಧವಾದದ್ದು, ಸರ್ವಾಧಿಕಾರಿ ಧೋರಣೆ ನಿಲ್ಲಿಸಿ ಜನಸಾಮಾನ್ಯರ ಸಮಸೈಳನ್ನು ಬಗಹರಿಸಲಿ ಹಾಗೂ ವೋಟ್ ಚೋರಿ ಬಗ್ಗೆ ಸಹಾ ನಾವು ಗಮನಹರಿಸಬೇಕೆಂದರು 

ಈ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳ ಸಂಘದ ವಾಸೀಂ, ಜಮಾತೆ ಇಸ್ಲಾಂ ಹಿಂದನ ಎಸರ್ ಅಹ್ಮದ್ ಉಮ್ರಿ, ಇಮಾಮ್ ಬಾಯ್ಜ್, ಎಸ್ಸರ್‌ಖಾನ್, ಅನ್ವರ್‌ಪಾಷಾ, ಸ್ಲಂ ಸಮಿತಯ ಪದಾಧಿಕಾರಿಗಳಾದ ಅರುಣ್, ಶಂಕ್ರಯ್ಯ, ಜಾಬೀರ್‌ಖಾನ್, ತಿರುಮಲಯ್ಯ, ಕೃಷ್ಣಮೂರ್ತಿ, ರಾಮಕೃಷ್ಣಯ್ಯ, ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಸಂಚಾಲಕರಾದ ಅನುಪಮಾ, ನಿವೇಶನ ಹೋರಾಟ ಸಮಿತಿಯ ಮಂಗಳಮ್ಮ, ಶಂಕರ್, ಶಾಂತಮ್ಮ, ಸಂಧ್ಯಾ, ಪೂರ್ಣಿಮಾ, ವಸಂತಮ್ಮ, ಗಂಗಮ್ಮ, ಗುಲ್ನಾಜ್, ಸಲ್ಮಾಬಾನು, ಸಾಮಾಜಿಕ ಕಾರ್ಯಕರ್ತ ಸಲೀಂಖಾನ್, ಯುವಪದಾದಿಕಾರಿಳಾದ ಕೃಷ್ಣ, ಮೋಹನ್ ಟಿ,ಆರ್, ದಸಂದ ಪಿ.ಎನ್ ರಾಮಯ್ಯ, ಹಾಗೂ ವಿವಿಧ ಜನಪಪರ ಸಂಘಟನೆಗಳ ಮುಖಂಡರು ಪದಾಧಿಕಾರಿಗಳು ಭಾಗವಹಿಸಿದ್ದರು. 

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ತುಮಕೂರು | ಕುಡಿಯುವ ನೀರಿನ ಸಮಸ್ಯೆ : ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ, ಇಂದೇ ಪರಿಹಾರಕ್ಕೆ ಸೂಚನೆ

 ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಚ್ಚರಿಕೆ ವಹಿಸಬೇಕು. ನೀರಿನ...

ತುಮಕೂರು | ಪದವಿಯೊಂದೇ ಸಾಲದು, ಉದ್ಯಮದ ಬೇಡಿಕೆಗೆ ತಕ್ಕ ಕೌಶಲ ಬೆಳೆಸಿಕೊಳ್ಳಿ : ವಿನಾಯಕ್ ಅಂಬರೀಷ್

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ ಪಡೆದುಕೊಂಡರೆ ಸಾಲದು. ಉದ್ಯಮ ಕ್ಷೇತ್ರದ...

ತುಮಕೂರು | ಎಸ್‌ಎಸ್‌ಐಟಿ–ಸಿಎಂಟಿಐ ಒಪ್ಪಂದ: ವಿದ್ಯಾರ್ಥಿಗಳಿಗೆ ಕೈಗಾರಿಕಾ ತರಬೇತಿ ಮತ್ತು ಸಂಶೋಧನೆಗೆ ಅವಕಾಶ

ತಾಂತ್ರಿಕ ಶಿಕ್ಷಣ ಮತ್ತು ಕೈಗಾರಿಕಾ ಕ್ಷೇತ್ರದ ನಡುವಿನ ಸಹಯೋಗವನ್ನು ಬಲಪಡಿಸುವ ನಿಟ್ಟಿನಲ್ಲಿ...

ತುಮಕೂರು | ದೇಶದ ವಿವಿಧೆಡೆ ಪೊಲೀಸ್ ದಬ್ಬಾಳಿಕೆ, ನಾಯಕರ ಬಂಧನ ಖಂಡಿಸಿ ಎಐಡಿಎಸ್ಒ ಪ್ರತಿಭಟನೆ

 ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿಭಟನಾಕಾರರ ವಿರುದ್ಧ ನಡೆಯುತ್ತಿದೆ ಎನ್ನಲಾದ ಪೊಲೀಸ್ ದಬ್ಬಾಳಿಕೆ...