ಬಿಹಾರ | ವಿದ್ಯುತ್ ಅವಘಡ; ಒಂಬತ್ತು ಕಾವಡ್ ಯಾತ್ರಿಕರು ಮೃತ್ಯು

Date:

ವಿದ್ಯುತ್ ಸ್ಪರ್ಶದಿಂದ ಕನಿಷ್ಠ ಒಂಬತ್ತು ಕಾವಡ್ ಯಾತ್ರಿಕರು ಮೃತರಾಗಿದ್ದು, ಮೂವರು ಗಾಯಗೊಂಡಿರುವ ಘಟನೆಯು ಬಿಹಾರದ ವೈಶಾಲಿ ಜಿಲ್ಲೆಯ ಇಂಡಸ್ಟ್ರಿಯಲ್ ಪೊಲೀಸ್ ಠಾಣೆ ವ್ಯಾಪ್ತಿಯ ಸುಲ್ತಾನ್‌ಪುರ ಗ್ರಾಮದಲ್ಲಿ ನಡೆದಿದೆ.

- Advertisement -

ಕಾವಡ್ ಯಾತ್ರಿಕರು ಸಾಗುತ್ತಿದ್ದ ವಾಹನಕ್ಕೆ ಹೈವೋಲ್ಟೇಜ್ ಓವರ್‌ಹೆಡ್ ವೈರ್‌ ತಗುಲಿ ಈ ವಿದ್ಯುತ್ ಅವಘಡ ಸಂಭವಿಸಿದೆ. ಮಧ್ಯರಾತ್ರಿಯಲ್ಲಿ ಈ ಘಟನೆ ನಡೆದಿದೆ. ಕಾವಡ್ ಯಾತ್ರಿಕರು ಜಲಾಭಿಷೇಕ ಮಾಡಲು ಸೋನೆಪುರದ ಬಾಬಾ ಹರಿಹರನಾಥ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹಾಜಿಪುರ-ಸದರ್‌ನ ಉಪವಿಭಾಗಾಧಿಕಾರಿ ರಾಮಬಾಬು ಬೈಠಾ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಸ್ಥಳೀಯ ಸಂಸ್ಥೆ ಚುನಾವಣೆ: ಆಕಾಂಕ್ಷಿಗಳ ಲೆಕ್ಕಾಚಾರ ತಲೆಕೆಳಗು, ಬಂಡಾಯದ...

ಜಿಲ್ಲಾ ಪಂಚಾಯತ್‌ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಕರಡು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಯಚೂರು ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣಾ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮೀಸಲಾತಿ ಬದಲಾವಣೆಯಿಂದ ಕೆಲವರ ಸ್ಪರ್ಧೆಯ ಲೆಕ್ಕಾಚಾರ ತಲೆಕೆಳಗಾಗಿದ್ದರೆ, ಮತ್ತೊಂದೆಡೆ...

ಹೊಸ ಓದು | ನಟರಾಜ್ ಹುಳಿಯಾರ್ ಅವರ ‘ಡಾಕ್ಟರ್...

ಇತ್ತೀಚೆಗೆ ಲೋಕಾರ್ಪಣೆಗೊಂಡ ನಟರಾಜ್ ಹುಳಿಯಾರ್ ಅವರ 'ಡಾಕ್ಟರ್ ಸಾಹೇಬ್- ರಾಮಮನೋಹರ ಲೋಹಿಯಾ ಜೀವನಯಾನ' ಕೃತಿಯಿಂದ ಆಯ್ದ 'ಲೋಹಿಯಾ ಮತ್ತು ಕರ್ನಾಟಕ' ಅಧ್ಯಾಯ, ಭಾನುವಾರದ ವಿರಾಮದ ಓದಿಗಾಗಿ... 'ಮಾರ್ಕ್ಸ್, ಗಾಂಧಿ ಅಂಡ್ ಸೋಷಲಿಸಂ' ಪುಸ್ತಕಕ್ಕೆ ಮುನ್ನುಡಿ...

ಜನತಂತ್ರದ ಬಿಕ್ಕಟ್ಟಿಗೆ ಮೌನ; ವ್ಯಾಪಾರಿಗಳ ನಷ್ಟಕ್ಕೆ ಪರಿಹಾರದ ಭರವಸೆ;...

