ಅಹಮದಾಬಾದ್-ಮುಂಬೈ ಬುಲೆಟ್ ರೈಲು ಯೋಜನಾ ವೆಚ್ಚ ಬಹುತೇಕ ದುಪ್ಪಟ್ಟು: ₹2 ಲಕ್ಷ ಕೋಟಿಗೆ ಏರಿಕೆ

Date:

ಅಹಮದಾಬಾದ್-ಮುಂಬೈ ಹೈ-ಸ್ಪೀಡ್ ರೈಲು ಕಾರಿಡಾರ್ (MAHSR) ಯೋಜನೆಗೆ 2026ರ ಮಾರ್ಚ್‌ವರೆಗೆ ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿಎಲ್) ₹92,761 ಕೋಟಿ ವೆಚ್ಚ ಮಾಡಿದೆ. ಆದರೆ, ಈ ಮಹತ್ವಾಕಾಂಕ್ಷೆಯ ಯೋಜನೆಯ ಒಟ್ಟು ವೆಚ್ಚವು ಇದೀಗ ಬಹುತೇಕ ದುಪ್ಪಟ್ಟಾಗಿದೆ ಎಂದು ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ನೀಡಲಾದ ಉತ್ತರವೊಂದರಲ್ಲಿ ಬಹಿರಂಗವಾಗಿದೆ.

- Advertisement -

​ಜನಪ್ರಿಯವಾಗಿ ‘ಬುಲೆಟ್ ರೈಲು’ ಯೋಜನೆ ಎಂದು ಕರೆಯಲ್ಪಡುವ ಈ ಯೋಜನೆಯ ಪರಿಷ್ಕೃತ ಅಂದಾಜು ವೆಚ್ಚ ಇದೀಗ ₹2,02,797 ಕೋಟಿಗೆ ಏರಿಕೆಯಾಗಿದೆ. ಇದು ಆರಂಭಿಕ ಅಂದಾಜು ವೆಚ್ಚವಾದ ₹1,08,000 ಕೋಟಿಗಿಂತ ಬಹುತೇಕ ದುಪ್ಪಟ್ಟಾಗಿದೆ. 508 ಕಿ.ಮೀ ಉದ್ದದ ಈ ಕಾರಿಡಾರ್ ಮಹಾರಾಷ್ಟ್ರ, ಗುಜರಾತ್ ಹಾಗೂ ದಾದ್ರಾ ಮತ್ತು ನಗರ ಹವೇಲಿ ಕೇಂದ್ರಾಡಳಿತ ಪ್ರದೇಶದ ಮೂಲಕ ಹಾದುಹೋಗುತ್ತದೆ. ​ಭೂಸ್ವಾಧೀನಕ್ಕೆ ಪರಿಹಾರ ವಿತರಣೆ ಸೇರಿದಂತೆ ವಿವಿಧ ಸಮಸ್ಯೆಗಳಿಂದಾಗಿ ಈ ಯೋಜನೆಯು ಗಣನೀಯವಾಗಿ ವಿಳಂಬವಾಗಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸಂವಿಧಾನದ ಒಂಬತ್ತನೇ ಅನುಸೂಚಿ: ಉದ್ದೇಶ, ಕಾಯ್ದೆಗಳ ಸೇರ್ಪಡೆ ಮತ್ತು...

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೀಸಲಾತಿ ಕೋಟಾ ಹೆಚ್ಚಿಸಿ ರಾಜ್ಯ ರೂಪಿಸಿದ ಕಾಯ್ದೆಯನ್ನು ಉಚ್ಚ ನ್ಯಾಯಾಲಯ ರದ್ದುಗೊಳಿಸಿರುವುದನ್ನು, ಪರ್ಯಾಯ ಕಂಡುಕೊಳ್ಳದೆ, ರಕ್ಷಿಸಿಕೊಳ್ಳುವ ಉದ್ದೇಶದಿಂದ ಅನುಸೂಚಿ 9ಕ್ಕೆ ಸೇರಿಸಲು ಕೇಂದ್ರ ಸರ್ಕಾರಕ್ಕೆ ರವಾನಿಸಿದೆ....

ಭತ್ತಕ್ಕೆ ಬೆಲೆಯಿಲ್ಲ, ಅಕ್ಕಿ ದರ ಇಳಿಯುತ್ತಲೇ ಇಲ್ಲ!

ಮುಂಗಾರು ಹಂಗಾಮಿನಲ್ಲಿ ದೇಶಾದ್ಯಂತ ಭತ್ತ ಬಿತ್ತನೆ ಪ್ರದೇಶದಲ್ಲಿ ಗಣನೀಯ ಇಳಿಕೆಯಾಗಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 2025-26ನೇ ಸಾಲಿನಲ್ಲಿ 449.18 ಲಕ್ಷ ಹೆಕ್ಟೇರ್‌ಗಳಷ್ಟಿದ್ದ ಭತ್ತ ಬಿತ್ತನೆ ಪ್ರದೇಶ,...

