ಯಾದಗಿರಿ | ಹಾಲಿನಪುಡಿ ಪೂರೈಕೆ ಸ್ಥಗಿತ; ವಿತರಣೆಗೆ ಎಐಡಿಎಸ್‌ಒ ಆಗ್ರಹ

Date:

ನಾಲ್ಕು ತಿಂಗಳಿನಿಂದ ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ಹಾಲಿನಪುಡಿ ಪೂರೈಕೆ ಆಗಿಲ್ಲ. ಕೂಡಲೇ ಹಾಲಿನ ಪುಡಿ ವಿತರಣೆ ಆರಂಭವಾಗಬೇಕು ಎಂದು ಎಐಡಿಎಸ್‌ಒ ಆಗ್ರಹಿಸಿದೆ.

ಯಾದಗಿರಿಯಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಘಟನೆಯ ಮುಖಂಡೆ ಶಿಲ್ಪಾ ಬಿ.ಕೆ, “ಕಳೆದ ಮೂರು ನಾಲ್ಕು ತಿಂಗಳಿಂದ ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ಸರ್ಕಾರದಿಂದ ಹಾಲಿನಪುಡಿ ಪೂರೈಕೆ ಆಗಿಲ್ಲ. ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಹಾಲಿನ ಸೇವನೆಯು ಅತ್ಯವಶ್ಯಕವಾಗಿದೆ. ಸರ್ಕಾರದ ಈ ಲೋಪವು ರಾಜ್ಯದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ 36 ಲಕ್ಷಕ್ಕೂ ಅಧಿಕ ಮಕ್ಕಳನ್ನು ಹಾಗೂ 6 ಲಕ್ಷಕ್ಕೂ ಹೆಚ್ಚು ಮಂದಿ ಗರ್ಭಿಣಿ ಹಾಗೂ ಬಾಣಂತಿಯರನ್ನು ಹಾಲಿನಿಂದ ವಂಚಿತರನ್ನಾಗಿಸಿದೆ” ಎಂದು ಆರೋಪಿಸಿದರು.

ಆಡಳಿತ ಸರ್ಕಾರವು ಈಗಾಗಲೇ ಅವಶ್ಯಕತೆ ಇರುವುದಕ್ಕಿಂತ 5 ಪಟ್ಟು ಕಡಿಮೆ ಹಾಲಿನಪುಡಿ ಪೂರೈಕೆ ಮಾಡುತ್ತಿದೆ. ಮೂರರಿಂದ ಆರು ವರ್ಷದ ಒಳಗಿನ ಒಂದು ಮಗುವಿನ ಸಮರ್ಪಕ ಬೆಳವಣಿಗೆಗೆ ದಿನಕ್ಕೆ ಕನಿಷ್ಟ 450 ಮಿಲಿ ಲೀಟರ್ ಹಾಲಿನ ಅವಶ್ಯಕತೆ ಇದೆ. ಅಂದರೆ 70 ಗ್ರಾಂ ಹಾಲಿನ ಪೌಡರ್ ಬದಲಿಗೆ ಸರ್ಕಾರ ಕೇವಲ 15 ಗ್ರಾಂನಷ್ಟು ವಿತರಿಸುತ್ತಿದೆ. ಬಡತನ ಮತ್ತು ಆರ್ಥಿಕ ಬಿಕ್ಕಟಿನಿಂದಾಗಿ ರಾಜ್ಯದಲ್ಲಿ ಅಪೌಷ್ಟಿಕತೆಯ ಪ್ರಮಾಣ ಹೆಚ್ಚಿದೆ. ನಮ್ಮ ದೇಶದಲ್ಲಿ ಪ್ರತಿದಿನ ಹಸಿವು ಮತ್ತು ಅಪೌಷ್ಟಿಕತೆಯಿಂದಾಗಿ 5000ಕ್ಕೂ ಅಧಿಕ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. ಮಕ್ಕಳ ಪೌಷ್ಟಿಕಾಂಶಗಳ ಪೂರೈಕೆಗಾಗಿ ಲಕ್ಷಾಂತರ ಕುಟುಂಬಗಳು ಅಂಗನವಾಡಿ ಕೇಂದ್ರಗಳ ಮೇಲೆ ಅವಲಂಬಿತವಾಗಿವೆ” ಎಂದರು.

“ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ‘ಜಾನುವಾರು ರೋಗ’ದ ನೆಪದಲ್ಲಿ ಹಾಲಿನ ಪುಡಿ ಕೊರತೆ ಹುಟ್ಟು ಹಾಕುತ್ತಿದೆ. ಹಾಗಾದಾಗ, ಹಾಲಿನ ಪುಡಿ ಪೂರೈಕೆಯನ್ನು ಖಾಸಗಿ ಸಂಸ್ಥೆ ʼಅಮೂಲ್ʼ ವಹಿಸಿಕೊಂಡು, ಮಾರುಕಟ್ಟೆಗೆ ಪ್ರವೇಶ ಮಾಡುವಂತೆ ಸರ್ಕಾರವೇ ನೇರ ಸಹಾಯ ಮಾಡುತ್ತಿದೆ ಎಂಬ ಗುಮಾನಿಯು ಜನಸಾಮಾನ್ಯರನ್ನು ಕಾಡುತ್ತಿದೆ” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬಳ್ಳಾರಿ | ಸಿಡಿಲು ಬಡಿದು ಮಹಿಳೆ ಸಾವು

“ಏಕಾಏಕಿ ಹಾಲಿನಪುಡಿ ಪೂರೈಕೆ ನಿಲ್ಲಿಸಿರುವುದು ಸರ್ಕಾರವು ಮಕ್ಕಳಿಗೆ ಮಾಡಿರುವ ದ್ರೋಹ ಎಂದೇ ನಾವು ಭಾವಿಸುತ್ತೇವೆ. ಹಾಲಿನ ಕೊರತೆಯು ಲಕ್ಷಾಂತರ ಮಕ್ಕಳ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಒಂದು ವೇಳೆ ರಾಜ್ಯದಲ್ಲಿ ಹಾಲಿನಪುರಿ ಪೂರೈಕೆ ಕೊರತೆ ಇದ್ದರೆ ಆ ಕುರಿತು ಕೂಡಲೇ ಗಮನಹರಿಸಲಿ. ಒಟ್ಟಾರೆ ಪರಿಸ್ಥಿತಿಯ ತೀವ್ರತೆಯನ್ನು ಅರಿತು ಕೂಡಲೇ ಹಾಲಿನಪುಡಿ ಪೂರೈಕೆಗೆ ಒತ್ತು ನೀಡಬೇಕು. ಕೂಡಲೇ ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ಹಾಲಿನ ಪುಡಿ ಪೂರೈಸಬೇಕು” ಎಐಡಿಎಸ್ಒ ವಿದ್ಯಾರ್ಥಿ ಸಂಘಟನೆ ಆಗ್ರಹಿಸುತ್ತಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಕಾಡಂಚಿನ ಗ್ರಾಮದಲ್ಲಿ ಶಾಸಕ ದರ್ಶನ್ ಗ್ರಾಮ ವಾಸ್ತವ್ಯ

ನಂಜನಗೂಡು ತಾಲೂಕಿನ ಕಾಡಂಚಿನ ಗ್ರಾಮದಲ್ಲಿ ಶಾಸಕ ದರ್ಶನ್ ಧ್ರುವನಾರಾಯಣ್‌ ಗ್ರಾಮ ವಾಸ್ತವ್ಯ...

ಕಲಬುರಗಿ | ಹೈ-ಕ ಭಾಗದ ಸಾಹಿತಿಗಳೆಂಬ ಹಣೆಪಟ್ಟಿ ಏಕೆ: ಡಾ. ಚಿದಾನಂದ ಸಾಲಿ

ದಲಿತ ಸಾಹಿತಿಗಳು ಅಂತ ಇರುವ ಹಾಗೆ, ಬ್ರಾಹ್ಮಣ ಕತೆಗಾರರು ಎಂಬ ಹೆಸರು...

ಮದ್ಯದಂಗಡಿ ಬೇಡ – ನೀರು, ಆರೋಗ್ಯ, ಆಹಾರ ಕೊಡಿ; ಸ್ಲಂ ಜನಾಂದೋಲನ ಒತ್ತಾಯ

ನಾಗರೀಕ ಸಮಾಜಕ್ಕೆ ಬೇಕಿರುವುದು ನೀರು, ನೈರ್ಮಲ್ಯ, ಆರೋಗ್ಯ ಮತ್ತು ಆಹಾರವೇ ಹೊರತು,...

ರಾಯಚೂರು | 9 ವರ್ಷಗಳಿಂದ ಅಂಗನವಾಡಿ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ

ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ರೋಡಲ ಬಂಡಾ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ...