ಲೋಕಸಭಾ ಚುನಾವಣೆ | ಮೂರು ರಾಜ್ಯಗಳಲ್ಲಿ ಏಳು ಹಂತದ ಮತದಾನ: ಎಷ್ಟು ರಾಜ್ಯಗಳಲ್ಲಿ ಒಂದೇ ಹಂತ?

Date:

18ನೇ ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗವು ಶನಿವಾರ ದಿನಾಂಕಗಳನ್ನು ಪ್ರಕಟಿಸಿದೆ. ದೇಶದಲ್ಲಿ ಏಳು ಹಂತಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಏಪ್ರಿಲ್ 19ರಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ.

ಈ ಪೈಕಿ ಉತ್ತರ ಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಏಳು ದಿನಾಂಕಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. 22 ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.

ಅರುಣಾಚಲ ಪ್ರದೇಶ, ಅಂಡಮಾನ್ & ನಿಕೋಬಾರ್, ಆಂಧ್ರಪ್ರದೇಶ, ಚಂಡೀಗಢ, ದಾದರ್ ಹಾಗೂ ನಗರ್ ಹವೇಲಿ, ದೆಹಲಿ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಹರಿಯಾಣ, ಕೇರಳ, ಲಕ್ಷದ್ವೀಪ, ಲಡಾಖ್, ಮಿಝೋರಾಂ, ಮೇಘಾಲಯ, ನಾಗಾಲ್ಯಾಂಡ್, ಪುದುಚೇರಿ, ಸಿಕ್ಕಿಂ, ತಮಿಳುನಾಡು, ಪಂಜಾಬ್, ತೆಲಂಗಾಣ, ಉತ್ತರಾಖಂಡ ಸೇರಿ ಒಟ್ಟು 22 ರಾಜ್ಯಗಳಲ್ಲಿ ಒಂದೇ ದಿನ ಮತದಾನ ಪ್ರಕ್ರಿಯೆ ನಡೆಯಲಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕರ್ನಾಟಕ, ರಾಜಸ್ಥಾನ, ತ್ರಿಪುರ, ಮಣಿಪುರ ಸೇರಿ ನಾಲ್ಕು ರಾಜ್ಯದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ಛತ್ತೀಸ್‌ಗಢ, ಅಸ್ಸಾಂನಲ್ಲಿ ಮೂರು ದಿನಾಂಕಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ.

ಒಡಿಶಾ, ಮಧ್ಯಪ್ರದೇಶ, ಜಾರ್ಖಂಡ್ ಸೇರಿ ಮೂರು ರಾಜ್ಯದಲ್ಲಿ ನಾಲ್ಕು ದಿನಾಂಕಗಳಲ್ಲಿ ಮತದಾನ ಪ್ರಕ್ರಿಯೆ ನಡೆದರೆ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರದಲ್ಲಿ ಐದು ದಿನಾಂಕಗಳಲ್ಲಿ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶ, ಬಿಹಾರ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಏಳು ದಿನಾಂಕಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಹೀಗೆ ಒಟ್ಟು 36 ರಾಜ್ಯಗಳ 543 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಏ.19ರಂದು ಮತ ಹಾಕಿದವರು ಫಲಿತಾಂಶಕ್ಕೆ ಕಾಯಬೇಕು 47 ದಿನ!

ಸಾರ್ವತ್ರಿಕ ಚುನಾವಣೆಗೆ ಏ.19ರಂದು ಮೊದಲ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸದವರು, ತಮ್ಮ ಫಲಿತಾಂಶಕ್ಕಾಗಿ ಬರೋಬ್ಬರಿ 47 ದಿನಗಳು ಕಾಯಬೇಕು. ಅಂದರೆ ಮತ ಚಲಾಯಿಸಿದವರು ಜೂ.4ರವರೆಗೆ ತಮ್ಮ ಫಲಿತಾಂಶಕ್ಕೆ ಕಾಯಬೇಕಿದೆ. ಅಲ್ಲದೇ, ಮತ ಎಣಿಕೆ ಕೇಂದ್ರಕ್ಕೆ ಪೊಲೀಸರು ಹಾಗೂ ಚುನಾವಣಾ ಆಯೋಗ ಅಷ್ಟು ದಿನಗಳವರೆಗೆ ಭದ್ರತೆ ಕೂಡ ನೀಡಬೇಕಿದೆ.

