ಒಡಿಶಾ | ನವೀನ್ ಪಟ್ನಾಯಕ್‌ರ ಬಿಜೆಡಿ ಜೊತಿಗಿಲ್ಲ ಮೈತ್ರಿ; ಬಿಜೆಪಿ ಏಕಾಂಗಿ ಸ್ಪರ್ಧೆ

Date:

Advertisements

ಲೋಕಸಭೆ ಚುನಾವಣೆಯ ಜೊತೆಗೆ ಕೆಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಯೂ ಕೂಡಾ ಈ ವರ್ಷವೇ ನಡೆಯಲಿದೆ. ಆ ರಾಜ್ಯಗಳಲ್ಲಿ ಒಡಿಶಾ ಕೂಡಾ ಒಂದಾಗಿದೆ. ಒಡಿಶಾದಲ್ಲಿ ಈ ಎರಡು ಚುನಾವಣೆಯಲ್ಲಿಯೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತು ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಮೈತ್ರಿಯಾಗಿ ಕಣಕ್ಕಿಳಿಯುವ ಬಗ್ಗೆ ಚರ್ಚೆಗಳು ನಡೆದಿತ್ತು. ಆದರೆ ಈಗ ‘ಬಿಜೆಡಿಯೊಂದಿಗೆ ಮೈತ್ರಿಯಿಲ್ಲ, ಜನರ ಆಶಯ ಈಡೇರಿಸುವ ನಿಟ್ಟಿನಲ್ಲಿ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ’ ಎಂದು ಬಿಜೆಪಿ ಘೋಷಿಸಿದೆ.

ಈ ಬಗ್ಗೆ ಒಡಿಶಾದ ಬಿಜೆಪಿ ರಾಜ್ಯಾಧ್ಯಕ್ಷ ಮನ್‌ಮೋಹನ್ ಸಮಲ್ ಎಕ್ಸ್‌ನಲ್ಲಿ (ಟ್ವಿಟ್ಟರ್) ಪೋಸ್ಟ್ ಮಾಡಿದ್ದಾರೆ. ಬಿಜೆಪಿ ಪಕ್ಷವು ಒಡಿಶಾದಲ್ಲಿ ಲೋಕಸಭೆ ಚುನಾವಣೆ ಎಲ್ಲ 21 ಕ್ಷೇತ್ರಗಳಲ್ಲಿ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಎಲ್ಲ 147 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದೆ ಎಂದು ಮಾಹಿತಿ ನೀಡಿದ್ದಾರೆ.

“ಕಳೆದ 10 ವರ್ಷಗಳಿಂದ, ಒಡಿಶಾದ ಬಿಜು ಜನತಾ ದಳ (ಬಿಜೆಡಿ) ಪಕ್ಷವು ನವೀನ್ ಪಟ್ನಾಯಕ್ ಅವರ ನೇತೃತ್ವದಲ್ಲಿ ಕೇಂದ್ರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರವನ್ನು ರಾಷ್ಟ್ರೀಯ ಮಹತ್ವದ ಅನೇಕ ವಿಷಯಗಳಲ್ಲಿ ಬೆಂಬಲಿಸುತ್ತಿದೆ. ಇದು ನಾವು ಅವರಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ” ಎಂದಿದ್ದಾರೆ.

Advertisements

“ದೇಶಾದ್ಯಂತ ಡಬಲ್ ಇಂಜಿನ್ ಸರ್ಕಾರ ಇದ್ದಲ್ಲೆಲ್ಲಾ ಅಭಿವೃದ್ಧಿ ಮತ್ತು ಕಳಪೆ ಕಲ್ಯಾಣ ಕಾರ್ಯಗಳು ವೇಗಗೊಂಡಿವೆ ಮತ್ತು ರಾಜ್ಯವು ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದೆ ಎಂಬುವುದು ನಮ್ಮ ಅನುಭವಕ್ಕೆ ಬಂದಿದೆ” ಎಂದಿರುವ ಮನ್‌ಮೋಹನ್ ಸಮಲ್ “ಆದರೆ ನಾವು ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲ್ಲ” ಎಂದು ತಿಳಿಸಿದರು.

ಇದನ್ನು ಓದಿದ್ದೀರಾ?  ಒಡಿಶಾ| ಬಿಜೆಡಿ ಜೊತೆ ಮೈತ್ರಿ ಮಾತುಕತೆಗೆ ಬ್ರೇಕ್; ಏಕಾಂಗಿ ಸ್ಪರ್ಧೆ ಸುಳಿವು ನೀಡಿದ ಬಿಜೆಪಿ

