ಸಂಶಯಾತ್ಮಕ ವಹಿವಾಟುಗಳು: ಕೇರಳ ಸಿಎಂ ಪುತ್ರಿಯ ವಿರುದ್ಧ ಇ.ಡಿ ತನಿಖೆ

Date:

ಕೇರಳದ ಕೊಲ್ಲಂ ಹಾಗೂ ಅಲಪ್ಪುಳ ಕರಾವಳಿ ಪ್ರದೇಶಗಳ ಗಣಿಗಾರಿಕೆ ಕಂಪನಿಗಳಿಂದ ಸಂಶಯಾತ್ಮಕ ನೆರವು ಸ್ವೀಕರಿಸಿದ ಆರೋಪದ ಮೇಲೆ ಕೇರಳ ಸಿಎಂ ಪಿಣರಾಯಿ ವಿಜಯನ್‌ ಪುತ್ರಿ ವೀಣಾ ವಿರುದ್ಧ ಜಾರಿ ನಿರ್ದೇಶನಾಲಯ ತನಿಖೆ ಆರಂಭಿಸಿದೆ.

ಸಂಶಯಾತ್ಮಕ ನೆರವು ಸ್ವೀಕರಿಸಿದ ಹಿನ್ನೆಲೆಯಲ್ಲಿ ವೀಣಾ ಅವರ ವಿರುದ್ಧ ಕೇಂದ್ರ ಕಾರ್ಪೋರೇಟ್ ಸಚಿವಾಲಯಗಳಡಿ ಬರುವ ಗಂಭೀರ ಅಪರಾಧ ತನಿಖಾ ಸಂಸ್ಥೆ(ಎಸ್‌ಐಎಫ್‌ಒ) ತನಿಖೆ ಕೈಗೊಂಡಿತ್ತು.

ಎಸ್‌ಐಎಫ್‌ಒ ಶಿಫಾರಸ್ಸಿನ ಮೇರೆಗೆ ಜಾರಿ ನಿರ್ದೇಶನಾಲಯವು ವೀಣಾ ಅವರ ವಿರುದ್ಧ ತನಿಖೆ ಆರಂಭಿಸಿದೆ. ವೀಣಾ ಅವರಿಗೆ ಹಾಗೂ ಅವರು ಬೆಂಗಳೂರಿನಲ್ಲಿ ನಡೆಸುತ್ತಿರುವ ಎಕ್ಸಲಾಜಿಕ್ ಸಲೂಷನ್ಸ್ ಸಂಸ್ಥೆಗೆ ಕೊಚ್ಚಿನ್‌ನ ಖನಿಜಗಳು ಮತ್ತು ಲೋಹಗಳ ಸಂಸ್ಥೆ 1.72 ಕೋಟಿ ರೂ. ಹಣವನ್ನು ನೀಡಿದೆ ಎಂಬ ಆರೋಪ ಕೇಳಿ ಬಂದಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ‘ಭ್ರಷ್ಟರು ಬೇಕಾಗಿದ್ದಾರೆ’ ಇದು ಬಿಜೆಪಿಯ ಹೊಸ ಜಾಹೀರಾತು

ವೀಣಾ ಅವರ ಕಂಪನಿ ವಿರುದ್ಧ ಆದಾಯ ತೆರಿಗೆ ಇಲಾಖೆಯ ಮಧ್ಯಂತರ ವಸಾಹತು ಮಂಡಳಿ ಕೂಡ ಈ ಮೊದಲು ತನಿಖೆ ಕೈಕೊಂಡಿತ್ತಾದರೂ ಯಾವುದೇ ಪುರಾವೆಗಳು ದೊರೆತಿರಲಿಲ್ಲ.

ಇ.ಡಿ ತನಿಖೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳದ ಆಡಳಿತರೂಢ ಸಿಪಿಎಂ ಪಕ್ಷ, ಇದೊಂದು ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸಿದ್ದು, ಜಾರಿ ನಿರ್ದೇಶನಾಲವು ಬಿಜೆಪಿ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದೆ.

ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳದ ವಿಪಕ್ಷ ನಾಯಕ ವಿ. ಡಿ ಸತೀಶನ್, ಇ.ಡಿ ಸಿಪಿಐಎಂ ಸರ್ಕಾರದ ಹಲವು ಹಗರಣಗಳ ಬಗ್ಗೆ ತನಿಖೆ ನಡೆಸುತ್ತಿದೆ. ಆದರೆ ಅಪರಾಧಿಗಳನ್ನು ಇನ್ನು ಬಂಧಿಸಲಾಗಿಲ್ಲ ಎಂದು ತಿಳಿಸಿದ್ದಾರೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಶ್ಚಿಮ ಬಂಗಾಳ | ಪ್ರಧಾನಿ ಚುನಾವಣಾ ರ್‍ಯಾಲಿ ಬಳಿಕ ಟಿಎಂಸಿಯಿಂದ ಮೋದಿ ಹೇಳಿಕೆಗಳ ಫ್ಯಾಕ್ಟ್‌ಚೆಕ್!

ಪಶ್ಚಿಮ ಬಂಗಾಳದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭರ್ಜರಿಯಾಗಿ ರ್‍ಯಾಲಿ ನಡೆಸಿ ಚುನಾವಣಾ...

2ನೇ ಹಂತದ ಲೋಕಸಭಾ ಚುನಾವಣೆ: ಶೇ.61 ಮತದಾನ

ದೇಶಾದ್ಯಂತ 13 ರಾಜ್ಯ ಹಾಗೂ ಒಂದು ಕೆಂದ್ರಾಡಳಿತ ಪ್ರದೇಶದ 88 ಕ್ಷೇತ್ರಗಳಿಗೆ...

ಪಶ್ಚಿಮ ಬಂಗಾಳ| ಬಿಜೆಪಿಯ ಬಿರ್ಭೂಮ್ ಕ್ಷೇತ್ರದ ಚುನಾವಣಾ ಅಭ್ಯರ್ಥಿ ನಾಮಪತ್ರ ರದ್ದು

ಮಾಜಿ ಐಪಿಎಸ್ ಅಧಿಕಾರಿ ಮತ್ತು ಬಿರ್ಭೂಮ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ...

ನಾಮಪತ್ರ ತಿರಸ್ಕೃತಗೊಂಡ ಸೂರತ್ ಅಭ್ಯರ್ಥಿ ನೀಲೇಶ್ ಕಾಂಗ್ರೆಸ್‌ನಿಂದ ಅಮಾನತು

ಸೂರತ್ ಅಭ್ಯರ್ಥಿ ನೀಲೇಶ್ ಕುಂಭಾನಿ ಅವರ ನಾಮಪತ್ರ ತಿರಸ್ಕೃತಗೊಂಡು ಬಿಜೆಪಿಯ ಮುಖೇಶ್...