ಲೋಕಸಭೆ ಚುನಾವಣೆ 7 ಹಂತ ಹಂತಗಳಲ್ಲಿ ನಡೆಯಲಿದೆ. ಹಂತ ಹಾಗೂ ಕ್ಷೇತ್ರಗಳ ವಿವರ ಹೀಗಿದೆ:

ಮೊದಲ ಹಂತವು ಏಪ್ರಿಲ್ 19ರಂದು 102 ಕ್ಷೇತ್ರಗಳು

ಹಂತ–2 ಏಪ್ರಿಲ್ 26, 89 ಕ್ಷೇತ್ರಗಳು

ಹಂತ–3 ಮೇ 7, 94 ಕ್ಷೇತ್ರಗಳು

ಹಂತ–4 ಮೇ 13, 96 ಕ್ಷೇತ್ರಗಳು

ಹಂತ– 5 ಮೇ 20, 49 ಕ್ಷೇತ್ರಗಳು

ಹಂತ– 6 ಮೇ 25, 57 ಕ್ಷೇತ್ರಗಳು

ಹಂತ– 7 ಜೂನ್ 1, 57 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

2019ರ ಲೋಕಸಭಾ ಚುನಾವಣೆ

2019ರ ಲೋಕಸಭಾ ಚುನಾವಣೆಗೆ ಆಯೋಗವು ಮಾರ್ಚ್ 10ರಂದು ವೇಳಾಪಟ್ಟಿ ಪ್ರಕಟಿಸಿತ್ತು. ಏಪ್ರಿಲ್ 11 ಹಾಗೂ ಮೇ 19ರ ನಡುವೆ ಏಳು ಹಂತಗಳಲ್ಲಿ ಮತದಾನ ನಡೆದಿತ್ತು. ಮೇ 23ರಂದು ಮತ ಎಣಿಕೆ ನಡೆಸಲಾಗಿತ್ತು. 2019ರಲ್ಲಿ ಶೇಕಡ 67.40ರಷ್ಟು ದೇಶದಲ್ಲಿ ಒಟ್ಟು ಮತದಾನ ನಡೆದಿತ್ತು. ಪ್ರಸ್ತುತ ಲೋಕಸಭೆಯ ಅವಧಿ ಜೂನ್ 16ಕ್ಕೆ ಕೊನೆಯಾಗಲಿದೆ. ಅದಕ್ಕೆ ಮುನ್ನ ಹೊಸ ಸರ್ಕಾರ ರಚನೆಯಾಗಬೇಕಿದೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಶ್ಚಿಮ ಬಂಗಾಳ | ಪ್ರಧಾನಿ ಚುನಾವಣಾ ರ್‍ಯಾಲಿ ಬಳಿಕ ಟಿಎಂಸಿಯಿಂದ ಮೋದಿ ಹೇಳಿಕೆಗಳ ಫ್ಯಾಕ್ಟ್‌ಚೆಕ್!

ಪಶ್ಚಿಮ ಬಂಗಾಳದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭರ್ಜರಿಯಾಗಿ ರ್‍ಯಾಲಿ ನಡೆಸಿ ಚುನಾವಣಾ...

ಬಿಜೆಪಿ ತನ್ನ ಭದ್ರಕೋಟೆಯಲ್ಲೂ ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸದಲ್ಲಿಲ್ಲ: ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ನಡೆದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ವಾತಾವರಣ...

2ನೇ ಹಂತದ ಲೋಕಸಭಾ ಚುನಾವಣೆ: ಶೇ.61 ಮತದಾನ

ದೇಶಾದ್ಯಂತ 13 ರಾಜ್ಯ ಹಾಗೂ ಒಂದು ಕೆಂದ್ರಾಡಳಿತ ಪ್ರದೇಶದ 88 ಕ್ಷೇತ್ರಗಳಿಗೆ...

ಪಶ್ಚಿಮ ಬಂಗಾಳ| ಬಿಜೆಪಿಯ ಬಿರ್ಭೂಮ್ ಕ್ಷೇತ್ರದ ಚುನಾವಣಾ ಅಭ್ಯರ್ಥಿ ನಾಮಪತ್ರ ರದ್ದು

ಮಾಜಿ ಐಪಿಎಸ್ ಅಧಿಕಾರಿ ಮತ್ತು ಬಿರ್ಭೂಮ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ...