ಸಾಮಾಜಿಕ ಜಾಲತಾಣದಲ್ಲಿ Belonging ಆತ್ಮಕಥನ ಬಿಡುಗಡೆ ಸಮಾರಂಭದ ಪಟಗಳದೇ ಸದ್ದು…

Date:

ಒಬ್ಬ ತಾಯಿಯ ಬದುಕಿನ ಪುಟಗಳು ಪುಸ್ತಕವಾಗಿ ಹೊರಬಂದ ದಿನ, ಮಕ್ಕಳ ಕಣ್ಣಲ್ಲಿ ಹೆಮ್ಮೆ ಮತ್ತು ವಾತ್ಸಲ್ಯ ಒಟ್ಟಿಗೆ ತುಂಬಿಕೊಂಡಿತ್ತು. ತಾಯಿಯ ಮಾತುಗಳನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ರಾಹುಲ್ ಗಾಂಧಿ, ತನ್ನ ಬದುಕಿನ ಅಮೋಘ ಕ್ಷಣಗಳನ್ನು ಅನುಭವಿಸುತ್ತಿದ್ದರು. ರಾಹುಲ್ ಗಾಂಧಿಯವರು ಮಾತಾಡುವಾಗ, ಅವರ ಕಣ್ಣೊಳಗಿನ ನೀರು, ಕ್ಯಾಮೆರಾ ಫ್ಲಾಶ್ ಲೈಟಿಗೆ ಹೊಳೆಯುತ್ತಿದ್ದವು.

- Advertisement -

ಸೋನಿಯಾ ಗಾಂಧಿ ಅವರ ವ್ಯಕ್ತಿತ್ವವೇ ಸಾರ್ವಜನಿಕ ಜೀವನದಲ್ಲಿರುವ ಮಹಿಳೆಯರಿಗೆ ಒಂದು ಮಾರ್ಗದರ್ಶಕ. ನಿಂದಕರು ಏನೇ ನಿಂದಿಸಲಿ, ಅವರ ನಡುವೆಯೇ ನಿಲುಕದ ಎತ್ತರಕ್ಕೆ ಏರಿದ ವ್ಯಕ್ತಿತ್ವ ಅವರದು. ನಿನ್ನೆ ಗಾಢ ನೇರಳೆ ಬಣ್ಣದ ಸೀರೆಯಲ್ಲಿ, ಎಂಬತ್ತರ ಇಳಿವಯಸ್ಸಿನಲ್ಲೂ ನಗುಮೊಗದ ಮಿಂಚನ್ನು ಹರಡಿದ ಅಪರೂಪದ ಚೆಲುವೆ. ನಿಂದನೆಯ ಕಲ್ಲುಗಳನ್ನೇ ಮೆಟ್ಟಿಲಾಗಿಸಿ ಏರಿದವರಿಗೆ, ವಯಸ್ಸು ಕೇವಲ ಒಂದು ಸಂಖ್ಯೆ! ಸೀರೆಯ ಜರಿಗಿಂತ ಹೊಳೆಯುವುದು ಅವರ ಮುಗುಳ್ನಗೆ, ಬಿರುಗಾಳಿಗೂ ಬಗ್ಗದ ಘನತೆಯೇ ಅವರ ಅಲಂಕಾರ.

ಒಬ್ಬ ತಾಯಿಯ ಬದುಕಿನ ಪುಟಗಳು ಪುಸ್ತಕವಾಗಿ ಹೊರಬಂದ ದಿನ, ಮಕ್ಕಳ ಕಣ್ಣಲ್ಲಿ ಹೆಮ್ಮೆ ಮತ್ತು ವಾತ್ಸಲ್ಯ ಒಟ್ಟಿಗೆ ತುಂಬಿಕೊಂಡಿತ್ತು.
ತಾಯಿಯ ಮಾತುಗಳನ್ನು ತದೇಕಚಿತ್ತದಿಂದ ಆಲಿಸುತ್ತಿದ್ದ ರಾಹುಲ್ ಗಾಂಧಿ, ತನ್ನ ಬದುಕಿನ ಅಮೋಘ ಕ್ಷಣಗಳನ್ನು ಅನುಭವಿಸುತ್ತಿದ್ದರು.
ರಾಹುಲ್ ಗಾಂಧಿಯವರು ಮಾತಾಡುವಾಗ, ಅವರ ಕಣ್ಣೊಳಗಿನ ನೀರು, ಕ್ಯಾಮೆರಾ ಫ್ಲಾಶ್ ಲೈಟಿಗೆ ಹೊಳೆಯುತ್ತಿದ್ದವು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ತಂಬೂರಿಯ ನಾದದಲ್ಲಿ ಜೀವಂತ ಮಂಟೇಸ್ವಾಮಿ ಪರಂಪರೆ: ಶಿಷ್ಯರು, ಮಹಿಳಾ...