ಸಾಮಾಜಿಕ ಜಾಲತಾಣದಲ್ಲಿ Belonging ಆತ್ಮಕಥನ ಬಿಡುಗಡೆ ಸಮಾರಂಭದ ಪಟಗಳದೇ...

ಒಬ್ಬ ತಾಯಿಯ ಬದುಕಿನ ಪುಟಗಳು ಪುಸ್ತಕವಾಗಿ ಹೊರಬಂದ ದಿನ, ಮಕ್ಕಳ ಕಣ್ಣಲ್ಲಿ ಹೆಮ್ಮೆ ಮತ್ತು ವಾತ್ಸಲ್ಯ ಒಟ್ಟಿಗೆ ತುಂಬಿಕೊಂಡಿತ್ತು. ತಾಯಿಯ ಮಾತುಗಳನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ರಾಹುಲ್ ಗಾಂಧಿ, ತನ್ನ ಬದುಕಿನ ಅಮೋಘ ಕ್ಷಣಗಳನ್ನು...

ಆರ್‌ಟಿಐ ಅರ್ಜಿಗೆ ಉತ್ತರಿಸಿರುವ ಎನ್‌ಎಚ್‌ಎಸ್‌ಆರ್‌ಸಿಎಲ್, ಯೋಜನೆಯನ್ನು ಮೂಲತಃ 2023ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು ಎಂದು ತಿಳಿಸಿದೆ. ಯೋಜನೆಯು ಪೂರ್ಣಗೊಳ್ಳುವ ತಾತ್ಕಾಲಿಕ ಕಾಲಮಿತಿಯ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಸಂಸ್ಥೆಯು, “ಎಲ್ಲಾ ಗುತ್ತಿಗೆ ಪ್ಯಾಕೇಜ್‌ಗಳನ್ನು ಹಂಚಿಕೆ ಮಾಡಿದ ನಂತರವಷ್ಟೇ ಯೋಜನೆ ಪೂರ್ಣಗೊಳ್ಳುವ ನಿಖರ ಸಮಯವನ್ನು ನಿರ್ಧರಿಸಬಹುದು,” ಎಂದು ಹೇಳಿದೆ.

​ಜಪಾನ್‌ನ ಟ್ರ್ಯಾಕ್ ತಂತ್ರಜ್ಞಾನ, ಜಪಾನೇತರ ಸಿಗ್ನಲಿಂಗ್ ವ್ಯವಸ್ಥೆ ಮತ್ತು ಭಾರತದಲ್ಲಿ ನಿರ್ಮಿಸಲಾದ ರೈಲುಗಳ ಸಂಯೋಜನೆಯ ಪ್ರಸ್ತಾವನೆಯು ಯೋಜನೆಯ ಮೂಲ ವಿನ್ಯಾಸದ ಭಾಗವಾಗಿತ್ತೇ ಎಂಬ ಪ್ರಶ್ನೆಗೆ ಸಂಸ್ಥೆಯು ಉತ್ತರಿಸಿದೆ. “ಆರಂಭದಲ್ಲಿ ಜಪಾನ್‌ನ ‘ಶಿಂಕನ್ಸೆನ್ ರೋಲಿಂಗ್ ಸ್ಟಾಕ್’ ಬಳಸಿ ಕಾರ್ಯಾಚರಣೆ ಪ್ರಾರಂಭಿಸಲು ಯೋಜಿಸಲಾಗಿತ್ತು. ಆದರೆ, ಈಗ ಸ್ವದೇಶಿ ನಿರ್ಮಿತ ರೈಲುಗಳ ಮೂಲಕ ಕಾರ್ಯಾಚರಣೆ ಆರಂಭಿಸಲು ನಿರ್ಧರಿಸಲಾಗಿದೆ,” ಎಂದು ಅದು ಸ್ಪಷ್ಟಪಡಿಸಿದೆ.

​ಸಿಗ್ನಲಿಂಗ್ ವ್ಯವಸ್ಥೆಗಳ ಖರೀದಿಗೆ ಸಂಬಂಧಿಸಿದಂತೆ ಭಾರತ ಮತ್ತು ಜಪಾನ್ ಸರ್ಕಾರಗಳ ನಡುವೆ ಭಿನ್ನಾಭಿಪ್ರಾಯಗಳಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ಉಭಯ ದೇಶಗಳ ನಡುವಿನ ಪತ್ರವ್ಯವಹಾರಗಳ ಪ್ರತಿಗಳನ್ನು ಒದಗಿಸುವಂತೆ ಕೇಳಲಾಗಿತ್ತು. ಆದರೆ, “ಈ ದಾಖಲೆಗಳನ್ನು ಹಂಚಿಕೊಳ್ಳುವುದು ಉಭಯ ಸರ್ಕಾರಗಳ ನಡುವಿನ ಗೌಪ್ಯತಾ ಒಪ್ಪಂದದ (ನಾನ್-ಡಿಸ್ಕ್ಲೋಸರ್ ಅಗ್ರಿಮೆಂಟ್) ಅಡಿಯಲ್ಲಿ ನಿರ್ಬಂಧಿತವಾಗಿರುವುದರಿಂದ, ಮಾಹಿತಿ ನೀಡಲು ಸಾಧ್ಯವಿಲ್ಲ,” ಎಂದು ತಿಳಿಸಿ ಮನವಿಯನ್ನು ನಿರಾಕರಿಸಲಾಗಿದೆ.

