ಮುದ್ದೇಬಿಹಾಳ | ಪಾತಾಳಕ್ಕೆ ಕುಸಿದ ಈರುಳ್ಳಿ ದರ; ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ರೈತರು

Date:

ಏಪ್ರಿಲ್ ಮೊದಲ ವಾರದಲ್ಲಿ ತುಸು ಚೇತರಿಕೆ ಕಂಡಿದ್ದ ಈರುಳ್ಳಿ ದರ ಈಗ ಏಕಾಏಕಿ ಕುಸಿದಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ಪಾದನಾ ವೆಚ್ಚದಷ್ಟೂ ಬೆಲೆ ಸಿಗದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮುದ್ದೇಬಿಹಾಳ, ನಾಲತವಾಡ ಹಾಗೂ ವಿಜಯಪುರದ ಬಹುತೇಕ ತಾಲೂಕುಗಳು, ಸುತ್ತಮುತ್ತಲಿನ ಗ್ರಾಮಗಳ ರೈತರು ಕಣ್ಣೀರು ಹಾಕುತ್ತಿದ್ದಾರೆ. ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

- Advertisement -

ನಾಲತವಾಡ ಪಟ್ಟಣ ಸೇರಿ ಸುತ್ತಲಿನ ಹಳ್ಳಿಗಳ ರೈತರು ಟಮ್-ಟಮ್ ಹಾಗೂ ಆಟೋಗಳಲ್ಲಿ ಈರುಳ್ಳಿ ಮೂಟೆಗಳನ್ನು ತಂದು ರಸ್ತೆಬದಿ ಮಾರಾಟಕ್ಕೆ ಮುಂದಾಗುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ಆದರೆ ಕಡಿಮೆ ಬೆಲೆಯಲ್ಲಿಯೂ ಖರೀದಿಸಲು ಮುಂದೆ ಬರುವವರಿಲ್ಲದೆ ರೈತರು ದಿಕ್ಕೆಟ್ಟಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಕ್ವಿಂಟಾಲ್‌ಗೆ 1,000ರಿಂದ 2,000 ರೂಪಾಯಿವರೆಗೆ ಮಾರಾಟವಾಗುತ್ತಿದ್ದ ಈರುಳ್ಳಿ ದರ, ವಾರದೊಳಗೆ ಭಾರೀ ಕುಸಿತ ಕಂಡಿದೆ. ಮಾರುಕಟ್ಟೆಯಲ್ಲಿ ಬೇಡಿಕೆಯೂ ಕುಂದಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೆಳಗಾವಿ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಬ್ಬು ಬೆಂಕಿಗಾಹುತಿ:...

ಬರಗಾಲದಿಂದ ಬೆಳೆ ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಇದೀಗ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ಮತ್ತೊಂದು ಹೊಡೆತ ನೀಡಿದೆ. ವರ್ಷವಿಡೀ ಕಷ್ಟಪಟ್ಟು ಬೆಳೆಸಿದ ಕಬ್ಬು ಕಟಾವಿಗೆ ಬರುವ ಹೊತ್ತಿನಲ್ಲಿ ಬೆಂಕಿಗೆ ಆಹುತಿಯಾಗಿದ್ದು,...

ಹಾವೇರಿ | ಡಿಜಿಟಲ್ ಜನನ ಪ್ರಮಾಣ ಪತ್ರ ಗೊಂದಲ:...

ಹಳೆ ಮಾದರಿಯ ಕೈಬರಹ ಜನನ ಪ್ರಮಾನ ಪತ್ರದ ವಿಧಾನವನ್ನು ಬಿಟ್ಟು, ಡಿಜಿಟಲ್ ಜನನ ಪ್ರಮಾಣ ಪತ್ರ ನಿಯಮ ಜಾರಿಗೊಳಿಸಿದ್ದರಿಂದ ಹಲವು ಸಮಸ್ಯೆಗಳು ಎದುರಾಗಿದ್ದು, ಹದಿನಾರು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ತಿದ್ದುಪಡಿ...

ವಲಸೆ ಹಳ್ಳಿಗರಿಗೆ ಮಾತ್ರವೇ? ಉದ್ಯೋಗಕ್ಕಾಗಿ ನಗರ ಸೇರುವ ಯುವಜನರೂ...

ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಹೆಚ್ಚುತ್ತಿರುವ ಜನಸಂಖ್ಯೆಯೊಂದಿಗೆ ಆಹಾರ, ಶಿಕ್ಷಣ, ಆರೋಗ್ಯ, ವಸತಿ ಮತ್ತು ಉದ್ಯೋಗದ ಬೇಡಿಕೆಯೂ ಹೆಚ್ಚುತ್ತಿದೆ. ದೇಶದ ಅಭಿವೃದ್ಧಿಗೆ ಮಾನವ ಸಂಪನ್ಮೂಲವೇ ದೊಡ್ಡ ಶಕ್ತಿಯಾಗಿದ್ದರೂ, ಆ...

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧ ಪರಿಸ್ಥಿತಿಯ ಪರಿಣಾಮ ಸರಕು ಸಾಗಾಟ ವ್ಯವಸ್ಥೆಗೆ ಪೆಟ್ಟು ಬಿದ್ದಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಹೊರ ರಾಜ್ಯಗಳು ಹಾಗೂ ವಿದೇಶಗಳಿಗೆ ಸ್ಥಳೀಯ ಈರುಳ್ಳಿ ರಫ್ತು ಸ್ಥಗಿತಗೊಂಡಿರುವುದರಿಂದ ಮಾರುಕಟ್ಟೆಗಳಲ್ಲಿ ದಾಸ್ತಾನು ಹೆಚ್ಚಾಗಿದೆ. ಸಂಗ್ರಹಣಾ ಸೌಲಭ್ಯಗಳ ಕೊರತೆಯೂ ರೈತರ ಸಂಕಷ್ಟವನ್ನು ಮತ್ತಷ್ಟು ಹೆಚ್ಚಿಸಿದೆ.

WhatsApp Image 2026 04 25 at 11.51.28 AM

ಬೀಜ, ರಸಗೊಬ್ಬರ, ಕೂಲಿ ಹಾಗೂ ಸಾರಿಗೆ ವೆಚ್ಚಗಳು ಹೆಚ್ಚಾದ ಹಿನ್ನೆಲೆ ರೈತರು ಹೆಚ್ಚಿನ ವೆಚ್ಚದಲ್ಲಿ ಈರುಳ್ಳಿ ಬೆಳೆದಿದ್ದಾರೆ. ಆದರೆ ಈಗಿನ ದರದಲ್ಲಿ ಮಾರಾಟ ಮಾಡಿದರೆ ವೆಚ್ಚವೂ ವಾಪಸ್ ಸಿಗುವುದಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಬೆಲೆ ಇನ್ನಷ್ಟು ಕುಸಿಯುವ ಭಯದಿಂದ ಕಡಿಮೆ ದರದಲ್ಲೇ ಮಾರಾಟಕ್ಕೆ ಮುಂದಾಗುತ್ತಿದ್ದಾರೆ.

ಸ್ಥಳೀಯ ಮಾರುಕಟ್ಟೆಗಳಲ್ಲಿ ವ್ಯಾಪಾರಿಗಳು ಖರೀದಿ ಕಡಿಮೆ ಮಾಡಿರುವುದರಿಂದ ರೈತರು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಟಮ್-ಟಮ್, ಆಟೋಗಳಲ್ಲಿ ಈರುಳ್ಳಿ ಮೂಟೆಗಳನ್ನು ತಂದು ರಸ್ತೆಬದಿ ಮಾರಾಟ ಮಾಡುತ್ತಿದ್ದರೂ, ನಿರೀಕ್ಷಿತ ಸ್ಪಂದನೆ ಸಿಗುತ್ತಿಲ್ಲ. ಕೆಲವು ಕಡೆಗಳಲ್ಲಿ ಸಾಗಾಟ ವೆಚ್ಚವೂ ವಾಪಸ್ ಸಿಗದ ಸ್ಥಿತಿ ನಿರ್ಮಾಣವಾಗಿದೆ.

ಈರುಳ್ಳಿ ದರ ಕುಸಿತದಿಂದ ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರ ತಕ್ಷಣ ನೆರವು ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಘೋಷಣೆ, ಸರ್ಕಾರಿ ಖರೀದಿ ಕೇಂದ್ರ ಆರಂಭ, ಸಂಗ್ರಹಣಾ ಗೋದಾಮು ವ್ಯವಸ್ಥೆ ಮತ್ತು ರಫ್ತು ಉತ್ತೇಜನ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ದರ ಕುಸಿತ ಮುಂದುವರಿದರೆ ರೈತರು ಭಾರೀ ನಷ್ಟಕ್ಕೆ ಒಳಗಾಗುವ ಸಾಧ್ಯತೆ ಇದ್ದು, ಮುದ್ದೇಬಿಹಾಳ ತಾಲೂಕಿನಲ್ಲಿ ಈರುಳ್ಳಿ ಬೆಳೆದ ರೈತರ ಬದುಕೇ ಅಸ್ತವ್ಯಸ್ತವಾಗುವ ಆತಂಕ ವ್ಯಕ್ತವಾಗಿದೆ.

