ಶುಕ್ರವಾರ ಮುಂಗಾರು ಅಧಿವೇಶನದ ಕೊನೆಯ ದಿನದ ಚರ್ಚೆಯ ವೇಳೆ ಗದ್ದಲ ಸೃಷ್ಟಿಸಿದ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಗುಜರಾತ್ ವಿಧಾನಸಭೆಯಿಂದ ಉಚ್ಚಾಟಿಸಲಾಗಿದೆ.
ಸದನದ ಬಾವಿಗೆ ನುಗ್ಗಿದ ಕಾರಣಕ್ಕೆ ಸ್ಪೀಕರ್ ಶಂಕರ್ ಚೌಧರಿ ನಿರ್ದೇಶನದ ಮೇರೆಗೆ ಜಿಗ್ನೇಶ್ ಮೇವಾನಿ ಅವರನ್ನು ರಾಜ್ಯ ವಿಧಾನಸಭೆಯಿಂದ ಉಚ್ಚಾಟಿಸಲಾಗಿದೆ.
ಸ್ಪೀಕರ್ ಉಚ್ಚಾಟನೆಗೆ ಆದೇಶಿಸಿದ ನಂತರ ಮೇವಾನಿ ಅವರನ್ನು ಸಾರ್ಜೆಂಟ್‌ಗಳು ವಿಧಾನಸಭೆಯಿಂದ ಹೊರಗೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.
ಇದನ್ನು ಓದಿದ್ದೀರಾ? ಗುಜರಾತ್ | 24 ಗಂಟೆಗಳಲ್ಲಿ ನಾಲ್ಕು ದಲಿತ ದೌರ್ಜನ್ಯ ಪ್ರಕರಣ; ಇದು ಅಮೃತಕಾಲವೇ? ಎಂದ ಜಿಗ್ನೇಶ್ ಮೇವಾನಿ
ಗುಜರಾತ್ ಪೊಲೀಸರಿಂದ ಮಾದಕ ದ್ರವ್ಯ ವಶಪಡಿಸಿಕೊಳ್ಳುವಿಕೆಯ ಚರ್ಚೆಯ ಸಂದರ್ಭದಲ್ಲಿ, ಮೇವಾನಿ ಎದ್ದುನಿಂತು ಸದನದ ಬಾವಿಗೆ ಇಳಿಯಲು ಪ್ರಾರಂಭಿಸಿದರು. ಅತ್ಯಾಚಾರದಂತಹ ಇತರ ‘ಜ್ವಲಂತ’ ವಿಷಯಗಳ ಬಗ್ಗೆ ಚರ್ಚೆ ಮಾಡುವಂತೆ ಬಿಜೆಪಿ ಸರ್ಕಾರಕ್ಕೆ ಸವಾಲು ಹಾಕಿದರು.
राजकोट का अग्नि कांड, मोरबी में ब्रिज टूटने की घटना, वडोदरा का हरनी कांड, तक्षशिला कांड, जसदन में महिला पर हुआ बलात्कार – इन मुद्दों पर विधानसभा में चर्चा की मांग की और यह भी मांग की गुजरात विधानसभा की कारवाई लाईव होनी चाहिए। इन मांगों को लेकर आज जब हम सदन की वैल में उतरे और… pic.twitter.com/I5SEreH8kf
— Jignesh Mevani (@jigneshmevani80) August 23, 2024
ರಾಜ್‌ಕೋಟ್ ಗೇಮ್ ಝೋನ್ ಅಗ್ನಿ ಅವಘಡ, ಮೋರ್ಬಿ ಸೇತುವೆ ಕುಸಿತ ಮತ್ತು ವಡೋದರಾ ದೋಣಿ ಮುಳುಗಿದ ಘಟನೆಯಂತಹ ದುರಂತಗಳ ಕುರಿತು ನೇರ ದೂರದರ್ಶನದಲ್ಲಿ ಚರ್ಚೆ ನಡೆಸಲು ಗೃಹ ಖಾತೆ ರಾಜ್ಯ ಸಚಿವ ಹರ್ಷ ಸಂಘವಿ ಅವರಿಗೆ ಮೇವಾನಿ ಹೇಳಿದರು.
ಜಿಗ್ನೇಶ್ ಮೇವಾನಿ ಬಾವಿಗಳಿಯುತ್ತಿದ್ದಂತೆ ಸಜ್ಜನಿಕೆ ಕಾಪಾಡುವಂತೆ ಸಭಾಪತಿಗಳು ತಿಳಿಸಿದ್ದು ಬಳಿಕ ಉಚ್ಚಾಟನೆ ಮಾಡಿದರು. “ಕಾಂಗ್ರೆಸ್ ಶಾಸಕರು ಇಂತಹ ಕೃತ್ಯಗಳ ಮೂಲಕ ಸಂವಿಧಾನವನ್ನು ಅಗೌರವಿಸಿದ್ದಾರೆ” ಎಂದು ಹೇಳಿದರು.