ದೆಹಲಿಯ ಮಕ್ಕಳು ನಾಗ್ಪುರದಲ್ಲಿ ಭಿಕ್ಷಾಟನೆ: ಕುಟುಂಬ ಕಲಹಕ್ಕೆ ಬಲಿಯಾಗಿದ್ದ ಕರುಣಾಜನಕ ಕಥೆ

Date:

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪೋಷಕರು ಮನೆಯಿಂದ ಹೊರನಡೆದ ಪರಿಣಾಮ, ಊಟಕ್ಕೂ ಗತಿಯಿಲ್ಲದೆ ಹಸಿವು ತಾಳಲಾರದೆ ಭಿಕ್ಷಾಟನೆಗಿಳಿದಿದ್ದ ನಾಲ್ವರು ಮಕ್ಕಳನ್ನು ಮಹಾರಾಷ್ಟ್ರದ ನಾಗ್ಪುರದ ಪೊಲೀಸರು ಪತ್ತೆಹಚ್ಚಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಕ್ಷಿಸಲ್ಪಟ್ಟವರಲ್ಲಿ ಮೂವರು ಸಹೋದರಿಯರು ಹಾಗೂ ಅವರ 11 ವರ್ಷದ ಸಂಬಂಧಿ ಸೇರಿದ್ದಾರೆ.

- Advertisement -

ಗಂಡ-ಹೆಂಡತಿ ನಡುವಿನ ಜಗಳದ ಬಳಿಕ ಮೂವರು ಹೆಣ್ಣುಮಕ್ಕಳ ತಾಯಿಯು ಮನೆಯಿಂದ ಹೊರನಡೆದಿದ್ದಳು. ಅದಾಗಿ 15 ದಿನಗಳ ನಂತರ ತಂದೆಯೂ ಮನೆ ಬಿಟ್ಟು ಹೋಗಿದ್ದ. ಹೀಗಾಗಿ 11 ರಿಂದ 16 ವರ್ಷ ವಯಸ್ಸಿನ ಈ ಮೂವರು ಸಹೋದರಿಯರು ಹಾಗೂ ಅವರ 11 ವರ್ಷದ ಸಂಬಂಧಿ ತಮ್ಮ ಚಿಕ್ಕಮ್ಮನ ಆಶ್ರಯದಲ್ಲಿದ್ದರು. ಆದರೆ, ಮನೆಯಲ್ಲಿ ಸರಿಯಾಗಿ ಊಟ-ತಿಂಡಿ ಸಿಗದ ಕಾರಣ ಈ ನಾಲ್ವರೂ ಮಕ್ಕಳು ಆಹಾರ ಅರಸಿ ಮನೆಯಿಂದ ಹೊರಬಂದಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ...

ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ರಾಜಪಥದಲ್ಲಿರುವ ಬೋಟ್ ಕ್ಲಬ್ ಮೈದಾನವು ದೇಶದ ಪ್ರಮುಖ ರಾಜಕೀಯ ಪ್ರತಿಭಟನೆಗಳು, ರೈತ ಸಮಾವೇಶಗಳು ಮತ್ತು ಸಾರ್ವಜನಿಕ ಚಳವಳಿಗಳಿಗೆ ವೇದಿಕೆಯಾಗಿತ್ತು. ದೆಹಲಿಯ ಜಂತರ್ ಮಂತರ್ ಪ್ರತಿಭಟನಾ...

2026ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಯ ಹಿಂದಿನ ತಿರುಳು

ಅಮೆರಿಕದ ಇಬ್ಬರು ವಿದ್ವಾಂಸರಾದ ರಾಬರ್ಟ್ ಇ. ಹಾಲ್ ಮತ್ತು ಮೈಕಲ್ ವುಡ್‌ಫೋರ್ಡ್ ರೂಪಿಸಿದ 'ನವ-ಕೇನ್ಸಿಯನ್ ಮಾದರಿ'ಗಳು ಇಂದು ಜಗತ್ತಿನ ಬಹುತೇಕ ಕೇಂದ್ರ ಬ್ಯಾಂಕುಗಳ ಮತ್ತು ಹಣಕಾಸು ಇಲಾಖೆಗಳ ದೈನಂದಿನ ದಿಕ್ಸೂಚಿಯಾಗಿವೆ. ಆ ಕಾರಣಕ್ಕೆ...

ಮಣಿಪುರ | ಜನಾಂಗೀಯ ಕಿಚ್ಚಿಗೆ ದ್ವೇಷ ರಾಜಕಾರಣದ ತುಪ್ಪ;...