ನಾಲತವಾಡ ಸೇರಿ ಅಡವಿ ಸೋಮನಾಳ, ಚಾವನಬಾವಿ ಗ್ರಾಮಗಳಲ್ಲಿ ಜಿಲ್ಲೆಯ ರೈತರು ಬಾಡಿಗೆ ಆಟೋಗಳಲ್ಲಿ ಈರುಳ್ಳಿ ತಂದು ಮಾರಾಟ ಮಾಡುತ್ತಿದ್ದಾರೆ. ಧ್ವನಿ ವರ್ಧಕ ಮೂಲಕ ಗ್ರಾಹಕರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. 100 ರೂ.ಗೆ 7 ರಿಂದ 8 ಕೆಜಿ ಕೊಡುತ್ತಿದ್ದಾರೆ. ಆದರೂ ಗ್ರಾಹಕರು ಬಾರದ ಹಿನ್ನೆಲೆ ಟಮ್ ಟಮ್ಗಳಲ್ಲಿ ಕೈಕಟ್ಟಿಕುಳಿತುಕೊಳ್ಳುವಂತಾಗಿದೆ.

ಕೆಲ ಆಟೋಗಳನ್ನು ಬಾಡಿಗೆ ಪಡೆದು ಮಾರುಕಟ್ಟೆಗೆ ತೆರಳುತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಹೈದರಾಬಾದ್, ಮಹಾರಾಷ್ಟ್ರ ರಾಜ್ಯಗಳಿಗೆ ಕಳಿಸಬಹುದು. ಆದರೆ, ಮೊದಲೇ ದರ ಕೇಳೋರಿಲ್ಲ, ಏತನ್ಮಧ್ಯೆ ವಾಹನ ಬಾಡಿಗೆ ದುಪ್ಪಟ್ಟು ಇದೆ. ಹೀಗಾಗಿ ನಷ್ಟ ಅನುಭವಿಸಬೇಕಿದೆ ಎನ್ನುತ್ತಾರೆ ರೈತರು.

image 2026 04 25T115220.168

ʼಈ ದಿನʼಕ್ಕೆ ಪ್ರತಿಕ್ರಿಯಿಸಿದ ರೈತ ಸಂಜು ಪೂಜಾರಿ, “ಒಂದು ಎಕರೆ ಈರುಳ್ಳಿ ಬೆಳೆಯಲು ಬೀಜ, ಸಸಿ, ನಾಟಿ, ಕೂಲಿ, ಗೊಬ್ಬರಕ್ಕೆ ಸಾವಿರಾರು ರೂ ಹಣ ಖರ್ಚಾಗುತ್ತದೆ. ಈಗ ಸಿಗುತ್ತಿರುವ ದರ ಕೂಲಿ-ನಾಲಿಗೆ ಮತ್ತು ನಾಟಿ ಮಾಡಿದ ಖರ್ಚು ಸಹ ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ: ವಿಜಯಪುರ | 176 ಕೋಟಿ ರೂ. ವೆಚ್ಚದಲ್ಲಿ ಸಣ್ಣ ನೀರಾವರಿ ಕಾರ್ಯ: ಉಸ್ತುವಾರಿ ಸಚಿವ ಎಂ ಬಿ ಪಾಟೀಲ್

ಸದ್ಯ ವಿಜಯಪುರ ಭಾಗದ ಈರುಳ್ಳಿ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಪ್ರಿಲ್ ಆರಂಭದಲ್ಲಿ ಚೇತರಿಕೆ ಕಂಡಿದ್ದ ದರ ಈಗ ಪಾತಾಳಕ್ಕೆ ಕುಸಿದಿದ್ದು, ಕ್ವಿಂಟಾಲ್‌ಗೆ 1,000-2,000 ರೂ. ಇದ್ದ ಬೆಲೆ ಈಗ 100 ರೂಪಾಯಿಗೆ 7-8 ಕೆಜಿ ಮಾರುವ ಸ್ಥಿತಿಗೆ ತಲುಪಿದೆ. ಮಧ್ಯಪ್ರಾಚ್ಯದ ಯುದ್ಧದಿಂದಾಗಿ ರಫ್ತು ಸ್ಥಗಿತಗೊಂಡಿರುವುದು ಮತ್ತು ಮಾರುಕಟ್ಟೆಯಲ್ಲಿ ಆವಕ ಹೆಚ್ಚಾಗಿರುವುದು ಈ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ.

