ರಾಜಸ್ಥಾನ | ಬಿಜೆಪಿ ವಿರುದ್ಧ ಬಂಡಾಯವೆದ್ದ 26 ವರ್ಷದ ಸ್ವತಂತ್ರ ಅಭ್ಯರ್ಥಿಗೆ ಭಾರಿ ಮುನ್ನಡೆ

0
212
ರವೀಂದ್ರ ಸಿಂಗ್ ಭಾಟಿ
Ravindra bhati BJP

ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಭಾರಿ ಮುನ್ನಡೆ ಸಾಧಿಸಿದ್ದಾರೆ. ಶಿಯೋ ವಿಧಾನಸಭಾ ಕ್ಷೇತ್ರದಿಂದ 26 ವರ್ಷದ ಸ್ವತಂತ್ರ ಅಭ್ಯರ್ಥಿ ರವೀಂದ್ರ ಸಿಂಗ್ ಭಾಟಿ 32,000 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

ವಿದ್ಯಾರ್ಥಿ ನಾಯಕರಾಗಿದ್ದ ರವೀಂದ್ರ ಸಿಂಗ್ ಭಾಟಿ ಅವರು ಈ ಮೊದಲು ಬಿಜೆಪಿ ಸೇರಿಸಿದ್ದರು. ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಲು ಪಕ್ಷವು ನಿರಾಕರಿಸಿದಾಗ ಬಿಜೆಪಿ ವಿರುದ್ಧ ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ರಾಜಸ್ಥಾನದ ಶಿಯೋ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮತ ಎಣಿಕೆಯ 25 ಸುತ್ತು ಮುಗಿದಿರುವ ಕ್ಷೇತ್ರದಲ್ಲಿ ಭಾರಿ ಅಂತರದಲ್ಲಿ ಮುಂದಿರುವ ರವೀಂದ್ರ ಸಿಂಗ್ ಭಾಟಿ ಬಹುತೇಕ ಗೆಲುವಿನ ಸಮೀಪದಲ್ಲಿದ್ದಾರೆ. ಮತ ಎಣಿಕೆಯಲ್ಲಿ ಇವರ ಸಮೀಪದ ಸ್ಪರ್ಧಿ ಮತ್ತೊಬ್ಬ ಸ್ವತಂತ್ರ ಸ್ಪರ್ಧಿ ಫತಾ ಖಾನ್ ಅವರು 46 ಸಾವಿರ ಮತ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಅಮೀನ್‌ ಖಾನ್ 40 ಸಾವಿರ ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಕೇವಲ 11 ಸಾವಿರ ಮತ ಗಳಿಸಿರುವ ಬಿಜೆಪಿ ಅಭ್ಯರ್ಥಿ ಸ್ವರೂಪ್‌ ಸಿಂಗ್‌ ಠೇವಣಿ ಕಳೆದುಕೊಳ್ಳುವ ಸಾಧ್ಯತೆಯಿದೆ.

ಈ ಸುದ್ದಿ ಓದಿದ್ದೀರಾ? ರಾಜಸ್ಥಾನ | ಬಿಜೆಪಿ ಮುನ್ನಡೆ ಕಾಯ್ದುಕೊಂಡಂತೆ ಸಿಎಂ ಸ್ಥಾನಕ್ಕೆ ಮೂವರ ಪೈಪೋಟಿ!

ರವೀಂದ್ರ ಸಿಂಗ್ ಭಾಟಿ ವಿದ್ಯಾರ್ಥಿ ನಾಯಕರಾಗಿದ್ದಾಗ ವಿದ್ಯಾರ್ಥಿಗಳ ಹಕ್ಕುಗಳ ಬಗ್ಗೆ ದನಿಯೆತ್ತಿದ್ದರು. ಈ ಹೋರಾಟವು ಅವರನ್ನು ಕ್ಷೇತ್ರದ ಮತದಾರರಲ್ಲಿ ಬಹಳ ಜನಪ್ರಿಯಗೊಳಿಸಿತು. ವಿದ್ಯಾರ್ಥಿ ಸಮಸ್ಯೆಗಳ ಬಗ್ಗೆ ರ್ಯಾಲಿಗಳು, ಅಭಿಯಾನ ಕೈಗೊಂಡಿದ್ದರು. ಭಾಟಿ ಅವರ ಹೋರಾಟದ ವಿಡಿಯೋವನ್ನು ಕ್ಷೇತ್ರದ ಜನರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ಪ್ರಾರಂಭಿಸಿದರು.

ರಾಜಸ್ಥಾನದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಸರ್ಕಾರಗಳು ಬದಲಾಗುತ್ತವೆ. ಇದು 1993 ರಿಂದ ನಡೆಯುತ್ತಿರುವ ವಿದ್ಯಮಾನವಾಗಿದೆ. ಮತ ಎಣಿಕೆಯ ಇತ್ತೀಚಿನ ವರದಿಗಳಂತೆ ಬಿಜೆಪಿ 113, ಕಾಂಗ್ರೆಸ್ 74, ಬಿಎಸ್‌ಪಿ 2 ಹಾಗೂ ಇತರರು 11 ಕ್ಷೇತ್ರಗಳಲ್ಲಿ ಮುಂದಿದ್ದಾರೆ.

LEAVE A REPLY

Please enter your comment!
Please enter your name here