ಪ್ರಕರಣವೊಂದರಲ್ಲಿ ಹಿಂದಿ ರಾಷ್ಟ್ರ ಭಾಷೆ ಎಂದಿರುವ ಸುಪ್ರೀಂ ಕೋರ್ಟ್ ನ್ಯಾಯಾಧೀಶರೊಬ್ಬರು ಪಶ್ಚಿಮ ಬಂಗಾಳದ ಕೆಲ ಸಾಕ್ಷಿಗಳಿಗೆ ಉತ್ತರ ಪ್ರದೇಶದ ನ್ಯಾಯಾಲಯದ ಮುಂದೆ ಹಿಂದಿಯಲ್ಲಿ ಸಾಕ್ಷ್ಯ ನುಡಿಯುವಂತೆ ನಿರ್ದೇಶನ ನೀಡಿದ್ದಾರೆ.
ಉತ್ತರ ಪ್ರದೇಶದ ಫರುಕ್ಕಾಬಾದ್‌ನಲ್ಲಿ ಮೋಟಾರ್ ವಾಹನಗಳ ಅಪಘಾತಗಳ ಕ್ಲೇಮ್ ಟ್ರಿಬ್ಯುನಲ್‌ನಲ್ಲಿ ಬಾಕಿಯಿರುವ ಒಂದು ಅಪಘಾತ ಪ್ರಕರಣವನ್ನು ಪಶ್ಚಿಮ ಬಂಗಾಳದ ಡಾರ್ಜಲಿಂಗ್‌ಗೆ ವರ್ಗಾಯಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಧೀಶರಾದ ದೀಪಾಂಕರ್ ದತ್ತಾ ತಮ್ಮ ಆದೇಶದಲ್ಲಿ ಹಿಂದಿ ರಾಷ್ಟ್ರ ಭಾಷೆ ಎಂದು ಪ್ರಸ್ತಾಪಿಸಿದರು.
“ಭಾರತದಂತಹ ವೈವಿಧ್ಯಮಯ ದೇಶದಲ್ಲಿ, ಜನರು ವಿಭಿನ್ನ ಭಾಷೆಗಳನ್ನು ಮಾತನಾಡುತ್ತಾರೆ ಎಂಬುದರಲ್ಲಿ ಸಂದೇಹವಿಲ್ಲ. ಇಲ್ಲಿ ಕನಿಷ್ಠ 22 ಅಧಿಕೃತ ಭಾಷೆಗಳಿವೆ. ಆದರೆ ಹಿಂದಿ ರಾಷ್ಟ್ರ ಭಾಷೆ ಆಗಿರುವುದರಿಂದ ಅರ್ಜಿದಾರರು ಹಾಜರುಪಡಿಸುವ ಸಾಕ್ಷಿಗಳು ತಮ್ಮ ಸಾಕ್ಷ್ಯವನ್ನು ಹಿಂದಿಯಲ್ಲಿ ನೀಡಬೇಕು.” ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಫರುಕ್ಕಾಬಾದ್‌ನಲ್ಲಿ ಮೋಟಾರ್ ವಾಹನಗಳ ಅಪಘಾತಗಳ ಕ್ಲೇಮ್ ಟ್ರಿಬ್ಯುನಲ್‌ನಲ್ಲಿ ಬಾಕಿಯಿರುವ ಒಂದು ಅಪಘಾತ ಪ್ರಕರಣವನ್ನು ಪಶ್ಚಿಮ ಬಂಗಾಳದ ಡಾರ್ಜಲಿಂಗ್‌ಗೆ ವರ್ಗಾಯಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಮೇಲಿನ ಆದೇಶ ಹೊರಡಿಸಲಾಗಿದೆ.

ಈ ಸುದ್ದಿ ಓದಿದ್ದೀರಾ? ತಮಿಳುನಾಡಿಗೆ ಕಾವೇರಿ ನೀರು ಬಿಡಿ: ಪ್ರಧಾನಿಗೆ ಎಂ ಕೆ ಸ್ಟಾಲಿನ್ ಪತ್ರ
ಅಪಘಾತವು ಸಿಲಿಗುರಿಯಲ್ಲಿ ನಡೆದಿರುವುದರಿಂದ ಡಾರ್ಜಲಿಂಗ್‌ನ ಟ್ರಿಬ್ಯುನಲ್‌ನಲ್ಲಿ ವಿಚಾರಣೆ ನಡೆದರೆ ಅನುಕೂಲಕರ ಎಂದು ಅರ್ಜಿದಾರರು ಹೇಳಿದ್ದಾರೆ. ಅಷ್ಟೇ ಅಲ್ಲದೆ ಅರ್ಜಿದಾರರ ಪರ ಎಲ್ಲ ಸಾಕ್ಷಿಗಳೂ ಸಿಲಿಗುರಿಯವರಾಗಿರುವುದರಿಂದ ಉತ್ತರ ಪ್ರದೇಶ ಟ್ರಿಬ್ಯುನಲ್‌ನಲ್ಲಿ ಭಾಷೆಯ ಸಮಸ್ಯೆ ಎದುರಾಗಬಹುದು ಎಂದಿದ್ದರು.
ಆದರೆ ಈ ಮನವಿಯನ್ನು ತಿರಸ್ಕರಿಸಿದ ದತ್ತಾ, ಅರ್ಜಿದಾರರ ವಾದವನ್ನು ಒಪ್ಪಿದಲ್ಲಿ, ಕ್ಲೇಮ್ ಮಾಡುವವರು ಅನಾನುಕೂಲ ಎದುರಿಸಬಹುದು ಹಾಗೂ ತಮ್ಮ ವಾದವನ್ನು ಬಂಗಾಳಿ ಭಾಷೆಯಲ್ಲಿ ಮಂಡಿಸಲು ಕಷ್ಟಪಡಬಹುದು ಎಂದು ಹೇಳಿದ್ದಾರೆ.
ನ್ಯಾಯಧೀಶರಾದ ದೀಪಂಕರ್ ದತ್ತಾ ಪಶ್ಚಿಮ ಬಂಗಾಳದವರಾಗಿದ್ದು, ಮಾತೃಭಾಷೆ ಬಂಗಾಳಿಯಾಗಿದೆ. ಅಲ್ಲದೆ ಸಂವಿಧಾನದ ಪ್ರಕಾರ ಭಾರತಕ್ಕೆ ಯಾವುದೇ ರಾಷ್ಟ್ರಭಾಷೆಯಿಲ್ಲ. ಸಂವಿಧಾನದ ಎಂಟನೇ ಶೆಡ್ಯೂಲ್ ಪ್ರಕಾರ 22 ನಿಯೋಜಿತ ಅಧಿಕೃತ ಭಾಷೆಗಳಿವೆ.