ವಿಜಯಪುರ | ನನ್ನ ಕವನಗಳಲ್ಲಿ ತುಳಿತಕ್ಕೆ ಒಳಗಾದವರ ನೋವು-ಪ್ರತಿರೋಧವಿದೆ: ಸುಕೀರ್ತ ರಾಣಿ

Date:

  • ಪ್ರಜಾತಂತ್ರದಲ್ಲಿ ಎಲ್ಲವೂ ಎಲ್ಲರಿಗೂ ಸಮನಾಗಿ ಸಿಗತಿಲ್ಲ
  • ಜಾತಿ, ಲಿಂಗ, ವರ್ಗದ ಹೆಸರಲ್ಲಿ ಅಸಮಾನತೆ ಹೆಚ್ಚುತ್ತಿದೆ

ನನ್ನನ್ನು ಹೀಯಾಳಿಸಲು ನೀವು ಯಾರು ಅಂತ ಕೇಳುವ ಎದೆಗಾರಿಕೆ ನನ್ನಲ್ಲಿ ಹುಟ್ಟಿದೆ. ನನ್ನ ಕವನಗಳಲ್ಲಿ ಸಿಂಪತಿ ಇಲ್ಲ, ತುಳಿತಕ್ಕೆ ಒಳಗಾದವರ ನೋವಿದೆ. ಪ್ರತಿರೋಧ ಇದೆ ಎಂದು ತಮಿಳುನಾಡು ಶಿಕ್ಷಕಿ ಸುಕೀರ್ತ ರಾಣಿ ಹೇಳಿದರು.

ವಿಜಯಪುರದಲ್ಲಿ ಗದುಗಿನ ಲಡಾಯಿ ಪ್ರಕಾಶನ, ಕವಲಕ್ಕಿಯ ಕವಿ ಪ್ರಕಾಶನ, ಧಾರವಾಡದ ಚಿತ್ತಾರ ಕಲಾ ಬಳಗ ಹಾಗೂ ವಿಜಯಪುರದ ಮೇ ಸಾಹಿತ್ಯ ಮೇಳ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ 9ನೇ ಮೇ ಸಾಹಿತ್ಯ ಮೇಳ ಎರಡನೇ ದಿನದ ಕವಿಗೋಷ್ಠಿಯಲ್ಲಿ ಆಶಯ ಮಾತುಗಳನ್ನಾಡಿದರು.

