100 ಯುನಿಟ್‌ ಉಚಿತ ವಿದ್ಯುತ್‌ ಘೋಷಿಸಿದ ರಾಜಸ್ತಾನ ಸರ್ಕಾರ

Date:

ಕರ್ನಾಟಕ ಮಾದರಿ ಅನುಸರಿಸಿದ ರಾಜಸ್ತಾನ ಕಾಂಗ್ರೆಸ್‌

ವರ್ಷಾಂತ್ಯಕ್ಕೆ ರಾಜಸ್ತಾನದಲ್ಲಿ ನಡೆಯಲಿದೆ ಚುನಾವಣೆ

ಕರ್ನಾಟಕದಲ್ಲಿ ಗ್ಯಾರಂಟಿಗಳ ಆಧಾರದ ಮೇಲೆ ಕಾಂಗ್ರೆಸ್‌ ಪಕ್ಷ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ ಎಂಬ ಮಾತುಗಳು ಕೇಳಿ ಬರುತ್ತಿರುವಾಗಲೇ ರಾಜಸ್ತಾನದ ಕಾಂಗ್ರೆಸ್‌ ಸರ್ಕಾರ ತನ್ನ ರಾಜ್ಯದಲ್ಲಿ 100 ಯುನಿಟ್‌ಗಳ ಉಚಿತ ವಿದ್ಯುತ್‌ ನೀಡುವುದಾಗಿ ಘೋಷಿಸಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ

ಈ ಬಗ್ಗೆ ಮಾಹಿತಿ ನೀಡಿರುವ ರಾಜಸ್ತಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌, “ಈ ಹಿಂದಿನ ಬಜೆಟ್‌ನಲ್ಲಿ 50 ಯುನಿಟ್‌ ಉಚಿತ ವಿದ್ಯುತ್‌ ಯೋಜನೆಯನ್ನು ಜಾರಿಗೆ ತಂದಿದ್ದೆವು. ಈಗ ರಾಜ್ಯದ ಪ್ರತಿ ಮನೆಗೂ 100 ಯುನಿಟ್‌ಗಳ ವರೆಗೆ ಉಚಿತ ವಿದ್ಯುತ್‌ ನೀಡಲು ತೀರ್ಮಾನಿಸಿದ್ದೇವೆ. ಮೇ 1ರಿಂದಲೇ ಅನ್ವಯವಾಗುವಂತೆ ಈ ಯೋಜನೆ ಜಾರಿಗೆ ಬರಲಿದೆ. ಈಗಾಗಲೇ ಮೇ ತಿಂಗಳಿನಲ್ಲಿ 100 ಯುನಿಟ್‌ ವಿದ್ಯುತ್‌ ಬಳಸಿದವರು ಜೂನ್‌ ತಿಂಗಳಿನಲ್ಲಿ ಬಿಲ್‌ ಕಟ್ಟುವ ಅವಶ್ಯಕತೆ ಇರುವುದಿಲ್ಲ” ಎಂದಿದ್ದಾರೆ.

ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿರುವ ಗೆಹ್ಲೋಟ್‌, “100 ಯುನಿಟ್‌ಗಳ ವರೆಗೆ ವಿದ್ಯುತ್‌ ಉಚಿತವಾಗಿರಲಿದೆ. ಜನ ಹೆಚ್ಚು ಯುನಿಟ್‌ ವಿದ್ಯುತ್‌ ಬಳಸಿದಾಗ ಕೂಡ ನಿಗದಿತ 100 ಯುನಿಟ್‌ಗಳ ವಿದ್ಯುತ್‌ ಶುಲ್ಕ ಕಟ್ಟುವ ಅಗತ್ಯವಿರುವುದಿಲ್ಲ. 200 ಯುನಿಟ್‌ ವರೆಗೆ ವಿದ್ಯುತ್‌ ಬಳಸುವವರಿಗೆ ಸ್ಥಿರ ಶುಲ್ಕವನ್ನಷ್ಟೇ ವಿಧಿಸಲಾಗುವುದು. ಯಾವುದೇ ಹೆಚ್ಚುವರಿ ಶುಲ್ಕಗಳು ಇರುವುದಿಲ್ಲ. ಇತ್ತೀಚೆಗೆ ರಾಜ್ಯದಲ್ಲಿ ನಡೆದ ಹಣದುಬ್ಬರ ಪರಿಹಾರ ಶಿಬಿರಗಳಲ್ಲಿ ಉಚಿತ ವಿದ್ಯುತ್‌ ಬಗ್ಗೆ ಹೆಚ್ಚಿನ ಅಭಿಪ್ರಾಯಗಳು ಕೇಳಿಬಂದ ಹಿನ್ನೆಲೆ ಈ ಕ್ರಮವನ್ನು ಕೈಗೊಂಡಿರುವುದಾಗಿ” ಎಂದು” ತಿಳಿಸಿದ್ದಾರೆ.

ಕರ್ನಾಟಕದಲ್ಲಿ ಉಚಿತ ವಿದ್ಯುತ್‌ ಸೇರಿದಂತೆ 5 ಪ್ರಮುಖ ಗ್ಯಾರಂಟಿಗಳನ್ನು ನೀಡಿದ್ದ ಕಾಂಗ್ರೆಸ್‌ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಬಹುಮತದಿಂದ ಅಧಿಕಾರಕ್ಕೆ ಬಂದಿದೆ. ಈ ವರ್ಷದ ಕೊನೆಯಲ್ಲಿ ರಾಜಸ್ತಾನದಲ್ಲೂ ವಿಧಾನಸಭಾ ಚುನಾವಣೆ ನಡೆಯಲಿದೆ. ಸದ್ಯ ಚುನಾವಣಾ ತಯಾರಿಯಲ್ಲಿರುವ ಕಾಂಗ್ರೆಸ್‌ ನಾಯಕರು ರಾಜಸ್ತಾನದಲ್ಲೂ ಕರ್ನಾಟಕದ ಮಾದರಿಯನ್ನೇ ಅನುಸರಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಕಾಡೆ ಮಲಗುತ್ತಾ ಅಂಬಾನಿಯ ಜಿಯೋ?

5 ಸಾವಿರ ಕೋಟಿ ಖರ್ಚು ಮಾಡಿ ಮಗನ ಮದುವೆ ಮಾಡಿದ್ದ ಮುಖೇಶ್...

ಬಿಷ್ಣೋಯ್ ಎನ್‌ಕೌಂಟರ್‌ಗೆ 1,11,11,111 ರೂ. ಬಹುಮಾನ: ಕರ್ಣಿ ಸೇನೆ

ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಯ ರುವಾರಿ ಬಂಧಿತ ಗ್ಯಾಂಗ್‌ಸ್ಟರ್ ಲಾರೆನ್ಸ್‌...

ಜಾರ್ಖಂಡ್ ಚುನಾವಣೆ | ಬಿಜೆಪಿಗೆ ಸೀಟು ಹಂಚಿಕೆ ಬಿಕ್ಕಟ್ಟು; ಮತ್ತೆ ಗೆಲ್ಲುವುದೇ ‘ಇಂಡಿಯಾ’?

ಜಾರ್ಖಂಡ್‌ ವಿಧಾನಸಭೆಗೆ ನವೆಂಬರ್ 13 ಮತ್ತು 20 ರಂದು ಮತದಾನ ನಡೆಯಲಿದೆ....