ಧರೆಗೆ ದೊಡ್ಡವರ ತತ್ವ, ಶಿಷ್ಯರ ಸಾಮಾಜಿಕ ಕೊಡುಗೆ, ಜನಪದ ಜ್ಞಾನದ ಉಳಿವು ಮತ್ತು ಮುಂದಿನ ಪೀಳಿಗೆಯ ಜವಾಬ್ದಾರಿ. ಒಂದು ಪರಂಪರೆಯ ಮಹತ್ವವನ್ನು ಅದರ ಸ್ಥಾಪಕನ ಜೀವನದಿಂದ ಮಾತ್ರ ಅಳೆಯಲಾಗದು. ಆ ಪರಂಪರೆಯ ವಿಚಾರಗಳನ್ನು...

ಸಿಜೆಐ ವಿರುದ್ಧ ವಕೀಲರ ಆಕ್ರೋಶ: ನ್ಯಾಯಾಂಗದ ಘನತೆಗೆ ಧಕ್ಕೆ...

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ವಿರುದ್ಧ ನ್ಯಾಯಾಲಯದಲ್ಲೇ ವಕೀಲರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆ ನ್ಯಾಯಾಂಗದ ಘನತೆ, ನ್ಯಾಯಾಧೀಶರ ನಿಷ್ಪಕ್ಷಪಾತತೆ ಹಾಗೂ ಜನಸಾಮಾನ್ಯರಿಗೆ ನ್ಯಾಯಾಂಗದ ಮೇಲಿರುವ ವಿಶ್ವಾಸದ ಕುರಿತು ಮಹತ್ವದ ಚರ್ಚೆಗೆ...

ಷೇರುದಾರರ ಇಂದಿನ ಜಾಗತಿಕ ಮಂತ್ರ- ‘ಅಮೆರಿಕವನ್ನು ನಂಬಿ ಹಣ...

ಅಮೆರಿಕನ್ನರು ಮಾತ್ರವಲ್ಲ, ವಿದೇಶಗಳ ಸಾಮಾನ್ಯ ಜನರೂ ಮುಗಿಬಿದ್ದು ಅಮೆರಿಕದ ಷೇರುಗಳನ್ನು ಕೊಳ್ಳುತ್ತಿದ್ದಾರೆ. ಅಮೆರಿಕದ ರಾಜಕೀಯ ನಾಯಕತ್ವದ ಬಗ್ಗೆ ಅವರಿಗೆ ಅಸಮಾಧಾನವಿದ್ದಿರಬಹುದು. ಆದರೆ ಅಮೆರಿಕನ್ ಕಂಪನಿಗಳ ಷೇರುಗಳ ಮೇಲೆ ಮಾತ್ರ ಅವರೆಲ್ಲರಿಗೂ ವಿಪರೀತ ವ್ಯಾಮೋಹ...

ಪುಸ್ತಕದ ಬಿಡುಗಡೆ ಸಮಯ, ಪ್ರಿಯಾಂಕಾ ತಾಯಿಯ ಕೈಯಲ್ಲಿನ ಪುಸ್ತಕ ತಿರುಚಿ ಹಿಡಿದಿದ್ದು ಗಮನಿಸಿ ಅದನ್ನು ಸರಿ ಮಾಡಿದ್ದು, ರಾಹುಲ್ ಮಾತು ಮುಗಿದ ತಕ್ಷಣ ತಾಯಿಯ ಗಲ್ಲ ಹಿಡಿದು ಪ್ರೀತಿ ತೋರಿದ್ದು ಎಲ್ಲವೂ, ಸೋನಿಯಾ ಅವರ ಮೇಲೆ ಮಕ್ಕಳ ಮಮತೆಯಷ್ಟೇ ಅಲ್ಲದೇ, ಅವರನ್ನು ತಮ್ಮ ಕಣ್ರೆಪ್ಪೆಯಂತೆ ಕಾಯ್ದುಕೊಂಡು ಬಂದದ್ದು ಜಗತ್ತಿಗೆ ಗೋಚರಿಸಿದವು.

ಕೆಳಗೆ ಕುಳಿತ ಮೊಮ್ಮಕ್ಕಳು ಕೂಡ ಅಜ್ಜಿಯ ಪುಸ್ತಕ ಬಿಡುಗಡೆ ಆದ ತಕ್ಷಣ ಹರ್ಷದಿಂದ ಚಪ್ಪಾಳೆ ತಟ್ಟುವುದನ್ನು ನೋಡಿದಾಗ, ಜಗತ್ತಿಗೆ ಪ್ರಸಿದ್ಧವಾದ ಕುಟುಂಬವೊಂದು ನಿನ್ನೆ ತಮ್ಮ ಕುಟುಂಬದ ಒಬ್ಬ ವ್ಯಕ್ತಿಯ ಸಾಧನೆಯ ಕ್ಷಣಗಳನ್ನು ಅನುಭವಿಸಿದ ಕ್ಷಣಗಳವು.

ಇದರ ನಡುವೆ ಇಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಲ್ಲೂ ವೈರಲ್ ಆಗುತ್ತಿರುವ, ರಾಹುಲ್ ಗಾಂಧಿ ತಾಯಿ ಸೋನಿಯಾ ಗಾಂಧಿಯವರ ಗಲ್ಲ ಹಿಡಿದು ತೋರಿಸಿದ ಮಮತೆ, ಪ್ರಿಯಾಂಕಾ ಅವರ ಬಿಗಿ ಅಪ್ಪುಗೆ, ಇವು ಆತ್ಮಕಥೆಯ ಪುಟಗಳ ನಡುವೆ ಬರೆಯದೇ ಉಳಿದ ಸಾಲುಗಳಂತೆ ಕಾಣುತ್ತವೆ. ಚಪ್ಪಾಳೆ, ಕ್ಯಾಮೆರಾ, ಜನಸಂದಣಿ ಎಲ್ಲವೂ ಮರೆಯಾಗಿ ಉಳಿಯುವುದು ತಾಯಿ-ಮಕ್ಕಳ ಬಂಧ ಮಾತ್ರ.

ತಾಯಿಯ ಕಥೆಯನ್ನು ಜಗತ್ತು ಓದುತ್ತದೆ, ಮಕ್ಕಳು ಅದನ್ನು ಅನುಭವಿಸಿದ್ದಾರೆ. ತಮ್ಮ ಕಣ್ಣಮುಂದೆಯೇ ತಾಯಿಯ ಹೃದಯದ ತಲ್ಲಣಗಳನ್ನು ಕಂಡ ಮಕ್ಕಳ ಮೂಕ ವೇದನೆಗೆ ಈ ವೇದಿಕೆ ಸಾಕ್ಷಿಯಾಯಿತು.

ನಿನ್ನೆ ರಾಹುಲ್ ಮಾತನಾಡುತ್ತಿದ್ದಾಗ, ತಾಯಿ-ಮಕ್ಕಳ ಕಣ್ಣಲ್ಲಿ ಹನಿಗಳು ಜಾರಲಿಲ್ಲ. ಕಂಡೂ ಕಾಣದಂತೆ ಕಣ್ಣಂಚಿನಲ್ಲೇ ನಿಂತಿದ್ದವು.
ಒಡಲಾಳದಲ್ಲಿ ವರ್ಷಗಟ್ಟಲೆ ಹೆಪ್ಪುಗಟ್ಟಿದ್ದ ನೋವು, ಕಣ್ಣಂಚಿನ ತೇವವಾಗಿ ಮಾತ್ರ ಇಣುಕಿತ್ತು. ಭಾಷಣ ಮುಗಿಸಿ ರಾಹುಲ್ ಕುಳಿತ ತಕ್ಷಣ, ಅವರು ಕಣ್ಣು ಒರೆಸಿಕೊಂಡರು. ಅಷ್ಟೇ, ಅದೊಂದೇ ಆ ಕ್ಷಣದ ಸಾಕ್ಷಿಯಾಯಿತು.

ನಿಂದನೆಗಳ ನಡುವೆಯೂ ಅಳದೆ ನಿಂತವರ ಕಣ್ಣೀರಿಗೂ ಒಂದು ಘನತೆ ಇತ್ತು. ಅದು ಹರಿಯಲಿಲ್ಲ, ಆದರೂ ಹೇಳಬೇಕಾದದ್ದನ್ನೆಲ್ಲ ಹೇಳಿತ್ತು.
ಕಲ್ಲೆಸೆದವರಿಗೆ ಉತ್ತರ ಕೂಗಾಟವಲ್ಲ, ತಡೆದು ನಿಂತ ಕಣ್ಣೀರು. ಇಷ್ಟು ವರ್ಷ ತಡೆದಿಟ್ಟುಕೊಂಡ ಆ ಕಣ್ಣೀರು, ಇಂದು ಪ್ರೀತಿಯ ಹೊಳೆಯಾಗಿ ಹರಿಯುತ್ತಿದೆ. ಅದೆಷ್ಟು ಸಾರಿ ನೋಡಿದರೂ ಮತ್ತೆ ನೋಡಬೇಕೆನಿಸುವ ಪಟಗಳಿವು.