ಪ್ರಜಾತಂತ್ರದಲ್ಲಿ ಎಲ್ಲವೂ ಎಲ್ಲರಿಗೂ ಸಮನಾಗಿ ಸಿಗತಿದೆಯೆ? ಇಲ್ಲ. ಜಾತಿ, ಲಿಂಗ, ವರ್ಗದ ಹೆಸರಿನಲ್ಲಿ ಈಗಲೂ ಅಸಮಾನತೆ ತುಂಬಿ ತುಳುಕುತ್ತಿದೆ. ಈ ತುಳಿತವನ್ನು ಹೀಯಾಳಿಕೆಯನ್ನು ಖಂಡಿಸುತ್ತೇನೆ. ತಮಿಳುನಾಡಿನಲ್ಲಿ ಹಲವರು ಇಂತಹ ಸಮಾನ ಮನಸ್ಕ ಕವಿಗಳಿದ್ದಾರೆ. ದ್ರಾವಿಡ ಚಳವಳಿ ಮೂಲಕ ಬಂದಿರುವ ನಮ್ಮ ಮುಂದೆ ಕಮ್ಯುನಿಸ್ಟ್ ಮತ್ತು ಅಂಬೇಡ್ಕರ್ ಸಿದ್ಧಾಂತಗಳಿವೆ. ನನ್ನ ಕವನಗಳಲ್ಲಿ ಅದೆಲ್ಲ ಪ್ರತಿಫಲಿಸಿದೆ ಎಂದು ಎಂದು ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಳೆದ ಫೆಬ್ರವರಿಯಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ನನ್ನನ್ನು ದಲಿತ ಸಾಹಿತ್ಯ ಪ್ರಶಸ್ತಿಗಾಗಿ ಆಯ್ಕೆ ಮಾಡಿದ್ದರು. ಅದು ಅದಾನಿ ಪ್ರಾಯೋಜಿತ ಪ್ರಶಸ್ತಿ ಆಗಿತ್ತು. ಯಾವ ಅದಾನಿಯಿಂದಾಗಿ ನನ್ನ ನಾಡಿನ ಜನರ ಹಕ್ಕುಗಳ ದಮನ ಆಗಿದೆಯೊ ಅವರ ಅವಕಾಶಗಳು ಕಳೆದು ಹೋಗಿವೆಯೊ ಅಂಥವರು ಕೊಡುವ ಪ್ರಶಸ್ತಿ ನನಗೆ ಬೇಡ ಎಂದು ನಾನು ನಿರಾಕರಿಸಿದೆ. ತಮಿಳುನಾಡಿನಲ್ಲಿ ಮಾತ್ರವಲ್ಲ ಎಲ್ಲೆಡೆ ಈ ಪರಿಸ್ಥಿತಿ ಇದೆ. ಈಗಲೂ ನಮಗೆ ನಮ್ಮದೇ‌ ಭೂಮಿಯನ್ನು ಹೊಂದುವ ಅವಕಾಶಗಳಿಲ್ಲ. ಸ್ಮಶಾನ ಭೂಮಿಗಳು ಕೂಡ ಮೇಲಿನವರಿಗೂ ನಮಗೂ ಬೇರೆ ಬೇರೆ ಇವೆ. ಸರ್ಕಾರಕ್ಕೆ ಇದೊಂದು ಸಂಗತಿಯೇ ಅಲ್ಲ. ಅದು ಇಂತಹದರ ವಿರುದ್ಧ ಏನೂ ಕ್ರಮ ಕೈಗೊಳ್ಳಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತರಿಗೆ ಸಿಗುವ ಪ್ರಜಾತಾಂತ್ರಿಕ ಅನುಕೂಲಗಳೇ ಬೇರೆ. ಇತರರಿಗೆ ಸಿಗುವ ಅವಕಾಶಗಳು ಬೇರೆ. ಇದನ್ನು ಡೆಮಾಕ್ರಸಿ ಎಂದು ಹೇಗೆ ಕರೆಯುವಿರಿ? ನನ್ನ ಕವನಗಳು ಯಾವಾಗಲೂ ಇದನ್ನೇ ಪ್ರಶ್ನಿಸುತ್ತವೆ. ಜಾತಿ, ಗುಲಾಮಗಿರಿಗಳನ್ನು ಮೆಟ್ಟಿ ನಿಂತಾಗ ಮಾತ್ರ ಬದಲಾವಣೆ ಸಾಧ್ಯ ಎಂದು ಹೇಳಿದರು.

ಕೊನೆಯಲ್ಲಿ ಸುಕೀರ್ತ ರಾಣಿ ಅವರು ತಮ್ಮ ಕವಿತೆ “ಹುಚ್ಚೆ ಹೊಯ್ಯಲಾದರು ಬಿಡಿ” ಓದಿ ಸಭಿಕರ ಗಮನ ಸೆಳೆದರು.

ಗದಗ 02

ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಅಂಕಣಕಾರ್ತಿ ಸಬಿತಾ ಬನ್ನಾಡಿ ಮಾತನಾಡಿ, ಕನ್ನಡ ಕವಿಗಳು ಒಂದೆ ದಾಟಿಯಲ್ಲಿ ಓದುತ್ತಾ ಬರುತ್ತಿದ್ದಾರೆ. ಆ ದಾಟಿಯನ್ನು ಇಂದಿನ ಮುಂದಿನ ಕವಿಗಳು ಮುರಿದು ಓದಬೇಕು ಎಂದು ಹೇಳಿದರು.

