ಯಾದಗಿರಿ | ಸಾಮಾಜಿಕ ಭದ್ರತೆ ಯೋಜನೆಗಳ ನಿಯಮ ಸಡಿಲಿಸಿ ಮಾಸಿಕ ₹5,000ಕ್ಕೆ ಹೆಚ್ಚಿಸುವಂತೆ ಆಗ್ರಹ

Date:

ಸಾಮಾಜಿಕ ಭದ್ರತೆ ಯೋಜನೆಗಳ ನಿಯಮವನ್ನು ಸಡಿಲಿಸಿ ಮಾಸಿಕ ₹5,000 ಹೆಚ್ಚಿಸುವಂತೆ ಒತ್ತಾಯಿಸಿ ಕರ್ನಾಟಕ ಗಾಂಧಿವಾದಿ ಜನಪರ ಚಳವಳಿ ಸಮಿತಿಯಿಂದ ಯಾದಗಿರಿ ಜಿಲ್ಲೆಯ ಸುರಪುರ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

“ಕರ್ನಾಟಕದ ಘನ ಸರ್ಕಾರದಿಂದ ನೀಡುತ್ತಿರುವ ಸಾಮಾಜಿಕ ಭದ್ರತೆ ಯೋಜನೆಗಳಾದ ವೃದ್ಯಾಪ್ಯ ವೇತನ, ಸಂಧ್ಯಾಸುರಕ್ಷಾ ವೇತನ, ವಿಧವಾ ವೇತನ ಮತ್ತು ಅಂಗವಿಕಲ ವೇತನ ಹಾಗೂ ಮನಸ್ವಿನಿ ವೇತನ ಯೋಜನೆಗಳು ಸಂಪೂರ್ಣ ಸಾರ್ವಜನಿಕರಿಗೆ ವಿರುದ್ಧವಾದ ನಿಯಮಗಳಿಗೆ ಒಳಪಟ್ಟಿದ್ದು, ಇದರಿಂದ ಅರ್ಹ ಫಲಾನುಭವಿಗಳಿಗೆ ಯೋಜನೆಗಳು ತಲುಪದಂತಾಗಿ, ಶ್ರೀಮಂತರಿಗೆ ಮತ್ತು ದಲ್ಲಾಳಿಗಳ ಪಾಲಾಗಿವೆ. ಈ ಯೋಜನೆಗಳು ಸಂಪೂರ್ಣ ಹಳ್ಳ ಹಿಡಿದಂತಾಗಿವೆ” ಎಂದು ಹೇಳಿದರು.

“ಸದರಿ ಯೋಜನೆಗಳಾದ ವೃದ್ಯಾಪ್ಯ ವೇತನಕ್ಕೆ 65 ವರ್ಷ ನಿಗದಿಪಡಿಸಿದ್ದು, ಇದು ಅಸಮಂಜಸವಾಗಿದೆ. ಯಾಕೆಂದರೆ ಈ ಭಾಗದಲ್ಲಿ ಬಿಸಿಲು ಹೆಚ್ಚಾಗಿರುವುದರಿಂದ ನಮ್ಮ ನಾಗರಿಕರು 55 ವರ್ಷಕ್ಕೇ ದುಡಿಯುವ ಶಕ್ತಿಯನ್ನು ಕಳೆದುಕೊಂಡಿರುತ್ತಾರೆ. ಅವರು ಈ ಪ್ರದೇಶದಲ್ಲಿ ದುಡಿಯುವ ಶಕ್ತಿ ಇರುವುದಿಲ್ಲ. ಹಾಗಾಗಿ 55ಕ್ಕೆ ಇಳಿಸುವುದು ಸೂಕ್ತ ಮತ್ತು ನ್ಯಾಯ ಸಮ್ಮತವಾಗಿದೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಲು ಗಂಡು ಮಕ್ಕಳು ಇರಬಾರದೆಂದು ನಿಯಮವಿದೆ. ಆದರೆ ಈ ಭಾಗದಲ್ಲಿ ಗಂಡು ಮಕ್ಕಳು ಇದ್ದರೂ ಕೂಡ ತಾಯಿಯನ್ನು ಯಾರು ಆರೈಕೆ ಮಾಡುತ್ತಿಲ್ಲ ಮತ್ತು ಅವರು ತಮ್ಮ ಕುಟುಂಬದ ನಿರ್ವಹಣೆಗಾಗಿ ಗುಳೆ ಹೋಗಿರುತ್ತಾರೆ. ಅವರನ್ನು ನೋಡಿಕೊಳ್ಳಲು ಯಾರೂ ಇರುವುದಿಲ್ಲ. ಹಾಗಾಗಿ ಈ ನಿಯಮವನ್ನು ಸಡಿಲಿಸಬೇಕು” ಎಂದು ಆಗ್ರಹಿಸಿದರು.