ಇದನ್ನೂ ಓದಿ ಈ ದಿನ ಸಂಪಾದಕೀಯ | ಬಾಲಕ ಜಯ್ ಶಾ ಐಸಿಸಿ ಅಧ್ಯಕ್ಷ; ಭಾರತದ ಯುವಸಮೂಹ ನಿರ್ಲಕ್ಷ್ಯ

ಇದು ದೇಶ ನೆನಪಿಟ್ಟುಕೊಳ್ಳುವ ಆತ್ಮಕಥನ. ಹುಟ್ಟಿದ ಪ್ರೀತಿಯ ನೆಲದ ಎಲ್ಲಾ ಬಂಧನಗಳಿಂದ ಮುಕ್ತಳಾಗಿ, ಮೆಚ್ಚಿ ಮೆಟ್ಟಿದ ನೆಲದ ಪ್ರೀತಿ-ವಾತ್ಸಲ್ಯವನ್ನೂ, ವಿಕೃತ ವಿರೋಧವನ್ನೂ ಸಮನಾಗಿ ಸಹಿಸಿ, ನಮ್ಮ ಸಂಸ್ಕೃತಿಯ ಒಂದು ಭಾಗವಾಗಿಯೇ ಉಳಿದ ಮಹಾತಾಯಿ ಸೋನಿಯಾ ಗಾಂಧಿಯವರ ಜೀವನಗಾಥೆ, ಭಾರತದ ಎಲ್ಲಾ ಭಾಷೆಗಳಲ್ಲೂ ಅನುವಾದಗೊಳ್ಳಲಿ. ಈ ನೆಲ ಅವರನ್ನು ಒಪ್ಪಿಕೊಂಡಂತೆ, ಭಾರತೀಯರ ಎದೆಯೂ ಅವರ ಕಥೆಯನ್ನು ಒಪ್ಪಿಕೊಳ್ಳಲಿ.

WhatsApp Image 2025 04 02 at 16.54.22 95e2f575
ಶೈಲಜಾ ಹಿರೇಮಠ
+ posts

<p><iframe src="https://www.youtube.com/embed/8qwx4L0lKFQ?autoplay=1&mute=1&loop=1&playlist=8qwx4L0lKFQ&controls=0&modestbranding=1&showinfo=0" width="560" height="315" frameborder="0" allowfullscreen="allowfullscreen"></iframe></p>

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗಾಂಧೀಜಿ ತತ್ವಗಳ ಪ್ರಸ್ತುತತೆ: ಸಮಾನತೆಯ ಸಮಾಜಕ್ಕೆ ಶ್ರಮದ ಘನತೆಯೇ ಅಡಿಪಾಯ

ಸರ್ವಜನರ ಹಿತ, ಎಲ್ಲ ಕೆಲಸಗಳಿಗೂ ಸಮಾನ ಗೌರವ ಮತ್ತು ಶಾರೀರಿಕ ಶ್ರಮದ...

ಜಿಡಿಪಿ ಅಂಕಿಅಂಶಗಳ ಆಚೆಗಿನ ವಾಸ್ತವ: ಭಾರತದ ಆರ್ಥಿಕ ಸವಾಲುಗಳ ಕುರಿತು ರಘುರಾಮ್ ರಾಜನ್ ಒಳನೋಟ

ಜಾಗತಿಕ ಆರ್ಥಿಕತೆಯು ಭೌಗೋಳಿಕ-ರಾಜಕೀಯ ಸಂಘರ್ಷಗಳು ಮತ್ತು ತಂತ್ರಜ್ಞಾನದ ಕ್ಷಿಪ್ರ ಬದಲಾವಣೆಗಳ ನಡುವೆ...

ಇಸ್ರೇಲ್ ಪ್ರಧಾನಿ ಪಟ್ಟಕ್ಕೇರಲು ಗಾಡಿ ಐಸೆನ್ಕೋಟ್ ಮಾಡಿಕೊಳ್ಳಬೇಕಾದ ಪ್ರಮುಖ ರಾಜಿಗಳೇನು?

ಇಸ್ರೇಲ್‌ನ ಚುನಾವಣೆ ಮುಗಿದ್ದು, ಅತಂತ್ರ ಪರಿಸ್ಥಿತಿ ಇದೆ. ಹೊಸ ಸರ್ಕಾರ ರಚನೆಗೆ...

ಕರ್ನಾಟಕ ಏಕೀಕರಣಕ್ಕೆ 70 ವರ್ಷ: ಕನ್ನಡ ಅನ್ನದ ಭಾಷೆಯಾಗುವುದೆಂದು?

ಕರ್ನಾಟಕ ಏಕೀಕರಣಗೊಂಡು ಈ ವರ್ಷಕ್ಕೆ 70 ವರ್ಷ. ಆದರೆ, ಎಪ್ಪತ್ತು ವರ್ಷಗಳ...