ಜನಪದರ ಸಾಹಿತ್ಯವೇ ಸ್ವಾಭಾವೋಕ್ತಿ ಯಾಗಿರುತ್ತದೆ. ಜನ ಸಾಹಿತ್ಯ ಅನುಭವ ಮತ್ತು‌ಲೋಕಾನುಭ ಕಟ್ಟಿಕೊಡುವ ಕ್ರಮ ಇದೆಯಲ್ಲ, ಅದು ಬದುಕಿನ ಚಲುವಿನ ಸತ್ವವನ್ನು ಹೇಳುತ್ತಿದೆ. ಅದಕ್ಕೆ ಸಾವಿರ ವರ್ಷಗಳ ಚರ್ಚೆ ಮಾಡಬೇಕಿಲ್ಲ, ಇಂತಹ ಸಾಹಿತ್ಯದ ಕುರಿತೇ ನಾವು ಹೇಳುತ್ತಿರುವುದೇ ಸ್ವಾಭಾವೋಕ್ತಿ ಆಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ವ್ಯವಸ್ಥೆಯಲ್ಲಿ ನಮ್ಮನ್ನು ಪಳಗಿಸಲಾಗಿದೆ‌, ಎಷ್ಟು ಪಳಗಿಸಲಾಗಿದೆ ಎಂದರೆ ಅವರು ತುಳಿದು ತುಳಿದು ಹದಗೊಂಡ ಬ್ರೆಡ್ ಮಾದರಿ, ತುಳಿದವರಿಗೆ ಆಹಾರವಾಗಿದ್ದೇವೆ. ಇದ್ದನ್ನು ಮುರಿಯಲು ಕವಿತೆಗೆ ಸಾಧ್ಯವಾಗಬೇಕು ಎಂದರು.

ಹಾಡುತ್ತಲೆ ನಮ್ಮ ಜನಪದರು, ಕಷ್ಟದ ಜೊತೆಗೆ ಸುಖದ ಕುರಿತು ಹೇಳಿದ್ದಾರೆ. ಸುಖ ನಿಮಗಷ್ಟೆ ಅಲ್ಲ, ಅದು ನಮಗೂ ಗೊತ್ತು, ಬದುಕನ್ನು ಹೇಗೆ‌ ಕಟ್ಟಿಕೊಳ್ಳಬೇಕೆಂದು ಜನಪದರು ಹೇಳುತ್ತಾರೆ ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ವಿಜಯಪುರ | ಎಂಟು ಪ್ರಮುಖ ನಿರ್ಣಯದೊಂದಿಗೆ ‘ಮೇ ಸಾಹಿತ್ಯ ಮೇಳ’ ಸಮಾರೋಪ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಬಂಗಾರಪ್ಪನವರು ನಮ್ಮ ಮನೆಯ ನಂದಾದೀಪ; ತಿಮ್ಲಾಪುರದ ಮಹಿಳೆಯರು ಸಂತಸ

"ಬಂಗಾರಪ್ಪನವರು ನಮ್ಮ ಮನೆಯ ನಂದಾದೀಪ" ಯಾವ ಸರ್ಕಾರ ಏನೇ ಮಾಡಿದರೂ 32...

ಕೋಲಾರ | ಮೂಲಭೂತ ಸೌಕರ್ಯ ಕೊರತೆ : ಮತದಾನ ಬಹಿಷ್ಕರಿಸಿದ ಗ್ರಾಮಸ್ಥರು

ದೇಶದಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದ್ದರೇ, ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ...

ವಿಜಯಪುರ | ಅನುಭವಿ ಆಲಗೂರರ ಜಯದಿಂದ ಜಿಲ್ಲೆ ಅಭಿವೃದ್ಧಿ: ಶಾಸಕ ಯಶವಂತರಾಯಗೌಡ

ಸಜ್ಜನ ಹಾಗೂ ಅನುಭವಿಯಾದ ಕಾಂಗ್ರೆಸ್‌ ಅಭ್ಯರ್ಥಿ ರಾಜು ಆಲಗೂರರಿಗೆ ಮತ ನೀಡಿದರೆ...

ಹಾವೇರಿ | ವಿದ್ಯಾರ್ಥಿನಿಯರನ್ನು ಚುಡಾಯಿಸುವ ಕಾಮುಕ ಕಿಡಿಗೇಡಿಗಳ ಮೇಲೆ ಕ್ರಮಕ್ಕೆ ಆಗ್ರಹ

ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಚುಹಾವೇರಡಾಯಿಸುವ, ಲೈಂಗಿಕವಾಗಿ ಪ್ರಚೋದಿಸುವ ಕಾಮುಕ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಲು...