‘ಯಾವುದೇ ಪ್ರಶಸ್ತಿ ನೀಡಿದರೂ ಮೋದಿ ಓಡೋಡಿ ಬರುತ್ತಾರೆ’: ಕೃತಕ ಗೌರವಗಳ ಹಿಂದಿನ ‘ಹುಳುಕು’ ಜಗಜ್ಜಾಹೀರು

Date:

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ವಿದೇಶಿ ಪ್ರವಾಸಗಳ ಸಂದರ್ಭದಲ್ಲಿ ಪಡೆಯುತ್ತಿರುವ ಪ್ರಶಸ್ತಿಗಳು ಹಾಗೂ ಅದರ ಹಿಂದಿನ ವಾಸ್ತವಗಳ ಕುರಿತು ಪ್ರಖ್ಯಾತ ಅಂತಾರಾಷ್ಟ್ರೀಯ ಮಾಧ್ಯಮ ‘ದಿ ಗಾರ್ಡಿಯನ್’ ಪ್ರಕಟಿಸಿರುವ ವಿಶೇಷ ವರದಿಯು ಮೋದಿ ಸರ್ಕಾರದ ಪ್ರಶಸ್ತಿ ದಾಹದ ಬಣ್ಣ ಬಯಲು ಮಾಡಿದೆ.

- Advertisement -

ಇತ್ತೀಚೆಗೆ ಸೆಷೆಲ್ಸ್ ಪ್ರವಾಸದ ವೇಳೆ ಅವರಿಗೆ ನೀಡಲಾದ ಪ್ರಶಸ್ತಿಯೊಂದರ ಸುತ್ತ ಎದ್ದಿರುವ ಹಲವು ಅನುಮಾನಗಳು, ಮೋದಿಯವರ ವರ್ಚಸ್ಸು ಹೆಚ್ಚಿಸುವ ತಂತ್ರಗಾರಿಕೆಯ ಹುಳುಕುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿವೆ. ಕಳೆದ ವಾರಾಂತ್ಯದಲ್ಲಿ ಪ್ರಧಾನಿ ಅವರು ಸೆಷೆಲ್ಸ್‌ಗೆ ಭೇಟಿ ನೀಡಿದ್ದಾಗ, ಆ ದೇಶದ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಅವರು ಮೋದಿಯವರಿಗೆ ಟ್ರೋಫಿ ಮತ್ತು ಪ್ರಮಾಣಪತ್ರ ಒಳಗೊಂಡ ‘ಗಾರ್ಡಿಯನ್ ಆಫ್ ದಿ ಬ್ಲೂ ಹೊರೈಸನ್’ ಎಂಬ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ಸ್ವತಂತ್ರ ಸಾಂವಿಧಾನಿಕ ಸಂಸ್ಥೆಗಳ ಮೇಲಿನ ನಂಬಿಕೆಯನ್ನು ಕಸಿದುಕೊಳ್ಳುತ್ತಿರುವ ಚುನಾವಣಾ...

ನ್ಯಾಯಾಲಯ ಮತ್ತು ಚುನಾವಣಾ ಆಯೋಗಗಳ 'ಸ್ವತಂತ್ರತೆ' ಎಂಬ ಮುಖವಾಡವೇ ಈಗ ಸರ್ಕಾರಕ್ಕೆ ರಕ್ಷಣಾ ಕವಚವಾಗಿ ಕೆಲಸ ಮಾಡುತ್ತಿದೆ. ಹೀಗಾಗಿ ಇವತ್ತು ವಿರೋಧ ಪಕ್ಷಗಳ ಆಕ್ರೋಶವೆಲ್ಲವೂ ಸಾಂವಿಧಾನಿಕ ಸಂಸ್ಥೆಗಳ ಕಡೆಗೆ ತಿರುಗಿದೆ. ಸರ್ಕಾರ ತೀರಾ...

ಆದರೆ, ಈ ಪ್ರಶಸ್ತಿ ಪ್ರದಾನದ ಬೆನ್ನಲ್ಲೇ ಈ ಕೃತಕ ಗೌರವದ ಹಿಂದಿನ ನಾಟಕೀಯ ಲೋಪಗಳು ಬೆಳಕಿಗೆ ಬಂದಿವೆ. ಪ್ರಶಸ್ತಿಗೆ ನೀಡಲಾದ ಪ್ರಮಾಣಪತ್ರದಲ್ಲಿ ‘ರಿಪಬ್ಲಿಕ್’ ಹಾಗೂ ‘ಸೆಷೆಲ್ಸ್’ ಪದಗಳ ಕಾಗುಣಿತವನ್ನೇ ತಪ್ಪಾಗಿ ಮುದ್ರಿಸುವಷ್ಟು ಅವಸರದಲ್ಲಿ ಈ ಪ್ರಶಸ್ತಿಯನ್ನು ಸೃಷ್ಟಿಸಲಾಗಿದೆ.

ಮೋದಿ ಅವರು ಸೆಷೆಲ್ಸ್‌ಗೆ ಭೇಟಿ ನೀಡುವ ಕೇವಲ ಮೂರು ದಿನಗಳ ಹಿಂದಷ್ಟೇ ಈ ಪ್ರಶಸ್ತಿಯನ್ನು ಸೃಷ್ಟಿಸಲಾಗಿದ್ದು, ಈವರೆಗೆ ಮೋದಿಯವರೊಬ್ಬರೇ ಈ ಪ್ರಶಸ್ತಿಯ ಏಕೈಕ ಪುರಸ್ಕೃತರಾಗಿರುವುದು ಈ ಪ್ರಶಸ್ತಿಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ. ಇದಲ್ಲದೆ, ಈ ಪ್ರಮಾಣಪತ್ರವನ್ನು ಕೃತಕ ಬುದ್ಧಿಮತ್ತೆ (AI) ತಂತ್ರಾಂಶ ಬಳಸಿ ಸೃಷ್ಟಿಸಲಾಗಿದೆ ಎಂಬ ಅಂಶವು, ಮೋದಿಯವರಿಗೆ ನೀಡಲಾಗುತ್ತಿರುವ ಜಾಗತಿಕ ಗೌರವಗಳು ಎಷ್ಟರಮಟ್ಟಿಗೆ ನೈಜವಾಗಿವೆ ಎಂಬುದನ್ನು ಜಗಜ್ಜಾಹೀರು ಮಾಡಿದೆ.

ಈ ಎಡವಟ್ಟುಗಳು ಹೊರಬೀಳುತ್ತಿದ್ದಂತೆ ವಿರೋಧ ಪಕ್ಷವಾದ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದ್ದು, “ಮೋದಿಯವರಿಗೆ ಯಾವುದೇ ಪ್ರಶಸ್ತಿ ನೀಡುವುದಾಗಿ ಹೇಳಿದರೂ ಓಡೋಡಿ ಬರುತ್ತಾರೆ. ಎಷ್ಟೊಂದು ಆತುರದಲ್ಲಿ ಈ ಪ್ರಶಸ್ತಿ ನೀಡಿದ್ದಾರೆಂದರೆ, ತಮ್ಮ ದೇಶದ ಅಧಿಕೃತ ಹೆಸರನ್ನೇ ತಪ್ಪಾಗಿ ಮುದ್ರಿಸಿದ್ದಾರೆ,” ಎಂದು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾತೆ ಲೇವಡಿ ಮಾಡಿದ್ದಾರೆ. ಈ ಟೀಕೆಗಳಿಂದ ಮುಜುಗರಕ್ಕೊಳಗಾಗಿರುವ ಬಿಜೆಪಿ, ಮೋದಿಯವರ ಪರಿಸರ ಕಾಳಜಿಗಾಗಿ ಈ ಪ್ರಶಸ್ತಿ ಒಲಿದಿದೆ ಎಂದು ಕುಂಟು ನೆಪ ಹೇಳಿ ಸಮರ್ಥಿಸಿಕೊಳ್ಳಲು ಯತ್ನಿಸಿದೆ. ವಿವಾದ ಹೆಚ್ಚಾಗುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಸೆಷೆಲ್ಸ್ ವಿದೇಶಾಂಗ ಸಚಿವಾಲಯ, ಪ್ರಮಾದವಶಾತ್ ಕರಡು ಪ್ರತಿ ವಿತರಣೆಯಾಗಿದೆ ಎಂಬ ಅಸಮರ್ಪಕ ವಿವರಣೆ ನೀಡುವ ಮೂಲಕ ಪ್ರಕರಣವನ್ನು ಮುಚ್ಚಿಹಾಕುವ ಯತ್ನ ಮಾಡಿದೆ.

ಪ್ರಧಾನಿ ಮೋದಿ ಅವರು ತಮ್ಮ ಅಧಿಕಾರಾವಧಿಯಲ್ಲಿ ದೇಶ-ವಿದೇಶಗಳಲ್ಲಿ ಇಂತಹ ಪ್ರಶಸ್ತಿಗಳನ್ನು ಗಿಟ್ಟಿಸಿಕೊಳ್ಳುವತ್ತ ವಿಶೇಷ ಒಲವು ತೋರಿದ್ದಾರೆ ಎಂದು ಟೀಕಾಕಾರರು ಬೊಟ್ಟು ಮಾಡಿದ್ದಾರೆ. ಇದಕ್ಕೆ ನಿದರ್ಶನವಾಗಿ ಗಾರ್ಡಿಯನ್ ವರದಿಯು, ಇಸ್ರೇಲ್ ಸಂಸತ್ತು ಧಿಡೀರನೇ ಸೃಷ್ಟಿಸಿ ನೀಡಿದ ‘ಮೆಡಲ್ ಆಫ್ ದಿ ನೆಸ್ಸೆಟ್’ ಪ್ರಶಸ್ತಿಯನ್ನು ಉಲ್ಲೇಖಿಸಿದೆ. ಅಲ್ಲದೆ, 2019ರಲ್ಲಿ ಮೋದಿಯವರಿಗೆ ನೀಡಲಾಗಿದ್ದ ‘ಫಿಲಿಪ್ ಕೋಟ್ಲರ್ ಪ್ರೆಸಿಡೆನ್ಶಿಯಲ್ ಪ್ರಶಸ್ತಿ’ಯನ್ನು ಪ್ರತಿವರ್ಷ ಒಬ್ಬ ದೇಶದ ನಾಯಕನಿಗೆ ನೀಡಲಾಗುವುದು ಎಂದು ಹೇಳಲಾಗಿತ್ತಾದರೂ, ಆ ನಂತರ ಬೇರೆ ಯಾರಿಗೂ ಈ ಪ್ರಶಸ್ತಿ ಒಲಿದಿಲ್ಲ ಹಾಗೂ ಅದರ ಜಾಲತಾಣವೂ ಸ್ಥಗಿತಗೊಂಡಿರುವುದು ಮೋದಿಯವರ ಪ್ರಶಸ್ತಿಗಳ ಹಿಂದಿನ ಪೊಳ್ಳುತನವನ್ನು ಅನಾವರಣಗೊಳಿಸಿದೆ.

ಮೋದಿಯವರ ಜೀವನ ಚರಿತ್ರೆ ಬರೆದಿರುವ ಲೇಖಕ ನಿಲಂಜನ್ ಮುಖೋಪಾಧ್ಯಾಯ ಅವರ ಪ್ರಕಾರ, ಜಾಗತಿಕ ಮಟ್ಟದಲ್ಲಿ ಪ್ರಶಸ್ತಿಗಳನ್ನು ಪಡೆಯುವ ಈ ಪ್ರಯತ್ನವು ಮೋದಿಯವರ ವ್ಯಕ್ತಿತ್ವ ಆಧಾರಿತ ರಾಜಕಾರಣದ ಹಾಗೂ ಸ್ವಯಂ ಪ್ರಚಾರದ ಲಕ್ಷಣವಾಗಿದೆ. ಅನೇಕ ಬಾರಿ ಅನುಮಾನ ಹುಟ್ಟಿಸುವಂತಹ ಸಂದರ್ಭಗಳಲ್ಲಿ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಮೋದಿಯವರ ಶ್ರೇಷ್ಠತೆಯಿಂದಾಗಿಯೇ ಭಾರತದ ಪ್ರಭಾವ ಜಾಗತಿಕವಾಗಿ ಬೆಳೆಯುತ್ತಿದೆ ಎಂದು ಕುರುಡು ಬೆಂಬಲಿಗರಿಗೆ ಬಿಂಬಿಸುವ ಅಗ್ಗದ ರಾಜಕೀಯ ಉದ್ದೇಶ ಇದರ ಹಿಂದಿದೆ ಎಂದು ಅವರು ವಿಶ್ಲೇಷಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹುಲಸೂರ | ಗಡಿಭಾಗದ ಸರ್ಕಾರಿ ಶಾಲೆಗಳಿಗೆ ಕನ್ನಡ ಶಿಕ್ಷಕರ ನೇಮಕಕ್ಕೆ ಕಸಾಪ ಮನವಿ

ಮಹಾರಾಷ್ಟ್ರದ ಗಡಿಯೊಂದಿಗೆ ಹೊಂದಿಕೊಂಡಿರುವ ಬೀದರ್ ಜಿಲ್ಲೆಯ ಹುಲಸೂರ ತಾಲೂಕಿನ ಉರ್ದು ಹಾಗೂ...

ಬೀದರ್‌ | ಅ.24ರಿಂದ ಕಲ್ಯಾಣ ಪರ್ವ: ಭಿತ್ತಿ ಪತ್ರ ಬಿಡುಗಡೆ

ಬಸವಕಲ್ಯಾಣದ ಮಹಾ ಮಠದ ಮಹಾಮನೆ ಆವರಣದಲ್ಲಿ ಬಸವ ಧರ್ಮ ಪೀಠದ ವತಿಯಿಂದ...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್ ದೀಪ್ಕೆ ಕುರಿತು ನಡೆದಿದೆ ಚರ್ಚೆ!

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ...

ಅಸ್ಸಾಂ ಉಪಚುನಾವಣೆ ಅಖಾಡ: ಸಿಎಂ ಶರ್ಮಾ ಮತ್ತು ಕಾಂಗ್ರೆಸ್ ಸಂಸದರ ನಡುವೆ ‘ಬಿರಿಯಾನಿ vs ರಸ್ಕ್’ ವಾಕ್ಸಮರ!

ಅಸ್ಸಾಂನ ನಗಾಂವ್ ಲೋಕಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯ ಪ್ರಚಾರ ಕಣದಲ್ಲಿ ರಾಜಕೀಯ...