ಮಣಿಪುರದಲ್ಲಿ ಕಳೆದ ಮೂರು ವರ್ಷಗಳಿಂದ ಮುಗಿಯದ ಜನಾಂಗೀಯ ರಕ್ತಪಾತಕ್ಕೆ, ಸಮುದಾಯಗಳ ನಡುವಿನ ಹಳೆಯ ವೈರತ್ವವನ್ನು ಮೀರಿ, ಸರ್ಕಾರದ ಪಕ್ಷಪಾತದ ರಾಜಕಾರಣ, ಆಡಳಿತಾತ್ಮಕ ವೈಫಲ್ಯ ಮತ್ತು ವಿಭಜನಾತ್ಮಕ ನೀತಿಗಳೂ ಕಾರಣವಾಗಿವೆ. ಉರಿಯುವ ಬೆಂಕಿಗೆ ತುಪ್ಪ...

ಮನೆಯಿಂದ ಹೊರಬಂದ ಈ ಮಕ್ಕಳು ನಂತರ ಎರಡು ಗುಂಪುಗಳಾಗಿ ಚದುರಿಹೋಗಿದ್ದರು. ಇಬ್ಬರು ಮಕ್ಕಳು ರೈಲು ಹತ್ತಿ ಮಹಾರಾಷ್ಟ್ರವನ್ನು ತಲುಪಿ ಅಲ್ಲಿ ಭಿಕ್ಷೆ ಬೇಡುತ್ತಿದ್ದರೆ, ಉಳಿದಿಬ್ಬರು ದೆಹಲಿಯಲ್ಲೇ ಉಳಿದು ಆಸ್ಪತ್ರೆಗಳು ಹಾಗೂ ಜನನಿಬಿಡ ರಸ್ತೆಗಳಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು.

ಜೂನ್ 28ರಂದು, ದಕ್ಷಿಣ ದೆಹಲಿಯ ಭಾಟಿ ಮೈನ್ಸ್ ನಿವಾಸಿಯಾಗಿರುವ ಮಕ್ಕಳ ತಾಯಿಯು ಪೊಲೀಸರಿಗೆ ದೂರು ನೀಡಿದ್ದರು. ತನ್ನ ಮೂವರು ಹೆಣ್ಣುಮಕ್ಕಳು ಹಾಗೂ ಓರ್ವ ಸಂಬಂಧಿ ನಾಪತ್ತೆಯಾಗಿರುವ ಬಗ್ಗೆ ಆಕೆಯ ನಾದಿನಿ (ಚಿಕ್ಕಮ್ಮ) ಮಾಹಿತಿ ನೀಡಿದ್ದಾಗಿ ದೂರಿನಲ್ಲಿ ತಿಳಿಸಿದ್ದರು. ಇದೇ ವೇಳೆ ಛತ್ತರ್‌ಪುರದ 100 ಫೀಟ್ ರಸ್ತೆಯ ಬಳಿ ಇಬ್ಬರು ಮಕ್ಕಳು ಭಿಕ್ಷೆ ಬೇಡುತ್ತಿರುವ ವಿಡಿಯೊವೊಂದು ಆ ಮಹಿಳೆಯ ಮೊಬೈಲ್‌ಗೆ ಬಂದಿತ್ತು.

ಈ ವಿಡಿಯೊ ಆಧಾರದ ಮೇಲೆ, ದಕ್ಷಿಣ ವಿಭಾಗದ ಡಿಸಿಪಿ ಅನಂತ್ ಮಿತ್ತಲ್ ಹಾಗೂ ಎಸ್‌ಎಚ್‌ಒ ಪ್ರಹ್ಲಾದ್ ಸಿಂಗ್ ನೇತೃತ್ವದ ತಂಡವು ಛತ್ತರ್‌ಪುರ, ಲಾಡೋ ಸರಾಯ್, ಮೆಹ್ರೌಲಿ, ಸಫ್ದರ್‌ಜಂಗ್ ಆಸ್ಪತ್ರೆ, ಏಮ್ಸ್ (AIIMS) ಸೇರಿದಂತೆ ನಿರಾಶ್ರಿತ ಮಕ್ಕಳು ಹೆಚ್ಚಾಗಿರುವ ಪ್ರದೇಶಗಳಲ್ಲಿ ಶೋಧ ಕಾರ್ಯ ಆರಂಭಿಸಿತು. ಅಂತಿಮವಾಗಿ ಸಫ್ದರ್‌ಜಂಗ್ ಆಸ್ಪತ್ರೆಯ ಹೊರಗಡೆ ಊಟಕ್ಕಾಗಿ ಸರದಿಯಲ್ಲಿ ನಿಂತಿದ್ದ ಓರ್ವ ಸಹೋದರಿ ಹಾಗೂ ಆಕೆಯ ಸಂಬಂಧಿಯನ್ನು (ಒಟ್ಟು ಇಬ್ಬರು ಮಕ್ಕಳನ್ನು) ಪತ್ತೆಹಚ್ಚಿ ಕುಟುಂಬಕ್ಕೆ ಒಪ್ಪಿಸಲಾಯಿತು.

ಆದರೆ ಉಳಿದಿಬ್ಬರು ಹೆಣ್ಣುಮಕ್ಕಳು ಪತ್ತೆಯಾಗದ ಕಾರಣ, ದೆಹಲಿ ಪೊಲೀಸರು ಅಪಹರಣ ಪ್ರಕರಣ (FIR) ದಾಖಲಿಸಿಕೊಂಡು ದೇಶಾದ್ಯಂತ ಮಾಹಿತಿ ರವಾನಿಸಿದ್ದರು. ಈ ಮಾಹಿತಿ ಆಧರಿಸಿ ಮಹಾರಾಷ್ಟ್ರದ ನಾಗ್ಪುರದ ಸರ್ಕಾರಿ ರೈಲ್ವೆ ಪೊಲೀಸರು (GRP) ಈ ಇಬ್ಬರು ಹೆಣ್ಣುಮಕ್ಕಳನ್ನು ಪತ್ತೆಹಚ್ಚಿ ಅಲ್ಲಿನ ಆಶ್ರಯ ತಾಣಕ್ಕೆ ಸೇರಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ದೆಹಲಿ ಪೊಲೀಸರ ತಂಡವೊಂದು ನಾಗ್ಪುರಕ್ಕೆ ತೆರಳಿ ಮಕ್ಕಳನ್ನು ಸುರಕ್ಷಿತವಾಗಿ ದೆಹಲಿಗೆ ಕರೆತಂದು ಕುಟುಂಬದೊಂದಿಗೆ ಒಂದುಗೂಡಿಸಿದೆ. ಅಲ್ಲದೆ, ಪೊಲೀಸ್ ಅಧಿಕಾರಿಗಳು ಈ ಮಕ್ಕಳಿಗೆ ಅಗತ್ಯವಾದ ಆಹಾರ ಮತ್ತು ಇತರ ದಿನಬಳಕೆ ವಸ್ತುಗಳನ್ನು ಒದಗಿಸಿ ಮಾನವೀಯತೆ ಮೆರೆದಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‘ನಮ್ಮನ್ನು ದಮನಿಸುವ ಪೊಲೀಸ್ ಆದೇಶ ಕೂಡಲೇ ರದ್ದಾಗಲಿ’: ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದ ಲಿಂಗತ್ವ ಅಲ್ಪಸಂಖ್ಯಾತರು

ಲಿಂಗತ್ವ ಅಲ್ಪಸಂಖ್ಯಾತರ ವಿರುದ್ಧ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಇತ್ತೀಚೆಗೆ ಹೊರಡಿಸಿರುವ...

ಎಸ್‌ಸಿ, ಎಸ್‌ಟಿ ಮೀಸಲಾತಿ ಶೇ.56ಕ್ಕೆ ಏರಿಕೆ ಮಾಡಿದ್ದ ಆದೇಶ ರದ್ದುಗೊಳಿಸಿದ ಹೈಕೋರ್ಟ್!

ರಾಜ್ಯದ ಹಿಂದಿನ ಬಸವರಾಜ್ ಬೊಮ್ಮಾಯಿ ನೇತೃತ್ವದ ಸರ್ಕಾರವು ಪರಿಶಿಷ್ಟ ಜಾತಿ (ಎಸ್‌ಸಿ)...

ದೆಹಲಿಯಲ್ಲಿ ಹೆಚ್ಚಿದ ಕಟ್ಟೆಚ್ಚರ: ಒಂದು ತಿಂಗಳು 20,000 ಅರೆಸೇನಾ ಸಿಬ್ಬಂದಿ ನಿಯೋಜನೆ

ಪ್ರತಿಪಕ್ಷ 'ಇಂಡಿಯಾ' ಒಕ್ಕೂಟದ ಪ್ರತಿಭಟನೆ ಹಾಗೂ ಮುಂಬರುವ ಹಬ್ಬದ ಋತುವಿನ ಹಿನ್ನೆಲೆಯಲ್ಲಿ...

ಬೋಟ್ ಕ್ಲಬ್‌ನಿಂದ ಜಂತರ್ ಮಂತರ್‌ವರೆಗೆ; ದೆಹಲಿಯ ಪ್ರತಿಭಟನಾ ತಾಣ ಬದಲಾದದ್ದು ಹೇಗೆ?

ಸ್ವಾತಂತ್ರ್ಯಾನಂತರ ಹಲವು ದಶಕಗಳವರೆಗೆ ದೆಹಲಿಯ ಇಂಡಿಯಾ ಗೇಟ್ ಸಮೀಪದ ರಾಜಪಥದಲ್ಲಿರುವ ಬೋಟ್...