ಉತ್ತರ ಕನ್ನಡ | ದಾಸ್ತಾನು ಆಗಿದ್ದ 18 ರಾಶಿ ಅದಿರಿಗೆ ಮುಕ್ತಿ

Date:

  • ದಾಸ್ತಾನಾಗಿದ್ದ ಅದಿರನ್ನು ಹರಾಜು ಮೂಲಕ ವಿಲೇವಾರಿಗೆ ಕೋರ್ಟ್ ಸೂಚಿಸಿತ್ತು
  • ದಾಸ್ತಾನು ಆಗಿದ್ದ ಅದಿರು ಧೂಳು ಮುಕ್ತವಾಗುವುದು ಖಚಿತವಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿನ ವಾಣಿಜ್ಯ ಬಂದರಿನಲ್ಲಿ ಕಳೆದ 13 ವರ್ಷಗಳಿಂದ ದಾಸ್ತಾನು ಆಗಿದ್ದ ಕಬ್ಬಿಣದ ಅದಿರು ಅಂಶವನ್ನು ಒಳಗೊಂಡ ಮಣ್ಣಿನ ರಾಶಿಯ ಮಾರಾಟಕ್ಕೆ ಆರನೇ ಬಾರಿಗೆ ಹರಾಜು ಪ್ರಕ್ರಿಯೆ ನಡೆಯುತ್ತಿದೆ. ಬಂದರು ಪ್ರದೇಶದಲ್ಲಿರುವ 18 ರಾಶಿಗಳ 30 ಸಾವಿರ ಟನ್ ಅದಿರು ಖರೀದಿ ಪ್ರಕ್ರಿಯೆಗಳು ಪೂರ್ಣಗೊಳ್ಳುವ ಹಂತಕ್ಕೆ ತಲುಪಿವೆ.

ಇ–ಹರಾಜು ಪ್ರಕ್ರಿಯೆಯಲ್ಲಿ ಹೊರರಾಜ್ಯದ ಕಂಪನಿಯೊಂದು ಅದಿರು ಖರೀದಿಸಲು ಮುಂದಾಗಿದ್ದು, ಅದಿರನ್ನು ಹರಾಜು ಪ್ರಕ್ರಿಯೆ ನಡೆಸಿದ್ದ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಆರಂಭಿಕ ಹಣವನ್ನೂ ಭರಣ ಮಾಡಿದೆ. ಕಂಪನಿಗೆ ಗುರುವಾರ ಕಾರ್ಯಾದೇಶ ದೊರೆಯುವ ಸಾಧ್ಯತೆ ಇದ್ದು, ದಶಕದ ಬಳಿಕ ಬಂದರು ಅದಿರು ಧೂಳು ಮುಕ್ತವಾಗುವುದು ಖಚಿತವಾಗಿದೆ.

2010ರ ಮಾರ್ಚ್ 20ರಂದು ಅದಿರು ದಾಸ್ತಾನನ್ನು ಸಿಬಿಐ ವಶಕ್ಕೆ ಪಡೆದಿತ್ತು. ಬಂದರು ಇಲಾಖೆಯ ಸಂರಕ್ಷಣೆಯಲ್ಲಿದ್ದ ಅದಿರಿನಲ್ಲಿ ಒಂದಷ್ಟು ಪ್ರಮಾಣ ನಾಪತ್ತೆಯಾಗಿದೆಯೆಂದು ಅದೇ ವರ್ಷ ಜೂನ್ 8ರಂದು ಕಾರವಾರ ಪೊಲೀಸ್ ಠಾಣೆಗಳಲ್ಲಿ ಅರಣ್ಯ ಇಲಾಖೆ ದೂರು ದಾಖಲಿಸಿತ್ತು. ಅಕ್ರಮ ಅದಿರು ಸಾಗಣೆ ಹಾಗೂ ವಶಪಡಿಸಿಕೊಂಡ ಅದಿರು ಕಳ್ಳಸಾಗಣೆ ಸಂಬಂಧ ಸಿಐಡಿ, ಸಿಬಿಐಗಳು ವಿಚಾರಣೆ ನಡೆಸಿದ್ದವು. ಆದರೂ, ಹಲವು ನ್ಯಾಯಾಲಯಗಳಲ್ಲಿ ಪ್ರಕರಣಗಳು ಇನ್ನೂ ಬಾಕಿ ಇವೆ. ಈ ಸಂಬಂಧ ಈವರೆಗೂ ಯಾವುದೇ ಅಂತಿಮ ತೀರ್ಪು ಹೊರ ಬಿದ್ದಿಲ್ಲ.

ಬಂದರು ಪ್ರದೇಶದಲ್ಲಿ ದಾಸ್ತಾನಾಗಿದ್ದ ಅದಿರು ಸಹಿತ ಮಣ್ಣಿನ ರಾಶಿ ಮಳೆಗೆ ಸಿಲುಕಿ ಸಾಕಷ್ಟು ಪ್ರಮಾಣದಲ್ಲಿ ಕೊಚ್ಚಿ ಹೋಗಿದೆ. ಮಣ್ಣಿನಲ್ಲಿರುವ ಅದಿರು ಅಂಶ ಮಳೆ ನೀರಿಗೆ ಕರಗಿ ಪೋಲಾಗುತ್ತಿದೆ ಎಂಬ ಕಾರಣಕ್ಕೆ ಅದರ ರಕ್ಷಣೆಯ ಹೊಣೆ ಹೊತ್ತಿದ್ದ ಅರಣ್ಯ ಇಲಾಖೆ ಅದಿರು ವಿಲೇವಾರಿಗೆ ಹಲವು ಬಾರಿ ನ್ಯಾಯಾಲಯದ ಅನುಮತಿ ಕೇಳಿತ್ತು.

ಈ ಸುದ್ದಿ ಓದಿದ್ದೀರಾ? ಚುನಾವಣೆ ನೀತಿ ಸಂಹಿತೆ ಜಾರಿ; ಅಂಬೇಡ್ಕರ್‌ ಜಯಂತಿ ಕೈಬಿಟ್ಟ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಅದಿರು ದಾಸ್ತಾನನ್ನು ಹರಾಜು ನಡೆಸಿ ವಿಲೇವಾರಿ ಮಾಡಲು ಕೋರ್ಟ್ ಸೂಚನೆ ನೀಡಿತ್ತು. ಇದನ್ನು ಪ್ರಶ್ನಿಸಿ ಅದಿರು ಕಂಪನಿಗಳು ಮತ್ತೆ ಕೋರ್ಟ್ ಮೊರೆ ಹೋಗಿದ್ದವು. ನಿರಂತರ ಆಕ್ಷೇಪಣೆಯ ಕಾರಣಕ್ಕೆ ದಾಸ್ತಾನು ವಿಲೇವಾರಿ ಪ್ರಕ್ರಿಯೆ ಅಧಿಕಾರಿಗಳಿಗೆ ಸಮಸ್ಯೆ ಆಗಿತ್ತು. ಈ ಹಿಂದೆ ಐದು ಬಾರಿ ಹರಾಜು ಪ್ರಕ್ರಿಯೆ ನಡೆದರೂ ಯಾರೊಬ್ಬರೂ ಖರೀದಿಗೆ ಆಸಕ್ತಿ ತೋರಿರಲಿಲ್ಲ.

ಬಳ್ಳಾರಿಯಿಂದ ಕಾರವಾರ ಮತ್ತು ಬೇಲೆಕೇರಿ ಬಂದರಿನ ಮೂಲಕ ವಿದೇಶಕ್ಕೆ ರಫ್ತಾಗುತ್ತಿದ್ದ ಮ್ಯಾಂಗನೀಸ್, ಕಬ್ಬಿಣದ ಅದಿರನ್ನು 2010ರಲ್ಲಿ ಸಿಬಿಐ ಮುಟ್ಟುಗೋಲು ಹಾಕಿಕೊಂಡ ಬಳಿಕ ದೊಡ್ಡ ಪ್ರಮಾಣದ ದಾಸ್ತಾನು, ಬಂದರು ಪ್ರದೇಶದಲ್ಲೇ ಉಳಿಯುವಂತಾಗಿತ್ತು. ಸದ್ಯ ಕಾರವಾರದಲ್ಲಿರುವ 30 ಸಾವಿರ ಟನ್ ಅದಿರು ಮಾತ್ರ ವಿಲೇವಾರಿಯಾಗಲಿದೆ. ಆದರೆ, ಅಂಕೋಲಾದ ಬೇಲೆಕೇರಿ ಬಂದರಿನಲ್ಲಿ ಇನ್ನೂ ಸುಮಾರು 3 ಲಕ್ಷ ಟನ್ ಅದಿರು ದಾಸ್ತಾನು ಉಳಿದುಕೊಂಡಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ಕಲಬುರಗಿಯಲ್ಲಿ ರಾಜ್ಯ ಮಟ್ಟದ ವಿದ್ಯಾರ್ಥಿನಿಯರ ಸಮಾವೇಶ

ಶಿಕ್ಷಣದ ಹಕ್ಕಿಗಾಗಿ, ಖಾಸಗೀಕರಣ ವಿರೋಧಿಸಿ ವಿದ್ಯಾರ್ಥಿನಿಯರಿಗೆ ಸಮಾನ ಗುಣಮಟ್ಟದ ಶಿಕ್ಷಣ ಹಾಗೂ...

ರಾಯಚೂರು | ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ದೇವದಾಸಿ ಮಹಿಳೆಯರ ಧರಣಿ

ದೇವದಾಸಿ ಮಹಿಳೆಯರಿಗೆ ಬಾಕಿಯಿರುವ ಪಿಂಚಣಿ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ...

ಬೆಳಗಾವಿ | ಅಧಿವೇಶನದಲ್ಲಿ ಭಾಗವಹಿಸುವವರಿಗೆ ಮೂಲಸೌಕರ್ಯ ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಡಿ.4ರಿಂದ ಬೆಳಗಾವಿಯ ಸುವರ್ಣ ಸೌಧದಲ್ಲಿ ಆರಂಭವಾಗಲಿರುವ ಚಳಿಗಾಲ ಅಧಿವೇಶನದಲ್ಲಿ ಭಾಗವಹಿಸುವವರಿಗೆ ವಸತಿ,...

ಚಿಕ್ಕಮಗಳೂರು | ಠಾಣೆಯಲ್ಲಿ ಕೂಡಿಹಾಕಿ ಯುವ ವಕೀಲನಿಗೆ ಥಳಿತ; ಪಿಎಸ್‌ಐ ಸೇರಿ 6 ಮಂದಿ ಅಮಾನತು

ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಬಂದ ಯುವ ವಕೀಲನೋರ್ವನನ್ನು ಠಾಣೆಯಲ್ಲಿ ಕೂಡಿಹಾಕಿ...