ರೈತರು ರಕ್ತವನ್ನು ಬೆವರಿನಂತೆ ಸುರಿಸಿ ಬೆಳೆದ ಈರುಳ್ಳಿ ಇಂದು ಮಾರುಕಟ್ಟೆಯಲ್ಲಿ ಕಣ್ಣೀರು ಹಾಕಿಸುತ್ತಿದೆ. ಉತ್ಪಾದನಾ ವೆಚ್ಚ ಹಾಗೂ ಸಾರಿಗೆ ವೆಚ್ಚವನ್ನೂ ಭರಿಸಲಾಗದ ಸ್ಥಿತಿಯಲ್ಲಿರುವ ಉತ್ತರ ಕರ್ನಾಟಕದ ರೈತರು ಅಕ್ಷರಶಃ ಬೀದಿಗೆ ಬಂದಿದ್ದಾರೆ.

ಒಂದು ವೇಳೆ ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣವೇ ಸ್ಪಂದಿಸದಿದ್ದರೆ, ಸಾಲದ ಸುಳಿಯಲ್ಲಿ ಸಿಲುಕಿರುವ ಈ ಭಾಗದ ರೈತರ ಬದುಕು ಮತ್ತಷ್ಟು ದುಸ್ತರವಾಗುವುದರಲ್ಲಿ ಸಂಶಯವಿಲ್ಲ. ರೈತ ಸಂಜು ಪೂಜಾರಿ ಅವರ ಮಾತುಗಳಂತೆ, ಕನಿಷ್ಠ ಹಾಕಿದ ಬಂಡವಾಳವಾದರೂ ಕೈಸೇರುವಂತಾಗಲಿ ಎಂಬುದು ಎಲ್ಲರ ಆಶಯವಾಗಿದೆ.

WhatsApp Image 2025 02 05 at 18.09.20 1
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಸವಕಲ್ಯಾಣ ಅನುಭವ ಮಂಟಪ ನಿರ್ಮಾಣ ಕಾರ್ಯ ವರ್ಷದೊಳಗೆ ಪೂರ್ಣ : ಸಚಿವ ಈಶ್ವರ ಖಂಡ್ರೆ

ವಿಶ್ವಕ್ಕೆ ಸಮಾನತೆ, ಕಾಯಕ ಮತ್ತು ದಾಸೋಹದ ಪರಿಕಲ್ಪನೆಗಳನ್ನು ನೀಡಿದ ಬಸವಣ್ಣನವರು ಮನುಕುಲದ...

ಮಕ್ಕಳಿಗೆ ಇಂಟರ್ನೆಟ್‌ ನಿರ್ಬಂಧ | ಸ್ವಾತಂತ್ರ್ಯಕ್ಕೆ ಕಡಿವಾಣವಲ್ಲ, ಡಿಜಿಟಲ್ ಜಗತ್ತಿಗೆ ಹೊಣೆಗಾರಿಕೆಯ ಚೌಕಟ್ಟು ಅಗತ್ಯ

ಇಂಟರ್ನೆಟ್ ಪ್ರವೇಶವನ್ನು ಕೇವಲ ತಾಂತ್ರಿಕ ಸೌಲಭ್ಯವೆಂದು ಪರಿಗಣಿಸಲು ಸಾಧ್ಯವಿಲ್ಲ. ಇದೇ ಡಿಜಿಟಲ್...

ಬೀದರ್ | ನ.7ಕ್ಕೆ ಜಿಲ್ಲಾ ಪ್ರಥಮ ದಲಿತ ಬಂಡಾಯ ಸಮ್ಮೇಳನ

ಬೀದರ್ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ...

ಕೇಂದ್ರದ ಆಡಳಿತ ಕರಡು ತಿರಸ್ಕರಿಸಿದ ಲಡಾಖ್ ನಾಯಕರು: ‘ಏಕಪಕ್ಷೀಯ’ ನಿರ್ಧಾರ ಖಂಡಿಸಿ ಬೃಹತ್ ಪ್ರತಿಭಟನೆಯ ಎಚ್ಚರಿಕೆ

ಲಡಾಖ್ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಸಿದ್ಧಪಡಿಸಿರುವ ನೂತನ ಆಡಳಿತಾತ್ಮಕ ಕರಡನ್ನು ಪ್ರಮುಖ...