“ಆದರೆ ಇಂದು ಮೋದಿ ಸರ್ಕಾರದ ಅನೇಕ ಕಲ್ಯಾಣ ಯೋಜನೆಗಳು ಒಡಿಶಾದಲ್ಲಿ ನೆಲವನ್ನು ತಲುಪುತ್ತಿಲ್ಲ. ಇದರಿಂದಾಗಿ ಒಡಿಶಾದ ಬಡ ಸಹೋದರಿಯರು ಮತ್ತು ಸಹೋದರರಿಗೆ ಅದರ ಪ್ರಯೋಜನಗಳು ಸಿಗುತ್ತಿಲ್ಲ. ಒಡಿಶಾ-ಗುರುತಿಸುವಿಕೆ, ಒಡಿಶಾ-ಹೆಮ್ಮೆ ಮತ್ತು ಒಡಿಶಾದ ಜನರ ಹಿತಾಸಕ್ತಿಗೆ ಸಂಬಂಧಿಸಿದ ಅನೇಕ ವಿಷಯಗಳ ಬಗ್ಗೆ ನಮಗೆ ಕಳವಳವಿದೆ” ಎಂದು ಮನ್‌ಮೋಹನ್ ಸಮಲ್ ಟ್ವೀಟ್‌ ಮಾಡಿದ್ದಾರೆ.

“ಒಡಿಶಾದ 4.5 ಕೋಟಿ ಜನರ ಆಶಯಗಳು, ಅಭಿಲಾಷೆ, ಆಕಾಂಕ್ಷೆಗಳನ್ನು ಈಡೇರಿಸಲು, ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ, ಅಭಿವೃದ್ಧಿ ಹೊಂದಿದ ಭಾರತ ಮತ್ತು ಅಭಿವೃದ್ಧಿ ಹೊಂದಿದ ಒಡಿಶಾವನ್ನು ರಚಿಸಲು, ಬಿಜೆಪಿ ಎಲ್ಲಾ 21 ಸ್ಥಾನಗಳನ್ನು ಗೆಲ್ಲುತ್ತದೆ. ಲೋಕಸಭೆ ಮತ್ತು ವಿಧಾನಸಭೆಯ ಎಲ್ಲಾ 147 ಸ್ಥಾನಗಳಿಗೆ ಏಕಾಂಗಿಯಾಗಿ ಸ್ಪರ್ಧಿಸಲಿದೆ” ಎಂದು ಒಡಿಶಾದ ಬಿಜೆಪಿ ರಾಜ್ಯಾಧ್ಯಕ್ಷರು ಸ್ಪಷ್ಟಪಡಿಸಿದರು.

ಈ ಹಿಂದೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್‌ರ ನಿವಾಸದಲ್ಲಿ ಬಿಜೆಡಿ ನಾಯಕರ ಸಭೆ ನಡೆದ ಸಂದರ್ಭದಲ್ಲೇ ಬಿಜೆಪಿಯ ರಾಜ್ಯ ಘಟಕದ ಮುಖ್ಯಸ್ಥ ಮನಮೋಹನ್ ಸಮಲ್ ಸೇರಿದಂತೆ ಬಿಜೆಪಿಯ ಮುಖಂಡರುಗಳು ನವದೆಹಲಿಯಲ್ಲಿ ಸಭೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿತ್ತು.

ಸುಮಾರು 15 ವರ್ಷಗಳ ಹಿಂದೆ ಎನ್‌ಡಿಎಯಿಂದ ದೂರ ಸರಿದಿದ್ದ ಬಿಜೆಡಿ ಮತ್ತೆ ಕೂಟವನ್ನು ಸೇರುವ ಸುಳಿವು ನೀಡಿತ್ತು. ಬಿಜೆಡಿ ಉಪಾಧ್ಯಕ್ಷ ಮತ್ತು ಶಾಸಕ ದೇಬಿ ಪ್ರಸಾದ್ ಮಿಶ್ರಾ, “ಒಡಿಶಾದ ಜನರ ಹಿತಾಸಕ್ತಿಗೆ ಎಂದಿಗೂ ಬಿಜು ಜನತಾ ದಳವು ಆದ್ಯತೆ ನೀಡುತ್ತದೆ. ಹೌದು, ಈ ವಿಷಯದ (ಮೈತ್ರಿ) ಬಗ್ಗೆ ಚರ್ಚೆ ನಡೆದಿದೆ,” ಎಂದು ತಿಳಿಸಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ‘ಅಲೆದಾಡುವ ಆತ್ಮ’ ನಿಮ್ಮನೆಂದಿಗೂ ಬಿಡದು: ಮೋದಿಗೆ ಶರದ್ ಪವಾರ್ ತಿರುಗೇಟು

ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆಯ ಪ್ರಚಾರದ ವೇಳೆ ಮಾಡಿದ...

ಮೋದಿ ಸಂಪುಟದಲ್ಲಿ ಶಿಂದೆ, ಅಜಿತ್ ಬಣಕ್ಕಿಲ್ಲ ಸ್ಥಾನ; ಶಿವಸೇನೆ ಸಂಸದ ಅಸಮಾಧಾನ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವು ರಚನೆಯಾದ 24 ಗಂಟೆಗಳ...

Download Eedina App Android / iOS

X