2025ರಲ್ಲಿ ಜಾಗತಿಕವಾಗಿ 129 ಪತ್ರಕರ್ತರ ಕೊಲೆ

Date:

ಕಳೆದ ವರ್ಷ 2025ರಲ್ಲಿ ದಾಖಲೆ ಪ್ರಮಾಣದಲ್ಲಿ 129 ಪತ್ರಕರ್ತರು ಮತ್ತು ಮಾಧ್ಯಮ ಕಾರ್ಯಕರ್ತರು ಜಾಗತಿಕವಾಗಿ ಹತ್ಯೆಗೀಡಾಗಿದ್ದಾರೆ. ಈ ಪೈಕಿ ಮೂರನೇ ಎರಡರಷ್ಟು ಅಂದರೆ 86 ಮಂದಿ ಪತ್ರಕರ್ತರ ಕೊಲೆಯನ್ನು ಇಸ್ರೇಲ್‌ ಮಾಡಿದೆ ಎಂದು ಪತ್ರಕರ್ತರ ರಕ್ಷಣಾ ಸಮಿತಿ ಬುಧವಾರ ತಿಳಿಸಿದೆ. ಪತ್ರಕರ್ತರ ಹತ್ಯೆ ಸತತ ಎರಡನೇ ವರ್ಷ ಹೆಚ್ಚಳ ಕಾಣುತ್ತಿದೆ. ಅದರಲ್ಲೂ ಇಸ್ರೇಲ್ ಎರಡನೇ ಬಾರಿಗೆ ಅಧಿಕ ಪತ್ರಕರ್ತರ ಕೊಲೆಯಲ್ಲಿ ಭಾಗಿಯಾಗಿದೆ ಎಂದು ಪತ್ರಕರ್ತರ ಮೇಲಿನ ದಾಳಿಗಳನ್ನು ದಾಖಲಿಸುವ ನ್ಯೂಯಾರ್ಕ್ ಮೂಲದ ಸ್ವತಂತ್ರ ಸಂಸ್ಥೆ ಸಿಪಿಜೆ ವರದಿ ಹೇಳಿದೆ. 2025ರಲ್ಲಿ ಇಸ್ರೇಲ್ ಗುಂಡೇಟಿಗೆ 86 ಪತ್ರಕರ್ತರು ಸಾವನ್ನಪ್ಪಿದ್ದು ಈ ಪೈಕಿ ಹೆಚ್ಚಿನವರು ಗಾಝಾದಲ್ಲಿನ ಪ್ಯಾಲೆಸ್ತೀನಿಯನ್ನರು. ಯೆಮೆನ್‌ನಲ್ಲಿರುವ ಹೌತಿ ಮಾಧ್ಯಮ ಕೇಂದ್ರದ ಮೇಲಿನ ದಾಳಿಯ ಮೂಲಕ 31 ಮಂದಿ ಮಾಧ್ಯಮ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರೂ ಇದರಲ್ಲಿ ಸೇರಿದ್ದಾರೆ. ಇದು ಸಿಪಿಜೆ ದಾಖಲಿಸಿದ ಎರಡನೇ ಅತ್ಯಂತ ಮಾರಕ ದಾಳಿಯಾಗಿದೆ ಎಂದು ಉಲ್ಲೇಖಿಸಿದೆ.

- Advertisement -

    WhatsApp Image 2025 11 17 at 3.21.17 PM
    ಈ ದಿನ ಡೆಸ್ಕ್
    + posts

    ಪೋಸ್ಟ್ ಹಂಚಿಕೊಳ್ಳಿ:

    ಪೋಸ್ಟ್ ಹಂಚಿಕೊಳ್ಳಿ:

    ಈ ಹೊತ್ತಿನ ಪ್ರಮುಖ ಸುದ್ದಿ

    ವಿಡಿಯೋ

    ಇದೇ ರೀತಿಯ ಇನ್ನಷ್ಟು ಲೇಖನಗಳು
    Related

    ತಮಿಳುನಾಡು | ಹೊಸ ಪಕ್ಷ ಸ್ಥಾಪಿಸಿದ ಶಶಿಕಲಾ

    ಎಐಎಡಿಎಂಕೆ ಉಚ್ಚಾಟಿತ ನಾಯಕಿ ವಿ ಕೆ ಶಶಿಕಲಾ ಸೋಮವಾರ ದಿವಂಗತ ಮುಖ್ಯಮಂತ್ರಿ...

    ಸಂಪುಟ ಪುನರ್‌ರಚನೆಗೆ ಕಾಂಗ್ರೆಸ್‌ ಶಾಸಕರ ಆಗ್ರಹ; ಹೈಕಮಾಂಡ್‌ಗೆ ಪತ್ರ

    ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಬದಲಾವಣೆ ಕುರಿತು ಪದೇ-ಪದೇ ಚರ್ಚೆಗಳು ನಡೆಯುತ್ತಿಲೇ ಇವೆ....

    ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ನಿಧನ

    ಮಾಜಿ ರೈಲ್ವೆ ಸಚಿವ, ಈ ಹಿಂದೆ ತೃಣಮೂಲ ಕಾಂಗ್ರೆಸ್‌(ಟಿಎಂಸಿ)ಯ ಎರಡನೇ ಉನ್ನತ...

    ಟ್ರಂಪ್ ಸುಂಕ 15%ಗೆ ಏರಿಕೆ!

    ನಾನಾ ರಾಷ್ಟ್ರಗಳ ಮೇಲೆ ಅಮೆರಿಕ ಅಧ್ಯಕ್ಷ ಟ್ರಂಪ್ ಹೇರಿದ್ದ ಭಾರೀ ಸುಂಕವನ್ನು...