‘ನಾನು ಭಕ್ತ’ನೆಂದು ಹೇಳಿದ ಬಸವಣ್ಣ ಎಲ್ಲರಿಗಿಂತಲೂ ದೊಡ್ಡವರಾಗಿದ್ದಾರೆ. ಬಸವಣ್ಣ ಎಲ್ಲರನ್ನೂ ಪ್ರೀತಿಸಿದರು. ಅವರ ಭಾವಕ್ಕೆ ಬೆಲೆ ಕಟ್ಟಲಾಗದು. ಸಮಾಜದ ಮೈಲಿಗೆ ತೊಳೆಯಲು ಬಂದ ಕ್ರಾಂತಿಪುರುಷ ಬಸವಣ್ಣ. ಅವರ ವಚನಗಳು ಇಂದು ಸಮಾಜವನ್ನು ಮುನ್ನಡೆಸುತ್ತವೆ. ಸಮಾಜದ ಮೈಲಿಗೆ ಕಳೆಯುತ್ತಿವೆ ಎಂದು ಜ್ಞಾನಾಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಹೇಳಿದರು.
ವಿಜಯಪುರ ನಗರದ ಶ್ರೀ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ವಿಶ್ವಗುರು ಬಸವಣ್ಣನ 893ನೇ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಚನ ಗಾಯಕಿ ಅನುಷಾ ಕರಿ ಬಸವಯ್ಯ ಹಿರೇಮಠ ಮಾತನಾಡಿ, “ಸಮಾಜದ ಎಲ್ಲ ವರ್ಗದವರನ್ನು ಎತ್ತಿಹಿಡಿದು ಅಪ್ಪಿಕೊಂಡವರು ಬಸವಣ್ಣ. ಅವರು ಸಮಾಜ ಜಾತಿ, ವರ್ಗ, ವರ್ಣ ರಹಿತವಾಗಿ ಕಟ್ಟಿದ ವಿಶ್ವದ ಮೊದಲ ಸಂಸತ್ತು ಎಂದೇ ಹೆಸರಾದ ಅನುಭವ ಮಂಟಪದಲ್ಲಿ ದೇಶವಿದೇಶದ ಶರಣ, ಶರಣೆಯರು ಇದ್ದರು. ಇದು ಬಸವಣ್ಣನ ಅನುಭವದ ತಾಕತ್ತು” ಎಂದು ಹೇಳಿದರು.
ಇದನ್ನೂ ಓದಿ> ವಿಜಯಪುರ | ಕಾರ್ಮಿಕ ಹೋರಾಟಗಳ ಹತ್ತಿಕ್ಕುವ ಪ್ರಯತ್ನ; ಬಿಜೆಪಿ ಸರ್ಕಾರಗಳ ವಿರುದ್ಧ CITU ಆಕ್ರೋಶ
ಪ್ರಗತಿಪರ ಚಿಂತಕ ಜೆ ಎಸ್ ಪಾಟೀಲ್, ವೀರಶೈವ ಮಹಾಸಭಾ ಅಧ್ಯಕ್ಷ ವಿಸಿ ನಾಗಠಾಣ ಮಾತನಾಡಿದರು. ಬಸವಲಿಂಗ ಸ್ವಾಮೀಜಿ, ಗುರುಲಿಂಗ ಸ್ವಾಮೀಜಿ, ಉತ್ಸವ ಸಮಿತಿ ಅಧ್ಯಕ್ಷ ಘನಶ್ಯಾಮ್ ತೊನ್ಸ್ವಾಲಾ, ಬಸನಗೌಡ ಹರನಾಳ, ಜಂಬುನಾಥ ಕಂಚಾಣಿ, ಸಂಗನಬಸಪ್ಪ ಸಜ್ಜನ, ಡಾ. ರವಿಕುಮಾರ ಬಿರಾದಾರ, ಮಹಾದೇವಿ ಗೋಕಾಕ, ಭಾರತೀಯ ಬಯಾರ, ಶಶಿಕಲಾ ತ್ರಿವೇಣಿ, ಸುಧಾರಾಣಿ ಬಿರಾದಾರ ಇದ್ದರು.