“ಮನಸ್ವಿನಿ ಯೋಜನೆಗೆ ಅರ್ಜಿ ಸಲ್ಲಿಸಲು ಕೋರ್ಟಿನಿಂದ ವಿಚ್ಛೇದನಾ ಪ್ರಮಾಣ ಪತ್ರ ಅವಶ್ಯಕತೆ ಇದ್ದು, ಈ ಭಾಗದ ಮಹಿಳೆಯರು ಗಂಡನ ವಿರುದ್ಧ ಯಾವುದೇ ಪ್ರಕರಣ ದಾಖಲು ಮಾಡಲು ಶಕ್ತಿ ಇಲ್ಲದ ಕಾರಣ ಅವರು ಒಂಟಿಯಾಗಿ ಬದುಕುತ್ತಿದ್ದಾರೆ. ಇವರಿಗೆ ಮಕ್ಕಳನ್ನು ಪಾಲನೆ, ಪೋಷಣೆ ಮಾಡಲು ತುಂಬಾ ಕಷ್ಟಪಡುತ್ತಿದ್ದಾರೆ. ಈ ನಿಯಮವನ್ನು ಸಡಿಲಿಸಿ ಅವರ ಹೇಳಿಕೆಯ ಮೇರೆಗೆ ಯೋಜನೆಯನ್ನು ಸಡಿಲಗೊಳಿಸಬೇಕು” ಎಂದು ಒತ್ತಾಯಿಸಿದರು.

“ಅಂಗವಿಕಲರ ಯೋಜನೆಗೆ ಶೇ.75ರಷ್ಟು ಅವಶ್ಯಕತೆ ಇದ್ದು, ಇದು ಎಷ್ಟೋ ಜನರು ಬೋಗಸ್ ಬೊಟ್ಟಿ ಕಾಗದವನ್ನು ಸೃಷ್ಟಿಸಿ ಹಣ ಪಡೆಯುತ್ತಿದ್ದಾರೆ. ನಿಜವಾದ ಫಲಾನುಭವಿಗಳು ಯೋಜನೆಯ ದಾಖಲಾತಿ ಪಡೆಯಲು ಹಣವಿಲ್ಲದ ಕಾರಣ ಶೇ.75ರಷ್ಟು ಜನರು ಯೋಜನೆ ಪಡೆದುಕೊಂಡಿಲ್ಲ. ಅವರಿಗೆ ಅಧಿಕಾರಿಗಳು ಅಂಗವಿಕಲರ ಯೋಜನೆಯ ಹಣವನ್ನು ನೀಡಿರುವುದಿಲ್ಲ. ಈ ನಿಯಮವನ್ನು ಸಡಿಲಿಸಿ ಶೇ.50ರಷ್ಟು ಪರಿಗಣಿಸಬೇಕು” ಎಂದು ಆಗ್ರಹಿಸಿದರು.