​ರೈಲುಗಳ ವಿತರಣಾ ವೇಳಾಪಟ್ಟಿ ಮತ್ತು ಅವುಗಳ ಪರಿಷ್ಕೃತ ಸಮಯದ ಕುರಿತ ಪ್ರಶ್ನೆಗೆ ಉತ್ತರಿಸಿರುವ ಎನ್‌ಎಚ್‌ಎಸ್‌ಆರ್‌ಸಿಎಲ್, “ಬಿಇಎಂಎಲ್ ಲಿಮಿಟೆಡ್‌ನಿಂದ (BEML Ltd) ಮೊದಲ ಸ್ವದೇಶಿ ನಿರ್ಮಿತ ರೈಲು 2027ರ ಫೆಬ್ರವರಿಯಲ್ಲಿ ರವಾನೆಯಾಗುವ ನಿರೀಕ್ಷೆಯಿದೆ. ತದನಂತರ ಇತರ ರೈಲುಗಳು ಬರಲಿವೆ,” ಎಂದು ತಿಳಿಸಿದೆ.
​ಭಾರತದಲ್ಲಿ ತಯಾರಿಸಿದ ರೈಲುಗಳ ಬಳಕೆಯನ್ನು ಜಪಾನ್ ಸರ್ಕಾರ ಅನುಮೋದಿಸಿದೆಯೇ ಅಥವಾ ಆಕ್ಷೇಪಿಸಿದೆಯೇ ಎಂಬ ಬಗ್ಗೆ ದಾಖಲೆಗಳನ್ನು ಒದಗಿಸಲೂ ಸಂಸ್ಥೆ ನಿರಾಕರಿಸಿದೆ. ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 9 (1) (ಎಫ್) ಪ್ರಕಾರ ಇಂತಹ ದಾಖಲೆಗಳನ್ನು ಒದಗಿಸಲು ಸಾಧ್ಯವಿಲ್ಲ ಎಂದು ಅದು ಹೇಳಿದೆ. ಈ ನಿಯಮವು ವಿದೇಶಿ ಸರ್ಕಾರದಿಂದ ಗೌಪ್ಯವಾಗಿ ಸ್ವೀಕರಿಸಲಾದ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಸರ್ಕಾರಕ್ಕೆ ವಿನಾಯಿತಿ ನೀಡುತ್ತದೆ.

eedina
ಈ ದಿನ ಡೆಸ್ಕ್‌
Website | + posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧಾರವಾಡ |ಪ್ರಜಾಪ್ರಭುತ್ವದ ಮೌಲ್ಯಗಳನ್ನು ಯುವಜನರಲ್ಲಿ ಬೆಳೆಸಬೇಕು: ಜಕ್ಕಪ್ಪನವರ

ಪ್ರಜಾಪ್ರಭುತ್ವದ ಆಶಯಗಳು ಭಾರತೀಯರ ಜೀವನದ ಅವಿಭಾಜ್ಯ ಭಾಗವಾಗಿದ್ದು, ಸಮಾನತೆ, ಭ್ರಾತೃತ್ವ ಮತ್ತು...

ಬೀದರ್ ವಿಶ್ವವಿದ್ಯಾಲಯ ಆಡಳಿತ ಕುಲಸಚಿವರಾಗಿ ಧಮ್ಮ ಪ್ರಕಾಶ್ ಜ್ಯೋತಿ ನಿಯೋಜನೆ

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ಹಾಗೂ...

ಬಸವಕಲ್ಯಾಣ | ಜನಪದ ಸಾಹಿತ್ಯದಲ್ಲಿ ಬಸವಣ್ಣನವರ ಸಮಗ್ರ ಕ್ರಾಂತಿಯ ದರ್ಶನ: ಬಸವಲಿಂಗ ಪಟ್ಟದ್ದೇವರು

ಬಸವಕಲ್ಯಾಣದಲ್ಲಿ ನ.28, 29ರಂದು ನಡೆಯುತ್ತಿರುವ 47ನೇ ಶರಣ ಕಮ್ಮಟ ಹಾಗೂ ಅನುಭವಮಂಟಪ...