ವಿದ್ಯುತ್ ಸ್ಪರ್ಶದಿಂದ ಕನಿಷ್ಠ ಒಂಬತ್ತು ಕಾವಡ್ ಯಾತ್ರಿಕರು ಮೃತರಾಗಿದ್ದು, ಮೂವರು ಗಾಯಗೊಂಡಿರುವ ಘಟನೆಯು ಬಿಹಾರದ ವೈಶಾಲಿ ಜಿಲ್ಲೆಯ ಇಂಡಸ್ಟ್ರಿಯಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸುಲ್ತಾನ್ಪುರ ಗ್ರಾಮದಲ್ಲಿ ನಡೆದಿದೆ.
ಕಾವಡ್ ಯಾತ್ರಿಕರು ಸಾಗುತ್ತಿದ್ದ ವಾಹನಕ್ಕೆ ಹೈವೋಲ್ಟೇಜ್ ಓವರ್ಹೆಡ್ ವೈರ್ ತಗುಲಿ ಈ ವಿದ್ಯುತ್ ಅವಘಡ ಸಂಭವಿಸಿದೆ. ಮಧ್ಯರಾತ್ರಿಯಲ್ಲಿ ಈ ಘಟನೆ ನಡೆದಿದೆ. ಕಾವಡ್ ಯಾತ್ರಿಕರು ಜಲಾಭಿಷೇಕ ಮಾಡಲು ಸೋನೆಪುರದ ಬಾಬಾ ಹರಿಹರನಾಥ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹಾಜಿಪುರ-ಸದರ್ನ ಉಪವಿಭಾಗಾಧಿಕಾರಿ ರಾಮಬಾಬು ಬೈಠಾ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಕಾವಡ್ ಯಾತ್ರೆ | ಆಹಾರದಲ್ಲಿ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ
ಪೊಲೀಸರ ಪ್ರಕಾರ, ಎಂಟು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದರೆ, ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ.
“ಕಾವಡ್ ಯಾತ್ರಿಕರು ಡಿಜೆ ಮೌಂಟೆಡ್ ಟ್ರಾಲಿಯಲ್ಲಿ ಹೋಗುತ್ತಿದ್ದರು. ಈ ಟ್ರಾಲಿ ತುಂಬಾ ಎತ್ತರವಾಗಿತ್ತು. ಈ ಟ್ರಾಲಿಗೆ ಒಂದು ತಂತಿ ಸಿಕ್ಕಿಹಾಕಿಕೊಂಡು, ಟ್ರಾಲಿಗೆ 11000 ಹೈ ವೋಲ್ಟೆಜ್ ವಿದ್ಯುತ್ ಸಂಚರಿಸಿದೆ. ಇದರಿಂದ ಕೆಲವು ಭಕ್ತರು ಸಾವನ್ನಪ್ಪಿದರು. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಹಾಜಿಪುರ ಉಪವಿಭಾಗೀಯ ಪೊಲೀಸ್ ಅಧಿಕಾರಿ ಸಿಯಾದ್ ಓಂ ಪ್ರಕಾಶ್ ತಿಳಿಸಿದ್ದಾರೆ.
Bihar: Nine Kanwariyas electrocuted to death, several others injured in Hajipur
— ANI Digital (@ani_digital) August 5, 2024
Read @ANI Story | https://t.co/HMK15c02y3#Bihar #Hajipur #kanwariyas pic.twitter.com/J2tJygYFBK