ಚುನಾವಣಾ ಜನತಂತ್ರ ಬಿಕ್ಕಟ್ಟಿಗೆ ಸಿಲುಕಿದಾಗ, ನಾಗರಿಕರ ಪ್ರತಿಭಟನಾ ಹಕ್ಕು ಬೀದಿಗೆ ಬಿದ್ದಾಗ ಸುಪ್ರೀಂ ಕೋರ್ಟ್ ತಳೆದ ಮೌನ, ಸ್ಪಂದಿಸಿದ ರೀತಿ, ಕನಾಟ್ ಪ್ಲೇಸ್‌ನ ವ್ಯಾಪಾರಿಗಳು ಹಾಗೂ ಉದ್ಯೋಗಿಗಳ ಜೀವನೋಪಾಯಕ್ಕೆ ಧಕ್ಕೆಯಾದರೆ ಮಧ್ಯಪ್ರವೇಶಿಸಿ ಪರಿಹಾರ...

ಇದನ್ನು ಓದಿದ್ದೀರಾ? ಕಾವಡ್ ಯಾತ್ರೆ | ಆಹಾರದಲ್ಲಿ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ

ಪೊಲೀಸರ ಪ್ರಕಾರ, ಎಂಟು ಭಕ್ತರು ಸ್ಥಳದಲ್ಲೇ ಸಾವನ್ನಪ್ಪಿದರೆ, ಒಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ.

“ಕಾವಡ್ ಯಾತ್ರಿಕರು ಡಿಜೆ ಮೌಂಟೆಡ್ ಟ್ರಾಲಿಯಲ್ಲಿ ಹೋಗುತ್ತಿದ್ದರು. ಈ ಟ್ರಾಲಿ ತುಂಬಾ ಎತ್ತರವಾಗಿತ್ತು. ಈ ಟ್ರಾಲಿಗೆ ಒಂದು ತಂತಿ ಸಿಕ್ಕಿಹಾಕಿಕೊಂಡು, ಟ್ರಾಲಿಗೆ 11000 ಹೈ ವೋಲ್ಟೆಜ್‌ ವಿದ್ಯುತ್ ಸಂಚರಿಸಿದೆ. ಇದರಿಂದ ಕೆಲವು ಭಕ್ತರು ಸಾವನ್ನಪ್ಪಿದರು. ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ” ಎಂದು ಹಾಜಿಪುರ ಉಪವಿಭಾಗೀಯ ಪೊಲೀಸ್ ಅಧಿಕಾರಿ ಸಿಯಾದ್ ಓಂ ಪ್ರಕಾಶ್ ತಿಳಿಸಿದ್ದಾರೆ.

?s=150&d=mp&r=g
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

SIR ಪ್ರಮಾದ | ಹೆಸರು ಕಳೆದುಕೊಂಡವರಿಗಾಗಿ ‘ಫಾರ್ಮ್ 6’ ನಿಯಮ ಬದಲಾಯಿಸುವಂತೆ ಆಯೋಗಕ್ಕೆ ಮಹಾರಾಷ್ಟ್ರ ಒತ್ತಾಯ

ದೇಶಾದ್ಯಂತ ತೀವ್ರ ವಿವಾದ ಮತ್ತು ಗೊಂದಲಗಳಿಗೆ ಕಾರಣವಾಗಿರುವ SIR ಪ್ರಕ್ರಿಯೆಯಲ್ಲಿನ ದೊಡ್ಡ...

2027ರ ಚುನಾವಣೆ | ಬಿಜೆಪಿಯ ಲೂಟಿ ವಿರುದ್ಧ ಕಾಂಗ್ರೆಸ್ ಸಮರ: ‘ಸೇವ್ ಗೋವಾ’ ಅಭಿಯಾನದಲ್ಲಿ ರಾಹುಲ್ ಸಾಥ್

2027ರ ಗೋವಾ ವಿಧಾನಸಭೆ ಚುನಾವಣೆಗೆ ಭರ್ಜರಿ ತಳಹದಿ ನಿರ್ಮಿಸಲು ಮುಂದಾಗಿರುವ ಕಾಂಗ್ರೆಸ್,...

ಮಧ್ಯಪ್ರದೇಶ | ಭೀಕರ ಅಪಘಾತ: ದೇವಸ್ಥಾನದ ಬಳಿ ಭಕ್ತರ ಮೇಲೆ ಹರಿದ ಲಾರಿ, 14 ಮಂದಿ ಸಾವು

ಭಕ್ತರ ಮೇಲೆ ಲಾರಿ ಹರಿದು 14ಕ್ಕೂ ಹೆಚ್ಚು ಭಕ್ತರು ಸಾವನ್ನಪ್ಪಿ, 28ಕ್ಕೂ...