“ಒಟ್ಟಾರೆಯಾಗಿ ಸದರಿ ಯೋಜನೆಯಲ್ಲಿರುವ ಎಲ್ಲ ಅವೈಜ್ಞಾನಿಕ ನಿಯಮವನ್ನು ಕೈ ಬಿಟ್ಟು ಈ ಪ್ರದೇಶಕ್ಕೆ ಅನುಗುಣವಾಗಿ ಮತ್ತು ಬಡವರಿಗೆ ನ್ಯಾಯ ನೀಡುವ ಸಲುವಾಗಿ ನಿಯಮ ಸಡಿಲಿಸಿ ಮತ್ತು ಎಲ್ಲ ಫಲಾನುಭವಿಗಳಿಗೆ ಮಾಸಿಕ ₹5,000ದಂತೆ ಈ ಯೋಜನೆಗೆ ಮಂಜೂರು ಮಾಡಬೇಕು. ಒಂದು ವೇಳೆ ವಿಳಂಬ ನೀತಿ ಅನುಸರಿಸಿದರೆ ಆಹೋರಾತ್ರಿ ಧರಣಿ ಸತ್ಯಾಗ್ರಹ ಕೈಗೊಳ್ಳಲಾಗುವುದು. ಬಳಿಕ ಎಲ್ಲ ಆಗುಹೋಗುಗಳಿಗೆ ತಾವೇ ಹೊಣೆಗಾರರಾಗಿರುತ್ತೀರಿ” ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಅಪ್ರಜಾತಾಂತ್ರಿಕವಾಗಿ ಹೇರಿರುವ ಎನ್‌ಇಪಿಯನ್ನು ಹಿಂಪಡೆಯಬೇಕು: ಎಐಡಿಎಸ್‌ಒ

ಈ ಸಂದರ್ಭದಲ್ಲಿ ಭಾಗಪ್ಪ, ಮಲ್ಲಮ್ಮ, ಭೀಮಪ್ಪ, ಶೇಖಮ್ಮ, ವೀರಭದ್ರಪ್ಪ ಹೈಯಾಳಪ್ಪ, ಶಿವರಾಜ್, ಅಮತೆಮ್ಮ, ಹಣಮಂತ, ಯಲ್ಲಮ್ಮ, ಭೀಮಪ್ಪ, ಅಂಜನಮ್ಮ, ಮುತ್ತಮ್ಮ, ಮಲಮ್ಮ, ಭೀಮಪ್ಪ, ಹೋನಪ್ಪ, ಬಸಲಿಂಗಮ್ಮ, ಮರೆಮ್ಮ, ಭೀಮಪ್ಪ, ಯಲ್ಲಮ್ಮ, ರಾಮಣ್ಣ ಸೇರಿದಂತೆ ಇತರರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಭದ್ರಾ ಜಲಾಶಯದ ಸುರಕ್ಷತೆಗೆ ಒತ್ತಾಯ; ಜು.24ರಂದು ಬೃಹತ್ ಪ್ರತಿಭಟನೆ

ಭದ್ರಾ ಜಲಾಶಯದ ಸುರಕ್ಷತೆಗೆ ಆದ್ಯತೆ, ಸೋರಿಕೆ ತಡೆಗಟ್ಟಲು ಹಾಗೂ ಡ್ಯಾಂ ನೀರು...

ಕರ್ತವ್ಯ ಸಂಬಂಧಿತ ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವಂತಿಲ್ಲ; ಪೊಲೀಸರಿಗೆ ಆಯುಕ್ತರ ಎಚ್ಚರಿಕೆ

ಪೊಲೀಸ್‌ ಸಿಬ್ಬಂದಿಗಳು ಸಮವಸ್ತ್ರದಲ್ಲಿರುವ ತಮ್ಮ ಫೋಟೋ, ವಿಡಿಯೋ, ರೀಲ್ಸ್‌ ಸೇರಿದಂತೆ ಕರ್ತವ್ಯಕ್ಕೆ...

ಮಡಿಕೇರಿ | ಗ್ಯಾರಂಟಿ ಯೋಜನೆಗಳನ್ನು ಅರ್ಹರಿಗೆ ತಲುಪಿಸಬೇಕು: ಧರ್ಮಜ ಉತ್ತಪ್ಪ

ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳ ಪ್ರಗತಿ ಸಂಬಂಧಿಸಿದಂತೆ ಜಿಲ್ಲಾ ಅನುಷ್ಠಾನ ಸಮಿತಿ...

ಕೊಡಗು | ನಿಧಿ ಆಸೆಗೆ ಮನೆಯ ಕೋಣೆಯಲ್ಲೇ ಗುಂಡಿ ಕೊರೆದ ದುರುಳರು ಪೊಲೀಸರ ಬಲೆಗೆ

ನಿಧಿಯ ಆಸೆಗೆ ಜೋತುಬಿದ್ದು ವಾಸದ ಮನೆಯ ಕೋಣೆಯಲ್ಲಿ ಗುಂಡಿ ತೋಡಿ ಶೋಧಿಸಿದ...