ರಾಮ ನವಮಿ ಸಂಘರ್ಷ | ಪ.ಬಂಗಾಳದ ಹೂಗ್ಲಿಯಲ್ಲಿ ಮತ್ತೆ ಕೋಮು ಹಿಂಸಾಚಾರ

Date:

  • ರಿಶ್ರಾದಲ್ಲಿ ರಾಮ ನವಮಿ ಹೊಸ ಸಂಘರ್ಷ
  • ಪ್ರದೇಶದಲ್ಲಿ ರೈಲು ಸೇವೆಯಲ್ಲಿ ವ್ಯತ್ಯಯ

ಪಶ್ಚಿಮ ಬಂಗಾಳದ ಮತ್ತೆ ರಾಮ ನವಮಿ ಸಂಘರ್ಷ ಭುಗಿಲೆದ್ದಿದೆ. ರಾಜ್ಯದ ಹೂಗ್ಲಿ ಜಿಲ್ಲೆಯ ರಿಶ್ರಾ ಪ್ರದೇಶದಲ್ಲಿ ಸೋಮವಾರ (ಏಪ್ರಿಲ್ 3) ತಡರಾತ್ರಿ ಕೋಮು ಹಿಂಸಾಚಾರ ವರದಿಯಾಗಿದೆ.

ಬಿಜೆಪಿಯು ಭಾನುವಾರ ರಾಮನ ಉತ್ಸವದ ಶೋಭಾ ಯಾತ್ರೆ ನಡೆಸುವ ವೇಳೆ ಎರಡು ಗುಂಪಿನ ನಡುವೆ ಕೋಮು ಸಂಘರ್ಷ ನಡೆದಿತ್ತು. ಸೋಮವಾರವೂ ಮತ್ತೆ ಹಿಂಸಾಚಾರ ನಡೆದಿದೆ. ಹೂಗ್ಲಿ ಜಿಲ್ಲೆಯಲ್ಲಿ ಕ್ಷಿಪ್ರ ಕಾರ್ಯ ಪಡೆಯನ್ನು ನಿಯೋಜಿಸಲಾಗಿದೆ.

ಎರಡು ಗುಂಪುಗಳ ಸಂಘರ್ಷದಿಂದ ಪ್ರದೇಶದಲ್ಲಿ ಕಲ್ಲು ತೂರಾಟ ನಡೆದಿದೆ. ಇದರಿಂದ ಹೌರಾ-ಬಂಡೇಲ್‌ ವಲಯದ ಸ್ಥಳೀಯ, ಎಕ್ಸ್‌ಪ್ರೆಸ್ ರೈಲು ಸೇವೆಯನ್ನು 3 ತಾಸು ಸ್ಥಗಿತಗೊಳಿಸಲಾಗಿತ್ತು ಎಂದು ಪೂರ್ವ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಕೌಶಿಕ್‌ ಮಿಶ್ರಾ ಹೇಳಿದ್ದಾರೆ.

ಮಧ್ಯರಾತ್ರಿ ನಂತರ ರೈಲು ಸೇವೆಗಳನ್ನು ಪುನರಾರಂಭಿಸಲಾಯಿತು. ಹಿಂಸಾಚಾರದ ಕಾರಣದಿಂದ ದೂರ ಪ್ರಯಾಣದ ರೈಲುಗಳ ಸಂಚಾರ ತಡವಾಯಿತು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ರಾಮನ ಉತ್ಸವದ ಮೆರವಣಿಗಳ ವೇಳೆ ಕೋಲ್ಕತ್ತ ಬಳಿಯ ಹೂಗ್ಲಿ ಮತ್ತು ಹೌರಾ ಜಿಲ್ಲೆಗಳಲ್ಲಿ ಉಂಟಾದ ಕೋಮು ಸಂಘರ್ಷಗಳಿಂದ ಪರಿಸ್ಥಿತಿ ಉದ್ವಿಗ್ನಗೊಂಡಿದೆ.

ಕಳೆದ ಗುರುವಾರ (ಮಾರ್ಚ್‌ 30) ರಾಮ ನವಮಿ ಉತ್ಸವದ ಸಂದರ್ಭದಲ್ಲಿ ಹೌರಾದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಈ ವೇಳೆ ಹಲವು ವಾಹನಗಳು ಬೆಂಕಿಗೆ ಆಹುತಿಯಾದವು. ಘರ್ಷಣೆಯಲ್ಲಿ ಬಿಜೆಪಿ ಶಾಸಕ ಬಿಮನ್‌ ಘೋಷ್‌ ಗಾಯಗೊಂಡಿದ್ದರು. ಇದಾದ ಬಳಿಕ, ರಾಜ್ಯದ ವಿವಿಧೆಡೆ ಹಿಂಸಾಚಾರ ಘಟನೆಗಳು ನಡೆದಿವೆ. ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ಗುಂಪುಗಳು ಪರಸ್ಪರ ಹೊಡೆದಾಡಿಕೊಂಡಿವೆ.

ಈ ಸುದ್ದಿ ಓದಿದ್ದೀರಾ? ಹೊಸ ಸಂಸತ್ತಿನ ಹೊರಗೆ ಪ್ರಧಾನಿ ಮೋದಿ ಪದವಿ ದಾಖಲೆಗಳ ಪ್ರದರ್ಶನವಾಗಲಿ; ಸಂಜಯ್‌ ರಾವುತ್ ಆಗ್ರಹ

ಬಿಜೆಪಿ ಶೋಭಾ ಯಾತ್ರೆ ನಡೆಸುವ ಪ್ರದೇಶದಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಅಂತರ್ಜಾಲ ಸೇವೆ ಸ್ಥಗಿತಗೊಳಿಸಿ ನಿಷೇಧಾಜ್ಞೆ ಜಾರಿಗೊಳಿಸುತ್ತಿದೆ. ಬಿಜೆಪಿ ಹೌರಾದಲ್ಲಿ ಕೋಮು ಸಂಘರ್ಷ ನಡೆಸುತ್ತಿದೆ ಎಂದು ಟಿಎಂಸಿ ಆರೋಪಿಸಿದೆ. ಘರ್ಷಣೆಗೆ ಬಿಜೆಪಿಯೇ ಕಾರಣವೆಂದು ಟಿಎಂಸಿ ನಾಯಕ ಅಭಿಷೇಕ್‌ ಬ್ಯಾನರ್ಜಿ ಆರೋಪಿಸಿದ್ದಾರೆ.

ರಾಮ ನವಮಿ ಹಿಂಸಾಚಾರದ ಈ ವಿಡಿಯೋ ಹೌರಾದಲ್ಲಿ ನಡೆದ ಮೆರವಣಿಗೆಯದ್ದು ಅಲ್ಲ. ಇದು ವಿಶ್ವ ಹಿಂದೂ ಪರಿಷತ್‌ ಆಯೋಜಿಸದ ಮೆರವಣಿಗೆಯಲ್ಲಿ ಸಂಭವಿಸಿದ ಘಟನೆ ಎಂದು ಬಿಜೆಪಿ ವಾದಿಸಿದೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಿಚಾಂಗ್ ಚಂಡ ಮಾರುತ | ಆಂಧ್ರದಲ್ಲಿ 40 ಲಕ್ಷ ಜನರಿಗೆ ತೊಂದರೆ, ಕನಿಷ್ಠ 17 ಮಂದಿ ಸಾವು

ಮಿಚಾಂಗ್‌ ಚಂಡಮಾರುತವು ಮಂಗಳವಾರ ಆಂಧ್ರಪ್ರದೇಶದ ಕರಾವಳಿ ದಾಟುತ್ತಿದ್ದಂತೆ ದುರ್ಬಲತೆ ಕಂಡುಬಂದಿದೆ. 770...

ಮಿಚಾಂಗ್ ಚಂಡಮಾರುತ: ₹5,060 ಕೋಟಿ ಪರಿಹಾರಕ್ಕೆ ಪ್ರಧಾನಿಗೆ ಪತ್ರ ಬರೆದ ತಮಿಳುನಾಡು ಸಿಎಂ

ತಮಿಳುನಾಡಿನಲ್ಲಿ ಮಿಚಾಂಗ್ ಚಂಡಮಾರುತದಿಂದ ಉಂಟಾದ ಹಾನಿಯ ನಡುವೆ ಮುಖ್ಯಮಂತ್ರಿ ಎಂ ಕೆ...

ಕರ್ಣಿ ಸೇನಾ ಮುಖ್ಯಸ್ಥನ ಹತ್ಯೆಯ ಹೊಣೆ ಹೊತ್ತ ಗೋಲ್ಡಿ ಬ್ರಾರ್ ಗ್ಯಾಂಗ್; ರಾಜಸ್ಥಾನ ಬಂದ್‌ಗೆ ಕರೆ

ಬಲಪಂಥೀಯ ರಜಪೂತ ಕರ್ಣಿ ಸೇನೆಯ ಅಧ್ಯಕ್ಷ ಸುಖ್‌ದೇವ್ ಸಿಂಗ್ ಗೊಗಮೆಡಿಯನ್ನು ಭೀಕರವಾಗಿ...

ತೆಲಂಗಾಣ: ಎಬಿವಿಪಿಯಿಂದ ಫೈರ್ ಬ್ರಾಂಡ್ ನಾಯಕನವರೆಗೆ; ರೇವಂತ್ ರೆಡ್ಡಿ ನಡೆದುಬಂದ ಹಾದಿ

ಮುಖ್ಯಮಂತ್ರಿ ಕೆಸಿಆರ್ ಸಭೆಗೆ ಅಡ್ಡಿಪಡಿಸಬಹುದು ಎನ್ನುವ ಕಾರಣಕ್ಕೆ 2018ರ ಡಿಸೆಂಬರ್ ನಾಲ್ಕರಂದು...